100ನೇ ಟೆಸ್ಟ್ ಪಂದ್ಯದಲ್ಲಿ 17 ರನ್ ಗಳಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಕೇನ್ ವಿಲಿಯಮ್ಸನ್
Kane Williamson : ನ್ಯೂಜಿಲೆಂಡ್ ತಂಡದ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರು ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ (New Zealand vs Australia, 2nd Test) ನ್ಯೂಜಿಲೆಂಡ್ ಲೆಜೆಂಡರಿ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರು (Kane Williamson) ತಮ್ಮ 100ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾದರು. ಇದರ ನಡುವೆಯೂ ಭಾರತೀಯ ಸೂಪರ್ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ. ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಶುಕ್ರವಾರ (ಮಾರ್ಚ್ 8) ಆರಂಭವಾದ ಟೆಸ್ಟ್ನಲ್ಲಿ 17 ರನ್ ಕಲೆ ಹಾಕಿ ದಾಖಲೆಯನ್ನು ಬರೆದಿದ್ದಾರೆ.
33 ವರ್ಷದ ಬಲಗೈ ಬ್ಯಾಟರ್ ಕೇನ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಅಧಿಕ ರನ್ ಕಲೆ ಹಾಕಿದ (most runs in World Test Championship) ಬ್ಯಾಟರ್ಗಳ ಪಟ್ಟಿಯಲ್ಲಿ ಕೊಹ್ಲಿ ಅವರನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ವಿರಾಟ್ 2235 ರನ್ ಗಳಿಸಿದ್ದರೆ, ಕೇನ್ ವಿಲಿಯಮ್ಸನ್ 2238 ರನ್ ಗಳಿಸಿ ಮುಂದೆ ಸಾಗಿಸಿದ್ದಾರೆ. ಇಂಗ್ಲೆಂಡ್ ತಂಡದ ಜೋ ರೂಟ್ ಅಗ್ರಸ್ಥಾನದಲ್ಲಿದ್ದು, 4223 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಅವರು 3808 ರನ್ ಕಲೆ ಹಾಕಿದ್ದಾರೆ.
ಕೇನ್ ವಿಲಿಯಮ್ಸನ್ ಅವರು 23 ಟೆಸ್ಟ್ ಪಂದ್ಯಗಳಲ್ಲಿ 63.94ರ ಬ್ಯಾಟಿಂಗ್ ಸರಾಸರಿಯಲ್ಲಿ 10 ಶತಕ, 2 ಅರ್ಧಶತಕ ಸಿಡಿಸಿ 2238 ರನ್ ಗಳಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅವರು 12ನೇ ಸ್ಥಾನದಲ್ಲಿದ್ದು, 2235 ರನ್ ಕಲೆ ಹಾಕಿದ್ದಾರೆ. 10 ಅರ್ಧಶತಕ, 4 ಶತಕ ಸಿಡಿಸಿದ್ದಾರೆ. 39.21ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಭಾರತದ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಅವರು 32 ಟೆಸ್ಟ್ಗಳಲ್ಲಿ 2552 ರನ್ ಗಳಿಸಿದ್ದಾರೆ. 9 ಶತಕ, 7 ಅರ್ಧಶತಕ ಸಿಡಿಸಿದ್ದು, 50.03ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ಸ್ಥಾನ | ಆಟಗಾರ | ದೇಶ | ಪಂದ್ಯ | ರನ್ | ಸರಾಸರಿ | ಬೆಸ್ಟ್ ಸ್ಕೋರ್ | 100/50 |
---|---|---|---|---|---|---|---|
1. | ಜೋ ರೂಟ್ | ಇಂಗ್ಲೆಂಡ್ | 52* | 4223 | 48.54 | 228 | 13/16 |
2. | ಮಾರ್ನಸ್ ಲಬುಶೇನ್ | ಆಸ್ಟ್ರೇಲಿಯಾ | 45* | 3808 | 52.16 | 215 | 11/18 |
3. | ಸ್ಟೀವ್ ಸ್ಮಿತ್ | ಆಸ್ಟ್ರೇಲಿಯಾ | 45* | 3466 | 51.73 | 211 | 9/17 |
4. | ಬೆನ್ ಸ್ಟೋಕ್ಸ್ | ಇಂಗ್ಲೆಂಡ್ | 45* | 2907 | 37.75 | 176 | 7/13 |
5. | ಬಾಬರ್ ಅಜಮ್ | ಪಾಕಿಸ್ತಾನ | 29 | 2661 | 55.43 | 196 | 8/15 |
6. | ಉಸ್ಮಾನ್ ಖವಾಜಾ | ಆಸ್ಟ್ರೇಲಿಯಾ | 32* | 2659 | 51.13 | 195* | 7/12 |
7. | ರೋಹಿತ್ ಶರ್ಮಾ | ಭಾರತ | 32* | 2501* | 50.02 | 212 | 8/8 |
8. | ಟ್ರಾವಿಸ್ ಹೆಡ್ | ಆಸ್ಟ್ರೇಲಿಯಾ | 41* | 2471 | 40.5 | 175 | 6/11 |
9. | ಝಾಕ್ ಕ್ರಾಲಿ | ಇಂಗ್ಲೆಂಡ್ | 38* | 2463 | 35.69 | 267 | 4/13 |
10. | ಡೇವಿಡ್ ವಾರ್ನರ್ | ಆಸ್ಟ್ರೇಲಿಯಾ | 38 | 2423 | 37.27 | 335* | 5/8 |
11. | ಕೇನ್ ವಿಲಿಯಮ್ಸನ್ | ನ್ಯೂಜಿಲ್ಯಾಂಡ್ | 23* | 2238 | 63.94 | 251 | 10/2 |
12. | ವಿರಾಟ್ ಕೊಹ್ಲಿ | ಭಾರತ | 36 | 2235 | 39.21 | 254* | 4/10 |