ವಾರ ಭವಿಷ್ಯ: ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸ ಬೆಳೆಸಿಕೊಳ್ಳುತ್ತೀರಿ, ಮನೆ ನಿರ್ಮಾಣ ಕೆಲಸ ಪೂರ್ಣಗೊಳ್ಳುತ್ತೆ-weekly horoscope for september 22nd to 28th prediction vara rashi bhavishya in kannada kundali rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಾರ ಭವಿಷ್ಯ: ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸ ಬೆಳೆಸಿಕೊಳ್ಳುತ್ತೀರಿ, ಮನೆ ನಿರ್ಮಾಣ ಕೆಲಸ ಪೂರ್ಣಗೊಳ್ಳುತ್ತೆ

ವಾರ ಭವಿಷ್ಯ: ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸ ಬೆಳೆಸಿಕೊಳ್ಳುತ್ತೀರಿ, ಮನೆ ನಿರ್ಮಾಣ ಕೆಲಸ ಪೂರ್ಣಗೊಳ್ಳುತ್ತೆ

ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರ ಭವಿಷ್ಯ ಇದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ಸೆಪ್ಟೆಂಬರ್ 22 ರಿಂದ 28 ರವರೆಗಿನ ವಾರ ಭವಿಷ್ಯ ತಿಳಿಯಿರಿ.

ಸೆಪ್ಟೆಂಬರ್ 22 ರಿಂದ 28 ರವರೆಗೆ ಮೇಷದಿಂದ ಮೀನದವರಿಗೆ ದ್ವಾದಶ ರಾಶಿಗಳ ವಾರ ಭವಿಷ್ಯ
ಸೆಪ್ಟೆಂಬರ್ 22 ರಿಂದ 28 ರವರೆಗೆ ಮೇಷದಿಂದ ಮೀನದವರಿಗೆ ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ ರಾಶಿ

ಮೇಷ ರಾಶಿಯವರು ಈ ವಾರ ತಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ನೀವು ಮಾಡುವ ಪ್ರತಿ ಕೆಲಸಕ್ಕೂ ಆಪ್ತ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ. ಯಶಸ್ಸಿಗೆ ತಾಳ್ಮೆ ಮತ್ತು ಕಠಿಣ ಪರಿಶ್ರಮ ಮುಖ್ಯವಾಗಿರುತ್ತೆ. ಮಕ್ಕಳ ವಿದೇಶಿ ಶಿಕ್ಷಣದ ಪ್ರಯತ್ನಗಳು ಫಲ ನೀಡುತ್ತವೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪ್ರಮುಖ ಸಭೆಗಳಲ್ಲಿ ಭಾಗವಹಿಸುತ್ತೀರಿ. ನಿಮ್ಮ ಇಷ್ಟದೈವವನ್ನು ಆರಾಧಿಸಿ. ಎಲ್ಲವೂ ಚೆನ್ನಾಗಿ ಆಗಿತ್ತೆ.

ವೃಷಭ ರಾಶಿ

ಹಣಕಾಸಿನ ವ್ಯವಹಾರಗಳು ಫಲಪ್ರದವಾಗಿರುತ್ತವೆ. ಸೂಕ್ತ ತೀರ್ಮಾನ ಕೈಗೊಳ್ಳುತ್ತೀರಿ. ಬಾಕಿ ಹಣ ಸಿಗಲಿದೆ. ಮಾನಸಿಕ ನೆಮ್ಮದಿ ಇರುತ್ತದೆ. ಆರೋಗ್ಯ ಸಮಸ್ಯೆ ಸುಧಾರಿಸುತ್ತೆ. ಉದ್ಯೋಗದಲ್ಲಿ ಪ್ರಗತಿ ಇರುತ್ತೆ. ಹೂಡಿಕೆಗೂ ಮುನ್ನ ಪರಿಶೀಲನೆ ನಡೆಸುತ್ತೀರಿ. ಯೋಜನೆಯ ಪ್ರಕಾರ ಕೆಲಸ ಪೂರ್ಣಗೊಳ್ಳುತ್ತೆ. ಜವಾಬ್ದಾರಿ ಹೆಚ್ಚಾಗುತ್ತದೆ. ಮುಖ್ಯವಲ್ಲದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಆತ್ಮೀಯರೊಂದಿಗಿನ ಮಾತುಕತೆ ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ. ಎಲ್ಲವೂ ಒಳ್ಳೆಯದೇ ಆಗುತ್ತೆ.

ಮಿಥುನ ರಾಶಿ

ಆರ್ಥಿಕ ಲಾಭ ಇರುತ್ತದೆ. ವಾಹನ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ದಕ್ಷತೆಯನ್ನು ಗುರುತಿಸಲಾಗುತ್ತೆ. ಉದ್ಯೋಗ ಸ್ಥಳದಲ್ಲಿ ವಾಕ್ಚಾತುರ್ಯದಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ನಿರೀಕ್ಷಿತ ಹುದ್ದೆಗಳು ಸಿಗುವುದಿಲ್ಲ. ಆಲೋಚನೆಗಳು ಕಾರ್ಯಸಾಧ್ಯವಾಗುತ್ತವೆ. ಜವಾಬ್ದಾರಿಗಳಿಂದ ದೂರ ಸರಿಯಬೇಡಿ. ಮಿಥುನ ರಾಶಿಯ ಕೆಲವರು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಾರೆ. ಕಾಮಗಾರಿ ತರಾತುರಿಯಲ್ಲಿ ಸಾಗುತ್ತದೆ. ಹತ್ತಿರದ ಸ್ನೇಹಿತರೊಂದಿಗೆ ಮಾತುತೆ ನಡೆಸುತ್ತಿರಿ. ವಿವಾದಗಳು ಬಗೆಹರಿಯುತ್ತವೆ.

ಕಟಕ ರಾಶಿ

ಈ ವಾರ ಎದುರಾಗುವ ಸವಾಲುಗಳನ್ನು ದಿಟ್ಟವಾಗಿ ಎದುರಿಸುತ್ತೀರಿ. ಎಲ್ಲರನ್ನು ಮೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳುತ್ತೀರಿ. ಕಷ್ಟಕರವಾದ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಿ. ವೆಚ್ಚಗಳು ಹೆಚ್ಚಾಗುತ್ತವೆ. ಹಣದ ಸಮಸ್ಯೆ ಇರುವುದಿಲ್ಲ. ಹೆಚ್ಚು ಚಿಂತಿಸಬೇಡಿ. ಉದ್ಯೋಗದ ಸ್ಥಳದಲ್ಲಿ ಎಚ್ಚರಿಕೆಯಿಂದಿರಿ. ಸಂಕಷ್ಟದ ಸಮಯದಲ್ಲಿ ತಾಳ್ಮೆಯಿಂದಿರಬೇಕು ಎಂದು ಯೋಚಿಸುತ್ತೀರಿ. ಸಂಗಾತಿಯಿಂದ ಬೆಂಬಲ ಇರುತ್ತದೆ. ಕುಟುಂಬದಲ್ಲಿ ಸಣ್ಣ ಸಮಸ್ಯೆಗಳು ಇರುತ್ತವೆ.

ಸಿಂಹ ರಾಶಿ

ಆಪ್ತ ಸ್ನೇಹಿತರಿಂದ ಪ್ರೋತ್ಸಾಹ ದೊರೆಯಲಿದೆ. ಅವಕಾಶಗಳು ಹೆಚ್ಚಿರುತ್ತವೆ. ವೆಚ್ಚಗಳು ಆದಾಯಕ್ಕೆ ಅನುಗುಣವಾಗಿರುತ್ತವೆ. ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿ. ಚರ್ಚಿಸದೆ ನಿರ್ಧಾರಗಳನ್ನು ಕೈಗೊಳ್ಳಬೇಡಿ. ತಜ್ಞರ ಸಲಹೆಯನ್ನು ಅನುಸರಿಸಿ. ಸ್ನೇಹ ಸಂಬಂಧಗಳು ಬಲಗೊಳ್ಳುತ್ತವೆ. ಮದುವೆಯ ಪ್ರಯತ್ನಗಳು ಜೋರಾಗಿ ನಡೆಯುತ್ತವೆ. ಅಂದುಕೊಂಡಂತೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ತಾಯಿಯನ್ನು ಧ್ಯಾನಿಸಿ. ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೀರಿ.

ಕನ್ಯಾ ರಾಶಿ

ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತೀರಿ. ಕಠಿಣ ಪರಿಶ್ರಮದ ಫಲಿತಾಂಶ ಉತ್ತಮ ಯಶಸ್ಸು ನೀಡುತ್ತೆ. ನಿಮ್ಮ ಸಾಮರ್ಥ್ಯದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ. ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬೇಡಿ. ಹೆಚ್ಚು ಯೋಚಿಸಬೇಡಿ. ಉಳಿತಾಯವನ್ನು ಮೊದಲೇ ಅರಿತುಕೊಳ್ಳುತ್ತೀರಿ. ಸೋಮವಾರ, ಕೆಲಸಗಳು ಸುಗಮವಾಗಿ ನಡೆಯುತ್ತವೆ. ಸಣ್ಣ ಮಟ್ಟದ ಕಿರಿಕಿರಿಗಳು ಬೇಸರ ತರಿಸುತ್ತವೆ. ಶೀಘ್ರದಲ್ಲೇ ವಿಷಯಗಳು ಸುಧಾರಿಸುತ್ತವೆ. ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ದೊರೆಯಲಿದೆ. ಉದ್ವೇಗ ಮತ್ತು ಆತಂಕ ಕಡಿಮೆಯಾಗುತ್ತದೆ.

ತುಲಾ ರಾಶಿ

ಗುರಿಗಳನ್ನು ಸಾಧಿಸಲು ತಾಳ್ಮೆ ಮುಖ್ಯವಾಗಿರುತ್ತೆ. ಧೈರ್ಯದಿಂದ ಮುನ್ನಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಶೀಘ್ರದಲ್ಲೇ ಫಲ ನೀಡಲಿದೆ. ಸಮಸ್ಯೆಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ತಿಳಿಸುತ್ತೀರಿ. ಒಟ್ಟಾಗಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೀರಿಸ. ಸಂಗಾತಿಯ ಬೆಂಬಲ ಇರುತ್ತದೆ. ಹಠ ಮಾಡಬೇಡ. ಅಗತ್ಯಕ್ಕೆ ತಕ್ಕಂತೆ ಪ್ಲಾನ್ ಮಾಡುತ್ತೀರಿ. ಮಾಹಿತಿಯೊಂದು ಉತ್ತೇಜನಕಾರಿಯಾಗಿರುತ್ತದೆ. ಸಂಬಂಧಿಕರೊಂದಿಗೆ ಸಮಯ ಕಳೆಯುತ್ತೀರಿ. ಅವಿವಾಹಿತರು ಶುಭ ಸುದ್ದಿ ಕೇಳುತ್ತಾರೆ. ಹನುಮಾನ್ ಚಾಲೀಸಾ ಪಠಿಸಿ. ಎಲ್ಲವೂ ಶುಭವಾಗುತ್ತೆ.

ವೃಶ್ಚಿಕ ರಾಶಿ

ಹಣಕಾಸಿನ ತೊಂದರೆಗಳು ದೂರವಾಗುತ್ತವೆ. ಉಳಿತಾಯ ಯೋಜನೆಗಳತ್ತ ಗಮನ ಹರಿಸಿ. ಆಲೋಚನೆಗಳು ಕಾರ್ಯಸಾಧ್ಯವಾಗುತ್ತವೆ. ಹೊಸ ಪ್ರಯತ್ನಗಳು ಪ್ರಾರಂಭವಾಗುತ್ತವೆ. ವೆಚ್ಚವನ್ನು ಸರಿದೂಗಿಸುತ್ತೀರಿ. ಗುರುವಾರ ಮತ್ತು ಶುಕ್ರವಾರ ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಕೆಲಸಗಳು ಮತ್ತು ಕಾರ್ಯಕ್ರಮಗಳು ನಡೆಯುವುದಿಲ್ಲ. ಸಹೋದರರ ನಡುವೆ ಹೊಸ ವಿಷಯಗಳು ಬರುತ್ತವೆ. ನಿಮ್ಮ ಅಭಿಪ್ರಾಯಗಳನ್ನು ಸ್ಪಷ್ಟಪಡಿಸಿ. ಗೋವಿಂದನ ನಾಮಗಳನ್ನು ಪಠಿಸಿ.

ಧನು ರಾಶಿ

ಕೆಲಸಗಳು ಯಶಸ್ವಿಯಾಗುತ್ತವೆ. ಸಮಯಕ್ಕೆ ಸರಿಯಾಗಿ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ಕೆಟ್ಟ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೆಚ್ಚಗಳು ಹೆಚ್ಚಾಗುತ್ತವೆ. ಶನಿವಾರ ಎಚ್ಚರವಿರಲಿ. ಅನಾಮಧೇಯರು ದಾರಿತಪ್ಪಿಸಲು ಪ್ರಯತ್ನಿಸುತ್ತಾರೆ. ಹೊಸ ಪ್ರಯತ್ನಗಳಿಗೆ ಚಾಲನೆ ದೊರೆಯಲಿದೆ. ಅವಕಾಶಗಳನ್ನು ತಕ್ಷಣವೇ ಬಳಸಿಕೊಳ್ಳುತ್ತೀರಿ. ಯಾರನ್ನೂ ದೂರ ಬೇಡಿ. ನಿಮ್ಮ ಮಾತಿನ ಮೇಲೆ ನಿಯಂತ್ರಣ ಇರಲಿ.

ಮಕರ ರಾಶಿ

ವ್ಯಾಪಾರ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಸಮಸ್ಯೆಗಳನ್ನು ಪ್ರೀತಿಪಾತ್ರರಿಗೆ ತಿಳಿಸಿ. ಭಾನುವಾರ ಮತ್ತು ಸೋಮವಾರ ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಾವತಿಗಳನ್ನು ಮುಂದೂಡುತ್ತೀರಿ. ಹೀಗೆ ಮಾಡುವುದು ಹಣಕಾಸಿನ ಸಮಸ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ವಿಷಯಗಳು ಅಸ್ತವ್ಯಸ್ತವಾಗುತ್ತವೆ. ಆತ್ಮೀಯರೊಂದಿಗಿನ ಸಂಭಾಷಣೆಯು ಉತ್ತೇಜನಕಾರಿಯಾಗಿರುತ್ತೆ. ಮಕ್ಕಳ ಭವಿಷ್ಯದತ್ತ ಗಮನ ಹರಿಸಿ. ಸ್ಥಳಾಂತರ ಅನಿವಾರ್ಯ.

ಕುಂಭ ರಾಶಿ

ದಿಟ್ಟ ಪ್ರಯತ್ನಗಳನ್ನು ಮಾಡುತ್ತೀರಿ. ಸಹಾಯವನ್ನು ನಿರೀಕ್ಷಿಸಬೇಡಿ. ಕಠಿಣ ಪರಿಶ್ರಮಕ್ಕೆ ಫಲಿತಾಂಶ ಸಿಗುತ್ತದೆ. ಆದಾಯ ಚೆನ್ನಾಗಿರಲಿದೆ. ಮಂಗಳವಾರ ಹಣಕಾಸಿನ ಸಮಸ್ಯೆ ಇರುತ್ತೆ. ಕಾಮಗಾರಿಗಳು ನಡೆಯುವುದಿಲ್ಲ. ಪ್ರತಿ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುವುದನ್ನ ಬಿಡಬೇಕು. ತಾಳ್ಮೆ ಇರಲಿ. ನಿಮ್ಮ ಮಾತನ್ನು ನಿಯಂತ್ರಿಸಿ. ಮಾನಸಿಕವಾಗಿ ತೊಂದರೆ ಇರುತ್ತದೆ. ಯೋಗ ಮತ್ತು ಧ್ಯಾನದಂತಹ ಅಭ್ಯಾಸಗಳನ್ನು ಮುಂದುವರಿಸುತ್ತೀರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವಾರದಲ್ಲಿ ಒಂದೆರಡು ದಿನ ಹೆಚ್ಚು ಯೋಚನೆ ಮಾಡುತ್ತೀರಿ.

ಮೀನ ರಾಶಿ

ಆಫೀಸ್‌ನಲ್ಲಿ ನಿಮ್ಮ ಕಾರ್ಯವೈಖರಿಯನ್ನು ಪ್ರಶಂಸಿಸಲಾಗುತ್ತದೆ. ಪ್ರಮುಖ ಅಂಶಗಳನ್ನು ಕರಗತ ಮಾಡಿಕೊಳ್ಳುತ್ತೀರಿ. ಹೆಚ್ಚು ಜವಾಬ್ದಾರಿಗಳು ಇರುತ್ತವೆ. ಇತರರಿಗೆ ಅದ್ದೂರಿಯಾಗಿ ಖರ್ಚು ಮಾಡುತ್ತೀರಿ. ಅಪರಿಚಿತ ವ್ಯಕ್ತಿಗಳಿಂದ ವಂಚನೆಯಾಗುವ ಸಂಭವವಿದೆ. ಮನೆ ನಿರ್ಮಾಣ ಕಾರ್ಯಗಳು ಪೂರ್ಣಗೊಳ್ಳಲಿವೆ. ಶುಭ ಕಾರ್ಯಗಳಿಗೆ ಸಿದ್ಧತೆಗಳು ನಡೆಯುತ್ತವೆ. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬೇಡಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.