Sankashti Chaturthi: 2024ರಲ್ಲಿ ಯಾವ್ಯಾವ ದಿನ ಸಂಕಷ್ಟ ಚತುರ್ಥಿ ಬಂದಿದೆ? ಇಲ್ಲಿದೆ ಲಿಸ್ಟ್
Sankashti Chaturthi 2024 Dates: 2024ರಲ್ಲಿ ಯಾವ್ಯಾವ ತಿಂಗಳಲ್ಲಿ ಯಾವ್ಯಾವ ದಿನ, ಯಾವ್ಯಾವ ವಾರ ಸಂಕಷ್ಟ ಚತುರ್ಥಿ ಬಂದಿದೆ ಎಂಬುದರ ಪಟ್ಟಿ ಇಲ್ಲಿದೆ.
ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಪ್ರತಿ ತಿಂಗಳಲ್ಲಿ ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಸಂಕಷ್ಟ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಇದನ್ನು ಸಂಕಟಹರ ಚತುರ್ಥಿ, ಸಂಕಷ್ಟಹರ ಚತುರ್ಥಿ ಎಂದೂ ಕರೆಯಲಾಗುತ್ತದೆ. ಇದು ಗಣೇಶನಿಗೆ ಸಮರ್ಪಿತವಾದ ದಿನವಾಗಿದೆ. ಸಂಕಷ್ಟ ಚತುರ್ಥಿ ಮಂಗಳವಾರ ಬಂದರೆ ಅದನ್ನು ಅತಿ ಶ್ರೇಷ್ಠ ಮತ್ತು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಮಾಸಗಳ ಅನುಗುಣವಾಗಿ ಆಯಾ ತಿಂಗಳು ಬರುವ ಸಂಕಷ್ಟ ಚತುರ್ಥಿಗೆ ವಿವಿಧ ಹೆಸರುಗಳಿವೆ.
2024ರಲ್ಲಿ ಯಾವ್ಯಾವ ತಿಂಗಳಲ್ಲಿ ಯಾವ್ಯಾವ ದಿನ, ಯಾವ್ಯಾವ ವಾರ ಸಂಕಷ್ಟ ಚತುರ್ಥಿ ಬಂದಿದೆ ಎಂಬುದರ ಪಟ್ಟಿ ಇಲ್ಲಿದೆ.
1) ಜನವರಿ 29 -30: ಸೋಮವಾರ & ಮಂಗಳವಾರ- ಲಂಬೋದರ ಸಂಕಷ್ಟ ಚತುರ್ಥಿ : ಜನವರಿ 29 ಸೋಮವಾರ ಬೆಳಗ್ಗೆ 6:10 ರಿಂದ ಜನವರಿ 30 ಮಂಗಳವಾರ ಬೆಳಗ್ಗೆ 8.54ರವರೆಗೆ
2) ಫೆಬ್ರವರಿ 28: ಬುಧವಾರ - ದ್ವಿಜಪ್ರಿಯ ಸಂಕಷ್ಟ ಚತುರ್ಥಿ
3) ಮಾರ್ಚ್ 29: ಶುಕ್ರವಾರ - ಬಾಲಚಂದ್ರ ಸಂಕಷ್ಟ ಚತುರ್ಥಿ
4) ಏಪ್ರಿಲ್ 27: ಶನಿವಾರ - ವಿಕಟ ಸಂಕಷ್ಟ ಚತುರ್ಥಿ
5) ಮೇ 26: ಭಾನುವಾರೆ - ಏಕದಂತ ಸಂಕಷ್ಟ ಚತುರ್ಥಿ
6) ಜೂನ್ 25: ಮಂಗಳವಾರ - ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ
7) ಜುಲೈ 24: ಬುಧವಾರ - ಗಜಾನನ ಸಂಕಷ್ಟ ಚತುರ್ಥಿ
8) ಆಗಸ್ಟ್ 22: ಗುರುವಾರ - ಹೇರಂಬಾ ಸಂಕಷ್ಟ ಚತುರ್ಥಿ
9) ಸೆಪ್ಟೆಂಬರ್ 21: ಶನಿವಾರ - ವಿಘ್ನರಾಜ ಸಂಕಷ್ಟ ಚತುರ್ಥಿ
10) ಅಕ್ಟೋಬರ್ 20: ಭಾನುವಾರ - ವಕ್ರತುಂಡ ಸಂಕಷ್ಟ ಚತುರ್ಥಿ
11) ನವೆಂಬರ್ 19: ಮಂಗಳವಾರ - ಗಣಾಧಿಪ ಸಂಕಷ್ಟ ಚತುರ್ಥಿ
12) ಡಿಸೆಂಬರ್ 18: ಬುಧವಾರ - ಅಖುರ್ತ ಸಂಕಷ್ಟ ಚತುರ್ಥಿ