Bhagavad Gita: ಕೃಷ್ಣಪ್ರಜ್ಞೆ ಇರುವವರ ಮನೆಯಲ್ಲಿ ಶಾಂತಿ, ಪ್ರೀತಿ, ಸಂತೋಷ ನೆಲೆಸಿರುತ್ತೆ; ಭಗವದ್ಗೀತೆಯ ಅರ್ಥ ತಿಳಿಯಿರಿ-spiritual news bhagavad gita updesh lord krishna reason for happiness at home bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಕೃಷ್ಣಪ್ರಜ್ಞೆ ಇರುವವರ ಮನೆಯಲ್ಲಿ ಶಾಂತಿ, ಪ್ರೀತಿ, ಸಂತೋಷ ನೆಲೆಸಿರುತ್ತೆ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಕೃಷ್ಣಪ್ರಜ್ಞೆ ಇರುವವರ ಮನೆಯಲ್ಲಿ ಶಾಂತಿ, ಪ್ರೀತಿ, ಸಂತೋಷ ನೆಲೆಸಿರುತ್ತೆ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಕೃಷ್ಣಪ್ರಜ್ಞೆ ಇರುವವರ ಮನೆಯಲ್ಲಿ ಶಾಂತಿ, ಪ್ರೀತಿ, ಸಂತೋಷ ನೆಲೆಸಿರುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13ನೇ ಅಧ್ಯಾಯದ 8 ರಿಂದ 12 ಶ್ಲೋಕಗಳಲ್ಲಿನ ಮುಂದುವರಿದ ಭಾಗದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 8-12

ಅಮಾನಿತ್ವಮದಮ್ಭಿತ್ವಮಹಿಂಸಾ ಕ್ಷಾನ್ತಿರಾರ್ಜಮಮ್ |
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ||8|

ಇನ್ದ್ರಿಯಾರ್ಥೇಷು ವೈರಾಗ್ಯಮನಹನ್ಕಾರ ಏವ ಚ |ಜನ್ಮಮೃತ್ಯಜರಾವ್ಯಾಧಿದುಃಖದೋಷಾನುದರ್ಶನಮ್ ||9||

ಅಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು ||10||

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |ವಿವಕ್ತದೇಶಸೇವಿತ್ವಮರತಿರ್ಜನಸಂಸದಿ ||11||

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವ ಜ್ಞಾನಾರ್ಥದರ್ಶನಮ್ |
ಏತಜ್‌ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋನ್ಯಥಾ ||12||

ಭಗವದ್ಗೀತಯ 13ನೇ ಅಧ್ಯಾಯದ 8 ರಿಂದ 12 ರವರೆಗಿನ ಶ್ಲೋಕಗಳ ಮುಂದುವರಿದ ಭಾಗದಲ್ಲಿ ಮಕ್ಕಳು, ಹೆಂಡತಿ ಮತ್ತು ಮನೆಗಳ ವಿಷಯದಲ್ಲಿ ಆಸಕ್ತಿ ಇರಬಾರದು ಎಂದರೆ ಅವುಗಳ ವಿಷಯದಲ್ಲಿ ಮನುಷ್ಯನಿಗೆ ಯಾವ ಭಾವನೆಯೂ ಇರಬಾರದು ಎಂದರ್ಥವಲ್ಲ. ಅವುಗಳಲ್ಲಿ ಸಹಜವಾಗಿಯೇ ಪ್ರೀತಿಯುಂಟಾಗುತ್ತದೆ. ಆದರೆ ಅಧ್ಯಾತ್ಮಿಕ ಪ್ರಗತಿಗೆ ಅವು ಅನುಕೂಲಕರವಾಗಿಲ್ಲದಿದ್ದಾಗ ಅವುಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡಿರಬಾರದು. ಮನೆಯನ್ನು ಸಂತೋಷಕರವಾಗಿ ಮಾಡುವುದಕ್ಕೆ ಅತ್ಯುತ್ತಮ ಪ್ರಕ್ರಿಯೆಯೆಂದರೆ ಕೃಷ್ಣಪ್ರಜ್ಞೆ.

ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿರುವಾತನು ತನ್ನ ಮನೆಯನ್ನು ಬಹು ಸುಖಕರವಾಗಿ ಮಾಡಬಲ್ಲ. ಏಕೆಂದರೆ ಕೃಷ್ಣಪ್ರಜ್ಞೆಯ ಈ ಪ್ರಕ್ರಿಯೆಯು ಅತ್ಯಂತ ಸುಲಭ. ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ ಎಂದು ಜಪಮಾಡುವುದು, ಕೃಷ್ಣನ ಪ್ರಸಾದದ ಶೇಷವನ್ನು ಸ್ವೀಕರಿಸುವುದು, ಭಗದವ್ಗೀತೆ ಮತ್ತು ಶ್ರೀಮದ್ಭಾಗವತಗಳಂತಹ ಗ್ರಂಥಗಳನ್ನು ಕುರಿತು ಚರ್ಚೆ ಮಾಡುವುದು, ವಿಗ್ರಹದ ಪೂಜೆಯಲ್ಲಿ ನಿರತನಾಗುವುದು - ಇವಿಷ್ಟನ್ನು ಮಾಡಿದರೆ ಸಾಕು. ಈ ನಾಲ್ಕು ಸಂಗತಿಗಳು ಮನುಷ್ಯನಿಗೆ ಸುಖವನ್ನು ತರುತ್ತವೆ.

ಸಂಸಾರದ ಸದಸ್ಯರಿಗೂ ಇದೇ ರೀತಿ ತರಬೇತಿ ಕೊಡಬೇಕು. ಬೆಳಗ್ಗೆ ಮತ್ತು ಸಂಜೆ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಕುಳಿತು ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ, ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಎಂದು ಸಂಕೀರ್ತನೆ ಮಾಡಬಹುದು. ಈ ನಾಲ್ಕು ತತ್ವಗಳನ್ನು ಅನುಸರಿಸಿ ಕೃಷ್ಣಪ್ರಜ್ಞೆಯನ್ನು ಬೆಳೆಸುವಂತೆ ಕುಟುಂಬಜೀವನವನ್ನು ರೂಪಿಸುವುದು ಸಾಧ್ಯವಾದರೆ ಅಂತಹ ಮನುಷ್ಯನು ಸಾಂಸಾರಿಕ ಜೀವನದಿಂದ ಸನ್ಯಾಸಕ್ಕೆ ತಿರುಗುವ ಅವಶ್ಯಕತೆಯೇ ಇಲ್ಲ. ಆದರೆ ಸಾಂಸಾರಿಕ ಜೀವನವು ಅಧ್ಯಾತ್ಮಿಕ ಬದುಕಿಗೆ ಹೊಂದಿಕೊಳ್ಳುವಂತೆ, ಅನುಕೂಲವಾಗುವಂತೆ ಇಲ್ಲದಿದ್ದರೆ ಅದನ್ನು ತ್ಯಜಿಸಬೇಕು.

ಅರ್ಜುನನು ಮಾಡಿದಂತೆ ಕೃಷ್ಣನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದಕ್ಕೆ ಅಥವಾ ಅವನ ಸೇವೆ ಮಾಡುವುದಕ್ಕೆ ಮನುಷ್ಯನು ಎಲ್ಲವನ್ನೂ ತ್ಯಜಿಸಬೇಕು. ಅರ್ಜುನನಿಗೆ ತನ್ನ ಸಂಸಾರದ ಸದಸ್ಯರನ್ನು ಕೊಲ್ಲಲು ಇಷ್ಟವಿರಲಿಲ್ಲ. ಆದರೆ ಅವರು ತನ್ನ ಕೃಷ್ಣಸಾಕ್ಷಾತ್ಕಾರಕ್ಕೆ ಅಡ್ಡಿಯಾಗಿದ್ದಾರೆ ಎಂದು ಅರಿವಾದಾಗ ಅವನು ಕೃಷ್ಣನ ಉಪದೇಶವನ್ನು ಒಪ್ಪಿಕೊಂಡನು ಮತ್ತು ಯುದ್ಧಮಾಡಿ ಅವರನ್ನು ಕೊಂದನು. ಎಲ್ಲ ಸಂದರ್ಭಗಳಲ್ಲಿಯೂ ಮನುಷ್ಯನು ಸಾಂಸಾರಿಕ ಜೀವನದ ಜೀವನದ ಸುಖದುಃಖಗಳಲ್ಲಿ ನಿರಾಸಕ್ತನಾಗಿರಬೇಕು. ಏಕೆಂದರೆ ಯಾವ ಮನುಷ್ಯನೂ ಈ ಜಗತ್ತಿನಲ್ಲಿ ಸಂಪೂರ್ಣವಾಗಿ ಸುಖಿಯೂ ಆಗಿರಲಾರ. ಸಂಪೂರ್ಣವಾಗಿ ದುಃಖಿಯೂ ಆಗಿರಲಾರ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.