ನಾಳೆಯ ದಿನ ಭವಿಷ್ಯ; ಮೇಷ ರಾಶಿಯವರು ಸಿಹಿ ತಿಂದು ನೀರು ಕುಡಿದು ದಿನಚರಿ ಶುರುಮಾಡಿದರೆ ಶುಭ ಫಲ, 12 ರಾಶಿಗಳ ರಾಶಿ ಭವಿಷ್ಯ
Tomorrow Rashi Bhavishya in Kannada July 14; ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ. (ರಾಶಿಫಲ ವಿವರಣೆ: ಎಚ್. ಸತೀಶ್, ಜ್ಯೋತಿಷಿ).
'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ತ್ವ ಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವುದು ರೂಢಿ. ಅಂಥವರಿಗೆ ಕೈದೀವಿಗೆಯಾಗಬಲ್ಲ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (14th July 2024 Horoscope).
ನಾಳೆಯ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯನ, ಗ್ರೀಷ್ಮ ಋತು, ಆಷಾಡ ಮಾಸ, ಶುಕ್ಲಪಕ್ಷ, ಭಾನುವಾರ
ತಿಥಿ: ಅಷ್ಟಮಿ ಹ. 01.53 ರವರೆಗೂ ಇರುತ್ತದೆ. ಆನಂತರ ನವಮಿ ಆರಂಭವಾಗುತ್ತದೆ.
ನಕ್ಷತ್ರ : ಚಿತ್ತ ನಕ್ಷತ್ರವು ರಾ. 07.41 ರವರೆಗು ಇದ್ದು ಆನಂತರ ಸ್ವಾತಿ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ- ಬೆ.06.00
ಸೂರ್ಯಾಸ್ತ- ಸ.06.49
ರಾಹುಕಾಲ : ಸಾ. 05.16 ರಿಂದ ಸಾ. 06.52
ದ್ವಾದಶ ರಾಶಿಗಳ ನಾಳೆಯ ರಾಶಿಫಲ
ಮೇಷ ರಾಶಿ: ಉದ್ಯೋಗದಲ್ಲಿ ನಿಮ್ಮ ಮಾತಿಗೆ ಎಲ್ಲರ ಸಮ್ಮತಿ ದೊರೆಯುತ್ತದೆ. ಕೌಟುಂಬಿಕ ಜೀವನದ ಅಭಿವೃದ್ಧಿಯು ನಿಮ್ಮನ್ನು ಅವಲಂಭಿಸುತ್ತದೆ. ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ವರಮಾನದ ಕೊರತೆ ಕಾಣದು. ಸಂಗಾತಿಯಿಂದ ಸಹಾಯ ಸಹಕಾರ ದೊರೆಯುತ್ತದೆ.
ಪರಿಹಾರ : ಸಿಹಿ ತಿಂದು ನೀರು ಕುಡಿದು ದಿನದ ಕೆಲಸ ಶುರುಮಾಡಿ
ಅದೃಷ್ಟದ ಸಂಖ್ಯೆ 10
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ನಸುಗೆಂಪು ಬಣ್ಣ
ವೃಷಭ ರಾಶಿ: ಕುಟುಂಬದಲ್ಲಿನ ಸದಸ್ಯರ ಆಂತರ್ಯವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ. ಕುಟುಂಬದ ಜವಾಬ್ದಾರಿಯಿಂದ ದೂರ ಉಳಿಯುವಿರಿ. ಅಸಾಧ್ಯವೆಂದರೂ ಹಣವನ್ನು ಉಳಿಸುವಿರಿ.
ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸ ಶುರುಮಾಡಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ನೀಲಿಮಿಶ್ರಿತ ಬಿಳಿ ಬಣ್ಣ
ಮಿಥುನ ರಾಶಿ: ಉದ್ಯೋಗದಲ್ಲಿ ಅಧಿಕಾರಿಗಳ ಮನಗೆಲ್ಲುವಿರಿ. ಸರಳವಾದ ನಿಮ್ಮ ಕಾರ್ಯವಿಧಾನ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಹಣಕಾಸಿನ ವ್ಯವಹಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳು ದ್ವಂದ್ವ ಮನಸ್ಸಿನಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ.
ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸ ಶುರುಮಾಡಿ
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ಕಟಕ ರಾಶಿ: ಉದ್ಯೋಗದಲ್ಲಿ ಶತಪ್ರಯತ್ನದಿಂದ ಉನ್ನತ ಸ್ಥಾನವನ್ನು ಗಳಿಸುವಿರಿ. ವಿದ್ಯಾರ್ಥಿಗಳು ದುಡಿಕಿದರೆ ಮಾತ್ರ ಕಲಿಕೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಸಾಧ್ಯವಾದಷ್ಟು ಮೌನಮುರಿದು ಎಲ್ಲರ ಜೊತೆ ಮಾತನಾಡುವಿರಿ.
ಪರಿಹಾರ : ಧಾರ್ಮಿಕ ಶ್ರದ್ಧಾಕೇಂದ್ರದಲ್ಲಿ ಬಿಳಿ ಹೂವು ಸಮರ್ಪಿಸಿ ದಿನದ ಕೆಲಸ ಶುರುಮಾಡಿ
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ನೈಋತ್ಯ
ಅದೃಷ್ಟದ ಬಣ್ಣ: ಹೊಗೆಯ ಬಣ್ಣ
ಸಿಂಹ ರಾಶಿ: ಸಂಬಂಧ ಬಂಧುತ್ವಕ್ಕೆ ಬೆಲೆ ನೀಡುವ ನಿಮ್ಮನ್ನು ಎಲ್ಲರೂ ಗೌರವಿಸುತ್ತಾರೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ದಿನನಿತ್ಯದ ಆದಾಯದಲ್ಲಿ ಹಿನ್ನಡೆ ಉಂಟಾಗದು.
ಪರಿಹಾರ: ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಶುರುಮಾಡಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ : ಆಕಾಶನೀಲಿ ಬಣ್ಣ
ಕನ್ಯಾ ರಾಶಿ: ಕುಟುಂಬದ ವಿರೋಧವನ್ನು ಎದುರಿಸಿ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಇರುತ್ತದೆ. ವಾದ ವಿವಾದಗಳನ್ನು ಕಡಿಮೆ ಮಾಡಿ ಮೌನದಿಂದ ಕೆಲಸ ಸಾಧಿಸುವಿರಿ.
ಪರಿಹಾರ: ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 5
ಅಷ್ಟದ ದಿಕ್ಕು ಉತ್ತರ
ಅದೃಷ್ಟದ ಬಣ್ಣ ರಕ್ತದ ಬಣ್ಣ
ತುಲಾ ರಾಶಿ: ನಿಮಗೆ ಇಷ್ಟವೆನಿಸುವ ಸೌಲಭ್ಯಗಳು ತಾನಾಗಿಯೇ ದೊರೆಯಲಿದೆ. ಕುಟುಂಬದಲ್ಲಿ ಸ್ನೇಹಮಯ ವಾತಾವರಣ ಕಂಡುಬರುತ್ತದೆ. ಆತ್ಮೀಯರಿಂದ ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಯು ಪರಿಹಾರವಾಗಲಿದೆ. ನಿಮ್ಮ ಮಾತುಗಳನ್ನು ಎಲ್ಲರಿಗೂ ಗೌರವಿಸುತ್ತಾರೆ.
ಪರಿಹಾರ: ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು ಈಶಾನ್ಯ
ಅದೃಷ್ಟದ ಬಣ್ಣ ಎಲೆಹಸಿರು ಬಣ್ಣ
ವೃಶ್ಚಿಕ ರಾಶಿ: ನೆರೆಹೊರಗಿನ ಜನರ ಜೊತೆ ಸಹಬಾಳ್ವೆಯಿಂದ ಬಾಳುವಿರಿ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರದು. ಶಾಂತಿ ಸೌಹಾರದದಿಂದ ವರ್ತಿಸಿದಲ್ಲಿ ಜೀವನದಲ್ಲಿ ಹೊಸತನ ಆರಂಭವಾಗುತ್ತದೆ. ಭೂ ಸಂಬಂಧಿತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ.
ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ಧನಸ್ಸು ರಾಶಿ: ನಗು ಮೊಗದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಯಾರೊಬ್ಬರ ಸಹಾಯ ದೊರೆಯುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನದ ಫಲವಾಗಿ ಉತ್ತಮ ಬದಲಾವಣೆಗಳು ಉಂಟಾಗಲಿವೆ.
ಪರಿಹಾರ : ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ಮಕರ ರಾಶಿ; ಉದ್ಯೋಗದಲ್ಲಿ ಸಂತೋಷದ ಸನ್ನಿವೇಶಗಳು ಎದುರಾಗಲಿವೆ. ಸ್ವಂತ ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ಶೀತದದೋಷವು ನಿಮ್ಮನ್ನು ಕಾಡಲಿದೆ. ತಾಯಿಯವರ ಸಹಭಾಗಿತ್ವದಲ್ಲಿ ಸಣ್ಣಮಟ್ಟದ ವ್ಯಾಪಾರವನ್ನು ಆರಂಭಿಸುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ನೈಋತ್ಯ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಕುಂಭ ರಾಶಿ: ಉದ್ಯೋಗದಲ್ಲಿ ನಿಮ್ಮ ಕಾರ್ಯತತ್ಪರತೆ ಎಲ್ಲರ ಬೆಂಬಲ ದೊರೆಯುತ್ತದೆ. ಉದ್ಯೋಗದಲ್ಲಿಯಾವುದೇ ಬದಲಾವಣೆ ಎದುರಾಗದು. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಯತ್ನವಿದ್ದರೂ ಸಮಾನ್ಯ ಮಟ್ಟದ ಲಾಭ ಗಳಿಸುವಿರಿ.
ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ಮೀನ ರಾಶಿ: ಯಾವ ಒತ್ತಡಕ್ಕೂ ಮಣಿಯದೆ ಸ್ವಂತ ನಿರ್ಧಾರಗಳಿಗೆ ಬದ್ದರಾಗುವಿರಿ. ಉದ್ಯೋಗದಲ್ಲಿ ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಯಶಸ್ಸನ್ನು ಗಳಿಸುವಿರಿ. ಕುಟುಂಬದಲ್ಲಿ ನಿಮ್ಮ ಸಂಗಾತಿಯದೇ ಸಾಮ್ರಾಜ್ಯವಾಗಿರುತ್ತದೆ.
ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ 7
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಹಳದಿ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.
ವಿಭಾಗ