Angarki Chaturthi 2024: ಅಂಗಾರಕ ಸಂಕಷ್ಟ ಚತುರ್ಥಿಯಂದು ಗಣಪನನ್ನು ಭಜಿಸಿದರೆ ಸಕಲ ಕಷ್ಟಗಳೂ ದೂರ, ಹೀಗಿರಲಿ ಇಂದಿನ ಪೂಜಾ ವಿಧಾನ-spiritual news angarki chaturthi 2024 sankasta chaturthi step by step guide to worship lord ganesha rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Angarki Chaturthi 2024: ಅಂಗಾರಕ ಸಂಕಷ್ಟ ಚತುರ್ಥಿಯಂದು ಗಣಪನನ್ನು ಭಜಿಸಿದರೆ ಸಕಲ ಕಷ್ಟಗಳೂ ದೂರ, ಹೀಗಿರಲಿ ಇಂದಿನ ಪೂಜಾ ವಿಧಾನ

Angarki Chaturthi 2024: ಅಂಗಾರಕ ಸಂಕಷ್ಟ ಚತುರ್ಥಿಯಂದು ಗಣಪನನ್ನು ಭಜಿಸಿದರೆ ಸಕಲ ಕಷ್ಟಗಳೂ ದೂರ, ಹೀಗಿರಲಿ ಇಂದಿನ ಪೂಜಾ ವಿಧಾನ

ಪ್ರತಿ ತಿಂಗಳು ಬರುವ ಸಂಕಷ್ಟ ಚತುರ್ಥಿಗಳಲ್ಲಿ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿನದಂದು ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಜಮುಖನ ಕೃಪೆಗೆ ಪಾತ್ರರಾಗಬಹುದು. ಈ ದಿನವೂ ಗಣೇಶನ ಜೊತೆಗೆ ಚಂದ್ರನ ಪೂಜೆ ಮಾಡುವುದು ವಿಶೇಷ, ಇಂದು (ಜೂನ್‌ 25) ಅಂಗಾರಕ ಸಂಕಷ್ಟಿ ಇದ್ದು ಪೂಜಾ ವಿಧಾನ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ.

ಅಂಗಾರಕ ಸಂಕಷ್ಟ ಚತುರ್ಥಿಯಂದು ಗಣಪನನ್ನು ಭಜಿಸಿದರೆ ಸಕಲ ಕಷ್ಟಗಳೂ ದೂರ, ಹೀಗಿರಲಿ ಪೂಜಾ ವಿಧಾನ
ಅಂಗಾರಕ ಸಂಕಷ್ಟ ಚತುರ್ಥಿಯಂದು ಗಣಪನನ್ನು ಭಜಿಸಿದರೆ ಸಕಲ ಕಷ್ಟಗಳೂ ದೂರ, ಹೀಗಿರಲಿ ಪೂಜಾ ವಿಧಾನ

ಹಿಂದೂ ಧರ್ಮದಲ್ಲಿ ಗಣಪತಿಯನ್ನು ಪ್ರಥಮ ಪೂಜಿತ ಎನ್ನಲಾಗುತ್ತಿದೆ. ಯಾವುದೇ ಕಾರ್ಯಕ್ರಮ, ಪೂಜೆಗಳಿಗಿರಲಿ ಗಣೇಶನಿಗೆ ಮೊದಲ ಪೂಜೆ ಇರುತ್ತದೆ. ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುವ ಗಣಪನಿಗೆ ಚತುರ್ಥಿ ತಿಥಿಯನ್ನು ಸಮರ್ಪಿಸಲಾಗಿದೆ. ಪ್ರತಿ ವರ್ಷ ಶುಕ್ಲ ಪಕ್ಷದಲ್ಲಿ ಒಟ್ಟು 24 ಚತುರ್ಥಿಗಳು ಬರುತ್ತವೆ. ಕೃಷ್ಣ ಪಕ್ಷದಲ್ಲಿ ಒಂದು ಚತುರ್ಥಿ ಬರುತ್ತದೆ. ಆಷಾಢ ಮಾಸದಲ್ಲಿ ಮಂಗಳವಾರ ಕೃಷ್ಣ ಪಕ್ಷದಲ್ಲಿ ಸಂಕಷ್ಟಿ ಚತುರ್ಥಿ ಆಚರಿಸಲಾಗುತ್ತದೆ. ಮಂಗಳವಾರದಂದು ಬರುವ ಈ ಚತುರ್ಥಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಈ ವರ್ಷ ಜೂನ್‌ 25 ಅಂದರೆ ಇಂದು ಅಂಗಾರಕ ಸಂಕಷ್ಟಿ ಇದೆ.

ಅಂಗಾರಕ ಸಂಕಷ್ಟಿಯ ಪೂಜಾ ಕ್ರಮಗಳು

* ಇಂದು ಬೆಳಿಗ್ಗೆ ಬೇಗ ಏಳಬೇಕು. ಪೂಜೆ ವಿಧಿವಿಧಾನಗಳನ್ನು ಆರಂಭಿಸುವ ಮೊದಲು ಪವಿತ್ರ ಸ್ನಾನ ಮಾಡಬೇಕು.

* ಉಪವಾಸ: ಸಂಕಷ್ಟಿ ದಿನ ಉಪವಾಸ ಮಾಡುವುದು ವಾಡಿಕೆ. ಈ ದಿನ ಸೂರ್ಯ ಮೂಡುವುದರಿಂದ ಹಿಡಿದು ಚಂದ್ರ ಮೂಡುವವರೆಗೆ ಉಪವಾಸ ವೃತ ಆಚರಿಸಬೇಕು. ಕೆಲವರು ಏನನ್ನೂ ತಿನ್ನದೆ ಸಂಪೂರ್ಣ ಉಪವಾಸವನ್ನು ಅನುಸರಿಸಿದರೆ,  ಸಾಧ್ಯವಾಗದವರು ಹಣ್ಣುಗಳು ಹಾಗೂ ಹಾಲಿನಂತಹ ಡೇರಿ ಉತ್ಪನ್ನಗಳನ್ನು ಸೇವಿಸುತ್ತಾ ಭಾಗಶಃ ಉಪವಾಸವನ್ನು ಮಾಡಬಹುದು. 

* ಗಣಪತಿ ಪ್ರತಿಷ್ಠಾಪನೆ: ಈ ದಿನ ಗಣೇಶನನ್ನು ಪೂಜಿಸುವ ಮೊದಲು ನೈವೇದ್ಯ ತಯಾರು ಮಾಡಬೇಕು. ಪೂಜಾ ಕೋಣೆಯಲ್ಲಿ ಮರದ ಹಲಗೆ ಅಥವಾ ಮಣೆ ಇಟ್ಟು ಅದರ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆ ಹಾಸಿ, ಅದರ ಮೇಲೆ ಗಣಪತಿ ಮೂರ್ತಿ ಇರಿಸಬೇಕು.

* ಪೂಜೆ ಸಾಮಗ್ರಿ:  ದೇಸಿ ಹಸುವಿನ ತುಪ್ಪ, ಬತ್ತಿಗಳು, ಧೂಪದ್ರವ್ಯಗಳು, ಗರಿಕೆ ಹುಲ್ಲು, ಸಿಹಿ (ಹಳದಿ ಬೂಂದಿ ಲಾಡು ಅಥವಾ ಮೋದಕ), ಕಲಶ, ಬಾಳೆಹಣ್ಣು, ಅಡಿಕೆ, ಅಕ್ಷತ್ ಮತ್ತು ಏಲಕ್ಕಿ ಮುಂತಾದವು.

* ಗಣಪತಿಯ ಚರಿತ್ರೆಯನ್ನು ಓದುವ ಮೂಲಕ ಅವನ ಕೃಪೆಗೆ ಪಾತ್ರರಾಗಬಹುದು.

* ವಿವಿಧ ವೈದಿಕ ಗಣೇಶ ಮಂತ್ರಗಳನ್ನು 108 ಬಾರಿ ಪಠಿಸಬೇಕು.

* ಈ ದಿನದಂದು ಧ್ಯಾನ ಮಾಡುವ ಮೂಲಕವೂ ಗಣೇಶನನ್ನು ನೆನೆಯಬಹುದು.

* ಈ ದಿನ ಗಣೇಶ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುವ ಕಾರಣ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದು. ಗಣೇಶನಿಗೆ ಪ್ರಿಯವಾದ ಲಡ್ಡು ಪ್ರಸಾದವನ್ನು ಅರ್ಪಿಸಬಹುದು.

* ಚಂದ್ರಪೂಜೆ: ಚಂದ್ರೋದಯದ ನಂತರ ಚಂದ್ರನನ್ನು ಭಜಿಸಬೇಕು. ಚಂದ್ರನಿಗೆ ಅರ್ಘ್ಯ ಹಾಗೂ ಹೂಗಳನ್ನು ಅರ್ಪಿಸಬೇಕು. ಚಂದ್ರನಿಗೆ ಸಮರ್ಪಿತವಾದ ಮಂತ್ರ ಪಠಣ - "ಓಂ ಸ್ರಂ ಶ್ರೀಂ ಸ್ರೋಂ ಸಹ ಚಂದ್ರಮಸೇ ನಮಃ". ಇದನ್ನು ಭಜಿಸುವ ಮೂಲಕ ಅವನನ್ನು ಒಲಿಸಿಕೊಳ್ಳಬಹುದು.

* ಚಂದ್ರನ ಪೂಜೆಯ ನಂತರ ಈರುಳ್ಳಿ, ಬೆಳ್ಳುಳ್ಳಿ ಸೇರಿಸದೇ ಇರುವ ಸಾತ್ವಿಕ ಆಹಾರ ಸೇವಿಸಿ ಉಪಾವಾಸ ಮುರಿಯಬಹುದು.

ಅಂಗಾರಕ ಚತುರ್ಥಿ ಉಪಾವಾಸವನ್ನು ಯಾರು ಮಾಡಬಹುದು?

ಮಂಗಳನ ದೋಷದಿಂದ ಬಳಲುತ್ತಿರುವ ಜನರು ಅಂಗಾರಕ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಬಹುದು. ಈ ದಿನ ಗಣೇಶ ಮತ್ತು ಹನುಮಂತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಬಹುದು. ಅವರು ಗಣಪತಿಗೆ ಕೆಂಪು ಚಂದನ ತಿಲಕವನ್ನು ಹಾಕಬೇಕು ಮತ್ತು ಅದನ್ನು ನೀವೂ ಹಚ್ಚಿಕೊಳ್ಳಬೇಕು.

ಮಂತ್ರಗಳು

1. ಓಂ ಗಣ ಗಣಪತಯೇ ನಮಃ..!!

2. ಓಂ ಶ್ರೀ ಗಣೇಶಾಯ ನಮಃ..!!

3. ಓಂ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕೂರ್ಮೇದೇವ ಸರ್ವ ಕಾರ್ಯೇಷು ಸರ್ವದಾ..!!

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.