ನಿಮ್ಮ ಮನೆಗೆ ಶ್ರೀಕೃಷ್ಣ ಬರಲು ಇನ್ನೊಂದೇ ದಿನ ಬಾಕಿ: ಗೋಕುಲಾಷ್ಟಮಿಯ ದಿನ ಕೃಷ್ಣನನ್ನು ಹೀಗೆ ಸ್ವಾಗತಿಸಿ, ಭಗವಂತನನ್ನು ಆರಾಧಿಸಿ-sri krishna janmastami how to worship lord sri krishna on gokulastami in home how to celebrate krishnastami dmg ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಮನೆಗೆ ಶ್ರೀಕೃಷ್ಣ ಬರಲು ಇನ್ನೊಂದೇ ದಿನ ಬಾಕಿ: ಗೋಕುಲಾಷ್ಟಮಿಯ ದಿನ ಕೃಷ್ಣನನ್ನು ಹೀಗೆ ಸ್ವಾಗತಿಸಿ, ಭಗವಂತನನ್ನು ಆರಾಧಿಸಿ

ನಿಮ್ಮ ಮನೆಗೆ ಶ್ರೀಕೃಷ್ಣ ಬರಲು ಇನ್ನೊಂದೇ ದಿನ ಬಾಕಿ: ಗೋಕುಲಾಷ್ಟಮಿಯ ದಿನ ಕೃಷ್ಣನನ್ನು ಹೀಗೆ ಸ್ವಾಗತಿಸಿ, ಭಗವಂತನನ್ನು ಆರಾಧಿಸಿ

ಅಂಬೆಗಾಲು ಕೃಷ್ಣ, ಬೆಣ್ಣೆಕೃಷ್ಣ, ಬಾಲಕೃಷ್ಣ, ತೊಟ್ಟಿಲಕೃಷ್ಣ... ಹೀಗೆ ಕೃಷ್ಣನನ್ನು ಮಗುವಾಗಿ ಪೂಜಿಸುವ ಹಲವು ಪರಂಪರೆಗಳಿವೆ. ಕೆಲವರು ಕೃಷ್ಣನ ಪಾದಗಳನ್ನು ಪ್ರಧಾನವಾಗಿ ಪೂಜಿಸುತ್ತಾರೆ.

ಗೋಕುಲಾಷ್ಟಮಿಯ ದಿನ ಶ್ರೀಕೃಷ್ಣನನ್ನು ಹೇಗೆ ಪೂಜಿಸಬೇಕು
ಗೋಕುಲಾಷ್ಟಮಿಯ ದಿನ ಶ್ರೀಕೃಷ್ಣನನ್ನು ಹೇಗೆ ಪೂಜಿಸಬೇಕು

ಶ್ರಾವಣ ಹುಣ್ಣಿಮೆಯ ನಂತರದ ಕೃಷ್ಣ ಪಕ್ಷದಲ್ಲಿ ಬರುವ ಅಷ್ಟಮಿ ಮಹತ್ವದ್ದು. ಅದೇ ತಿಥಿಯಲ್ಲಿ ಶ್ರೀಕೃಷ್ಣನು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಶ್ರಾವಣದ ಮೋಡಗಳು ಆನಂದದಿಂದ ತುಂಬಿ ತುಳುಕುತ್ತಿದ್ದರೆ, ಧರ್ಮರಕ್ಷಣೆಗಾಗಿ ಮಹಾವಿಷ್ಣುವೇ ಶ್ರೀಕೃಷ್ಣನಾದ ದಿನ. ಈ ಮಂಗಳಕರ ದಿನದಂದು ಮಥುರಾ, ವೃಂದಾವನ, ದ್ವಾರಕದಂಥ ಹಲವು ಕೃಷ್ಣ ಕ್ಷೇತ್ರಗಳತ್ತ ಭಕ್ತರು ಧಾವಿಸುತ್ತಾರೆ. ಭಾರತ ದೇಶಾದ್ಯಂತ ವಿವಿಧೆಡೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಮನೆಮನೆಗಳಲ್ಲಿಯೂ ಶ್ರೀಕೃಷ್ಣನ ಸುಮಧುರ ಗೀತೆಯನ್ನು ಕೇಳುತ್ತಾ, ಪೂಜೆ ಮಾಡುತ್ತಾ, ಕಾಲ ಕಳೆಯುತ್ತಾರೆ. ಶ್ರೀಕೃಷ್ಣಾಷ್ಟಮಿ ಆಚರಣೆಯಲ್ಲಿ ಎಲ್ಲ ವಯೋಮಾನದವರೂ ಭೇದಭಾವವಿಲ್ಲದೆ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಶ್ರೀಕೃಷ್ಣನು ಭಾದ್ರಪದ ಮಾಸದ ಬಹುಳದಲ್ಲಿ 8ನೇ ದಿನ ಜನಿಸಿದನು ಎಂದು ಕೆಲ ಗ್ರಂಥಗಳು ತಿಳಿಸುತ್ತವೆ. ಕೆಲವೆಡೆ ಭಾದ್ರಪದ ಮಾಸದ ರೋಹಿಣಿ ನಕ್ಷತ್ರದ ದಿನವನ್ನು ‘ಜಯಂತಿ’ ಎಂದು ಕರೆಯುವ ವಾಡಿಕೆ ಇದೆ. ಇದು ಅತ್ಯಂತ ಮಂಗಳಕರ ಅವಧಿ ಎಂದು 'ವಸಿಷ್ಠ ಸಂಹಿತೆ'ಯು ವಿವರಿಸುತ್ತದೆ. ಶ್ರೀಕೃಷ್ಣನು ಪ್ರತ್ಯಕ್ಷನಾದ ದಿನವಿದು. ಶ್ರೀ ಮಹಾವಿಷ್ಣುವು ಮಧ್ಯರಾತ್ರಿಯಲ್ಲಿ ಹದಿನಾರು ಕಲೆಗಳ ಪೂರ್ಣ ಅವತಾರವಾಗಿ ಭೂಮಿಯ ಮೇಲೆ ಕಾಣಿಸಿಕೊಂಡ ಪವಿತ್ರದಿನವಿದು.

ಕೃಷ್ಣಾಷ್ಟಮಿಯಂದು ಪುಟ್ಟ ಮಕ್ಕಳಿಗೆ ಪ್ರಾಶಸ್ತ್ಯ

ಕೃಷ್ಣಾಷ್ಟಮಿಯಂದು ಮುಂಜಾನೆಯೇ ಸ್ನಾನ ಮಾಡಿ ಶ್ರೀಕೃಷ್ಣನನ್ನು ಷೋಡಶೋಪಚಾರಗಳಿಂದ ಪೂಜಿಸುವುದು ಅತ್ಯಂತ ಮಹತ್ವದ, ಪವಿತ್ರ ಕೆಲಸವಾಗಿದೆ. ಭಗವಂತನನ್ನು ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೂ ಪೂಜಿಸಲಾಗುತ್ತದೆ. ಶ್ರೀಕೃಷ್ಣನಿಗೆ ಪ್ರಿಯವಾದ ಹಾಲು, ಬೆಣ್ಣೆ, ಉಂಡೆ, ಚಕ್ಕುಲಿ ಇತ್ಯಾದಿ ಮೊದಲಾದ ಸಾತ್ವಿಕ ಆಹಾರಗಳನ್ನು ಅಂದು ಸಮರ್ಪಿಸಲಾಗುತ್ತದೆ.

ಮನೆಗಳಲ್ಲಿ ಪುಟ್ಟ ಮಕ್ಕಳಿದ್ದರೆ, ಅಂಥ ಮಕ್ಕಳ ಪಾದಗಳನ್ನೇ ಅಕ್ಕಿಹಿಟ್ಟು ಕಲಿಸಿದ ನೀರಿನಲ್ಲಿ ಅದ್ದಿ ಮನೆಯೊಳಗೆ ನಡೆಸುವ ಸಂಪ್ರದಾಯ ಕೆಲವೆಡೆ ಇದೆ. ಇನ್ನೂ ಕೆಲವೆಡೆ ಅಂಗಳದಿಂದ ದೇವರಮನೆಯವರೆಗೂ ಪಾದಗಳ ಹೆಜ್ಜೆಗುರುತಿನ ರಂಗೋಲಿ ಹಾಕುತ್ತಾರೆ. ಶ್ರೀಕೃಷ್ಣ ಮನೆಗೆ ಬಂದ ಎನ್ನುವ ಸಂಭ್ರಮದ ಖುಷಿಯನ್ನು ಅದು ಬಿಂಬಿಸುತ್ತದೆ.

ಶ್ರೀಕೃಷ್ಣನನ್ನು ಹೀಗೆ ಪೂಜಿಸಿ

ಕೃಷ್ಣಾಷ್ಟಮಿಯ ದಿನದಂದು ಪೀಠ ಸ್ಥಾಪಿಸಿ, ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಅಂಬೆಗಾಲು ಕೃಷ್ಣ, ಬೆಣ್ಣೆಕೃಷ್ಣ, ಬಾಲಕೃಷ್ಣ, ತೊಟ್ಟಿಲಕೃಷ್ಣ... ಹೀಗೆ ಕೃಷ್ಣನನ್ನು ಮಗುವಾಗಿ ಪೂಜಿಸುವ ಹಲವು ಪರಂಪರೆಗಳಿವೆ. ಕೆಲವರು ಕೃಷ್ಣನ ಪಾದಗಳನ್ನು ಪ್ರಧಾನವಾಗಿ ಪೂಜಿಸುತ್ತಾರೆ. ಇದ್ಯಾವುದೂ ಸಾಧ್ಯವಾಗದಿದ್ದರೆ ಶ್ರೀಕೃಷ್ಣನ ಒಂದು ಚಿತ್ರಪಟವನ್ನು ಭಕ್ತಿಯಿಂದ ಪೂಜಿಸಬೇಕು. ಧೂಪ, ಮಂಗಳಾರತಿ, ಹೂಗಳ ಸಮರ್ಪಣೆ ಮಾಡಿದರೆ ಕೃಷ್ಣನ ಕೃಪೆ ಖಂಡಿತ ಸಿಗುತ್ತದೆ. ಶ್ರೀಕೃಷ್ಣ ಸದಾ ಭಕ್ತವತ್ಸಲ.

ಬರಹ: ಚಿಲಕಮರ್ತಿ ಚಕ್ರವರ್ತಿ ಪ್ರಭಾಕರ ಶರ್ಮಾ
ಸಂಪರ್ಕ ಸಂಖ್ಯೆ: 93152 52514

ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ
ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.