Bhagavad Gita: ಮನುಷ್ಯನು 3 ಐಹಿಕ ಗುಣಗಳನ್ನು ಮೀರಿ ದಿವ್ಯಸ್ಥಿತಿಯನ್ನು ಸಾಧಿಸಬೇಕು; ಭಗವದ್ಗೀತೆಯ ಅರ್ಥ ತಿಳಿಯಿರಿ-spiritual bhagavad gita updesh lord krishna man has 3 earthly qualities bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯನು 3 ಐಹಿಕ ಗುಣಗಳನ್ನು ಮೀರಿ ದಿವ್ಯಸ್ಥಿತಿಯನ್ನು ಸಾಧಿಸಬೇಕು; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನುಷ್ಯನು 3 ಐಹಿಕ ಗುಣಗಳನ್ನು ಮೀರಿ ದಿವ್ಯಸ್ಥಿತಿಯನ್ನು ಸಾಧಿಸಬೇಕು; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಮನುಷ್ಯನು 3 ಐಹಿಕ ಗುಣಗಳನ್ನು ಮೀರಿ ದಿವ್ಯಸ್ಥಿತಿಯನ್ನು ಸಾಧಿಸಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 22 ನೇ ಶ್ಲೋಕದಲ್ಲಿ ವಿವರಿಸಲಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ - 22

ಪುರುಷಃ ಪ್ರಕೃತಿಸ್ಥೋ ಹಿ ಭುನ್ಕ್ತೇ ಪ್ರಕೃತಿಜಾನ್ ಗುಣಾನ್ |

ಕಾರಣಂ ಗುಣಸನ್ಗೋಸ್ಯ ಸದಸದ್ಯೋನಿಜನ್ಮಸು ||22||

ಅನುವಾದ: ಐಹಿಕ ಪ್ರಕೃತಿಯಲ್ಲಿ ಜೀವನಾತ್ಮನು ಹೀಗೆ ತ್ರಿಗುಣಗಳನ್ನು ಅನುಭವಿಸುತ್ತ ಬದುಕಿನ ರೀತಿಗಳನ್ನು ಅನುಸರಿಸುತ್ತಾನೆ. ಇದಕ್ಕೆ ಐಹಿಕ ಪ್ರಕೃತಿಯೊಡನೆ ಅವನ ಸಹಯೋಗವೇ ಕಾರಣ. ಹೀಗೆ ಆತನು ವಿವಿಧ ಜೀವಿ ವರ್ಗಗಳಲ್ಲಿ ಒಳ್ಳೆಯದನ್ನು ಕೆಟ್ಟದ್ದನ್ನು ಅನುಭವಿಸುತ್ತಾನೆ.

ಭಾವಾರ್ಥ: ಜೀವಾತ್ಮಗಳು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೀಗೆ ಸಾಗುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಶ್ಲೋಕವು ಬಹು ಮುಖ್ಯವಾದದ್ದು. ಮನುಷ್ಯನು ಉಡುಪನ್ನು ಬದಲಾಯಿಸುವ ಹಾಗೆ ಜೀವಿಯು ದೇಹದಿಂದ ದೇಹಕ್ಕೆ ಸಾಗುತ್ತನೆ. ಇದನ್ನು ಎರಡನೆಯ ಅಧ್ಯಾಯದಲ್ಲಿ ಹೇಳಿದೆ. ಉಡುಪಿನ ಈ ಬದಲಾವಣೆಗೆ ಐಹಿಕ ಅಸ್ತಿತ್ವದಲ್ಲಿ ಅವನಿಗಿರುವ ಆಸಕ್ತಿಯೇ ಕಾರಣ. ಈ ಮಾಯಾ ಅಭಿವ್ಯಕ್ತಿಯು ಅವನನ್ನು ಮೋಹಗೊಳಿಸಿದಷ್ಟು ಕಾಲವೂ ಅವನು ದೇಹದಿಂದ ದೇಹಕ್ಕೆ ಸಾಗುತ್ತಲೇ ಇರಬೇಕಾಗುತ್ತದೆ. ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ನಡೆಸಬೇಕೆಂಬ ಅವನ ಆಸೆಯಿಂದ ಅವನು ಇಂತಹ ಅಪೇಕ್ಷಣೀಯವಲ್ಲದ ಸನ್ನಿವೇಶಗಳಲ್ಲಿ ಇರಿಸಲ್ಪಡುತ್ತಾನೆ. (Bhagavad Gita Updesh in Kannada)

ಜೀವಿಯು ಒಮ್ಮೆ ದೇವತೆಯಾಗಿ, ಒಮ್ಮೆ ಮನುಷ್ಯನಾಗಿ, ಒಮ್ಮೆ ಮೃಗನಾಗಿ, ಪಕ್ಷಿಯಾಗಿ, ಹುಳವಾಗಿ, ಜಲಪ್ರಾಣಿಯಾಗಿ, ಸಂತನಾಗಿ, ತಿಗಣೆಯಾಗಿ ಹುಟ್ಟುತ್ತಾನೆ. ಇದು ಐಹಿಕ ಬಯಕೆಯ ಪ್ರಭಾವದಿಂದಾಗಿ ಆಗುತ್ತದೆ. ಇದು ನಡೆಯುತ್ತಲೇ ಇದೆ. ಎಲ್ಲ ಆಗುಹೋಗುಗಳಲ್ಲಿಯೂ ಜೀವಾತ್ಮನು ತಾನು ಸನ್ನಿವೇಶದ ಪ್ರಭು ಎಂದುಕೊಳ್ಳುತ್ತಾನೆ. ಆದರೆ ಅವನು ಐಹಿಕ ಪ್ರಕೃತಿಯ ಪ್ರಭಾವವದಲ್ಲಿರುತ್ತಾನೆ.

ಅವನನ್ನು ಹೀಗೆ ಬೇರೆ ಬೇರೆ ದೇಹಗಳಲ್ಲಿ ಹೇಗೆ ಇರಿಸಲಾಗುತ್ತದೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಬೇರೆ ಬೇರೆ ಪ್ರಕೃತಿಯ ಗುಣಗಳ ಸಹಯೋಗವೇ ಇದಕ್ಕೆ ಕಾರಣ. ಆದುದರಿಂದ ಮನುಷ್ಯನು ಮೂರು ಐಹಿಕ ಗುಣಗಳನ್ನು ಮೀರಿ ದಿವ್ಯಸ್ಥಿತಿಯನ್ನು ಸಾಧಿಸಬೇಕು. ಇದಕ್ಕೆ ಕೃಷ್ಣಪ್ರಜ್ಞೆ ಎಂದು ಹೆಸರು. ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ನೆಲೆಸದಿದ್ದರೆ ಅವನ ಐಹಿಕ ಪ್ರಜ್ಞೆಯು ಅವನು ದೇಹದಿಂದ ದೇಹಕ್ಕೆ ಸಾಗುವಂತೆ ಒತ್ತಾಯ ಮಾಡುತ್ತದೆ. ಏಕೆಂದರೆ ಅನಾದಿಕಾಲದಿಂದ ಅವನಿಗೆ ಐಹಿಕ ಬಯಕೆಗಳು ಇದ್ದೇ ಇವೆ. ಆದರೆ ಅವನು ಈ ಗ್ರಹಿಕೆಯನ್ನು ಬದಲಾಯಿಸಿಕೊಳ್ಳಬೇಕು.

ಅಧಿಕಾರಯುತ ಮೂಲಗಳಿಂದ ಕೇಳಿ ತಿಳಿದರೆ ಮಾತ್ರ ಈ ಬದಲಾವಣೆಯನ್ನು ಸಾಧಿಸಬಹುದು. ಇದಕ್ಕೆ ಅತ್ಯುತ್ತಮ ನಿರ್ದರ್ಶನ ಇಲ್ಲಿದೆ. ಅರ್ಜುನನು ಕೃಷ್ಣನಿಂದ ದೇವರ ವಿಜ್ಞಾನವನ್ನು ಕೇಳುತ್ತಿದ್ದಾನೆ. ಜೀವಿಯು ಈ ಶ್ರವಣ ಪ್ರಕ್ರಿಯೆಗೆ ತನ್ನನ್ನು ಒಪ್ಪಿಸಿಕೊಂಡರೆ ಐಹಿಕ ಪ್ರಕೃತಿಯ ಮೇಲೆ ಯಜಮಾನಿಕೆ ನಡೆಸಬೇಕೆಂಬ ಅವನ ಬಹುಕಾಲದ ಬಯಕೆಯನ್ನು ಕಳೆದಕೊಳ್ಳುತ್ತಾನೆ. ಯಜಮಾನಿಕೆ ನಡೆಸಬೇಕೆಂಬ ಈ ಬಹುಕಾಲದ ಬಯಕೆಯನ್ನು ಕಡಮೆಮಾಡಿಕೊಂಡಂತೆ. ಕ್ರಮೇಣ ಮತ್ತು ಸರಿಪ್ರಮಾಣದಲ್ಲಿ ಅಧ್ಯಾತ್ಮಿಕ ಸುಖವನ್ನು ಅನುಭವಿಸುತ್ತಾನೆ. ಅವನು ದೇವೋತ್ತಮ ಪರಮ ಪುರುಷನ ಸಹಯೋಗವನ್ನು ಕಲಿತುಕೊಂಡಂತೆ ಅಷ್ಟಷ್ಟು ಮಟ್ಟಿಗೆ ತನ್ನ ನಿತ್ಯಾನಂದದ ಬದುಕನ್ನು ಸವಿಯುತ್ತಾನೆ ಎಂದು ವೇದದ ಒಂದು ಮಂತ್ರದಲ್ಲಿ ಹೇಳಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.