ಕೇವಲ 32 ವರ್ಷಗಳ ಜೀವನ, ಧರ್ಮದ ಮೇಲಿನ ಭಕ್ತಿ ಅಮರ; ಜಗದ್ಗುರು ಆದಿ ಶಂಕರಾಚಾರ್ಯರ ಅಧ್ಯಾತ್ಮಿಕ ಹಾದಿ ಹೀಗಿತ್ತು-spiritual news 32 years of lifetime great devotion to religion jagadguru adi shankaracharya history rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೇವಲ 32 ವರ್ಷಗಳ ಜೀವನ, ಧರ್ಮದ ಮೇಲಿನ ಭಕ್ತಿ ಅಮರ; ಜಗದ್ಗುರು ಆದಿ ಶಂಕರಾಚಾರ್ಯರ ಅಧ್ಯಾತ್ಮಿಕ ಹಾದಿ ಹೀಗಿತ್ತು

ಕೇವಲ 32 ವರ್ಷಗಳ ಜೀವನ, ಧರ್ಮದ ಮೇಲಿನ ಭಕ್ತಿ ಅಮರ; ಜಗದ್ಗುರು ಆದಿ ಶಂಕರಾಚಾರ್ಯರ ಅಧ್ಯಾತ್ಮಿಕ ಹಾದಿ ಹೀಗಿತ್ತು

ಚಿಕ್ಕ ವಯಸ್ಸಿಗೆ ಅಗಾಧವಾದ ಪಾಂಡಿತ್ಯವನ್ನು ಹೊಂದಿದ್ದವರು ಆದಿ ಶಂಕರಾಚಾರ್ಯರು. ಹಿಂದೂ ಧರ್ಮದ ಏಳಿಗೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಆದರೆ ಶಂಕರಾಚಾರ್ಯರು ಅನೇಕ ಕಷ್ಟಗಳನ್ನು ದಾಟಿ ಬಂದವರು. ಅವರ ಜೀವನದ ಹಾದಿ ಹೇಗಿತ್ತು? ಅಧ್ಯಾತ್ಮಿಕದಲ್ಲಿ ತೊಡಗಿಸಿಕೊಂಡಿದ್ದ ಬಗ್ಗೆ ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಬರೆದಿದ್ದಾರೆ.

ಜಗದ್ಗುರು ಆದಿ ಶಂಕರಾಚಾರ್ಯರು ಚಿಕ್ಕ ವಯಸ್ಸಿಗೆ ಎಲ್ಲಾ ವೈದಿಕ ಗ್ರಂಥಗಳನ್ನು ಕರಗತ ಮಾಡಿಕೊಂಡಿದ್ದರು.
ಜಗದ್ಗುರು ಆದಿ ಶಂಕರಾಚಾರ್ಯರು ಚಿಕ್ಕ ವಯಸ್ಸಿಗೆ ಎಲ್ಲಾ ವೈದಿಕ ಗ್ರಂಥಗಳನ್ನು ಕರಗತ ಮಾಡಿಕೊಂಡಿದ್ದರು.

ಜಗದ್ಗುರು ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ಅತ್ಯಂತ ಪ್ರಸಿದ್ಧ ತತ್ವಜ್ಞಾನಿಗಳು ಹಾಗೂ ಅಧ್ಯಾತ್ಮಿಕ ಮಾರ್ಗದರ್ಶಕರಲ್ಲಿ ಒಬ್ಬರು. ಇವರ ಜೀವಿತಾವಧಿ ಕೇವಲ 32 ವರ್ಷಗಳಾಗಿದ್ದರೂ ಸೇವೆ, ಜ್ಞಾನ ಮತ್ತು ಹಿಂದೂ ಧರ್ಮದ ಮೇಲಿನ ಭಕ್ತಿ ಅಮರವಾಗಿದೆ. ಶಂಕರಾಚಾರ್ಯರು 8 ನೇ ಶತಮಾನದಲ್ಲಿ ಜನಿಸಿದ್ದರು. ಭಾರತದಾದ್ಯಂತ ಅಧ್ಯಾತ್ಮಿಕ ಪ್ರಜ್ಞೆಯನ್ನು ಹರಡಿದರು. ಇವರ ಬಾಲ್ಯ ಜೀವನವನ್ನು ನೋಡುವುದಾದರೆ ಇವರು ಕ್ರಿಸ್ತಶಕ 788 ರಲ್ಲಿ ಕೇರಳದ ಕಾಲಡಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ಪೋಷಕರು ಶಿವನ ಭಕ್ತರಾಗಿದ್ದರು. ಶಂಕರಾಚಾರ್ಯರಿಗೆ ಚಿಕ್ಕ ವಯಸ್ಸಿನಲ್ಲೇ ವೇದ ಮತ್ತು ಉಪನಿಷತ್ತುಗಳಲ್ಲಿ ಆಸಕ್ತಿ ಇತ್ತು. ವೇದಾಧ್ಯಯನದಲ್ಲಿ ಅಸಾಧಾರಣ ಪ್ರತಿಭೆ ತೋರಿದ ಶಂಕರರು ಚಿಕ್ಕ ವಯಸ್ಸಿನಲ್ಲಿಯೇ ಮಠಾಧೀಶರಾಗುವ ಆಸೆಯನ್ನು ಬೆಳೆಸಿಕೊಂಡರು.

ಶಂಕರಾಚಾರ್ಯರ ಸನ್ಯಾಸಾಶ್ರಮ ಮತ್ತು ಗುರು-ಶಿಷ್ಯ ಸಂಬಂಧ

ಶಂಕರಾಚಾರ್ಯರು ಸನ್ಯಾಸಾಶ್ರಮ ತೆಗೆದುಕೊಳ್ಳಲು ಸಾಕಷ್ಟು ಸಾವಾಲುಗಳು, ಕಷ್ಟಗಳನ್ನು ಎದುರಿಸಿದ್ದರು. ತಾಯಿಯ ಅಸಮ್ಮತಿಯ ಹೊರತಾಗಿಯೂ, ಅವರು ಅಧ್ಯಾತ್ಮಿಕ ಹಾದಿಯತ್ತ ಹೆಜ್ಜೆ ಹಾಕಿದರು. ಪ್ರಸಿದ್ಧ ಅಧ್ಯಾತ್ಮ ಗೋವಿಂದ ಭಗವತ್ಪಾದರು ಇವರ ಗುರುವಾಗಿ ಮಾರ್ಗದರ್ಶನ ನೀಡಿದರು. ಗೋವಿಂದ ಭಗವತ್ಪಾದರಿಂದ ವೇದಾಂತ ತತ್ತ್ವಶಾಸ್ತ್ರವನ್ನು ಕಲಿತ ಶಂಕರಾಚಾರ್ಯರು ವಿಜ್ಞಾನದ ಜ್ಞಾನದಲ್ಲಿ ಪರಿಪೂರ್ಣತೆಯನ್ನು ಪಡೆದರು.

ಆದಿ ಶಂಕರಾಚಾರ್ಯರು ವಿಸ್ತರಿಸಿದ ಸಿದ್ಧಾಂತ

ಶಂಕರಾಚಾರ್ಯರು ಹಿಂದೂ ಧರ್ಮದಲ್ಲಿ ಅದ್ವೈತ ಸಿದ್ಧಾಂತವನ್ನು ವಿಸ್ತರಿಸಿದರು. ಎರಡಲ್ಲ ಒಂದೇ ಎಂಬುದು ಇವರ ವಾದವಾಗಿತ್ತು. ಈ ಸಿದ್ಧಾಂತದ ಪ್ರಕಾರ, ಬ್ರಹ್ಮವು ಸರ್ವವ್ಯಾಪಿ, ಶಾಶ್ವತ ಮತ್ತು ಅನಂತ. ವಿಶ್ವದಲ್ಲಿರುವ ಎಲ್ಲಾ ಜೀವಿಗಳು ಈ ಬ್ರಹ್ಮವನ್ನು ತಮ್ಮ ಭಾಗವಾಗಿ ಹೊಂದಿವೆ. ಶಂಕರರು ಆತ್ಮ ಮತ್ತು ಪರಮಾತ್ಮ ಒಂದೇ, ಯಾವುದೇ ವ್ಯತ್ಯಾಸವಿಲ್ಲ ಎಂದು ಘೋಷಿಸಿದ್ದರು. ಅದ್ವೈತ ವೇದಾಂತವು ಹಿಂದೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ತತ್ವಶಾಸ್ತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು. ಈ ತತ್ವಶಾಸ್ತ್ರದ ಮೂಲಕ, ಶಂಕರಾಚಾರ್ಯರು ಜನಸಾಮಾನ್ಯರನ್ನು ಭ್ರಮೆಯಿಂದ ಅಧ್ಯಾತ್ಮಿಕ ಶ್ರೇಷ್ಠತೆಯತ್ತ ಕೊಂಡೊಯ್ಯಲು ಪ್ರಯತ್ನಿಸಿದರು.

ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳು

ಆದಿ ಶಂಕರಾಚಾರ್ಯರು ಭಾರತದಲ್ಲಿ ಒಟ್ಟು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದ್ದಾರೆ.

  • ಶೃಂಗೇರಿ ಪೀಠ - ದಕ್ಷಿಣ ಭಾರತ (ಕರ್ನಾಟಕ)
  • ದ್ವಾರಕಾ ಪೀಠ - ಪಶ್ಚಿಮ ಭಾರತದಲ್ಲಿ (ಗುಜರಾತ್)
  • ಜ್ಯೋತಿರ್ಮಠ ಪೀಠ - ಉತ್ತರ ಭಾರತದಲ್ಲಿ (ಉತ್ತರಾಖಂಡ್)
  • ಪುರಿ ಪೀಠ - ಪೂರ್ವ ಭಾರತ (ಒಡಿಶಾ)

ಈ ಪೀಠಗಳು ಧಾರ್ವಿುಕ ಅಧ್ಯಾತ್ಮಿಕತೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಮತ್ತು ಜ್ಞಾನದ ಹಾದಿಯಲ್ಲಿ ಜನರನ್ನು ಜಾಗೃತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಶಂಕರಾಚಾರ್ಯರು ಬರೆದಿರುವ ಗ್ರಂಥಗಳು

ಆದಿ ಶಂಕರಾಚಾರ್ಯರು ಅನೇಕ ವೇದಾಂತ ಗ್ರಂಥಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಭಗವದ್ಗೀತೆ ಭಾಷ್ಯಂ, ಬ್ರಹ್ಮಸೂತ್ರ ಭಾಷ್ಯಂ, ಮತ್ತು ಉಪನಿಷತ್ತುಗಳ ವ್ಯಾಖ್ಯಾನಗಳು. ಇವುಗಳ ಮೂಲಕ ಅವರು ಹಿಂದೂ ಧರ್ಮ ಮತ್ತು ಅದ್ವೈತ ಸಿದ್ಧಾಂತ ತತ್ವಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಶಂಕರಾಚಾರ್ಯರು ತಮ್ಮ 32ನೇ ವಯಸ್ಸಿನಲ್ಲಿ ಕೇದಾರನಾಥದಲ್ಲಿ ಜೀವಂತ ಸಮಾಧಿಯಾದರು. ಅವರ ಜೀವನವು ಚಿಕ್ಕದಾಗಿದ್ದರೂ, ಅಧ್ಯಾತ್ಮಿಕತೆ ಮತ್ತು ಹಿಂದೂ ಧರ್ಮಕ್ಕೆ ಅವರ ಕೊಡುಗೆ ಭಾರತದ ಇತಿಹಾಸದಲ್ಲಿ ಸ್ಮರಣೀಯವಾಗಿದೆ.

ಹಿಂದೂ ಧರ್ಮ ಮತ್ತು ವೇದಾಂತ ದರ್ಶನಕ್ಕೆ ಜಗದ್ಗುರು ಆದಿ ಶಂಕರಾಚಾರ್ಯರ ಕೊಡುಗೆ ಅಪಾರ. ಅವರು ತೋರಿದ ಅದ್ವೈತ ತತ್ವ ಮತ್ತು ಧಾರ್ಮಿಕ ಮಾರ್ಗದರ್ಶನ ಇಂದಿಗೂ ಅನೇಕರಿಗೆ ದಾರಿ ತೋರಿಸುತ್ತಿದೆ ಎಂದು ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.