ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Pooja Oil: ಹಿಪ್ಪೆ ಮರದ ಎಣ್ಣೆಯಿಂದ ದೀಪ ಹಚ್ಚಿದರೆ ಹಲವು ಶುಭಫಲ; ಪ್ರತಿ ಸೋಮವಾರ ಶಿವನಿಗೆ ಹಿಪ್ಪೆ ಎಣ್ಣೆಯ ದೀಪದಾರತಿ ಮಾಡಿರೋ

Pooja oil: ಹಿಪ್ಪೆ ಮರದ ಎಣ್ಣೆಯಿಂದ ದೀಪ ಹಚ್ಚಿದರೆ ಹಲವು ಶುಭಫಲ; ಪ್ರತಿ ಸೋಮವಾರ ಶಿವನಿಗೆ ಹಿಪ್ಪೆ ಎಣ್ಣೆಯ ದೀಪದಾರತಿ ಮಾಡಿರೋ

Mahua Oil Diya: ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಮನೆಯಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ದೇವರಿಗೆ ದೀಪ ಬೆಳಗಿಸಲು ಯಾವ ಎಣ್ಣೆಗಳನ್ನು ಬಳಸಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಶಿವನಿಗೆ ಪ್ರಿಯವಾದ ಹಿಪ್ಪೆ ಮರದ ಎಣ್ಣೆಯಿಂದ ದೀಪ ಹಚ್ಚುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತವೆ ಇಲ್ಲಿದೆ ಓದಿ.

Pooja oil: ಹಿಪ್ಪೆ ಮರದ ಎಣ್ಣೆಯಿಂದ ದೀಪ ಹಚ್ಚಿದರೆ ಹಲವು ಶುಭಫಲ
Pooja oil: ಹಿಪ್ಪೆ ಮರದ ಎಣ್ಣೆಯಿಂದ ದೀಪ ಹಚ್ಚಿದರೆ ಹಲವು ಶುಭಫಲ

ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವನ್ನು ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಆ ದಿನ ಶಾಸ್ತ್ರದಲ್ಲಿ ಹೇಳಿರುವ ದೇವರನ್ನು ಆರಾಧಿಸುವುದರಿಂದ ಕಷ್ಟಗಳೆಲ್ಲವೂ ದೂರವಾಗಿ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯಿದೆ. ನಮ್ಮ ಪೂರ್ವಜರು ದೀಪ ಬೆಳಗಿಸುವುದಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ದೀಪವನ್ನು ಬೆಳಗಿಸುವುದರಿಂದ ಜೀವನದಲ್ಲಿ ಮತ್ತು ಮನಸ್ಸಿನಲ್ಲಿ ತುಂಬಿರುವ ಕತ್ತಲೆ ದೂರವಾಗುತ್ತದೆ ಎಂಬುದು ಅವರ ನಂಬಿಕೆ. ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಮನೆಯಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ಧಾರ್ಮಿಕ ಆಚರಣೆಯ ಪ್ರಕಾರ ದೀಪವನ್ನು ಬೆಳಗಿಸಲು ಕೆಲವು ಎಣ್ಣೆಗಳನ್ನು ಸೂಚಿಸಲಾಗಿದೆ. ಯಾವ ದೇವರಿಗೆ ಯಾವ ಎಣ್ಣೆಯಿಂದ ದೀಪ ಬೆಳಗಿಸಬೇಕು ಎಂದೂ ಹೇಳಿದ್ದಾರೆ. ತುಪ್ಪ, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ, ಎಳ್ಳೆಣ್ಣೆ ಮುಂತಾದವುಗಳಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ಅದೇ ರೀತಿ ಹಿಪ್ಪೆ ಮರದ ಎಣ್ಣೆಯಿಂದ ದೀಪ ಹಚ್ಚುವುದು ಸಹ ಶುಭ ಫಲವನ್ನು ನೀಡುತ್ತದೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ. ಹಿಪ್ಪೆ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ಭಗವಂತನ ಅನುಗ್ರಹ ದೊರೆಯುತ್ತದೆ. ಸೋಮವಾರದಂದು ಶಿವನನ್ನು ಪೂಜಿಸಲಾಗುತ್ತದೆ. ಜಲಾಭಿಷೇಕ ಮಾಡಿ, ಬಿಲ್ವ ಪತ್ರೆಯನ್ನು ಅರ್ಪಿಸಿದರೆ ಶಿವನು ಒಲಿಯುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಶಿವನ ಆಶೀರ್ವಾದವನ್ನು ಸಂಪೂರ್ಣವಾಗಿ ಪಡೆಯಲು ಸೋಮವಾರದಂದು ಹಿಪ್ಪೆ ಎಣ್ಣೆಯ ದೀಪವನ್ನು ಹಚ್ಚುವುದು ತುಂಬಾ ಮುಖ್ಯವಾಗಿದೆ.

ಹಿಪ್ಪೆ ಎಣ್ಣೆಯ ದೀಪವನ್ನು ಹೇಗೆ ಬೆಳಗಿಸಬೇಕು?

ಹಿಪ್ಪೆ ಎಣ್ಣೆಯಿಂದ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಎಣ್ಣೆಯಿಂದ ದೀಪ ಬೆಳಗಿಸಿದರೆ ಶಿವನು ಸಂತುಷ್ಟನಾಗುತ್ತಾನೆ ಎಂದು ನಂಬಲಾಗಿದೆ. ಪ್ರತಿ ಸೋಮವಾರ ಈ ದೀಪವನ್ನು ಬೆಳಗಿಸುವುದರಿಂದ ಶಿವನ ಅನುಗ್ರಹ ದೊರೆಯುತ್ತದೆ. ಈ ಎಣ್ಣೆಯಿಂದ ಎಂಟು ದೀಪಗಳನ್ನು ಹಚ್ಚಬೇಕು. ಹೀಗೆ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ. ಬಹುಕಾಲದಿಂದ ಬಳಲುತ್ತಿದ್ದ ರೋಗಗಳೂ ಗುಣವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಪರಮಾತ್ಮನ ಆಶೀರ್ವಾದದಿಂದ ಎಲ್ಲಾ ಕೆಲಸಗಳಲ್ಲೂ ವಿಜಯವನ್ನು ಸಾಧಿಸಬಹುದಾಗಿದೆ. ಜೊತೆಗೆ ಕಷ್ಟಗಳು ಮಾಯವಾಗಿ ಜೀವನದಲ್ಲಿ ಸಂತೋಷದ ದಿನಗಳನ್ನು ಕಾಣಬಹುದಾಗಿದೆ.

ಹಿಪ್ಪೆ ಎಣ್ಣೆ ದೀಪ ಹಚ್ಚುವುದರಿಂದ ಸಿಗುವ ಲಾಭಗಳು

ನಕಾರಾತ್ಮಕ ಶಕ್ತಿ ಹೋಗಲಾಡಿಸುತ್ತದೆ

ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬಿದ್ದರೆ ಅಶಾಂತಿಗೆ ಕಾರಣವಾಗುತ್ತದೆ. ಮನೆಯಲ್ಲಿ ಸದಾ ವಾದ–ವಿವಾದಗಳ ವಾತಾವರಣವಿರುತ್ತದೆ. ಯಾರೊಬ್ಬರಿಗೂ ನೆಮ್ಮದಿಯಿರುವುದಿಲ್ಲ. ಇದರಿಂದ ಹೊರಬರಲು ಹಿಪ್ಪೆ ಎಣ್ಣೆಯ ದೀಪವನ್ನು ಹಚ್ಚಬೇಕು ಎಂದು ಶಾಸ್ತ್ರ ಹೇಳುತ್ತದೆ. ಇದರಿಂದ ಮನೆಯಲ್ಲಿ ಅಶಾಂತಿ ದೂರವಾಗಿ ನೆಮ್ಮದಿ ನೆಲೆಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿನ ತೊಂದರೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.

ಇಷ್ಟಾರ್ಥಗಳು ಈಡೇರುತ್ತವೆ

ದೇವರಿಗೆ ಹಿಪ್ಪೆ ಎಣ್ಣೆ ದೀಪವನ್ನು ಬೆಳಗಿಸುವುದರಿಂದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಶಿವನ ಕೃಪೆಯೊಂದಿಗೆ ಸಕಲ ದೇವತೆಗಳ ಕೃಪೆಗೂ ಪಾತ್ರರಾಗಬಹುದು. ಆದರೆ ಈ ದೀಪವನ್ನು ಬೆಳಗಿಸಲು ವಿಶೇಷ ಸಮಯವಿದೆ. ಹಿಪ್ಪೆ ಎಣ್ಣೆಯ ದೀಪವನ್ನು ಮುಂಜಾನೆಯ ಬದಲು ಸಂಜೆ ಹಚ್ಚಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ನಿಮ್ಮ ಮನದಾಳದ ಇಷ್ಟಾರ್ಥಗಳು ನೆರವೇರಿ ಜೀವನದಲ್ಲಿ ಶಾಂತಿ ಸಿಗುತ್ತದೆ.

ದೋಷಗಳು ಪರಿಹಾರವಾಗುತ್ತವೆ

ಗ್ರಹಗತಿಗಳ ದೋಷದಿಂದ ಜೀವನ ಕಷ್ಟವೆನಿಸುತ್ತದೆ. ಹಿಪ್ಪೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ದೋಷ ನಿವಾರಣೆಯಾಗುತ್ತದೆ. ಕುಂಡಲಿ ದೋಷ ಮತ್ತು ಗ್ರಹ ದೋಷಗಳು ಪರಿಹಾರವಾಗುತ್ತವೆ. ಸೂರ್ಯ ದೇವರಿಗೆ ಹಿಪ್ಪೆ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ದುರಾದೃಷ್ಟಗಳು ದೂರವಾಗುತ್ತವೆ. ಬೇವಿನೆಣ್ಣೆ, ತುಪ್ಪ, ಆಲದ ಎಣ್ಣೆಯನ್ನು ಬೆರೆಸಿ ದೀಪವನ್ನುಹಚ್ಚಿ, ದೇವರ ಪೂಜೆ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ.

ಈ ನಿಯಮ ಪಾಲಿಸಿ ದೀಪ ಹಚ್ಚಿ

ದೀಪವನ್ನು ಇರಿಸಲು ನಿಯಮಗಳಿವೆ. ದೀಪವನ್ನು ಎಂದಿಗೂ ನೆಲದ ಮೇಲೆ ಇಡಬಾರದು. ದೀಪವನ್ನು ಇಡಲು ಅಕ್ಕಿ ಅಥವಾ ಯಾವುದೇ ಬಟ್ಟೆಯನ್ನು ಅದರ ಕೆಳಗೆ ಹರಡಬೇಕು. ದೀಪವನ್ನು ಸರಿಯಾದ ದಿಕ್ಕಿನಲ್ಲಿ ಬೆಳಗಿಸಬೇಕು. ಹಾಗೆಯೇ ದೀಪವನ್ನು ಹಚ್ಚುವ ಮುನ್ನ ಬಾಯಿಂದ ಗಾಳಿ ಹೊರಬಿಡಬಾರದು.

ಲೇಖನ: ಅರ್ಚನಾ ವಿ. ಭಟ್‌

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.