ಮಜ್ಜಿಗೆ, ಮೊಸರನ್ನ ಸೇವಿಸಿ ಊಟ ಮುಗಿಸಬೇಕು ಎಂಬುದಕ್ಕೆ ಕಾರಣ ಹೀಗಿದೆ; ಗೋಪಾಷ್ಟಮಿಯ ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಜ್ಜಿಗೆ, ಮೊಸರನ್ನ ಸೇವಿಸಿ ಊಟ ಮುಗಿಸಬೇಕು ಎಂಬುದಕ್ಕೆ ಕಾರಣ ಹೀಗಿದೆ; ಗೋಪಾಷ್ಟಮಿಯ ಮಹತ್ವ ತಿಳಿಯಿರಿ

ಮಜ್ಜಿಗೆ, ಮೊಸರನ್ನ ಸೇವಿಸಿ ಊಟ ಮುಗಿಸಬೇಕು ಎಂಬುದಕ್ಕೆ ಕಾರಣ ಹೀಗಿದೆ; ಗೋಪಾಷ್ಟಮಿಯ ಮಹತ್ವ ತಿಳಿಯಿರಿ

ಪದ್ಮ ಪುರಾಣದ ಪ್ರಕಾರ ಕಾಮಧೇನು ಅಥವಾ ಗೋಮಾತೆ, ಗೋವಿನ ಹಾಲು, ಮೊಸರು, ಬೆಣ್ಣೆ, ತುಪ್ಪ ಇವು ಅತಿ ಶ್ರೇಷ್ಠವಾದವು. ಒಂದು ವೇಳೆ 15 ದಿನಗಳು ಈ ಮೇಲಿನ ಪದಾರ್ಥಗಳನ್ನು ಬಳಸದೆ ಊಟ ಮಾಡಿದಲ್ಲಿ ಅದು ಪ್ರೇತಭೋಜನಕ್ಕೆ ಸಮ ಎಂದು ಪದ್ಮಪುರಾಣದಲ್ಲಿ ಹೇಳಲಾಗಿದೆ. ಗೋಮಾತೆಯ ಮಹತ್ವವನ್ನು ಲೇಖನ ರೂಪದಲ್ಲಿ ತಿಳಿಸಿದ್ದಾರೆ ಜ್ಯೋತಿಷಿ ಎಚ್‌. ಸತೀಶ್‌.

ಮಜ್ಜಿಗೆ, ಮೊಸರನ್ನ ಸೇವಿಸಿ ಊಟ ಮುಗಿಸಬೇಕು ಎಂಬುದಕ್ಕೆ ಧಾರ್ಮಿಕ ಕಾರಣ ಹೀಗಿದೆ
ಮಜ್ಜಿಗೆ, ಮೊಸರನ್ನ ಸೇವಿಸಿ ಊಟ ಮುಗಿಸಬೇಕು ಎಂಬುದಕ್ಕೆ ಧಾರ್ಮಿಕ ಕಾರಣ ಹೀಗಿದೆ

ಇತ್ತೀಚೆಗೆ ಕರಿದ ಪದಾರ್ಥಗಳ ಸೇವನೆ ಜನರಿಗೆ ಹೆಚ್ಚು ಇಷ್ಟವಾಗುತ್ತದೆ. ಅದರಲ್ಲೂ ಖಾರದ ತಿನಿಸುಗಳ ಸೇವನೆಯ ಪ್ರಮಾಣ ಹೆಚ್ಚಾಗಿದೆ. ಆದರೆ ಮನೆಯಲ್ಲಿ ಹಿರಿಯರಿದ್ದರೆ ಮಜ್ಜಿಗೆ ಅನ್ನ ಅಥವಾ ಮೊಸರಿನ ಅನ್ನವನ್ನು ತಿನ್ನಬೇಕು ಎಂದು ಹೇಳುತ್ತಾರೆ. ಇದರ ಹಿಂದೆ ಒಂದು ಉದ್ದೇಶದಿಂದ. ಆದರೆ ರಾತ್ರಿ ವೇಳೆ ಮೊಸರನ್ನ ಸೇವನೆ ಸಂಪೂರ್ಣ ನಿಷಿದ್ಧ.

ಪದ್ಮ ಪುರಾಣದ ಪ್ರಕಾರ ಕಾಮಧೇನು ಅಥವಾ ಗೋಮಾತೆ, ಗೋವಿನ ಹಾಲು, ಮೊಸರು, ಬೆಣ್ಣೆ, ತುಪ್ಪ ಇವು ಅತಿ ಶ್ರೇಷ್ಠವಾದವು. ಒಂದು ವೇಳೆ 15 ದಿನಗಳು ಈ ಮೇಲಿನ ಪದಾರ್ಥಗಳನ್ನು ಬಳಸದೆ ಊಟ ಮಾಡಿದಲ್ಲಿ ಅದು ಪ್ರೇತಭೋಜನಕ್ಕೆ ಸಮ ಎಂದು ಪದ್ಮಪುರಾಣದಲ್ಲಿ ಹೇಳಲಾಗಿದೆ.

ಗೋಪಾಷ್ಟಮಿ

ಪ್ರತಿ ವರ್ಷ ಕಾರ್ತಿಕ ಮಾಸದ ಅಷ್ಟಮಿಯ ದಿನ ಗೋಪಾಷ್ಟಮಿಯನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನಿಗೆ ಗೋಪಾಲ ಎಂಬ ಹೆಸರೂ ಇದೆ . ಕಾರಣ ಶ್ರೀಕೃಷ್ಣನು ಗೋವುಗಳನ್ನು ಕಾಪಾಡುತ್ತಾನೆ. ಈ ಕಾರಣದಿಂದ ಈ ಹೆಸರು ಬಂದಿದೆ.

ಪುರಾಣಗಳ ಕಥೆಗಳ ಪ್ರಕಾರ, ಇಂದ್ರನ ಕೋಪದಿಂದ ವೃಂದಾವನದ ಎಲ್ಲಾ ಗೋವುಗಳನ್ನು ಮತ್ತು ಜನರನ್ನು ರಕ್ಷಿಸಲು ಭಗವಾನ್ ಕೃಷ್ಣನು ತನ್ನ ಕಿರುಬೆರಳಲ್ಲಿ ಗೋವರ್ಧನ ಬೆಟ್ಟವನ್ನು ಎತ್ತಿ ಹಿಡಿಯುತ್ತಾನೆ. ಕಾರ್ತಿಕ ಮಾಸ ಶುಕ್ಲ ಪಕ್ಷ ಪ್ರತಿಪದದಿಂದ ಸಪ್ತಮಿಯವರೆಗೆ ಸತತ 7 ದಿನಗಳ ಕಾಲ ಕೃಷ್ಣನು ತನ್ನ ಕಿರುಬೆರಳಿನಿಂದ ಪರ್ವತವನ್ನು ಹಿಡಿದಿದ್ದನು ಎಂಬ ಉಲ್ಲೇಖ ಪೌರಾಣಿಕ ಗ್ರಂಥಗಳಲ್ಲಿ ಇದೆ. ಅನಂತರ ತನ್ನ ತಪ್ಪನ್ನು ಅರಿತ ಇಂದ್ರನು ಅಷ್ಟಮಿಯಂದು ಶ್ರೀಕೃಷ್ಣನಲ್ಲಿ ಕ್ಷಮೆಯಾಚಿಸಿಸುತ್ತಾನೆ. ಆದ್ದರಿಂದ ಈ ದಿನದಂದು ಹಸುಗಳನ್ನು ಸುಂದರವಾಗಿ ಅಲಂಕರಿಸಿ ಪೂಜಿಸಲಾಗುತ್ತದೆ, ರುಚಿಕರವಾದ ಕಬ್ಬುಗಳ ಸಮೇತ ಹಸಿ ಹುಲ್ಲನ್ನು ನೀಡಲಾಗುತ್ತದೆ.

ಹಸುವಿನ ಹಾಲನ್ನು ನವಜಾತ ಶಿಶುಗಳಿಗೆ ತಾಯಿಯ ಹಾಲಿಗೆ ಪರ್ಯಾಯವೆಂದು ಪರಿಗಣಿಸಲಾಗಿದೆ. ವೈಜ್ಞಾನಿಕವಾಗಿಯೂ ಹಸುವಿನ ಹಾಲನ್ನು ಸಮತೋಲಿತ ಆಹಾರ ಎಂದು ಪರಿಗಣಿಸಲಾಗಿದೆ. ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ಹಾಲನ್ನು ಬಳಸಲಾಗುತ್ತದೆ. ಇದನ್ನು ಹಸುವಿನ ಹಾಲು, ಮೊಸರು, ಸ್ಪಷ್ಟೀಕರಿಸಿದ ಬೆಣ್ಣೆ-ತುಪ್ಪ, ಗೋಮೂತ್ರ ಮತ್ತು ಹಸುವಿನ ಸಗಣಿಯಿಂದ ತಯಾರಿಸಲಾಗುತ್ತದೆ.

ಗೋಪಾಷ್ಟಮಿಯಂದು ಹೀಗೆ ಮಾಡಿ

ಗೋಪಾಷ್ಟಮಿಯಂದು ಮಾಡಬೇಕಾದ ಕೆಲವು ಕೆಲಸಗಳಿವೆ. ಮೊದಲಿಗೆ ಹಸುಗಳನ್ನು ಅಲಂಕರಿಸಿ ಬೆಲ್ಲ, ಅನ್ನ, ನೀರು ಮತ್ತು ಹುಲ್ಲನ್ನು ನೈವೇದ್ಯ ಮಾಡಿ ಗೋವುಗಳನ್ನು ಪೂಜಿಸಬೇಕು. ಹಸುವಿನ ಪಾದದ ಕೆಳಗಿನ ಮಣ್ಣನ್ನು ಹಣೆಯ ಮೇಲೆ ಲೇಪಿಸುವುದು ಸಹ ಸಾಮಾನ್ಯ ಅಭ್ಯಾಸವಾಗಿದೆ. ಇದರಿಂದ ಚರ್ಮರೋಗವು ಗುಣವಾಗುವುದೆಂದು ಹೇಳಲಾಗಿದೆ. ಹಸುಗಳಿಗೆ ಆಹಾರ ನೀಡಿದಲ್ಲಿ ಜನ್ಮಾಂತರಗಳ ಪಾಪವು ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

ಅಂದು ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ ಎನ್ನಲಾಗಿದೆ. ಭಗವಾನ್ ಶಿವನು ತನ್ನ ನಂದಿಯನ್ನು ಕೈಲಾಸದಿಂದ ಭೂಮಿಗೆ ತನ್ನ ಸಂದೇಶವನ್ನು ಜನರಿಗೆ ನೀಡಲು ಕಳುಹಿಸುತ್ತಾನೆ. ಗೋಮಾತೆಯನ್ನು ಪೂಜಿಸುವ ಮೂಲಕ ಕೃಷಿಕರು ಸಹ ಅಗತ್ಯವಿರುವ ಹೆಚ್ಚುವರಿ ಆಹಾರ ಬೆಳೆಗಳನ್ನು ಉತ್ಪಾದಿಸಲು ರೈತರಿಗೆ ಸಹಾಯ ಮಾಡುತ್ತದೆ. ಗೋಪೂಜೆಯಿಂದ ಬಡತನವೂ ನಿವಾರಣೆಯಾಗುತ್ತದೆ.

ಗೋವಿನ ಸಗಣಿಯಿಂದ ಮಾಡಿದ ಪಿಳ್ಳೆರಾಯನಿಗೆ ಸಹ ವಿಶೇಷವಾದ ಪೂಜೆ ಸಲ್ಲಿಸುತ್ತೇವೆ. ಗೋತೀರ್ಥ ( ಗಂಜಲ) ದಿಂದ ಕ್ಯಾನ್ಸರ್‌ನಂತಹ ರೋಗ ಸಹ ವಾಸಿಯಾಗುತ್ತದೆ ಎಂಬುದು ಸರ್ವವಿಧಿತ. ಪಂಚಗವ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ.

ಹಿಂದಿನ ಕಾಲದಲ್ಲಿ ಮಣ್ಣಿನ ನೆಲವಿದ್ದ ಕಾರಣ ಹಸುವಿನ ಸಗಣಿಯಿಂದ ನೆಲ ಸಾರಿಸುತ್ತಿದ್ದರು. ಕಾರಣ ಇದು ಕ್ರಿಮಿನಾಶಕ ಗುಣವನ್ನು ಹೊಂದಿರುತ್ತದೆ. ದಿನದ ಹೋರಾಗಳನ್ನು ಅನುಸರಿಸಿ ಗೋಪೂಜೆಯನ್ನು ಮಾಡಿದಲ್ಲಿ ಬೇರೆ ಬೇರೆ ರೀತಿಯ ಫಲಗಳನ್ನು ಪಡೆಯಬಹುದು. ಒಟ್ಟಾರೆ ಗೋಮಾತೆಯನ್ನು ಕಾಪಾಡುವ ಪ್ರತಿಜ್ಞೆಯನ್ನು ಎಲ್ಲರೂ ಮಾಡಬೇಕಿದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.