ಡೆಲ್ಲಿ ವಿರುದ್ಧ ವಿರೋಚಿತ ಸೋಲಿನ ನಂತರ ಪ್ಲೇಆಫ್ ಪ್ರವೇಶಿಸಲು ಆರ್ಸಿಬಿ ಏನು ಮಾಡಬೇಕು? ಹೀಗಿದೆ ಲೆಕ್ಕಾಚಾರ
WPL 2024 Playoffs : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ನಿಂದ ವಿರೋಚಿತ ಸೋಲು ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಲು ಏನು ಮಾಡಬೇಕು? ಹೀಗಿದೆ ಲೆಕ್ಕಾಚಾರ ನೋಡಿ.
ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೊಂದು ವಾರದಲ್ಲಿ ಡಬ್ಲ್ಯುಪಿಎಲ್ಗೆ ತೆರೆ ಬೀಳಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈಗಾಗಲೇ ಪ್ಲೇಆಫ್ ಪ್ರವೇಶಿಸಿವೆ. ಈ ತಂಡಗಳ ನಡುವೆ ಅಗ್ರಸ್ಥಾನಕ್ಕೇರಲು ಪೈಪೋಟಿ ಏರ್ಪಟ್ಟಿದೆ. ಆದರೆ 3ನೇ ಸ್ಥಾನಕ್ಕೆ ಪಡೆಯಲು ಆರ್ಸಿಬಿಗೆ ಹೆಚ್ಚಿನ ಅವಕಾಶ ಇದೆ. ಆದರೆ ಎಷ್ಟೆಲ್ಲಾ ಸಾಧ್ಯತೆಗಳಿವೆ? ಪ್ಲೇಆಫ್ ಪ್ರವೇಶಿಸಲು ಏನೆಲ್ಲಾ ಮಾಡಬೇಕು ಎಂಬುದನ್ನು ಈ ಮುಂದೆ ನೋಡೋಣ.
ಆರ್ಸಿಬಿ (Royal Challengers Bangalore) ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಜತೆಗೆ ಉತ್ತಮ ನೆಟ್ ರನ್ ರೇಟ್ ಸಂಪಾದಿಸಬೇಕು. ಆಗ 8 ಅಂಕಗಳೊಂದಿಗೆ ಎಲಿಮಿನೇಟರ್ ಪಂದ್ಯ ಆಡುವುದು ಖಚಿತವಾಗಲಿದೆ. ಏಕೆಂದರೆ ಆರ್ಸಿಬಿ ಪಂದ್ಯಕ್ಕೂ ಮುನ್ನ ನಡೆಯುವ ಇಂದು (ಮಾರ್ಚ್ 11) ಗುಜರಾತ್ ವಿರುದ್ಧದ ಪಂದ್ಯದಲ್ಲಿ ಯುಪಿ ಗೆದ್ದರೆ, 8 ಅಂಕ ಪಡೆಯಲಿದೆ. ಒಂದು ವೇಳೆ ಆರ್ಸಿಬಿ ಪ್ಲೇಆಫ್ ಕನಸು ಭಗ್ನಗೊಳ್ಳಲಿದೆ. ಹಾಗಾಗಿ ಯುಪಿ ಸೋಲಬೇಕೆಂದು ಬೆಂಗಳೂರು ಪ್ರಾರ್ಥಿಸಬೇಕಿದೆ.
ಆರ್ಸಿಬಿ ತನ್ನ ಕೊನೆಯ ಪಂದ್ಯಕ್ಕೂ ಮುನ್ನ ಯುಪಿ vs ಗುಜರಾತ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ಗೆಲ್ಲಬೇಕಿದೆ. ಆಗ ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸೋತರೂ ಉತ್ತಮ ರನ್ ರೇಟ್ ಕಾಯ್ದುಕೊಂಡು ಪ್ಲೇಆಫ್ ಪ್ರವೇಶಿಸುವ ಅವಕಾಶ ಪಡೆಯಲಿದೆ. ಅಲ್ಲದೆ, ಯುಪಿ ವಿರುದ್ಧ ಗುಜರಾತ್ ಗೆದ್ದು, ತನ್ನ ಅಂತಿಮ ಪಂದ್ಯದಲ್ಲಿ ಸೋಲಬೇಕು. ಆಗ ಆರ್ಸಿಬಿ ಪ್ಲೇಆಫ್ ಹಾದಿ ಮತ್ತಷ್ಟು ಸುಗಮವಾಗಲಿದೆ.
ಗುಜರಾತ್ ಉಳಿದೆರಡು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿದ್ದೇ ಆದರೆ ರನ್ ರೇಟ್ ಹೆಚ್ಚಿಸಿಕೊಂಡು ಆಗ ಗುಜರಾತ್ ಮತ್ತು ಬೆಂಗಳೂರು ತಂಡಗಳನ್ನು ಹಿಂದಿಕ್ಕಿ ಅಚ್ಚರಿ ಎನ್ನುವಂತೆ ಪ್ಲೇಆಫ್ಗೇರಿದರೂ ಅಚ್ಚರಿ ಇಲ್ಲ. ಇದು ಸಾಧ್ಯವಾಗಬೇಕೆಂದರೆ ಆರ್ಸಿಬಿ ಮತ್ತು ಯುಪಿ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಸೋಲಬೇಕು. ಸದ್ಯ ಆರ್ಸಿಬಿ ಸೇಫ್ಝೋನ್ನಲ್ಲಿ ಇರಬೇಕೆಂದರೆ ಗುಜರಾತ್ ತಂಡ, ಯುಪಿ ತಂಡವನ್ನು ಮಣಿಸುವುದು ಅನಿವಾರ್ಯ. ಅಲ್ಲದೆ, ಬೆಂಗಳೂರು ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕು.
ನಾಕೌಟ್ ಪ್ರವೇಶಿಸಲು ಆರ್ಸಿಬಿಗೆ ಇರುವಷ್ಟೇ ಯುಪಿ ವಾರಿಯರ್ಸ್ ತಂಡಕ್ಕೂ ಅವಕಾಶ ಇದೆ. ಆದರೆ ನೆಟ್ ರನ್ ರೇಟ್ ಹಿನ್ನಡೆಯಲ್ಲಿದೆ. ಯುಪಿ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಆಗ 8 ಅಂಕ ಪಡೆಯಲಿದೆ. ಅತ್ತ ಆರ್ಸಿಬಿ ಸಹ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಗೆದ್ದು ಯುಪಿಗಿಂತ ಉತ್ತಮ ರನ್ ರೇಟ್ ಕಾಯ್ದಕೊಂಡರೆ ನೇರವಾಗಿ ಎಲಿಮಿನೇಟರ್ ಆಡಲು ಆರ್ಸಿಬಿ ಅವಕಾಶ ಪಡೆಯುತ್ತದೆ.
ಅಗ್ರಸ್ಥಾನ ಪಡೆದ ತಂಡದ ನೇರವಾಗಿ ಫೈನಲ್ಗೆ ಲಗ್ಗೆ
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವು ನೇರವಾಗಿ ಫೈನಲ್ಗೆ ಲಗ್ಗೆ ಇಡಲಿದೆ. ಮತ್ತೊಂದೆಡೆ 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಎಮಿನೇಟರ್ನಲ್ಲಿ ಸೆಣಸಾಟ ನಡೆಸಲಿವೆ. ಇಲ್ಲಿ ಗೆಲ್ಲುವ ತಂಡವು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಲಿದೆ. ಸದ್ಯ ಮುಂಬೈ ಮತ್ತು ಡೆಲ್ಲಿ ತಂಡಗಳು ಅಗ್ರಸ್ಥಾನಕ್ಕಾಗಿ ನೇರಾನೇರ ಪೈಪೋಟಿಗಿಳಿದಿವೆ. ಆದರೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ರನ್ರೇಟ್ |
---|---|---|---|---|---|
ಡೆಲ್ಲಿ ಕ್ಯಾಪಿಟಲ್ಸ್ (Q) | 7 | 5 | 2 | 10 | +0.918 |
ಮುಂಬೈ ಇಂಡಿಯನ್ಸ್ (Q) | 7 | 5 | 2 | 10 | +0.343 |
ಆರ್ಸಿಬಿ | 7 | 3 | 4 | 6 | +0.027 |
ಯುಪಿ ವಾರಿಯರ್ಜ್ | 7 | 3 | 4 | 6 | -0.365 |
ಗುಜರಾತ್ ಜೈಂಟ್ಸ್ | 6 | 1 | 5 | 2 | -1.111 |