ನೀವು ಕೂಡಾ ಒಟ್ಟಾರೆ ಗೀಚಿ ಸಹಿ ಹಾಕ್ತೀರಾ; ನೀವು ಹಾಕುವ ಸಿಗ್ನೇಚರ್ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನೀವು ಕೂಡಾ ಒಟ್ಟಾರೆ ಗೀಚಿ ಸಹಿ ಹಾಕ್ತೀರಾ; ನೀವು ಹಾಕುವ ಸಿಗ್ನೇಚರ್ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ

ನೀವು ಕೂಡಾ ಒಟ್ಟಾರೆ ಗೀಚಿ ಸಹಿ ಹಾಕ್ತೀರಾ; ನೀವು ಹಾಕುವ ಸಿಗ್ನೇಚರ್ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ

ನೀವು ನಿಮ್ಮ ಸಹಿಯಲ್ಲಿ ಪೂರ್ತಿ ಹೆಸರು ಬರೆಯುತ್ತೀರಾ, ಒಂದಕ್ಷರ ಮಾತ್ರ ಬರೆದು ಸಹಿ ಹಾಕ್ತೀರಾ, ಅಥವಾ ಯಾರಿಗೂ ಅರ್ಥವಾಗದಂತೆ ಸುಮ್ಮನೆ ಗೀಚುತ್ತೀರಾ? ನಿಮ್ಮ ಸಹಿಗೂ ನಿಮ್ಮ ವ್ಯಕ್ತಿತ್ವಕ್ಕೂ ಸಾಮ್ಯತೆ ಇರುತ್ತದೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.

ನೀವು ಹಾಕುವ ಸಿಗ್ನೇಚರ್ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ
ನೀವು ಹಾಕುವ ಸಿಗ್ನೇಚರ್ ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ (pixabay)

ಎಲ್ಲಾ ಬ್ಯಾಂಕಿಂಗ್‌ ವ್ಯವಹಾರಗಳಿಗೆ ಸಹಿ ಅಗತ್ಯ. ನಮ್ಮ ಸಹಿ ಇನ್ನೊಬ್ಬರಂತೆ ಇರಬಾರದು ಎಂದು ಭಿನ್ನವಾಗಿ ಸಹಿ ಹಾಕುವ ಪ್ರಯತ್ನ ಮಾಡುತ್ತೇವೆ. ಅಕ್ಷರಸ್ಥರು ಮಾತ್ರವಲ್ಲದೆ ಅನಕ್ಷರಸ್ಥರೂ ಕೂಡಾ ತಮ್ಮ ಹೆಸರಿನಂತೆ ಸಹಿ ಹಾಕಲು ಕಲಿಯುತ್ತಾರೆ. ಸಹಿ ಇಲ್ಲದೆ ಹಲವು ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಹಣಕಾಸಿನ ವ್ಯವಹಾರ, ವ್ಯಾಪಾರ, ಒಪ್ಪಂದಗಳಿಗೆ ಸಹಿ ಬೇಕೇಬೇಕು. ಒಬ್ಬರಿಗಿಂತ ಇನ್ನೊಬ್ಬರ ಸಹಿ ಭಿನ್ನವಾಗಿರುತ್ತದೆ. ಅವರವರ ಇಷ್ಟದ ಪ್ರಕಾರ ಸಹಿ ಹಾಕುತ್ತಾರೆ. ಕೆಲವೊಬ್ಬರು ತಮ್ಮ ಪೂರ್ಣ ಹೆಸರಿನಂತೆ ಸಹಿ ಮಾಡಿದರೆ, ಇನ್ನೂ ಕೆಲವರು ಹೆಸರಿನ ಕೆಲವು ಅಕ್ಷರಗಳನ್ನು ಜೋಡಿಸಿ ಸಹಿ ಮಾಡುತ್ತಾರೆ.

ಕೆಲವೊಬ್ಬರ ಸಹಿಯ ಒಂದೊಂದು ಅಕ್ಷರವೂ ಓದುವಂತಿದ್ದು, ಅದಕ್ಕೊಂದು ಅರ್ಥವಿರುತ್ತದೆ. ಇನ್ನೂ ಕೆಲವೊಬ್ಬರು ವಿಭಿನ್ನ ಶೈಲಿಯನ್ನು ಅನುಸರಿಸುತ್ತಾರೆ. ಕೆಲವೊಬ್ಬರು ಮನಸ್ಸಿಗೆ ತೋಚಿದಂತೆ ಗೀಚುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಸಹಿ ಮೂಲಕ ನಿಮ್ಮ ವ್ಯಕ್ತಿತ್ವ ಅಥವಾ ಸ್ವಭಾವ ತಿಳಿಯಬಹುದು. ಒಬ್ಬ ವ್ಯಕ್ತಿಯ ಸಹಿ ಅವರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಸಹಿ ನಿಜವಾಗಿಯೂ ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆಯೇ ಎಂಬುದರ ಕುರಿತು ತಜ್ಞರು ಏನು ಹೇಳುತ್ತಾರೆಂದು ನೋಡೋಣ.

ಸಹಿಯ ಶೈಲಿಯ ಹಿಂದಿದೆ ವಿಶೇಷ ಅರ್ಥ

ನೀವು ಹಾಕುವ ಸಹಿ ನಿಮ್ಮ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಸಹಿಯಲ್ಲಿ ಹೆಸರು ಮತ್ತು ಕುಟುಂಬದ ಹೆಸರನ್ನು ಮಾತ್ರ ಬರೆಯುವವರು ಯಾರ ಮಾತನ್ನೂ ಕೇಳುವುದಿಲ್ಲ. ಅವರು ಇಷ್ಟಪಡುವಂತೆ ಬದುಕುತ್ತಾರೆ. ಯಾರು ಏನೇ ಹೇಳಿದರೂ ಅದನ್ನು ಒಪ್ಪುವುದಿಲ್ಲ. ಅವರ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ.

ಕೆಲವೊಬ್ಬರ ಸಹಿಯು ಸುಮ್ಮನೆ ಏನೋ ಗೀಚಿದಂತೆ ಇರುತ್ತದೆ. ಅದು ಆ ಸಹಿ ಹಾಕುವವರ ಹೊರತಾಗಿ ಬೇರೆ ಯಾರಿಗೂ ಅರ್ಥವಾಗುವುದಿಲ್ಲ. ಅದು ಕೋಳಿ ಕಾಲಿನಂತಿದೆ ಎಂದು ತಮಾಷೆಯಾಗಿ ಅದಕ್ಕೆ ಹೇಳುತ್ತಾರೆ. ತರಾತುರಿಯಲ್ಲಿ ಮತ್ತು ಅಸ್ಪಷ್ಟವಾಗಿ ಸಹಿ ಮಾಡುವ ಜನರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಂತಹ ಜನರು ತುಂಬಾ ಬುದ್ಧಿವಂತರು. ಅವರು ಯಾರನ್ನೇ ಆದರೂ ಬೇಗ ಮೂರ್ಖರಾಗಿಸುತ್ತಾರೆ ಎಂದರ್ಥ.

ಕೆಲವರ ಸಹಿ ನೋಡಲು ಆಕರ್ಷಕವಾಗಿರುತ್ತದೆ. ತುಂಬಾ ಸೊಗಸಾಗಿ ಸಹಿ ಮಾಡುತ್ತಾರೆ. ನೋಡಲು ಕಲಾತ್ಮಕವಾಗಿ ಸಹಿ ಹಾಕುವ ಜನರು ಸೃಜನಶೀಲ ಸ್ವಭಾವ ಹೊಂದಿರುತ್ತಾರೆ. ಅವರ ವಿಚಾರಗಳೂ ಹೊಸದು. ಎಲ್ಲರಿಗಿಂತ ಭಿನ್ನವಾಗಿ ಯೋಚಿಸುತ್ತಾರೆ.

ಕೆಲವರು ಒಂದು ರೀತಿಯಲ್ಲಿ ಹೆಸರು ಬರೆದು ಇನ್ನೊಂದು ರೀತಿಯಲ್ಲಿ ಸಹಿ ಮಾಡುತ್ತಾರೆ. ಯಾರ ಸಹಿ ಅವರ ಕೈಬರಹದಂತೆ ಕಾಣುತ್ತದೆಯೋ ಅವರು ಅಡುವ ಎಲ್ಲಾ ಕೆಲಸವನ್ನೂ ಸರಿಯಾಗಿ ಮಾಡುತ್ತಾರೆ. ಜೀವನದಲ್ಲಿ ಶಿಸ್ತು ಪಾಲಿಸುತ್ತಾರೆ ಎಂದರ್ಥ.

ನೀವು ಸಹಿ ಹೇಗೆ ಹಾಕುತ್ತೀರಿ?

ನಿಮ್ಮ ಸಹಿಯಿಂದ ನಿಮ್ಮ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಅಳೆಯಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಹಿ ಹಾಕುವಾಗ ಒಮ್ಮೆಯೂ ಪೆನ್ನು ನಿಲ್ಲಿಸದೆ ಬರೆಯುವವರು ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ. ಅವರು ಸ್ನೇಹಪರ ಸ್ವಭಾವ ಹೊಂದಿರುತ್ತಾರೆ. ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಪ್ರತಿ ಅಕ್ಷರವೂ ಸ್ಪಷ್ಟವಾಗಿ ಗೋಚರಿಸುವಂತೆ ಸಹಿ ಹಾಕುವವರು ತುಂಬಾ ಪಾರದರ್ಶಕವಾಗಿರುತ್ತಾರೆ.

ತಮ್ಮ ಸಹಿಯಲ್ಲಿ ಅಕ್ಷರಗಳನ್ನು ವಿರೂಪಗೊಳಿಸುವ ಜನರನ್ನು ಅರ್ಥಮಾಡಿಕೊಳ್ಳಲು ಕಷ್ಟ ಎಂದು ನಂಬಲಾಗಿದೆ. ಇದೇ ವೇಳೆ ತಮ್ಮ ಪೂರ್ಣ ಹೆಸರನ್ನು ತಮ್ಮ ಸಹಿಯಲ್ಲಿ ಬರೆಯುವವರನ್ನು ಪ್ರತಿಭಾನ್ವಿತರು ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.