ಸ್ಮೃತಿ ಶೈನಿಂಗ್, ರೇಣುಕಾ ರಾಕಿಂಗ್; ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 211 ರನ್ ಗೆಲುವು
- ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವನಿತೆಯರು ಭರ್ಜರಿಯಾಗಿ ಗೆದ್ದು ಬೀಗಿದ್ದಾರೆ. ಬರೋಡಾದ ಹೊಸ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಂಡೀಸ್ ಮಹಿಳಾ ತಂಡವನ್ನು ಸ್ಮೃತಿ ಮಂಧಾನ ಬ್ಯಾಟಿಂಗ್ ಹಾಗೂ ರೇಣುಕಾ ಠಾಕೂರ್ ಬೌಲಿಂಗ್ ಮೂಲಕ ಸೋಲಿಸಿದರು. ಪಂದ್ಯದಲ್ಲಿ ಆರ್‌ಸಿಬಿ ಆಟಗಾರ್ತಿಯರು ಅಬ್ಬರಿಸಿದರು.
- ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವನಿತೆಯರು ಭರ್ಜರಿಯಾಗಿ ಗೆದ್ದು ಬೀಗಿದ್ದಾರೆ. ಬರೋಡಾದ ಹೊಸ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಂಡೀಸ್ ಮಹಿಳಾ ತಂಡವನ್ನು ಸ್ಮೃತಿ ಮಂಧಾನ ಬ್ಯಾಟಿಂಗ್ ಹಾಗೂ ರೇಣುಕಾ ಠಾಕೂರ್ ಬೌಲಿಂಗ್ ಮೂಲಕ ಸೋಲಿಸಿದರು. ಪಂದ್ಯದಲ್ಲಿ ಆರ್‌ಸಿಬಿ ಆಟಗಾರ್ತಿಯರು ಅಬ್ಬರಿಸಿದರು.
(1 / 6)
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಗೆದ್ದುಕೊಂಡಿದೆ. ಬ್ಯಾಟಿಂಗ್ ವೇಳೆ ಸ್ಮೃತಿ ಮಂಧಾನ ಅಬ್ಬರಿಸಿದರೆ, ರೇಣುಕಾ ಸಿಂಗ್ ಠಾಕೂರ್ ಚೆಂಡಿನೊಂದಿಗೆ ಮೋಡಿ ಮಾಡಿದರು. ಸ್ಮೃತಿ ಮಂಧಾನ 91 ರನ್ ಗಳಿಸಿದರೆ, ಪ್ರತೀಕಾ ರಾವಲ್ 40 ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ 34 ರನ್ ಗಳಿಸಿದರು. ಹರ್ಲೀನ್ ಡಿಯೋಲ್ 44 ರನ್ ಸಿಡಿಸಿ ಔಟಾದರು. ರಿಚಾ ಘೋಷ್ 13 ಎಸೆತಗಳಲ್ಲಿ 26 ರನ್ ಗಳಿಸಿದರು.(HT_PRINT)
(2 / 6)
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಏಕದಿನ ಪಂದ್ಯಗಳಲ್ಲಿ ಎರಡನೇ ಅತಿ ಹೆಚ್ಚು ಸ್ಕೋರ್ ಗಳಿಸಿತು. ಆದರೆ, 315 ರನ್‌ಗಳ ಗುರಿ ಬೆನ್ನತ್ತಿದ ವಿಂಡೀಸ್ ಆರಂಭದಿಂದಲೇ ಮುಗ್ಗರಿಸಿತು. ಹೇಲಿ ಮ್ಯಾಥ್ಯೂಸ್ ಶೂನ್ಯಕ್ಕೆ ಔಟಾದರು. ಜೋಸೆಫ್ ಗಳಿಕೆ ಕೂಡಾ 0. ಟೈಟಸ್ ವಿಲಿಯಮ್ಸ್ 3 ರನ್ ಗಳಿಸಿ ಔಟಾದರೆ, ಡಾಟಿನ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರೇಣುಕಾ ಸಿಂಗ್ 10 ಓವರ್‌ಗಳಲ್ಲಿ 29 ರನ್ ನೀಡಿ 5 ವಿಕೆಟ್ ಪಡೆದರು.(PTI)
(3 / 6)
2024, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪಾಲಿಗೆ ಅಷ್ಟು ಉತ್ತಮವಾಗಿರಲಿಲ್ಲ. ಆದರೆ ಸ್ಮೃತಿ ಮಂಧಾನ ಪಾಲಿಗೆ ಅತ್ತುತ್ತಮ ವರ್ಷ. ಈಗಾಗಲೇ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಭಾರತ ವನಿತೆಯರ ತಂಡವು ತವರು ನೆಲದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದ ನಂತರ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 2-1 ರಿಂದ ಸೋಲಿಸಿತು. ಇದೀಗ ವೆಸ್ಟ್ ಇಂಡೀಸ್ ವಿರುದ್ಧವೂ ಪ್ರಾಬಲ್ಯ ಮುಂದುವರೆಸಿದೆ.(AP)
(4 / 6)
ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳೆಯರ ನಡುವಿನ ಎರಡನೇ ಏಕದಿನ ಪಂದ್ಯ ಮಂಗಳವಾರ (ಡಿಸೆಂಬರ್ 24) ನಡೆಯಲಿದೆ, ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಡಿಸೆಂಬರ್ 27ರಂದು ಶುಕ್ರವಾರ ನಡೆಯಲಿದೆ.(PTI)
ಇತರ ಗ್ಯಾಲರಿಗಳು