Vishnu Purana: ಬದುಕಿನ ಪಾಠ ಕಲಿಸುತ್ತವೆ ವಿಷ್ಣು ಪುರಾಣದಲ್ಲಿನ ಈ ಸಂದೇಶಗಳು; ಇವುಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vishnu Purana: ಬದುಕಿನ ಪಾಠ ಕಲಿಸುತ್ತವೆ ವಿಷ್ಣು ಪುರಾಣದಲ್ಲಿನ ಈ ಸಂದೇಶಗಳು; ಇವುಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮ

Vishnu Purana: ಬದುಕಿನ ಪಾಠ ಕಲಿಸುತ್ತವೆ ವಿಷ್ಣು ಪುರಾಣದಲ್ಲಿನ ಈ ಸಂದೇಶಗಳು; ಇವುಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮ

ಪರಾಶರ ಮಹಾಋಷಿಗಳು ಒಟ್ಟು 18 ಮಹಾಪುರಾಣಗಳನ್ನು ಬರೆದಿದ್ದು ಇದರಲ್ಲಿ ಒಂದು ವಿಷ್ಣು ಪುರಾಣ. ಈ ವಿಷ್ಣು ಪುರಾಣದಲ್ಲಿ ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬಹುದಾದ ಸಾಕಷ್ಟು ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಅದರಲ್ಲಿ ಕೆಲವು ಅಂಶಗಳು ಇಲ್ಲಿವೆ.

ವಿಷ್ಣು ಪುರಾಣ
ವಿಷ್ಣು ಪುರಾಣ

ಜೀವನ ಎಂದ ಮೇಲೆ ಪ್ರತಿಯೊಬ್ಬ ವ್ಯಕ್ತಿಗೂ ಸಂಕಷ್ಟಗಳು ಎದುರಾಗುವುದು ಸಹಜ. ಆದರೆ ಆತ ಯಾವ ರೀತಿಯಲ್ಲಿ ಈ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಹಾಗೂ ಸಂಕಷ್ಟಗಳನ್ನು ಎದುರಿಸಿ ಜೀವನವನ್ನು ಹೇಗೆ ಸಂತೋಷದಿಂದ ನಡೆಸಿಕೊಂಡು ಹೋಗಬಹುದು ಎಂಬುದರ ಬಗ್ಗೆ ವಿಷ್ಣು ಪುರಾಣದಲ್ಲಿ ತಿಳಿಸಲಾಗಿದೆ. ಅಂತಹ ಕೆಲವು ವಿಚಾರಗಳು ಇಲ್ಲಿವೆ.

ಮಲಗುವ ಮತ್ತು ಏಳುವ ನಿಯಮಗಳು:

ಮಲಗುವುದು ಹಾಗೂ ಏಳುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಸಂಬಂಧ ವಿಷ್ಣು ಪುರಾಣದಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತಿಳಿಸಲಾಗಿದೆ. ಅದರ ಪ್ರಕಾರ ಅತೀ ಹೆಚ್ಚು ಕಾಲ ಮಲಗಿಕೊಂಡೇ ಕಾಲ ಕಳೆಯುವುದು ಹಾಗೂ ತಡವಾಗಿ ಏಳುವುದು ಇವರೆಡೂ ಒಬ್ಬ ವ್ಯಕ್ತಿಯ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಇದು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ಹೀಗಾಗಿ ನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದನ್ನು ರೂಢಿಸಿಕೊಳ್ಳಿ.

ಇಂತಹ ವ್ಯಕ್ತಿಗಳಿಂದ ದೂರವಿರಿ

ವಿಷ್ಣು ಪುರಾಣದ ಪ್ರಕಾರ ಯಾವ ವ್ಯಕ್ತಿಯ ಗುಣವು ಸರಿಯಾಗಿಲ್ಲವೋ ಅಂಥವರಿಂದ ನೀವು ಅಂತರ ಕಾಯ್ದುಕೊಳ್ಳುವುದೇ ಉತ್ತಮ. ಏಕೆಂದರೆ ಈ ರೀತಿಯ ಜನರ ಸಹವಾಸವು ನಿಮ್ಮ ಸ್ವಭಾವದ ಮೇಲೂ ಪರಿಣಾಮ ಬೀರಬಹುದು. ಇದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಎಲ್ಲಿ ನಕಾರಾತ್ಮಕ ವಾತಾವರಣ ಇರುತ್ತದೆಯೋ ಆ ಸ್ಥಳದಿಂದ ಹಾಗೂ ಅಂತಹ ಮನೋಭಾವವಿರುವ ಜನರಿಂದ ನಾವು ದೂರವಿರಬೇಕು ಎಂದು ವಿಷ್ಣುಪುರಾಣ ಹೇಳುತ್ತದೆ.

ವಿಷ್ಣುಪುರಾಣದ ಪ್ರಕಾರ ಇಂಥವರು ದುಷ್ಟರು

ವಿಷ್ಣು ಪುರಾಣದಲ್ಲಿ ತಿಳಿಸಿರುವ ಹಾಗೆ ಬಡವರಿಗೆ ಅಥವಾ ಅಸಹಾಯಕರಿಗೆ ತೊಂದರೆ ಕೊಡುವವರು ಹಾಗೂ ಅಂತಹವರನ್ನು ಅವಮಾನಿಸುವವರನ್ನು ದುಷ್ಟರು ಎಂದು ಕರೆಯಲಾಗಿದೆ. ಇಂಥವರು ಭವಿಷ್ಯದಲ್ಲಿ ದೊಡ್ಡ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ನಾವು ಯಾರನ್ನೂ ಅವಮಾನಿಸಬಾರದು. ಸಮಾಜದಲ್ಲಿರುವ ಯಾರನ್ನೂ ಕೂಡ ಕೀಳಾಗಿ ನೋಡುವ ಅಥವಾ ಅವರನ್ನು ನಿಂದಿಸುವ ಕೆಲಸ ಮಾಡಬಾರದು. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣಬೇಕು ಎಂದು ವಿಷ್ಣು ಪುರಾಣ ಹೇಳುತ್ತದೆ.

ಇದನ್ನೂ ಓದಿ

ಮಾರ್ಗಶಿರ ಮಾಸದ ಪ್ರತಿ ಗುರುವಾರ ಲಕ್ಷ್ಮಿ ವ್ರತ ಆಚರಿಸುವುದರ ಮಹತ್ವ ಹೀಗಿದೆ

ಮಾರ್ಗಶಿರ ಮಾಸದಲ್ಲಿ ಪ್ರತಿ ಗುರುವಾರ ಲಕ್ಷ್ಮೀ ವ್ರತ ಮಾಡಿದರೆ ಅಷ್ಟೈಶ್ವರ್ಯ ನಿಮ್ಮದಾಗಲಿದೆ ಎಂದು ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ. ಮಾರ್ಗಶಿರ ಮಾಸದಲ್ಲಿನ ಲಕ್ಷ್ಮೀವ್ರತದ ಸಂಪೂರ್ಣ ವಿವರ ಇಲ್ಲಿದೆ.

ಈ ಲೇಖನವನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್‌ ಮಾಡಿ

2024ರಲ್ಲಿ ಈ ರಾಶಿಯ ಮಹಿಳೆಯರಿಗೆ ಯಶಸ್ಸಿನ ಜೊತೆಗೆ ಭಾರಿ ಧನಲಾಭ

2023 ಮುಗಿದು 2024ಕ್ಕೆ ಪ್ರವೇಶಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಮುಂದಿನ ವರ್ಷ ಕೆಲ ರಾಶಿಯ ಮಹಿಳೆಯರಿಗೆ ಉತ್ತಮ ಫಲಿತಾಂಶಗಳಿವೆ. ಜೀವನದಲ್ಲಿ ಯಶಸ್ಸು, ಭಾರಿ ಧನಲಾಭಗಳಿವೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.