ಶ್ರಾವಣ ಸೋಮವಾರದಂದು ಶಿವನಿಗೆ ಈ ಮಂಗಳಾರತಿ ಮಂತ್ರ ಹೇಳುತ್ತಾ ಪೂಜಿಸಿ; ಇಷ್ಟಾರ್ಥ ಸಿದ್ಧಿಸುತ್ತದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರಾವಣ ಸೋಮವಾರದಂದು ಶಿವನಿಗೆ ಈ ಮಂಗಳಾರತಿ ಮಂತ್ರ ಹೇಳುತ್ತಾ ಪೂಜಿಸಿ; ಇಷ್ಟಾರ್ಥ ಸಿದ್ಧಿಸುತ್ತದೆ

ಶ್ರಾವಣ ಸೋಮವಾರದಂದು ಶಿವನಿಗೆ ಈ ಮಂಗಳಾರತಿ ಮಂತ್ರ ಹೇಳುತ್ತಾ ಪೂಜಿಸಿ; ಇಷ್ಟಾರ್ಥ ಸಿದ್ಧಿಸುತ್ತದೆ

ದೇವರಿಗೆ ಆರತಿ ಮಾಡುವುದು ದೇವರ ಪೂಜಾ ವಿಧಾನಗಳಲ್ಲಿ ಇರುವ ಒಂದು ಭಾಗ. ಶ್ರಾವಣ ಮಾಸದ ಸೋಮವಾರವು ಶಿವನಿಗೆ ಅರ್ಪಿತವಾದ ವಾರವಾಗಿದೆ. ಶಿವನಿಗೆ ಆರತಿಯನ್ನು ಮಾಡುವಾಗ ಈ ಮಂತ್ರಗಳನ್ನು ಹೇಳುತ್ತಾ ಪೂಜಿಸುವುದರಿಂದ ಅವನ ಕೃಪಾ ಕಟಾಕ್ಷ ದೊರೆಯುತ್ತದೆ. (ಬರಹ: ಅರ್ಚನಾ ವಿ. ಭಟ್)

ಶ್ರಾವಣ ಸೋಮವಾರದಂದು ಶಿವನಿಗೆ ಈ ಮಂಗಳಾರತಿ ಮಂತ್ರ ಹೇಳುತ್ತಾ ಪೂಜಿಸಿ; ಇಷ್ಟಾರ್ಥ ಸಿದ್ಧಿಸುತ್ತದೆ
ಶ್ರಾವಣ ಸೋಮವಾರದಂದು ಶಿವನಿಗೆ ಈ ಮಂಗಳಾರತಿ ಮಂತ್ರ ಹೇಳುತ್ತಾ ಪೂಜಿಸಿ; ಇಷ್ಟಾರ್ಥ ಸಿದ್ಧಿಸುತ್ತದೆ (HT File Photo)

ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಬಹಳ ಮಹತ್ವವವನ್ನು ನೀಡಲಾಗಿದೆ. ಶಿವ ಮಹಾಪುರಾಣದ ಪ್ರಕಾರ ಶ್ರಾವಣ ಸೋಮವಾರದಂದು ಶಿವನನ್ನು ಪೂಜಿಸಿದರೆ ಆತನ ಕೃಪಾ ಕಟಾಕ್ಷ ಸಿಗುತ್ತದೆ. ಶ್ರಾವಣ ಸೋಮವಾರದಂದು ನೀವು ಶಿವನನ್ನು ಪೂಜಿಸಿ ಆರತಿ ಮಾಡಿದರೆ, ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುವ ಸಾಧ್ಯತೆಯಿದೆ. ಹಣಕಾಸಿನ ತೊಂದರೆಗಳು ಕೊನೆಗೊಳ್ಳುತ್ತವೆ. ಶ್ರಾವಣ ಸೋಮವಾರದಂದು ಶಿವಲಿಂಗವನ್ನು ಗಂಗಾಜಲ, ಹಾಲು ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡಿ ಬಿಲ್ವ ಪತ್ರೆಗಳಿಂದ ಪೂಜಿಸಿದರೆ ಶಿವನು ಪ್ರಸನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ. ಈ ವರ್ಷದ ಶ್ರಾವಣ ಮಾಸದಲ್ಲಿ ಒಟ್ಟೂ ಐದು ಸೋಮವಾರಗಳು ಬಂದಿವೆ. ಈ ಐದು ಸೋಮವಾರಗಳಂದು ಶಿವನನ್ನು ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಶ್ರಾವಣ ಸೋಮವಾರದಂದು ಶಿವನನ್ನು ಪೂಜಿಸಿದ ನಂತರ ಆರತಿಯೊಂದಿಗೆ ಮುಕ್ತಾಯಗೊಳಿಸಬೇಕು. ಸಾಮಾನ್ಯವಾಗಿ ಯಾವ ದೇವರನ್ನು ಪೂಜಿಸುತ್ತೇವೆಯೋ ಆ ದೇವರ ಮಂತ್ರವನ್ನು ಹೇಳುತ್ತಾ ಆರತಿ ಮಾಡುತ್ತಾರೆ. ಅದು ನಮ್ಮ ಆತ್ಮವನ್ನು ಶುದ್ಧಗೊಳಿಸುತ್ತದೆ. ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಗಂಡನ ಶ್ರೇಯಸ್ಸನ್ನು ಬಯಸುವ ಮಹಿಳೆಯರಿಗೆ ಇದು ವಿಶೇಷವಾಗಿ ಮಂಗಳಕರವಾಗಿದೆ. ಅವರ ಬಾಂಧವ್ಯವೂ ಗಟ್ಟಿಯಾಗುತ್ತದೆ.

ಶಿವ ಆರತಿ ಮಂತ್ರ

ಶ್ರಾವಣ ಮಾಸದಲ್ಲಿ ಶಿವನನ್ನು ಬಹಳ ಭಕ್ತಿಯಿಂದ ಪೂಜಿಸಲಾಗುತ್ತದೆ. ಕೆಲವು ವ್ರತಾಚರಣೆಗಳನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಶಿವನ ಮಂತ್ರ ಹೇಳುತ್ತಾ, ಆರತಿ ಮಾಡಲಾಗುತ್ತದೆ.

ಓಂ ಜೈ ಶಿವ ಓಂಕಾರ, ಸ್ವಾಮಿ ಜೈ ಶಿವ ಓಂಕಾರ

ಬ್ರಹ್ಮ, ವಿಷ್ಣು, ಸದಾಶಿವ, ಅರ್ಧಾಂಗಿ ಧಾರಾ

ಓಂ ಜೈ ಶಿವ ಓಂಕಾರ, ಸ್ವಾಮಿ ಜೈ ಶಿವ ಓಂಕಾರ |

ಏಕಾನನ ಚತುರಾನನ ಪಂಚಾನನ ರಾಜೆ |
ಹಂಸಾಸನ ಗರುಣಾಸನ ವೃಷವಾಹನ ಸಾಜೆ |
ಓಂ ಜಯ ಶಿವ ಓಂಕಾರಾ ||

ದೋ ಭುಜ ಚಾರ ಚತುರ್ಭುಜ ದಶಭುಜ ತೇ ಸೋಹೆ |
ತೀನೋ ರೂಪ ನಿರಖತಾ ತ್ರಿಭುವನ ಜನ ಮೋಹೆ |
ಓಂ ಜಯ ಶಿವ ಓಂಕಾರಾ ||

ಅಕ್ಷಮಾಲಾ ವನಮಾಲಾ ಮುಂಡಮಾಲಾ ಧಾರೀ |
ಚಂದನ ಮೃಗಮದ ಚಂದಾ ಭೋಲೇ ಶುಭಕಾರೀ
ಓಂ ಜಯ ಶಿವ ಓಂಕಾರಾ ||

ಶ್ವೇತಾಂಬರ ಪೀತಾಂಬರ ಬಾಘಾಂಬರ ಅಂಗೆ |
ಬ್ರಹ್ಮಾದಿಕ ಸನಕಾದಿಕ ಭೂತಾದಿಕ ಸಂಗೆ |
ಓಂ ಜಯ ಶಿವ ಓಂಕಾರಾ ||

ಕರ ಮೇ ಶ್ರೇಷ್ಠ ಕಮಂಡಲ ಚಕ್ರ ತ್ರಿಶೂಲ ಧರತಾ |
ಜಗಕರತಾ ಜಗಹರತಾ ಜಗಪಾಲನ ಕರತಾ |
ಓಂ ಜಯ ಶಿವ ಓಂಕಾರಾ ||

ಬ್ರಹ್ಮಾ ವಿಷ್ಣು ಮಹೇಶ ಜಾನತ ಅವಿವೇಕಾ |
ಪ್ರಣವಾಕ್ಷರ ಕೆ ಮಧ್ಯೆ ಯೇ ತೀನೊಂ ಏಕಾ |
ಓಂ ಜಯ ಶಿವ ಓಂಕಾರಾ ||

ತ್ರಿಗುಣಸ್ವಾಮೀಜಿ ಕೀ ಆರತಿ ಜೋ ಕೋಯಿ ಜನ ಗಾವೆ |
ಕಹತ ಶಿವಾನಂದ ಸ್ವಾಮೀ ಮನವಾಂಚಿತ ಫಲ ಪಾವೆ |
ಓಂ ಜಯ ಶಿವ ಓಂಕಾರಾ ||

(ಬರಹ: ಅರ್ಚನಾ ವಿ. ಭಟ್)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.