Palm Astrology: ಅಂಗೈಯಲ್ಲಿದೆ ನಮ್ಮ ಗುಣಧರ್ಮ; ಈ ರೀತಿ ಹಸ್ತ ಹೊಂದಿದವರು ಎಲ್ಲರೊಂದಿಗೂ ಹೊಂದಿಕೊಂಡು ಬಾಳುವ ಗುಣವುಳ್ಳವರು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Palm Astrology: ಅಂಗೈಯಲ್ಲಿದೆ ನಮ್ಮ ಗುಣಧರ್ಮ; ಈ ರೀತಿ ಹಸ್ತ ಹೊಂದಿದವರು ಎಲ್ಲರೊಂದಿಗೂ ಹೊಂದಿಕೊಂಡು ಬಾಳುವ ಗುಣವುಳ್ಳವರು

Palm Astrology: ಅಂಗೈಯಲ್ಲಿದೆ ನಮ್ಮ ಗುಣಧರ್ಮ; ಈ ರೀತಿ ಹಸ್ತ ಹೊಂದಿದವರು ಎಲ್ಲರೊಂದಿಗೂ ಹೊಂದಿಕೊಂಡು ಬಾಳುವ ಗುಣವುಳ್ಳವರು

Palm Horoscope: ಕೈ ನೋಡಿ ಜ್ಯೋತಿಷ್ಯ ಹೇಳುವುದು ಸಾಮಾನ್ಯ. ಆದರೆ ನಮ್ಮ ಅಂಗೈಗಳ ಆಕಾರವನ್ನು ಅನುಸರಿಸಿ ನಮ್ಮ ಗುಣ ಧರ್ಮವನ್ನು ತಿಳಿಯಬಹುದು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಹಸ್ತದ ಮಧ್ಯ ಭಾಗ ಒಳ ಹೋದಂತೆ ಇರುವವರ ನಡವಳಿಕೆ ಯಾವ ರೀತಿ ಇರಲಿದೆ? ಇಲ್ಲಿದೆ ವಿವರ.(ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು)

ಅಂಗೈಯಲ್ಲಿದೆ ನಮ್ಮ ಗುಣಧರ್ಮ
ಅಂಗೈಯಲ್ಲಿದೆ ನಮ್ಮ ಗುಣಧರ್ಮ (PC: Freepik)

Palm Horoscope: ಕೆಲವರಿಗೆ ಅಂಗೈನ ಮಧ್ಯ ಭಾಗವು ಒಳ ಹೋದಂತೆ ಕಾಣುತ್ತದೆ. ಇದರಲ್ಲಿಯೂ ವಿವಿಧ ರೀತಿ ಆಕಾರಗಳಿರುತ್ತವೆ. ಉದಾಹರಣೆಗೆ ಕೆಲವು ಅಂಗೈಗಳು ಬಟ್ಟಲಿನಂತೆ ಇರುತ್ತವೆ. ಇನ್ನು ಕೆಲವು ಸಣ್ಣ ಪೆಟ್ಟಿಗೆ ಆಕಾರದಲ್ಲಿ ಇರುತ್ತದೆ. ಸಾಮಾನ್ಯವಾಗಿ ಇಂತಹ ಜನರು ಕಷ್ಟವನ್ನು ಅರಿತವರು. ಅಂತರ್ಮುಖಿಗಳಾಗಿರುತ್ತಾರೆ. ಸಾಮಾನ್ಯವಾಗಿ ಇವರು ಬೇರೆಯವರಲ್ಲಿ ಸಂತೋಷವನ್ನಷ್ಟೇ ಹಂಚಿಕೊಳ್ಳಲು ಇಷ್ಟಪಡುತ್ತಾರೆ.

ಮನದ ಸಮಸ್ಯೆಯನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ

ತಮ್ಮ ಮನದ ಸಮಸ್ಯೆಗಳನ್ನು ಯಾರಿಗೂ ಹೇಳುವುದಿಲ್ಲ. ಎದುರಾಗುವ ಯಾವುದೇ ರೀತಿಯಅಡ್ಡಿ ಆತಂಕಗಳನ್ನು ಗೆಲ್ಲುವ ಬಗೆ ತಿಳಿದಿರುತ್ತದೆ. ಕಡಿಮೆ ಮಾತು ಆದರೂ ಮಾತಿನಲ್ಲಿ ಸ್ಪಷ್ಟತೆ ಇರುತ್ತದೆ. ಅನಾವಶ್ಯಕವಾಗಿ ಬೇರೆಯವರಿಗೆ ಸ್ವಂತ ಸಲಹೆ ಅಥವಾ ಸೂಚನೆ ನೀಡುವುದಿಲ್ಲ. ಆದರೆ ನಿರೀಕ್ಷೆ ಇಟ್ಟು ಬಂದವರಿಗೆ ಮೋಸ ಮಾಡುವುದಿಲ್ಲ. ನಂಬಿದವರನ್ನು ಹೇಗೆ ಕಾಪಾಡಬೇಕೆಂಬ ಅರಿವು ಇರುತ್ತದೆ. ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ದುಂದು ವೆಚ್ಚ ಮಾಡುವ ಜನರನ್ನು ಕಂಡರೆ ದೂರ ಉಳಿಯಲು ಬಯಸುವಿರಿ. ಯಾವುದೇ ಕೆಲಸವನ್ನು ಸುಲಭವಾಗಿ ಆರಂಭಿಸುವುದಿಲ್ಲ. ನಿಧಾನ ಗತಿಯಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ.

ಹಣಕಾಸಿನ ವಿಚಾರದಲ್ಲಿ ಸುಲಭವಾಗಿ ಯಾರನ್ನು ನಂಬುವುದಿಲ್ಲ. ಹಣಕಾಸಿನ ವ್ಯವಹಾರವನ್ನು ರಹಸ್ಯವಾಗಿ ಇಡುತ್ತಾರೆ. ಸದಾ ಉದ್ಯೋಗದಲ್ಲಿ ಮುಳುಗಿರುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ. ಇದಕ್ಕೆ ಕಾರಣ ನಷ್ಟವಾಗಬಹುದೆಂಬ ಭಯ. ಅನಿವಾರ್ಯದಿಂದಾಗಿ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿದರೆ ಹೆಚ್ಚಿನ ಬಂಡವಾಳವನ್ನು ಹೂಡುವುದಿಲ್ಲ. ಸಣ್ಣಪುಟ್ಟ ವ್ಯಾಪಾರದಲ್ಲಿ ತೃಪ್ತಿಪಡುತ್ತಾರೆ. ಆದರೆ ಕುಟುಂಬದ ಸದಸ್ಯರು ವ್ಯಾಪಾರವನ್ನು ಆರಂಭಿಸಿದಲ್ಲಿ ಉಪಯುಕ್ತವಾದ ಸಲಹೆ ನೀಡುತ್ತಾರೆ. ಆದರೆ ಇವರು ಹಣದ ಸಹಾಯ ಮಾಡುವುದಿಲ್ಲ. ಜೀವನದ ಮುಖ್ಯ ಗುರಿ ಎಂದರೆ ಹಣದ ತೊಂದರೆ ಇಲ್ಲದೆ ಜೀವನ ನಡೆಸುವುದು. ದುಬಾರಿ ವಸ್ತುಗಳನ್ನು ಇಷ್ಟಪಡುವುದಿಲ್ಲ. ಆದರೆ ದುಬಾರಿ ಉಡುಗೆಗಳನ್ನು ಕೊಳ್ಳುತ್ತಾರೆ. ಸಮಯಕ್ಕೆ ಸರಿಯಾಗಿ ಹೊಂದಿಕೊಳ್ಳುವ ಜಾಣ್ಮೆ ಇವರಲ್ಲಿರುತ್ತದೆ. ಆದ್ದರಿಂದ ವಿವಾದಗಳು ದೂರವೇ ಉಳಿಯಲಿವೆ.

ಇಳಿ ವಯಸ್ಸಿನಲ್ಲೂ ಆರೋಗ್ಯ ಕಾಪಾಡಿಕೊಳ್ಳುವವರು

ಸ್ತ್ರೀಯರಲ್ಲಿ ಹಾರ್ಮೋನಿನ ತೊಂದರೆ ಕಾಡುತ್ತದೆ. ತೊಂದರೆ ಬಂದಾಗ ಪರಿಹಾರ ಕಂಡುಹಿಡಿಯುವಿರಿ. ಪುರುಷರಿಗೆ ಉತ್ತಮ ಆರೋಗ್ಯ ವಿರುತ್ತದೆ. ಆದರೆ ದೇಹದ ಒಳ ಅಂಗಾಂಗಗಳಾದ ಹೃದಯ, ಲಿವರ್‌ನಂತಹ ತೊಂದರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ಮಂದಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮದಂತಹ ಸಾಂಪ್ರದಾಯಿಕ ವಿಚಾರಗಳ ಮೇಲೆ ಅವಲಂಬಿತವಾಗುತ್ತಾರೆ. ಸಂಗಾತಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವರು. ಇಳಿ ವಯಸ್ಸಿನಲ್ಲಿಯೂ ಆರೋಗ್ಯ ಕಾಪಾಡಿಕೊಳ್ಳುತ್ತಾರೆ.

ಉದ್ಯೋಗದ ವಿಚಾರದಲ್ಲಿ ಇವರು ಅದೃಷ್ಟವಂತರು. ಇವರಿಗೆ ಇಷ್ಟವಾದ ಉದ್ಯೋಗ ದೊರೆಯುತ್ತದೆ. ಅನಾವಶ್ಯಕವಾಗಿ ಉದ್ಯೋಗವನ್ನು ಬದಲಾಯಿಸುವುದಿಲ್ಲ. ಹಿರಿಯ ಅಧಿಕಾರಿಗಳು ಮಾತ್ರವಲ್ಲದೆ ತಮ್ಮ ಸಹೋದ್ಯೋಗಿಗಳ ನಡುವೆಯೂ ಭಾವನಾತ್ಮಕ ಅನುಬಂಧ ಇರುತ್ತದೆ. ಸ್ವಂತ ಉದ್ದಿಮೆ ಆರಂಭಿಸಿದರೆ ಕುಟುಂಬದವರಿಗೆ ಹೆಚ್ಚಿನ ಅವಕಾಶ ನೀಡುತ್ತಾರೆ. ಅಧಿಕಾರ ಚುಕ್ಕಾಣಿ ಇವರ ಕೈಲಿದ್ದರೂ ಕುಟುಂಬದ ಸದಸ್ಯರಲ್ಲಿ ನಂಬಿಕೆ ಇರುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತಿಗೆ ಬದ್ಧರಾದ ಇವರು ಹೊಂದಿಕೊಂಡು ಬಾಳುವ ಗುಣ ಧರ್ಮದವರು.

ಬೇರೆಯವರಿಗೆ ಕಷ್ಟ ಎನಿಸುವ ವಿದ್ಯೆ ಇವರಿಗೆ ಸುಲಭದ ತುತ್ತಾಗುತ್ತದೆ. ಪ್ರತಿಯೊಂದು ವಿಚಾರದ ಬಗ್ಗೆಯೂ ಜ್ಞಾನ ಸಂಪಾದಿಸುತ್ತಾರೆ. ಆದರೆ ತಮ್ಮಲ್ಲಿರುವ ವಿಶೇಷ ಜ್ಞಾನ ಅಥವಾ ವಿಶೇಷ ವಿದ್ಯೆಯನ್ನು ಯಾರಿಗೂ ಹೇಳಿಕೊಡುವುದಿಲ್ಲ. ಸಮಾಜದಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬಾಳುವುದು ಇವರ ಏಕೈಕ ಗುರಿ. ಒಳ್ಳೆಯ ಕೀರ್ತಿ ಪ್ರತಿಷ್ಠೆಗಾಗಿ ಯಾವುದೇ ತ್ಯಾಗ ಮಾಡಬಲ್ಲರು. ವಿದೇಶದಲ್ಲಿ ವಿದ್ಯೆ ಕಲಿಯಬೇಕೆಂಬ ಬಯಕೆ ಇರುವುದಿಲ್ಲ. ಆದರೆ ತಾನಾಗಿಯೇ ದೊರೆಯುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಇವರುಗಳು ಇಳಿ ವಯಸ್ಸಿನಲ್ಲಿಯೂ ಸಹ ಕೆಲಸ ಮಾಡಲು ಸಮರ್ಥರಾಗಿರುತ್ತಾರೆ.

ಸಾರ್ವಜನಿಕ ವಲಯದಲ್ಲಿಉತ್ತಮ ಗೌರವ ಲಭಿಸುತ್ತದೆ. ಜನೋಪಯೋಗಿ ಕೆಲಸಗಳಲ್ಲಿ ತೊಡಗುವುದರಿಂದ ಬಿಡುವಿಲ್ಲದ ಜೀವನ ಇರುತ್ತದೆ. ಸಂಗಾತಿಯೊಂದಿಗೆ ಸದಾ ಕಾಲ ಸುಖ ಸಂತೋಷದಿಂದ ಜೀವಿಸುತ್ತಾರೆ. ಯಾವುದೇ ಕಾರಣಕ್ಕೂ ಮಕ್ಕಳ ಮೇಲಾಗಲಿ ಅಥವಾ ಬೇರಾವುದೇ ವ್ಯಕ್ತಿಯ ಮೇಲಾಗಲಿ ಅವಲಂಬಿತವಾಗುವುದಿಲ್ಲ. ಒಟ್ಟಾರೆ ಇವರು ತಮ್ಮ ಇಚ್ಛೆಗೆ ಅನುಗುಣವಾಗಿ ಜೀವನ ನಡೆಸುತ್ತಾರೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.