Palmistry: ನಿಮ್ಮ ವೈವಾಹಿಕ ಜೀವನ ಹೇಗಿರುತ್ತೆ, ನಿಮಗೆ ಪ್ರೇಮ ವಿವಾಹವಾಗುತ್ತಾ? ಅಂಗೈ ರೇಖೆಗಳ ಮೂಲಕ ಭವಿಷ್ಯ ತಿಳಿಯಿರಿ-spiritual news palmistry these lines on palm indicates problem in love life relationship as per palmistry rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Palmistry: ನಿಮ್ಮ ವೈವಾಹಿಕ ಜೀವನ ಹೇಗಿರುತ್ತೆ, ನಿಮಗೆ ಪ್ರೇಮ ವಿವಾಹವಾಗುತ್ತಾ? ಅಂಗೈ ರೇಖೆಗಳ ಮೂಲಕ ಭವಿಷ್ಯ ತಿಳಿಯಿರಿ

Palmistry: ನಿಮ್ಮ ವೈವಾಹಿಕ ಜೀವನ ಹೇಗಿರುತ್ತೆ, ನಿಮಗೆ ಪ್ರೇಮ ವಿವಾಹವಾಗುತ್ತಾ? ಅಂಗೈ ರೇಖೆಗಳ ಮೂಲಕ ಭವಿಷ್ಯ ತಿಳಿಯಿರಿ

Palmistry About Love Life: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ವೈವಾಹಿಕ ಜೀವನದ ಕುರಿತ ಹಲವು ವಿಚಾರಗಳನ್ನು ಅಂಗೈಯಲ್ಲಿರುವ ರೇಖೆಗಳ ಮೂಲಕವೇ ಊಹಿಸಬಹುದು. ಅಂಗೈಯಲ್ಲಿರುವ ಈ ಕೆಲವು ರೇಖೆಗಳು ದಾಂಪತ್ಯ ಜೀವನದ ಬಗ್ಗೆ ಹೇಳುತ್ತವೆ. ನೀವು ನಿಮ್ಮ ವೈವಾಹಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಕೈ ರೇಖೆಯನ್ನು ಗಮನಿಸಿ.

ಭವಿಷ್ಯ ಹೇಳುವ ಅಂಗೈ ರೇಖೆಗಳು
ಭವಿಷ್ಯ ಹೇಳುವ ಅಂಗೈ ರೇಖೆಗಳು (PC: Canva)

Palmistry Sign For Marriage: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವೃತ್ತಿ, ಆರೋಗ್ಯ, ಆರ್ಥಿಕ ಸ್ಥಿತಿ, ಪ್ರೀತಿಯ ಜೀವನ ಸೇರಿದಂತೆ ವ್ಯಕ್ತಿಯ ಜೀವನದ ಹಲವು ಪ್ರಮುಖ ಅಂಶಗಳನ್ನು ಅಂಗೈಯ ರೇಖೆಗಳ ಮೂಲಕ ಊಹಿಸಬಹುದು. ಇಂದಿನ ಹಸ್ತಸಾಮುದ್ರಿಕ ಪ್ರಕಾರ ನಿಮ್ಮ ಅಂಗೈ ರೇಖೆಗಳ ಮೂಲಕ ವೈವಾಹಿಕ ಜೀವನದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬಹುದು. ಪ್ರತಿಯೊಬ್ಬರೂ ತಮ್ಮ ದಾಂಪತ್ಯ ಜೀವನ ಸಂತೋಷದಿಂದ ಕೂಡಿರಬೇಕು ಎಂದು ಬಯಸುವುದು ಸಹಜ. ಆದರೆ ಅಂಗೈಯಲ್ಲಿನ ಕೆಲವು ಸಾಲುಗಳು ವ್ಯಕ್ತಿಯ ಪ್ರೇಮ ಜೀವನದಲ್ಲಿ ಸಮಸ್ಯೆಗಳನ್ನು ಸೂಚಿಸುತ್ತವೆ. ಅದೇ ರೀತಿ ಅಂಗೈಯಲ್ಲಿನ ಕೆಲವು ಸಾಲುಗಳು ಪ್ರೀತಿ ಅಥವಾ ಮದುವೆಯನ್ನು ಸಹ ಸೂಚಿಸುತ್ತವೆ. ಹಾಗಾದರೆ ಅಂಗೈಯಲ್ಲಿರುವ ಯಾವ ರೇಖೆ ಏನನ್ನು ಸೂಚಿಸುತ್ತದೆ ಎಂಬುದನ್ನು ಗಮನಿಸಿ.

ಅಂಗೈಯ ಹೃದಯ ರೇಖೆ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಸ್ತದ ಹೃದಯ ರೇಖೆ ಅಂದರೆ ಪ್ರಮುಖ ರೇಖೆಯು ಎರಡು ಗೆರೆಗಳಾಗಿ ವಿಂಗಡಿಸಲ್ಪಟ್ಟರೆ, ಎರಡು ಮುಖಗಳಾಗಿದ್ದರೆ ಅಥವಾ 'V' ಆಕಾರವನ್ನು ಪಡೆಯಲು ಪ್ರಾರಂಭಿಸಿದರೆ, ಅಂತಹ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗುತ್ತದೆ. ಇವರು ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಂಬಂಧಗಳಲ್ಲಿ ಆಗಾಗ್ಗೆ ತೊಡಕುಗಳು ಎದುರಾಗುತ್ತವೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಭಾವನೆಗಳನ್ನು ಸುಲಭವಾಗಿ ಹಂಚಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಪ್ರತಿದಿನ ಯಾವುದಾದರೂ ವಿಷಯದ ಬಗ್ಗೆ ವಿವಾದಗಳು ಉಂಟಾಗುತ್ತವೆ ಮತ್ತು ಸಂಬಂಧವನ್ನು ನಡೆಸುವುದು ತುಂಬಾ ಕಷ್ಟಕರವಾಗಿರುತ್ತದೆ.

ಮದುವೆ ರೇಖೆ

ಅಂಗೈಯಲ್ಲಿ ಕಿರುಬೆರಳಿನ ಕೆಳಗಿನ ಭಾಗದಲ್ಲಿ ಮದುವೆ ರೇಖೆ ಇದೆ. ಈ ರೇಖೆಯು ಹೃದಯದ ರೇಖೆಯ ಮೇಲೆ ಹಸ್ತದ ಹೊರ ಭಾಗದಿಂದ ಪ್ರಾರಂಭವಾಗಿ ಬುಧದ ಪರ್ವತದ ಕಡೆಗೆ ಹೋಗುತ್ತದೆ. ಅಂಗೈಯ ಮೇಲಿನ ಮದುವೆ ರೇಖೆಯ ಆಕಾರದಿಂದ ಯಾವುದೇ ವ್ಯಕ್ತಿಗಳ ವೈವಾಹಿಕ ಜೀವನದ ಕುರಿತ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದು.

ಮದುವೆ ರೇಖೆ: ಶುಭ ಮತ್ತು ಅಶುಭ ಸೂಚನೆ

* ಅಂಗೈಯಲ್ಲಿ ಮದುವೆ ರೇಖೆಯು ಸ್ಪಷ್ಟವಾಗಿ ಗೋಚರಿಸಿದರೆ ಅದು ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಎಂಬುದನ್ನು ಸಂಕೇತಿಸುತ್ತದೆ.

* ಅಂಗೈಯಲ್ಲಿ ತ್ರಿಶೂಲದ ಗುರುತು ಪ್ರೇಮ ವಿವಾಹಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

* ಇದಲ್ಲದೆ, ವ್ಯಕ್ತಿಯ ಅಂಗೈಯಲ್ಲಿ ಶುಕ್ರ ಪರ್ವತವು ಹೆಚ್ಚು ಪ್ರಾಮುಖ್ಯವನ್ನು ಹೊಂದಿದ್ದರೆ, ಆಗ ಪ್ರೇಮ ವಿವಾಹದ ಸಾಧ್ಯತೆಗಳು ಹೆಚ್ಚಾಗುತ್ತವೆ.

* ಅದೇ ಸಮಯದಲ್ಲಿ, ಮದುವೆಯ ರೇಖೆಯ ಆರಂಭದಲ್ಲಿ ದ್ವೀಪದ ರಚನೆಯು ಅಶುಭ ಸಂಕೇತವಾಗಿದೆ.

* ಈ ರೇಖೆಯು ಬೇರೆ ಯಾವುದಾದರೂ ರೇಖೆಯಿಂದ ದಾಟಿದರೆ ಅಂತ ಜನರು ತಮ್ಮ ಪ್ರೀತಿಯ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ.

* ಚಂದ್ರನ ಪರ್ವತದಿಂದ ಹೊರಹೊಮ್ಮುವ ರೇಖೆಯು ಮದುವೆಯ ರೇಖೆಯನ್ನು ಭೇಟಿಯಾದರೆ, ಅಂತಹ ವ್ಯಕ್ತಿಯು ತುಂಬಾ ಪ್ರೀತಿಯ ಜೀವನ ಸಂಗಾತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.