ದಿನಾ ಅದೇ ತಿಂಡಿನಾ ಎಂದು ಹೇಳುವ ಮಕ್ಕಳಿಗೆ ರುಚಿಯಾದ ಚೀಸ್ ಟೋಸ್ಟ್ ತಯಾರಿಸಿ ಕೊಡಿ, ರೆಸಿಪಿ ಇಲ್ಲಿದೆ
ಚಿಲ್ಲಿ ಚೀಸ್ ಟೋಸ್ಟ್ ಮಕ್ಕಳ ಟಿಫನ್‌ಗೆ ಕಡಿಮೆ ಸಮಯದಲ್ಲಿ ತಯಾರಿಸಿಕೊಡಬಹುದಾದ ಸುಲಭವಾದ ರೆಸಿಪಿಯಾಗಿದೆ. ಇದನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ಹೇಗೆ ಮಾಡಿದರೂ ಮಕ್ಕಳಿಗೆ ಎಲ್ಲವೂ ಇಷ್ಟವಾಗುತ್ತದೆ. ರೆಸಿಪಿ ಇಲ್ಲಿದೆ ನೋಡಿ.
ಇಡ್ಲಿ, ದೋಸೆ , ಉಪ್ಪಿಟ್ಟು, ಚಿತ್ರಾನ್ನ ಇವೆಲ್ಲವೂ ಪ್ರತಿದಿನ ತಯಾರಿಸುವ ಬ್ರೇಕ್‌ಫಾಸ್ಟ್‌ಗಳು. ಆದರೆ ಮಕ್ಕಳಿಗೆ ಕೆಲವೊಮ್ಮೆ ಬೋರ್ ಎನಿಸಬಹುದು. ಏನಾದರೂ ಹೊಸತನ್ನು ಮಾಡುವಂತೆ ಮಕ್ಕಳು ನಿಮ್ಮ ಬಳಿ ಕೇಳುವುದು ಸಹಜ. ಅಪರೂಪಕ್ಕೆ ಒಮ್ಮೆ ನೀವು ಅವರು ಕೇಳುವ ತಿಂಡಿಗಳನ್ನು ಮಾಡಿಕೊಟ್ಟರೆ ಖಂಡಿತ ಖುಷಿ ಪಡುತ್ತಾರೆ. ಅದರಲ್ಲಿ ಅವರು ಹೆಚ್ಚು ಇಷ್ಟಪಟ್ಟು ಕೇಳುವುದು ಚೀಸ್ ಅಥವಾ ಬ್ರೆಡ್‌ನಿಂದ ತಯಾರಿಸಲಾದ ಸಿಹಿತಿಂಡಿಗಳು.
ಇಲ್ಲಿ ನಾವು ನಿಮಗಾಗಿ 2 ರುಚಿಯಾದ ರೆಸಿಪಿಗಳನ್ನು ಹೇಳಿಕೊಡುತ್ತಿದ್ದೇವೆ. ಚೀಸ್ ಟೋಸ್ಟ್‌ಗಳನ್ನು ಎರಡು ರೀತಿ ತಯಾರಿಸಬಹುದು. ಚೀಸ್ ಟೋಸ್ಟ್ ತಯಾರಿಸಲು ಬೇಕಾದ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆಂದು ನೋಡೋಣ.
ಚಿಲ್ಲಿ ಚೀಸ್ ಟೋಸ್ಟ್‌ಗೆ ಬೇಕಾಗುವ ಪದಾರ್ಥಗಳು
ಸ್ಯಾಂಡ್‌ವಿಚ್ ಬ್ರೆಡ್ - 8 ತುಂಡುಗಳು
ಚೀಸ್ ಸ್ಪೈಸ್ - 4
ಕೊತ್ತಂಬರಿ ಸೊಪ್ಪು - 1/2 ಕಟ್ಟು
ಬೆಳ್ಳುಳ್ಳಿ ಎಸಳು - 10
ಓರಿಗಾನೋ - ಸ್ವಲ್ಪ
ಚಿಲ್ಲಿ ಫ್ಲೇಕ್ಸ್ - 1 ಟೀ ಸ್ಪೂನ್
ತಯಾರಿಸುವ ವಿಧಾನ
ಮೊದಲು ಬೆಳ್ಳುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ
ಒಂದು ಬೌಲ್‌ನಲ್ಲಿ ಬೆಣ್ಣೆ, ಬೆಳ್ಳುಳ್ಳಿ, ಓರಿಗಾನೋ, ಚಿಲ್ಲಿ ಫ್ಲೇಕ್ಸ್ ಸೇರಿಸಿ ಮಿಕ್ಸ್ ಮಾಡಿ
ಬ್ರೆಡ್ ಸ್ಪೈಸ್ ಮೇಲೆ ಮಿಕ್ಸ್ ಮಾಡಿದ ಮಿಶ್ರಣ ಸೇರಿಸಿ ಸಮನಾಗಿ ಹರಡಿ
ಅದರ ಮೇಲೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ
ನಂತರ ಚೀಸ್ ಸ್ಲೈಸ್‌ಗಳನ್ನು ಇಟ್ಟು ಅದರ ಮೇಲೆ ಮತ್ತೊಂದು ಬ್ರೆಡ್ ಸ್ಲೈಸ್ ಇಟ್ಟು ಲಘುವಾಗ ಪ್ರೆಸ್ ಮಾಡಿ
ಎಲ್ಲಾ ಬ್ರೆಡ್ ತುಂಡುಗಳನ್ನು ಇದೇ ರೀತಿ ಅರೇಂಜ್ ಮಾಡಿಕೊಳ್ಳಿ
ತವಾ ಮೇಲೆ ಸ್ವಲ್ಪ ಬೆಣ್ಣೆ ಹಚ್ಚಿ ಈ ಸ್ಲೈಸ್‌ಗಳನ್ನು ರೋಸ್ಟ್ ಮಾಡಿ, ಟೋಸ್ಟರ್ ಇದ್ದವರು ಅದರಲ್ಲೇ ಮಾಡಬಹುದು.
ಕಂದು ಬಣ್ಣ ಬರುವರೆಗೂ ಟೋಸ್ಟ್ ಫ್ರೈ ಮಾಡಿ ಟೊಮೆಟೋ ಕೆಚಪ್ ಜೊತೆ ಸರ್ವ್ ಮಾಡಿ
ಚೀಸ್ ಟೋಸ್ಟ್ ತಯಾರಿಸುವ ಮತ್ತೊಂದು ವಿಧಾನ
ಬ್ರೆಡ್ ಸ್ಪೈಸ್‌ಗಳು - 8
ಚಿಲ್ಲಿ ಫ್ಲೇಕ್ಸ್ - ಸ್ವಲ್ಪ
ಓರಿಗಾನೋ - ಸ್ವಲ್ಪ
ನಿಮ್ಮಿಷ್ಟದ ತರಕಾರಿಗಳು - 1 ಕಪ್
ಪ್ರೊಸೆಸ್ಡ್ ಚೀಸ್ - 1 ಕಪ್
ಬೆಣ್ಣೆ - ಸ್ವಲ್ಪ
ತಯಾರಿಸುವ ವಿಧಾನ
ಮೊದಲು ಒಂದು ಬೌಲ್‌ನಲ್ಲಿ ಚೀಸ್ ತುರಿದುಕೊಳ್ಳಿ ದಕ್ಕೆ ಚಿಲ್ಲಿಫ್ಲೇಕ್ಸ್, ಓರಿಗಾನೋ, ಸೇರಿಸಿ ಮಿಕ್ಸ್ ಮಾಡಿ ಬ್ರೆಡ್ ಸ್ಲೈಸ್ ಮೇಲೆ ಈ ಮಿಶ್ರಣವನ್ನು ಹರಡಿ,
ತರಕಾರಿಗಳನ್ನು ಸ್ಪೈಸ್ ಮಾಡಿ ಈ ಬ್ರೆಡ್ ಸ್ಲೈಸ್ ಮೇಲೆ ಇಟ್ಟು ಅದರ ಮೇಲೆ ಮತ್ತೊಂದು ಸ್ಲೈಸ್ ಇಡಿ
ಈ ಸ್ಲೈಸ್ ಮೇಲೆ ಮತ್ತೊಂದು ಸ್ಲೈಸ್ ಇಟ್ಟು ಪ್ಯಾನ್‌ನಲ್ಲಿ ಸ್ವಲ್ಪ ಬೆಣ್ಣೆ ಬಿಸಿ ಮಾಡಿಕೊಂಡು ರೋಸ್ಟ್ ಮಾಡಿ
ಗರಿಯಾದ, ರುಚಿ ಚೀಸ್ ಟೋಸ್ಟನ್ನು ಮಕ್ಕಳು ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ.
ವಿಭಾಗ