Palmistry: ಅಂಗೈಯಲ್ಲಿ ಈ ಚಿಹ್ನೆ ಇರುವವರಿಗೆ ಅದೃಷ್ಟವೋ ಅದೃಷ್ಟ; 35 ವರ್ಷ ದಾಟುತ್ತಿದ್ದಂತೆ ಇವರ ಬದುಕು ಬದಲಾಗುತ್ತೆ-spiritual news palmistry v shape fate line in hand brings you luck and wealth after 35 age v shape fate line rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Palmistry: ಅಂಗೈಯಲ್ಲಿ ಈ ಚಿಹ್ನೆ ಇರುವವರಿಗೆ ಅದೃಷ್ಟವೋ ಅದೃಷ್ಟ; 35 ವರ್ಷ ದಾಟುತ್ತಿದ್ದಂತೆ ಇವರ ಬದುಕು ಬದಲಾಗುತ್ತೆ

Palmistry: ಅಂಗೈಯಲ್ಲಿ ಈ ಚಿಹ್ನೆ ಇರುವವರಿಗೆ ಅದೃಷ್ಟವೋ ಅದೃಷ್ಟ; 35 ವರ್ಷ ದಾಟುತ್ತಿದ್ದಂತೆ ಇವರ ಬದುಕು ಬದಲಾಗುತ್ತೆ

Palmistry V Shape Fate Line: ನಮ್ಮ ಹಸ್ತದ ರೇಖೆಗಳು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಹೇಳುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ ಈ ವಿಶೇಷ ಗುರುತು ಒಂದು ನಿರ್ದಿಷ್ಟ ವಯಸ್ಸಿನ ನಂತರ ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತೆ ಎಂಬುದನ್ನು ಸೂಚಿಸುತ್ತದೆ. ಇದು ನಮ್ಮ ಹಣಕಾಸಿನ ಸ್ಥಿತಿಯನ್ನೂ ಸುಧಾರಿಸುತ್ತದೆ. ಆ ರೇಖೆ ಯಾವುದು ನೋಡಿ.

ಹಸ್ತಸಾಮುದ್ರಿಕೆ
ಹಸ್ತಸಾಮುದ್ರಿಕೆ (PC: Canva)

What does V line mean in palmistry: ಹಸ್ತಸಾಮುದ್ರಿಕ ಶಾಸ್ತ್ರವು ಕೈಯಲ್ಲಿರುವ ರೇಖೆಗಳು ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನವನ್ನು ಬಹಿರಂಗಪಡಿಸುತ್ತವೆ ಎಂದು ಹೇಳಲಾಗುತ್ತದೆ. ಅಂಗೈ ಮೇಲಿರುವ ಈ ಗೆರೆಗಳು ವ್ಯಕ್ತಿಯ ಯಶಸ್ಸಿನ ಬಗ್ಗೆ ಮಾಹಿತಿ ನೀಡುತ್ತವೆ. ಈ ಸಾಲುಗಳು ವ್ಯಕ್ತಿಯ ಆರ್ಥಿಕ ಪ್ರಗತಿ ಮತ್ತು ಆದಾಯದ ಮೂಲಗಳನ್ನು ಬಹಿರಂಗಪಡಿಸುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರ ಹೇಳುವಂತೆ ಒಬ್ಬ ವ್ಯಕ್ತಿಯ ಕೈಯಲ್ಲಿ V ಗುರುತು ಇದ್ದರೆ, ಅವನು ತುಂಬಾ ಅದೃಷ್ಟಶಾಲಿ.

ವಿ ಗುರುತು ಎಲ್ಲಿದೆ

ಅಂಗೈಯಲ್ಲಿ V ಗುರುತು ಮೇಲ್ಮುಖವಾಗಿರುತ್ತದೆ. ತನ್ನ ಅಂಗೈಯಲ್ಲಿ ಈ ಗುರುತು ಇರುವ ವ್ಯಕ್ತಿಯು ನಿರ್ದಿಷ್ಟ ವಯಸ್ಸಿನ ನಂತರ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾನೆ ಎಂದು ಹೇಳಲಾಗುತ್ತದೆ. ಹಸ್ತಸಾಮುದ್ರಿಕರ ಪ್ರಕಾರ, ತೋರುಬೆರಳು ಮತ್ತು ಮಧ್ಯದ ಬೆರಳುಗಳ ಮಧ್ಯದಲ್ಲಿ V ಗುರುತು ಇದ್ದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರೀತಿಯ ಇಂಗ್ಲಿಷ್ ವಿ ಅಕ್ಷರ ನಿಮ್ಮ ಅಂಗೈಯಲ್ಲಿದ್ದರೆ 35 ವರ್ಷದ ನಂತರ ನೀವು ಭಾರಿ ಅದೃಷ್ಟವಂತರಾಗುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಖಂಡಿತ ಫಲ ಸಿಗುತ್ತದೆ.

ಸಾಕಷ್ಟು ಹಣ ಗಳಿಸುತ್ತಾರೆ

ನಿಮ್ಮ ಅಂಗೈಯಲ್ಲಿ V ಗುರುತು ಹೊಂದಿರುವ ಜನರು ಬಹಳಷ್ಟು ಸಂಪತ್ತನ್ನು ಗಳಿಸುತ್ತಾರೆ. ಈ ಜನರು ಉನ್ನತ ಸ್ಥಾನಕ್ಕೇರುತ್ತಾರೆ. ಇಂತವರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸುವ ಇವರು 35 ವರ್ಷದ ನಂತರ ರಾಜನಂತೆ ಬದುಕುತ್ತಾರೆ.

ಕಷ್ಟದ ಸಂದರ್ಭಕ್ಕೆ ಹೆದರಬೇಡಿ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿ V ಚಿಹ್ನೆಯನ್ನು ಹೊಂದಿರುವ ಜನರು, ತಮ್ಮ ಕಷ್ಟದ ಸಮಯದಲ್ಲಿ ಭಯ ಪಡಬಾರದು. ಅಂತಹವರ ಅದೃಷ್ಟವು 35 ವರ್ಷ ವಯಸ್ಸಿನ ನಂತರ ಏರುತ್ತದೆ, ನಂತರ ಅವರು ಹಿಂತಿರುಗಿ ನೋಡುವುದಿಲ್ಲ ಅಷ್ಟರ ಮಟ್ಟಿಗೆ ಯಶಸ್ಸಿನ ಶಿಖರ ಏರುತ್ತಾರೆ.

ಜೀವನ ಸಂಗಾತಿಯಿಂದ ಬೆಂಬಲ ಪಡೆಯುತ್ತಾರೆ

ಕೈಯಲ್ಲಿ V ಚಿಹ್ನೆಯನ್ನು ಹೊಂದಿರುವ ಜನರು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಮತ್ತು ಸಂಗಾತಿಯ ಬೆಂಬಲ ಸಿಗುತ್ತದೆ ಎಂದು ಹೇಳಲಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.