Bhagavad Gita:ಭಗವಂತನಿಗೆ ಸಕಲ ಜೀವ ರಾಶಿಗಳಿರುವ ಜಗತ್ತಿಗೂ ಅವಿನಾಭಾವ ಸಂಬಂಧವಿದೆ; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita:ಭಗವಂತನಿಗೆ ಸಕಲ ಜೀವ ರಾಶಿಗಳಿರುವ ಜಗತ್ತಿಗೂ ಅವಿನಾಭಾವ ಸಂಬಂಧವಿದೆ; ಗೀತೆಯ ಅರ್ಥ ತಿಳಿಯಿರಿ

Bhagavad Gita:ಭಗವಂತನಿಗೆ ಸಕಲ ಜೀವ ರಾಶಿಗಳಿರುವ ಜಗತ್ತಿಗೂ ಅವಿನಾಭಾವ ಸಂಬಂಧವಿದೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಗವಂತನಿಗೆ ಸಕಲ ಜೀವ ರಾಶಿಗಳಿರುವ ಜಗತ್ತಿಗೂ ಅವಿನಾಭಾವ ಸಂಬಂಧವಿದೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 10 ರಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 10

ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್|

ಹೇತುನಾನೇನ ಕೌನ್ತೇಯ ಜಗದ್ ವಿಪರಿವರ್ತತೇ ||10||

ಅನುವಾದ: ಕುಂತಿಯ ಮಗನಾದ ಅರ್ಜುನನೆ, ನನ್ನ ಶಕ್ತಿಗಳಲ್ಲಿ ಒಂದಾದ ಈ ಐಹಿಕ ಪ್ರಕೃತಿಯು ಎಲ್ಲ ಚರಾಚರ ವಸ್ತುಗಳನ್ನು ನನ್ನ ಅಪ್ಪಣೆಯಂತೆ ಸೃಷ್ಟಿಸಿ ಕೆಲಸ ಮಾಡುತ್ತದೆ. ಈ ಅಭಿವ್ಯಕ್ತಿಯು ಅದರ ನಿಯಮಕ್ಕೆ ಅನುಗುಣವಾಗಿ ಮತ್ತೆ ಮತ್ತೆ ಸೃಷ್ಟಿಯಾಗುತ್ತದೆ ಮತ್ತು ನಾಶವಾಗುತ್ತದೆ (Bhagavad Gita Updesh in Kannada).

ಭಾವಾರ್ಥ: ಪರಮ ಪ್ರಭುವು ಐಹಿಕ ಜಗತ್ತಿನ ಎಲ್ಲ ಚಟುವಟಿಕೆಗಳಿಂದ ದೂರವಾಗಿದ್ದರೂ ಅದರ ಪರಮ ನಿರ್ದೇಶಕರಾಗಿ ಉಳಿಯುತ್ತಾನೆ ಎನ್ನುವುದನ್ನೂ ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಪರಮ ಪ್ರಭುವೇ ಪರಮ ಸಂಕಲ್ಪ ಮತ್ತು ಈ ಐಹಿಕ ಅಭಿವ್ಯಕ್ತಿಯ ಹಿನ್ನೆಲೆ. ಆದರೆ ಐಹಿಕ ಪ್ರಕೃತಿಯು ಇದನ್ನು ನಿರ್ವಹಿಸುತ್ತದೆ. ಭಗವದ್ಗೀತೆಯಲ್ಲಿ (Bhagavad Gita) ಕೃಷ್ಣನೂ (Lord Krishna), ಬೇರೆ ಬೇರೆ ರೂಪಗಳ ಮತ್ತು ವರ್ಗಗಳ ಜೀವಿಗಳಿಗೆಲ್ಲ ನಾನೇ ತಂದೆ ಎಂದು ಹೇಳುತ್ತಾನೆ.

ತಂದೆಯು ಮಗುವಿನ ಜನನಕ್ಕಾಗಿ ತಾಯಿಯ ಗರ್ಭಕ್ಕೆ ಜೀಜವನ್ನು ನೀಡುತ್ತಾನೆ. ಇದೇ ರೀತಿಯಲ್ಲಿ ಭಗವಂತನು ತನ್ನ ಕಡೆಗಣ್ಣಿನ ನೋಟ ಮಾತ್ರದಿಂದಲೇ ಐಹಿಕ ಪ್ರಕೃತಿಯ ಗರ್ಭದೊಳಗೆ ಎಲ್ಲ ಜೀವಿಗಳನ್ನೂ ಸೇರಿಸುತ್ತಾನೆ. ಅವರು ತಮ್ಮ ಹಿಂದಿನ ಆಸೆಗಳು ಮತ್ತು ಚಟುವಟಿಕೆಗಳು ಇವುಗಳಿಗೆ ಅನುಗುಣವಾಗಿ ಹೊರಕ್ಕೆ ಬರುತ್ತಾರೆ. ಈ ಎಲ್ಲ ಜೀವಿಗಳೂ ಪ್ರಭುವಿನ ಕಡೆಗಣ್ಣ ನೋಟದಲ್ಲಿ ಜನಿಸಿದ್ದರೂ ತಮ್ಮ ಹಿಂದಿನ ಕಾರ್ಯಗಳಿಗೆ ಮತ್ತು ಆಸೆಗಳಿಗೆ ಅನುಗುಣವಾಗಿ ಬೇರೆ ಬೇರೆ ದೇಹಗಳನ್ನು ಪಡೆಯುತ್ತಾರೆ. ಆದುದರಿಂದ ಪ್ರಭುವು ಈ ಐಹಿಕ ಸೃಷ್ಟಿಯಲ್ಲಿ ನೇರವಾಗಿ ಆಸಕ್ತನಲ್ಲ.

ಆತನು ಐಹಿಕ ಪ್ರಕೃತಿಯತ್ತ ಕಣ್ನೋಟ ಬೀರುತ್ತಾನೆ ಅಷ್ಟೇ. ಇದರಿಂದ ಐಹಿಕ ಪ್ರಕೃತಿಯು ಚುರುಕಾಗುತ್ತದೆ ಮತ್ತು ಕೂಡಲೇ ಎಲ್ಲವೂ ಸೃಷ್ಟಿಯಾಗುತ್ತವೆ. ಐಹಿಕ ಪ್ರಕೃತಿಯತ್ತ ಕಣ್ನೋಟ ಬೀರುವುದರಿಂದ ಪರಮ ಪ್ರಭುವು ನಿಶ್ಚಯವಾಗಿಯೂ ಚಟುವಟಿಕೆಯನ್ನು ತೋರಿಸುತ್ತಾನೆ. ಆದರೆ ಐಹಿಕ ಜಗತ್ತಿನ ಅಭಿವ್ಯಕ್ತಿಗೂ ಆತನಿಗೂ ನೇರವಾದ ಸಂಬಂಧವಿಲ್ಲ. ಸ್ಮೃತಿಯಲ್ಲಿ ಈ ಉದಾಹರಣೆಯನ್ನು ಕೊಟ್ಟಿದೆ. ಯಾರ ಮುಂದಾದರೂ ಒಂದು ಸುಗಂಧವಿರುವ ಹೂವಿದ್ದರೆ ಆತನ ಘ್ರಾಣಶಕ್ತಿಯನ್ನು ಸುಗಂಧವು ಸ್ಪರ್ಶಿಸುತ್ತದೆ. ಆದರೆ ಘ್ರಾಣವು ಹೂವೂ ಒಂದರಿಂದ ಇನ್ನೊಂದು ಬೇರೆಯಾಗಿರುತ್ತದೆ.

ಐಹಿಕ ಜಗತ್ತಿಗೂ ದೇವೋತ್ತಮ ಪರಮ ಪುರುಷನಿಗೂ ಇಂತಹುದೇ ಸಂಬಂಧವಿದೆ. ವಾಸ್ತವವಾಗಿ ಆತನಿಗೆ ಈ ಐಹಿಕ ಜಗತ್ತಿನೊಡನೆ ಸಂಬಂಧವಿಲ್ಲ. ಆದರೆ ತನ್ನ ಕಣ್ನೋಟದಿಂದ ಸೃಷ್ಟಿಮಾಡಿ ಜಗನ್ನಿಯಾಮಕನಾಗುತ್ತಾನೆ. ಸಂಗ್ರಹವಾಗಿ ಹೇಳಬೇಕೆಂದರೆ ದೇವೋತ್ತಮ ಪರಮ ಪುರುಷನ ಮೇಲ್ವಿಚಾರಣೆಯಿಲ್ಲದೆ ಐಹಿಕ ಪ್ರಕೃತಿಯು ಏನನ್ನೂ ಮಾಡಲಾರದು. ಆದರೂ ಪರಮ ಪುರುಷನು ಎಲ್ಲ ಐಹಿಕ ಚಟುವಟಿಕೆಗಳಿಂದ ದೂರವಾಗಿರುತ್ತಾನೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.