Bhagavad Gita: ಭಗವಂತನ ಭಕ್ತಿಸೇವೆಯಲ್ಲಿ ತೊಡಗಿದರೆ ಮನುಷ್ಯನಲ್ಲಿ ಈ ಅಂಶಗಳು ಬೆಳೆಯುತ್ತವೆ; ಭಗವದ್ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಭಕ್ತಿಸೇವೆಯಲ್ಲಿ ತೊಡಗಿದರೆ ಮನುಷ್ಯನಲ್ಲಿ ಈ ಅಂಶಗಳು ಬೆಳೆಯುತ್ತವೆ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಭಕ್ತಿಸೇವೆಯಲ್ಲಿ ತೊಡಗಿದರೆ ಮನುಷ್ಯನಲ್ಲಿ ಈ ಅಂಶಗಳು ಬೆಳೆಯುತ್ತವೆ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಭಕ್ತಿಸೇವೆಯಲ್ಲಿ ತೊಡಗಿದರೆ ಮನುಷ್ಯನಲ್ಲಿ ಈ ಅಂಶಗಳು ಬೆಳೆಯುತ್ತವೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 8 ರಿಂದ 12 ರವರೆಗಿನ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 8-12

ಅಮಾನಿತ್ವಮದಮ್ಭಿತ್ವಮಹಿಂಸಾ ಕ್ಷಾನ್ತಿರಾರ್ಜಮಮ್ |

ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ||8|

ಇನ್ದ್ರಿಯಾರ್ಥೇಷು ವೈರಾಗ್ಯಮನಹನ್ಕಾರ ಏವ ಚ |

ಜನ್ಮಮೃತ್ಯಜರಾವ್ಯಾಧಿದುಃಖದೋಷಾನುದರ್ಶನಮ್ ||9||

ಅಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |

ಅನುವಾದ: ನಮ್ರತೆ, ಜಂಬವಿಲ್ಲದಿರುವುದು, ಅಹಿಂಸೆ, ತಾಳ್ಮೆ, ಸರಳತೆ, ನಿಜವಾದ ಗುರುವಿನ ಬಳಿಗೆ ಹೋಗುವುದು, ಶೌಚ, ಸ್ಥೈರ್ಯ, ಆತ್ಮಸಂಯಮ, ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು, ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು, ಅನಾಸಕ್ತಿ, ಮಕ್ಕಳು ಹೆಂಡತಿ, ಮನ ಮತ್ತಿತರ ವಿಷಯಗಳಲ್ಲಿ ಸಿಕ್ಕಿಕೊಳ್ಳದೆ ಮುಕ್ತವಾಗಿರುವುದು, ಇಷ್ಟಾನಿಷ್ಟಗಳ ಮಧ್ಯೆ ಸಮಚಿತ್ತತೆ, ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ, ಏಕಾಂತಪ್ಪರದೇಶದಲ್ಲಿ ವಾಸಮಾಡುವ ಅಭಿಲಾಷೆ, ಜನಸಮೂಹದಲ್ಲಿ ಆಸಕ್ತಿಯಿಲ್ಲದಿರುವುದು, ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು, ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥ ಅನ್ವೇಷಣೆ - ಇವೆಲ್ಲ ಜ್ಞಾನ ಎಂದು ನಾನು ಘೋಷಿಸುತ್ತೇನೆ. ಇದಲ್ಲದೆ ಇರುವುದೆಲ್ಲ ಅಜ್ಞಾನ.

ಭಾವಾರ್ಥ: ಹೆಚ್ಚು ಬುದ್ಧಿಯಿಲ್ಲದಿರುವವರು ಜ್ಞಾನದ ಪ್ರಕ್ರಿಯೆಯನ್ನು ಕಾರ್ಯಕ್ಷೇತ್ರದಲ್ಲಿನ ಪರಸ್ಪರ ಕ್ರಿಯೆ ಎಂದು ಕೆಲವೊಮ್ಮೆ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ವಾಸ್ತವವಾಗಿ ಇದೇ ಜ್ಞಾನದ ನಿಜವಾದ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ಒಪ್ಪಿಕೊಂಡರೆ ಪರಿಪೂರ್ಣ ಸತ್ಯವನ್ನು ಸೇರುವ ಸಾಧ್ಯತೆ ಉಂಟು. ಹಿಂದೆ ವರ್ಣಿಸಿದಂತೆ ಇಪ್ಪತ್ನಾಲ್ಕು ಘಟಕಾಂಶಗಳ ಪರಸ್ಪರ ಪ್ರತಿಕ್ರಿಯೆ ಇದಲ್ಲ. ವಾಸ್ತವವಾಗಿ ಆ ಘಟಕಗಳ ತೊಡಕಿನಿಂದ ಪಾರಾಗುವ ಮಾರ್ಗ ಇದು. ದೇಹವು ಇಪ್ಪತ್ನಾಲ್ಕು ಘಟಕಗಳಿಂದ ಮಾಡಿದ ಕೋಶ. ದೇಹಧಾರಿ ಆತ್ಮವು ದೇಹದಲ್ಲಿ ಸಿಕ್ಕಿಬಿದ್ದಿವೆ.

ಇಲ್ಲಿ ವರ್ಣಿಸಿದ ಜ್ಞಾನದ ಪ್ರಕ್ರಿಯೆಯು ಅದರಿಂದ ಹೊರಬರುವ ಮಾರ್ಗ. ಜ್ಞಾನ ಪ್ರಕ್ರಿಯೆಯ ಎಲ್ಲ ವರ್ಣನೆಗಳಲ್ಲಿ ಅತಿಮುಖ್ಯವಾದದ್ದು ಹನ್ನೊಂದನೆಯ ಶ್ಲೋಕದ ಮೊದಲನೆಯ ಪಂಕ್ತಿ - ಮಯಿ ಚಾನನ್ಯ ಯೋಗೇನ ಭಕ್ತಿರವ್ಯಭಿಚಾರಿಣೀ - ಜ್ಞಾನದ ಪ್ರಕ್ರಿಯೆಯು ಪ್ರಭುವಿನ ಪರಿಶುದ್ಧ ಭಕ್ತಿಸೇವೆಯಲ್ಲಿ ಮುಕ್ತಾಯವಾಗುತ್ತದೆ. ಆದುದರಿಂದ ಪ್ರಭುವಿನ ದಿವ್ಯಸೇವೆಯ ಬಳಿಸಾರದೆ ಅಥವಾ ಬಳಿಸಾರಲು ಸಾಧ್ಯವಾಗದೆ ಇರುವವನಿಗೆ ಉಳಿದ ಹತ್ತೊಂಬತ್ತು ಅಂಶಗಳು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯಲ್ಲಿ ತೊಡಗಿದರೆ ಉಳಿದ ಹತ್ತೊಂಬತ್ತು ಅಂಶಗಳು ಅವನಲ್ಲಿ ತಂತಾವೇ ಬೆಳೆಯುತ್ತವೆ.

ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ (5.18.12) ಯಸ್ಯಾಸ್ತಿ ಭಕ್ತಿರ್ ಭಗವತಿ ಅಕಿಂಚನಾ ಸರ್ವೈರ್ ಗುಣೈಸ್ತತ್ರ ಸಮಾಸತೇ ಸುರಾಃ ಭಕ್ತಿಸೇವೆಯ ಹಂತವನ್ನು ತಲಪಿದವನಲ್ಲಿ ಜ್ಞಾನದ ಎಲ್ಲ ಸದ್ಗುಣಗಳೂ ಬೆಳೆಯುತ್ತವೆ. ಎಂಟನೆಯ ಶ್ಲೋಕದಲ್ಲಿ ಹೇಳಿರುವಂತೆ ಒಬ್ಬ ಗುರುವನ್ನು ಸ್ವೀಕರಿಸುವ ತತ್ವವು ಬಹುಮುಖ್ಯವಾದದ್ದು. ಭಕ್ತಿಸೇವೆಯನ್ನು ಸ್ವೀಕರಿಸಿದವರಿಗೂ ಸಹ ಇದು ಅತ್ಯಂತ ಮುಖ್ಯ.

ಮನುಷ್ಯನು ಯೋಗ್ಯಗುರುವನ್ನು ಸ್ವೀಕರಿಸಿದಾಗ ದಿವ್ಯಜೀವನವು ಪ್ರಾರಂಭವಾಗುತ್ತದೆ. ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಜ್ಞಾನದ ಈ ಪ್ರಕ್ರಿಯೆಯೇ ವಾಸ್ತವವಾದ ಮಾರ್ಗ ಎಂದು ಇಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ. ಇದರಾಚೆ ಊಹಿಸಿದ್ದೆಲ್ಲ ಅಸಂಬ್ಧವಾದದ್ದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.