Bhagavad Gita: ಭಗವಂತನ ಭಕ್ತಿಸೇವೆಯಲ್ಲಿ ನಿರತರಾಗಿರುವವರ ಮನಸ್ಸು ವಿಚಲಿತವಾಗುವುದಿಲ್ಲ; ಗೀತೆಯ ಸಾರಾಂಶ ತಿಳಿಯಿರಿ-spiritual news bhagavad gita updesh lord krishna devotees mind is not disturbed bhagavad gita quotes in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಭಕ್ತಿಸೇವೆಯಲ್ಲಿ ನಿರತರಾಗಿರುವವರ ಮನಸ್ಸು ವಿಚಲಿತವಾಗುವುದಿಲ್ಲ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಭಗವಂತನ ಭಕ್ತಿಸೇವೆಯಲ್ಲಿ ನಿರತರಾಗಿರುವವರ ಮನಸ್ಸು ವಿಚಲಿತವಾಗುವುದಿಲ್ಲ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಭಗವಂತನ ಭಕ್ತಿಸೇವೆಯಲ್ಲಿ ನಿರತರಾಗಿರುವವರ ಮನಸ್ಸು ವಿಚಲಿತವಾಗುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 15 ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 15

ಯಸ್ಮಾನ್ಮೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ |

ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ ||15||

ಅನುವಾದ: ಯಾವ ವ್ಯಕ್ತಿಯಿಂದ ಯಾರೂ ಉದ್ವೇಗವನ್ನು ಪಡುವುದಿಲ್ಲವೋ, ಮತ್ತು ಆ ವ್ಯಕ್ತಿಯು ಯಾರಿಂದಲೂ ಉದ್ವೇಗವನ್ನು ಅನುಭವಿಸವುದಿಲ್ಲವೋ, ಸುಖ ಮತ್ತು ದುಃಖಗಳಲ್ಲಿ ಭಯ ಮತ್ತು ಆತಂಕಗಳಲ್ಲಿ ಸಮಚಿತ್ತನಾಗಿರುತ್ತಾನೋ ಆತನು ನನಗೆ ಬಹು ಪ್ರಿಯನಾಗುತ್ತಾನೆ.

ಭಾವಾರ್ಥ: ಭಕ್ತನ ಇನ್ನೂ ಕೆಲವು ಅರ್ಹತೆಗಳನ್ನು ಇಲ್ಲಿ ವರ್ಣಿಸಿದೆ. ಇಂತಹ ಭಕ್ತನಿಂದ ಯಾರಿಗೂ ಕಷ್ಟ, ಆತಂಕ, ಭಯ ಅಥವಾ ಅತೃಪ್ತಿ ಉಂಟಾಗುವುದಿಲ್ಲ. ಭಕ್ತನು ಎಲ್ಲರ ವಿಷಯದಲ್ಲಿಯೂ ದೆಯೆಯಿಂದ ನಡೆದುಕೊಳ್ಳುವುದರಿಂದ ಇತರರಿಗೆ ಆತಂಕವನ್ನುಂಟುಮಾಡುವಂತೆ ಅವನು ನಡೆದುಕೊಳ್ಳುವುದಿಲ್ಲ. ಆದರೆ ಇತರರು ಭಕ್ತನಿಗೆ ಆತಂಕವನ್ನುಂಟುಮಾಡಲು ಯತ್ನಿಸಿದರೆ ಆತನು ಕ್ಷೋಭೆಗೆ ಒಳಗಾಗುವುದಿಲ್ಲ. ಹೊರಗಿನ ಯಾವುದೇ ಕ್ಷೋಭೆಯಿಂದ ಅವನು ಪ್ರಕ್ಷುಬ್ಧನಾಗದಿರುವಂತೆ ಸಾಧನೆ ಮಾಡಿರುವುದಕ್ಕೆ ಪ್ರಭುವಿನ ಕೃಪೆಯೇ ಕಾರಣ (Bhagavad Gita Updesh In Kannada).

ವಾಸ್ತವವಾಗಿ, ಭಕ್ತನು ಸದಾ ಕೃಷ್ಣಪ್ರಜ್ಞೆಯಲ್ಲಿ ತನ್ಮಯನಾಗಿದ್ದು ಭಕ್ತಿಸೇವೆಯಲ್ಲಿ ನಿರತನಾಗಿರುವುದರಿಂದ ಇಂತಹ ಐಹಿಕ ಸನ್ನಿವೇಶಗಳಿಂದ ಅವನ ಮನಸ್ಸು ವಿಚಲಿತನಾಗುವುದಿಲ್ಲ. ಸಾಮಾನ್ಯವಾಗಿ ಪ್ರಾಪಂಚಿಕ ಸ್ವಾಭಾವದ ಮನುಷ್ಯನ ಇಂದ್ರಿಯ ತೃಪ್ತಿಗೆ ಮತ್ತು ದೇಹಕ್ಕೆ ಏನಾದರೂ ದೊರೆತಾಗ ಅವನಿಗೆ ಸಂತೋಷವಾಗುತ್ತದೆ. ಇತರರಿಗೆ ಇಂದ್ರಿಯ ತೃಪ್ತಿಗೆ ಏನೋ ದೊರೆತಿದೆ, ತನಗೆ ದೊರೆತಿಲ್ಲ ಎನ್ನುವುದನ್ನು ಕಂಡಾಗ ಅವನಿಗೆ ದುಃಖವಾಗುತ್ತದೆ, ಅಸೂಯೆಯಾಗುತ್ತದೆ.

ವ್ಯಕ್ತಿಯು ಶತ್ರುವಿನಿಂದ ಪ್ರತೀಕಾರವನ್ನು ನಿರೀಕ್ಷಿಸುತ್ತಿರುವಾಗ ಭಯದ ಮನಸ್ಥಿತಿಯಲ್ಲಿರುತ್ತಾನೆ. ಏನನ್ನಾದರೂ ಯಶಸ್ವಿಯಾಗಿ ಕಾರ್ಯಗತ ಮಾಡಲು ಸಾಧ್ಯವಾಗದಿದ್ದಾಗ ಬೇಸರ ಪಡುತ್ತಾನ. ಈ ಎಲ್ಲ ಕ್ಷೋಭೆಯನ್ನೂ ಮೀರಿದ ಭಕ್ತನು ಯಾವಾಗಲೂ ಕೃಷ್ಣನಿಗೆ ಬಹು ಪ್ರಿಯನಾದವನು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.