ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಸ್ವಂತ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ, ದಂಪತಿಗಳ ನಡುವೆ ಹೊಂದಾಣಿಕೆ ಹೆಚ್ಚಾಗಲಿದೆ; ಭಾನುವಾರದ ದಿನಭವಿಷ್ಯ

Tomorrow Horoscope: ಸ್ವಂತ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ, ದಂಪತಿಗಳ ನಡುವೆ ಹೊಂದಾಣಿಕೆ ಹೆಚ್ಚಾಗಲಿದೆ; ಭಾನುವಾರದ ದಿನಭವಿಷ್ಯ

7th April 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.

ಏಪ್ರಿಲ್ 7 ರ ಭಾನುವಾರದ ಭವಿಷ್ಯ ತಿಳಿಯಿರಿ.
ಏಪ್ರಿಲ್ 7 ರ ಭಾನುವಾರದ ಭವಿಷ್ಯ ತಿಳಿಯಿರಿ.

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಸಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವುದು ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀಲವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್‌. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (7th April 2024 Horoscope)

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ಭಾನುವಾರ

ತಿಥಿ: ಚತುರ್ದಶಿ ರಾತ್ರಿ 02.34 ರವರೆಗೆ ಇರುತ್ತದೆ. ಆನಂತರ ಅಮಾವಾಸ್ಯೆ ಇರುತ್ತದೆ.

ನಕ್ಷತ್ರ: ಪೂರ್ವಾಭಾದ್ರ ನಕ್ಷತ್ರವು ಬೆಳಗ್ಗೆ 11.53 ರವರೆಗು ಇರುತ್ತದೆ. ಆನಂತರ ಉತ್ತರಾಭಾದ್ರ ನಕ್ಷತ್ರವು ಆರಂಭವಾಗಲಿದೆ.

ಸೂರ್ಯೋದಯ: ಬೆ.06.11

ಸೂರ್ಯಾಸ್ತ: ಸ.06.31

ರಾಹುಕಾಲ: ಸಂಜೆ 04.30 ರಿಂದ 06.00 ರವರೆಗೆ

ಮೇಷ

ಮನದಲ್ಲಿ ಸದಾ ಧನಾತ್ಮಕ ಚಿಂತನೆ ಇರುತ್ತದೆ. ಕುಟುಂಬಕ್ಕೆ ಅನುಕೂಲವಾಗುವಂತಹ ಕೆಲಸವೊಂದನ್ನು ಆರಂಭಿಸುವಿರಿ. ಹಣಕಾಸಿನ ವಿಚಾರದಲ್ಲಿಯೂ ಒಮ್ಮತದ ನಿರ್ಧಾರ ತೆಗೆದುಕೊಳ್ಳುವಿರಿ. ಬಿಡುವಿಲ್ಲದ ಕೆಲಸ ಕಾರ್ಯದ ಕಾರಣ ವಿಶ್ರಾಂತಿಯ ಕೊರತೆ ಕಂಡು ಬರುತ್ತದೆ. ವಿದ್ಯಾರ್ಥಿಗಳು ಆಟಪಾಠಗಳಲ್ಲಿ ಮುಂದಿರುತ್ತಾರೆ. ಸ್ವಂತ ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.

ಪರಿಹಾರ: ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು: ಉತ್ತರ

ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ

ವೃಷಭ

ಬೇರೆಯವರ ಸಲಹೆಯನ್ನು ಒಪ್ಪದ ಕಾರಣ ವಿವಾದವು ಎದುರಾಗಲಿದೆ. ಕುಟುಂಬದಲ್ಲಿ ಕ್ಷಣಕಾಲ ಬೇಸರ ಉಂಟಾಗುತ್ತದೆ. ಮಾನಸಿಕ ಒತ್ತಡ ಹೆಚ್ಚುವ ಕಾರಣ ಆರೋಗ್ಯದಲ್ಲಿ ತೊಂದರೆ ಆಗಲಿದೆ. ಆತಂಕದ ನಡುವೆಯೂ ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಗಳಿಸುವಿರಿ. ವಿದ್ಯಾರ್ಥಿಗಳು ಗಡಿಬಿಡಿಯಿಂದ ತಪ್ಪು ನಿರ್ಧಾರ ಕೈಗೊಳ್ಳುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆದಾಯದ ಕೊರತೆ ಇರುವುದಿಲ್ಲ. ದಂಪತಿಗಳ ನಡುವೆ ಹೊಂದಾಣಿಕೆ ಕಂಡು ಬರುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಕೇಸರಿ

ಮಿಥುನ

ಹಣದ ಕೊರತೆ ಕಂಡು ಬರುವುದಿಲ್ಲ. ಮನಸ್ಸಿನಲ್ಲಿ ಅನಾವಶ್ಯಕ ಚಿಂತೆ ಇರುತ್ತದೆ. ಉತ್ತಮ ಜ್ಞಾನವನ್ನು ಗಳಿಸಲು ಧ್ಯಾನದ ಮಾರ್ಗವನ್ನು ಅವಲಂಬಿಸುವಿರಿ. ಹಣ ಒಂದೇ ಜೀವನವಲ್ಲ ಧ್ಯೇಯವಲ್ಲ ಎಂಬ ನಂಬಿಕೆ ನಿಮ್ಮಲಿರುತ್ತದೆ. ಕುಟುಂಬದಲ್ಲಿ ಹೊಂದಾಣಿಕೆ ಇರುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿ ಕಂಡು ಬಂದು ಉನ್ನತ ಅಧಿಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಉನ್ನತ ಅಧ್ಯಯನದಲ್ಲಿ ತೊಡಗುತ್ತಾರೆ. ಬಡ ರೋಗಿಗಳಿಗೆ ಸಹಾಯಮಾಡುವಿರಿ.

ಪರಿಹಾರ: ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 1

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಕಟಕ

ನಿಮ್ಮೆಲ್ಲ ಆಶೋತ್ತರಗಳು ಈಡೇರಲಿವೆ. ಅಸಾಧ್ಯವೆಂಬ ಕೆಲಸ ಕಾರ್ಯಗಳೂ ಆತ್ಮೀಯರ ಸಹಾಯದಿಂದ ಸುಲಭವಾಗಿ ನೆರವೇರುತ್ತದೆ. ಕುಟುಂಬದಲ್ಲಿ ಸ್ನೇಹಮಯ ವಾತಾವರಣ ಕಂಡು ಬರುತ್ತದೆ. ಉದ್ಯೋಗದಲ್ಲಿ ಕೀಳರಿಮೆ ತೋರದೆ ಪ್ರತಿ ಕೆಲಸದಲ್ಲಿಯೂ ಮುತು ವರ್ಜಿ ತೋರುವಿರಿ. ಹಿರಿಯ ಅಧಿಕಾರಿಗಳ ಕೃಪಾ ಶೀರ್ವಾದ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉನ್ನತದ ಅಧ್ಯಯನದ ಅವಕಾಶ ದೊರೆಯುತ್ತದೆ. ತಂದೆಯವರ ಸಹಾಯದಿಂದ ಸ್ವಂತ ಮನೆ ಖರೀದಿಸುವ ಚಿಂತನೆ ನಡೆಸುವಿರಿ.

ಪರಿಹಾರ: ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 8

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು

ಸಿಂಹ

ಸ್ಥಿರವಾದ ಮನಸ್ಸಿನಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ನಿರ್ದಿಷ್ಟ ಗುರಿ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ. ಕುಟುಂಬದ ಗುರುತರ ಹೊಣೆ ನಿಮ್ಮದಾಗುತ್ತದೆ. ಅವಶ್ಯ ಕತೆಗೆ ತಕ್ಕಷ್ಟು ಹಣ ಕೈಸೇರುತ್ತದೆ. ಕುಟುಂಬದಲ್ಲಿ ಸಂತಸದ ಕ್ಷಣಗಳು ಎದುರಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಗೆ ಸರಿಸಮನಾದ ವರ್ಚಸ್ಸು ನಿಮ್ಮದಾಗುತ್ತದೆ.

ಪರಿಹಾರ: ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹೊಸ ಉಡುಗೆ ತೊಡುಗೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 11

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಕಿತ್ತಳೆ

ಕನ್ಯಾ

ಸುಲಭ ಸಾಧ್ಯದ ಕೆಲಸ ಕಾರ್ಯಗಳನ್ನು ಮಾತ್ರ ಮಾಡಲು ಇಚ್ಚಿಸುವಿರಿ. ಒತ್ತಡದ ಬದುಕನ್ನು ದ್ವೇಷಿಸುವಿರಿ. ನಿಮ್ಮ ತಪ್ಪನ್ನು ಮರೆಮಾಚಲು ಬೇರೆಯವರನ್ನು ಟೀಕಿಸುವಿರಿ. ಕಿರಿಕಿರಿ ಉಂಟು ಮಾಡುವ ಗುಣವನ್ನು ಬಿಟ್ಟಲ್ಲಿ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಸಂಗಾತಿಯ ಮಾತಿನಂತೆ ನಡೆವ ಕಾರಣ ವಿವಾದ ಒಂದು ದೂರವಾಗುತ್ತದೆ. ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

ಪರಿಹಾರ: ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 2

ಅದೃಷ್ಟದ ದಿಕ್ಕು: ಪಶ್ಚಿ ಮ

ಅದೃಷ್ಟದ ಬಣ್ಣ: ಹಳದಿ ಬಣ್ಣ

ತುಲಾ

ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ. ಕುಟುಂಬದಲ್ಲಿ ನಲಿವಿನ ವಾತಾವರಣವಿರುತ್ತದೆ. ಪ್ರತಿ ವಿಚಾರವನ್ನೂ ಪರಸ್ಪರ ಚರ್ಚಿಸಿ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮನೆತನಕ್ಕೆ ಸೇರಿದ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಉದ್ಯೋಗದಲ್ಲಿ ನಿಮ್ಮ ಮಟ್ಟಕ್ಕೆ ಬರಲು ಹಲವರು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕೊರತೆ ಇರದು. ತೃಪ್ತಿಕರ ಜೀವನವಿರುತ್ತದೆ.

ಪರಿಹಾರ: ನೆರೆ ಹೊರೆಯ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 9

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ಹಸಿರು ಬಣ್ಣ

ವೃಶ್ಚಿಕ

ಕುಟುಂಬದ ಜನರ ಜೊತೆಯಲ್ಲಿ ಕಾಲ ಕಳೆಯಲು ನಿರ್ಧರಿಸುವಿರಿ. ಕುಟುಂಬದ ಒಳಗೂ ಹೊರಗೂ ಗೌರವಯುತ ಸ್ಥಾನಮಾನ ನಿಮಗಿರುತ್ತದೆ. ತಾಯಿಯವರ ಸೂ ಚನೆಯನ್ನು ಮೀರದೆ ಜೀವನದಲ್ಲಿ ಮುಂದುವರೆಯುವಿರಿ. ಕೆಲಸ ಕಾರ್ಯವನ್ನು ಬೇಗನೆ ಪೂರ್ಣಗೊಳಿಸುವ ತವಕವಿರುತ್ತದೆ. ತಾಯಿಯವರಿಂದ ಹಣದ ಸಹಾಯವು ದೊರೆಯುತ್ತದೆ. ಉದ್ಯೋಗದಲ್ಲಿ ನಿಯಮಿತ ಫಲಿತಾಂಶ ದೊರೆಯುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ: ನೀಲಿ

ಧನಸ್ಸು

ಧನಾತ್ಮಕ ಮನೋಭಾವನೆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ನೀಡಲಿದೆ. ಆಪರಿಮಿತ ನಿರೀಕ್ಷೆಯ ಕಾರಣ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ಕುಟುಂಬದಲ್ಲಿ ಪ್ರಗತಿಪರ ಬೆಳವಣಿಗೆಗಳು ಕಂಡು ಬರುತ್ತವೆ. ಉದ್ಯೋಗದಲ್ಲಿನ ಬದಲಾವಣೆಗಳು ನಿಮ್ಮ ಪರವಾಗಿರುತ್ತವೆ. ಹಣದ ತೊಂದರೆ ಕಂಡು ಬರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ.

ಪರಿಹಾರ: ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 3

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನೇರಳೆ

ಮಕರ

ಕುಟುಂಬದ ವಾದ ವಿವಾದಗಳಿಗೆ ಇತಿಶ್ರೀ ಹಾಡುವಿರಿ. ಮಾನಸಿಕ ಒತ್ತಡ ಇದ್ದರೂ ಶಾಂತಿ ಸಂಯಮವನ್ನು ಕಾಪಾಡುವಿರಿ. ಹಣಕಾಸಿನ ಕೊರತೆ ಇರದ ಕಾರಣ ನೆಮ್ಮದಿ ಇರುತ್ತದೆ. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಕಂಡು ಬರುತ್ತದೆ. ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿರುತ್ತದೆ. ಕಷ್ಟನಷ್ಟಗಳು ಎದುರಾದರೂ ಆತ್ಮವಿಶ್ವಾಸವನ್ನು ಕಳೆದು ಕೊಳ್ಳುವುದಿಲ್ಲ.

ಪರಿಹಾರ: ಬಲಗೈಯಲ್ಲಿ ಬೆಳ್ಳಿಯ ಕೈಖಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.‘

ಅದೃಷ್ಟದ ಸಂಖ್ಯೆ: 10

ಅದೃಷ್ಟದ ದಿಕ್ಕು: ನೈರುತ್ಯ

ಅದೃಷ್ಟದ ಬಣ್ಣ: ಗುಲಾಬಿ

ಕುಂಭ

ನೊಂದವರ ನೆರಳಾಗಿ ಬಾಳುವಿರಿ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉತ್ತಮ ಆರೋಗ್ಯ ದೊರೆಯುತ್ತದೆ. ಕುಟುಂಬದಲ್ಲಿ ಗಂಭೀರತೆ ಮನೆ ಮಾಡುತ್ತದೆ. ಉದ್ಯೋಗದಲ್ಲಿ ಆಶಾದಾಯಕ ವಾತಾವರಣ ನಿರ್ಮಾಣವಾಗುತ್ತದೆ. ಉದ್ಯೋಗವನ್ನು ಬದಲಾಯಿಸುವ ಸೂಚನೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ವಿರುತ್ತದೆ. ವಿದ್ಯಾರ್ಥಿಗಳು ಹಠದ ಗುಣವನ್ನು ಬಿಡಬೇಕು. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಅನುಭವಿಸುವಿರಿ.

ಪರಿಹಾರ: ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 1

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಬೂದು

ಮೀನ

ಸಕಾರಾತ್ಮಕ ಚಿಂತನೆಗಳು ಮತ್ತು ವಿಶ್ವಾಸಾರ್ಹ ನಡೆನುಡಿಗಳು ಕುಟುಂಬದ ಪ್ರಗತಿಗೆ ಕಾರಣವಾಗಲಿದೆ. ಕೆಲವೊಂದು ಬದಲಾವಣೆಗಳು ದೈನಂದಿನ ಜೀವನದಲ್ಲಿ ಹೊಸ ಆಯಾಮವನ್ನು ಸೃಷ್ಟಿಸುತ್ತದೆ. ಸುಲಭವಾಗಿ ಎಲ್ಲರೂ ನಿಮ್ಮ ಮಾತಿನ ಪ್ರಭಾವಕ್ಕೆ ಒಳಗಾಗುತ್ತಾರೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಯಶಸ್ಸನ್ನು ಗಳಿಸುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 85468 65832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಗೌರಿವಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).