ಟ್ರೋಲ್​ಗಳ ಬಗ್ಗೆ ಮೌನ ಮುರಿದ ಪೃಥ್ವಿ ಶಾ; ಹರಾಜಾಗದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದ ಮೊಹಮ್ಮದ್ ಕೈಫ್
ಕನ್ನಡ ಸುದ್ದಿ  /  ಕ್ರಿಕೆಟ್  /  ಟ್ರೋಲ್​ಗಳ ಬಗ್ಗೆ ಮೌನ ಮುರಿದ ಪೃಥ್ವಿ ಶಾ; ಹರಾಜಾಗದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದ ಮೊಹಮ್ಮದ್ ಕೈಫ್

ಟ್ರೋಲ್​ಗಳ ಬಗ್ಗೆ ಮೌನ ಮುರಿದ ಪೃಥ್ವಿ ಶಾ; ಹರಾಜಾಗದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದ ಮೊಹಮ್ಮದ್ ಕೈಫ್

Prithvi Shaw: ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್​ ಭಾರೀ ಟ್ರೋಲ್​ಗೆ ಗುರಿಯಾಗಿದ್ದ ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹರಾಜಾಗದೆ ಉಳಿದಿರುವುದು ನಾಚಿಕಗೇಡಿನ ಸಂಗತಿ ಎಂದು ಮೊಹಮ್ಮದ್ ಕೈಫ್ ಕಿಡಿಕಾರಿದ್ದಾರೆ.

ಟ್ರೋಲ್​ಗಳ ಬಗ್ಗೆ ಮೌನ ಮುರಿದ ಪೃಥ್ವಿ ಶಾ; ಹರಾಜಾಗದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದ ಮೊಹಮ್ಮದ್ ಕೈಫ್
ಟ್ರೋಲ್​ಗಳ ಬಗ್ಗೆ ಮೌನ ಮುರಿದ ಪೃಥ್ವಿ ಶಾ; ಹರಾಜಾಗದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದ ಮೊಹಮ್ಮದ್ ಕೈಫ್ (AP)

ಐಪಿಎಲ್ 2025 ಮೆಗಾ ಹರಾಜಿನಲ್ಲಿ ಮುಂಬೈ ಬ್ಯಾಟರ್​ ಪೃಥ್ವಿ ಶಾ ಮಾರಾಟವಾಗದೆ ಉಳಿದಿದ್ದಾರೆ. ಹರಾಜಿನ ಎರಡನೇ ದಿನದಂದು ಅವರಿಗೆ ಕೇವಲ 75 ಲಕ್ಷ ರೂ.ಗಳ ಮೂಲ ಬೆಲೆಯಿದ್ದರೂ ಅನ್​ಸೋಲ್ಡ್​ ಆದರು. ಕಳೆದ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಪೃಥ್ವಿ ಶಾ ಅವರನ್ನು ಹರಾಜಿಗೆ ಮುನ್ನ ಕೈಬಿಡಲಾಗಿತ್ತು. ಐಪಿಎಲ್ ವೈಫಲ್ಯದ ಮಧ್ಯೆ, ಶಾ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಕುಸಿತ ಅನುಭವಿಸಿದ ನಂತರ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರು. ಇದೀಗ ಅನ್​ಸೋಲ್ಡ್ ಆಗಿದ್ದಕ್ಕೆ ಟ್ರೋಲ್ ಆಗಿರುವ ವಿಚಾರಕ್ಕೆ ಮೌನ ಮುರಿದಿರುವ ಪೃಥ್ವಿ ಶಾ ಅವರು, ನಾನೇನು ತಪ್ಪು ಮಾಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹರಾಜು ಮುಕ್ತಾಯಗೊಂಡ ಬಳಿಕ "ಫೋಕಸ್ ಇಂಡಿಯನ್" ಯೂಟ್ಯೂಬ್ ಚಾನೆಲ್​​ನಲ್ಲಿ ಮಾತನಾಡಿದ ಶಾ, ತನ್ನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಅರಿವಿದೆ. ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನಾನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಆದರೆ ಕೆಲವೊಂದು ಮೀಮ್​​ಗಳು ಮತ್ತು ಪೋಸ್ಟ್​​ಗಳು ತೀವ್ರ ನೋವುಂಟು ಮಾಡಿದ್ದು ಇದೆ ಎಂದು ಹೇಳಿದ್ದಾರೆ. ನನ್ನ ಟ್ರೋಲ್​ ಮಾಡುವವರು, ನನ್ನನ್ನು ಫಾಲೋ ಮಾಡದೆ ಹೇಗೆ ಇಂತಹ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಯಾರೇ ಆಗಲಿ ನನ್ನನ್ನು ಅನುಸರಿಸದಿದ್ದರೆ, ಅವರು ಹೇಗೆ ಟ್ರೋಲ್ ಮಾಡುತ್ತಾರೆ? ಟ್ರೋಲಿಂಗ್ ಒಳ್ಳೆಯದಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಅದು ಅಂತಹ ಕೆಟ್ಟ ವಿಷಯವೂ ಅಲ್ಲ ಎಂದು ಶಾ ಹೇಳಿದ್ದಾರೆ. 'ಕೆಲವು ಮೀಮ್​ಗಳಿಂದ ನನಗೂ ನೋವಾಗುತ್ತದೆ. ನಾನು ಮನುಷ್ಯನೇ ಅಲ್ಲವೇ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಟ್ರೋಲಿಂಗ್ ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ. ನಾನು ಏನು ತಪ್ಪು ಮಾಡಿದ್ದೇನೆ. ನಾನು ಏನಾದರೂ ತಪ್ಪು ಮಾಡುತ್ತಿದ್ದೇನೆಯೇ ಎಂದು ನನಗೆ ತಿಳಿದಿಲ್ಲ. ಅಂತಹ ತಪ್ಪಿದ್ದರೆ ನೀವು ಮಾಡುವ ಕೆಲಸಕ್ಕೊಂದು ಅರ್ಥ ಇದೆ. ಆದರೆ ಏನೂ ತಪ್ಪಿಲ್ಲ ಎಂದರೆ ಇದ್ದಂತೆ ಸೃಷ್ಟಿಸುವುದೇಕೆ ಎಂದು ಪ್ರಶ್ನಿಸಿದ್ದಾರೆ.

ನಾಚಿಕೆಗೇಡಿನ ಸಂಗತಿ ಎಂದ ಕೈಫ್

ಭಾರತದ ಅಂಡರ್ -19 ವಿಶ್ವಕಪ್ ವಿಜೇತ ನಾಯಕ ಪೃಥ್ವಿ ಶಾ ಅವರು ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದಕ್ಕೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ವಾಗ್ದಾಳಿ ನಡೆಸಿದ್ದಾರೆ. 2018 ರಿಂದ ಡೆಲ್ಲಿ ಕ್ಯಾಪಿಟಲ್ಸ್​​ ತಂಡದ ಪರ ಆಡುತ್ತಿದ್ದ ಪೃಥ್ವಿಗೆ ದೇಶೀಯ ಕ್ರಿಕೆಟ್​​ನಲ್ಲೂ ಅವಕಾಶಗಳು ಸಿಗುತ್ತಿಲ್ಲ. ಕಳಪೆ ಪ್ರದರ್ಶನ ನೀಡುತ್ತಿರುವ ಶಾ, ಫಿಟ್ನೆಸ್ ಕಾರಣದಿಂದಾಗಿ ಇತ್ತೀಚೆಗೆ ಮುಂಬೈನ ರಣಜಿ ಟ್ರೋಫಿ ತಂಡದಿಂದ ಹೊರಬಿದ್ದರು. ಈ ಹಿಂದಿನ ಹರಾಜುಗಳಲ್ಲಿ 2 ಕೋಟಿ ಮೂಲ ಬೆಲೆ ಇತ್ತು. ಅದನ್ನು ಈಗ 75 ಲಕ್ಷಕ್ಕೆ ಇಳಿಸಿದ್ದಾರೆ. ಇಷ್ಟು ಕಡಿಮೆ ಮೊತ್ತಕ್ಕೆ ಇಳಿಸಿದರೂ ಯಾವ ತಂಡವೂ ಅವರನ್ನು ಖರೀದಿಸಲು ಮುಂದಾಗಲಿಲ್ಲ.

ಪೃಥ್ವಿ ಅನ್​ಸೋಲ್ಡ್ ಆಗಿದ್ದಕ್ಕೆ ಜಿಯೋ ಸಿನಿಮಾದಲ್ಲಿ ಪ್ರತಿಕ್ರಿಯಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ಸಹಾಯಕ ಕೋಚ್ ಮೊಹಮ್ಮದ್ ಕೈಫ್ ಅವರು, ಶಾ ಅವರು ಹರಾಜು ಆಗದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ. ದೇಶೀಯ ಕ್ರಿಕೆಟ್​​ನತ್ತ ಗಮನ ಹರಿಸುವಂತೆ ಸೂಚಿಸಿದ್ದಾರೆ. ಡೆಲ್ಲಿ ಪೃಥ್ವಿ ಶಾ ಅವರನ್ನು ಸಾಕಷ್ಟು ಬೆಂಬಲಿಸಿತು. ಅವರು ಪವರ್​​​ಪ್ಲೇನಲ್ಲಿ ಪ್ರಾಬಲ್ಯ ಸಾಧಿಸಬಹುದು. ಒಂದು ಓವರ್​​ನಲ್ಲಿ ಆರು ಬೌಂಡರಿ ಬಾರಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂದು ನಂಬಿಕೆ ಇಟ್ಟಿತ್ತು. ಫ್ರಾಂಚೈಸಿ ಹೇಳಿದಂತೆ 6 ಎಸೆತಗಳಿಗೆ 6 ಬೌಂಡರಿ ಬಾರಿಸಿದ್ದರು. ತದನಂತರ ನಂಬಿಕೆ ಉಳಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

Whats_app_banner