ಸೊಸೆ ಮುಂದೆ ತಾಂಡವ್-ಶ್ರೇಷ್ಠಾ ಸಂಬಂಧದ ಬಗ್ಗೆ ಬಾಯಿ ಬಿಟ್ಟ ಕುಸುಮಾ, ಜೀವಂತ ಶವವಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 23ರ ಎಪಿಸೋಡ್ನಲ್ಲಿ ಭಾಗ್ಯಾ ಬಾಗಿಲ ಬಳಿ ನಿಂತಿರುವುದನ್ನು ಗಮನಿಸದ ಕುಸುಮಾ ಸುಂದ್ರಿ , ಪೂಜಾ ಬಳಿ ಶ್ರೇಷ್ಠಾ-ತಾಂಡವ್ ಸಂಬಂಧದ ಬಗ್ಗೆ ಮಾತನಾಡುತ್ತಾಳೆ. ಅತ್ತೆಗೆ ಎಲ್ಲಾ ವಿಚಾರ ಗೊತ್ತಿದ್ದರೂ ಇಷ್ಟು ದಿನ ಮುಚ್ಚಿಟ್ಟಿದ್ದು ಭಾಗ್ಯಾಗೆ ಇನ್ನಷ್ಟು ನೋವಾಗುತ್ತದೆ.
Bhagyalakshmi Kannada Serial: ಭಾಗ್ಯಾ ಇನ್ನೂ ಮನೆಗೆ ಬಂದಿಲ್ಲ, ಫೋನ್ ಸ್ವಿಚ್ ಆಫ್ ಬರುತ್ತಿದೆ ಅಂತ ಕುಸುಮಾ ಗಾಬರಿ ಆಗಿದ್ಧಾಳೆ. ಏನೂ ಸಮಸ್ಯೆ ಆಗುವುದಿಲ್ಲ, ಭಾಗ್ಯಾ ಕೆಲಸಕ್ಕೆ ಹೋಗಿದ್ದಾಳೆ. ಕೆಲಸ ಮಾಡಿ ಸುಸ್ತಾಗಿ ಸ್ವಿಚ್ ಆಫ್ ಮಾಡಿ ಮಲಗಿರಬಹುದು. ಅಥವಾ ಕೆಲಸದ ಒತ್ತಡದಲ್ಲಿ ಮೊಬೈಲ್ ಚಾರ್ಜ್ ಮಾಡುವುದು ಮರೆತಿರಬಹುದು. ಅವಳು ಕೆಲಸ ಮುಗಿಸಿ ಮನೆಗೆ ಬರುತ್ತಾಳೆ ನೀವು ಹೆದರಬೇಡಿ ಎಂದು ಸುಂದ್ರಿ, ಕುಸುಮಾಗೆ ಧೈರ್ಯ ಹೇಳುತ್ತಾಳೆ.
ಭಾಗ್ಯಾ ಇರುವುದನ್ನು ಗಮನಿಸದೆ ತಾಂಡವ್-ಶ್ರೇಷ್ಠಾ ಸಂಬಂಧದ ಬಗ್ಗೆ ಬಾಯಿ ಬಿಟ್ಟ ಕುಸುಮಾ
ನನಗೆ ಅದರ ಬಗ್ಗೆ ಚಿಂತೆ ಇಲ್ಲ, ಫಕೀರ ಹೇಳಿದ ಎಲ್ಲಾ ಮಾತುಗಳು ನಿಜವಾಗುತ್ತಿದೆ. ಭಾಗ್ಯಾ ಕೆಲಸಕ್ಕೆ ಹೋಗುವುದನ್ನು ನೀವು ತಡೆಯಲಾಗುವುದಿಲ್ಲ ಎಂದು ಅವರು ಹೇಳಿದ್ದರು, ಅದರಂತೆ ನಾನು ಅವಳು ಹೋಗುವುದನ್ನು ತಡೆಯಲು ಆಗಲಿಲ್ಲ, ನೀವು ವ್ರತವನ್ನು ಪೂರ್ಣಗೊಳಿಸಲು ಆಗುವುದಿಲ್ಲ ಅಂತ ಹೇಳಿದ್ದರು, ಅದೂ ಹಾಗೇ ಆಯ್ತು, ಇನ್ನೇನು ವ್ರತ ಮುಗಿಯಬೇಕು ಎನ್ನುವಷ್ಟರಲ್ಲಿ ಅದೂ ಅರ್ಧಂಬರ್ಧ ಆಯ್ತು. ಸೆರಗಲ್ಲಿ ಕಟ್ಟಿದ ಕೆಂಡ ಸುಡುತ್ತದೆ ಎಂದಿದ್ದರು, ಭಾಗ್ಯಾಗೆ ಎಲ್ಲಿ ನಿಜ ತಿಳಿಯವುದೋ ಅಂತ ಭಯ ಶುರುವಾಗಿದೆ. ಶ್ರೇಷ್ಠಾ-ತಾಂಡವ್ ಸ್ನೇಹಿತರು ಅಂತ ಭಾಗ್ಯಾ ನಂಬಿದ್ದಾಳೆ, ಅವಳ ನಂಬಿಕೆ ಹೀಗೇ ಇರಬೇಕು, ಇಲ್ಲದಿದ್ದರೆ ಇಷ್ಟು ದಿನ ನಾವು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಗುತ್ತದೆ ಎಂದು ಕುಸುಮಾ ಸುಂದ್ರಿ, ಪೂಜಾ ಬಳಿ ಹೇಳುತ್ತಾಳೆ.
ಭಾಗ್ಯಾ ಎಂದಿನಂತೆ ಇಲ್ಲದಿರುವುದನ್ನು ಕಂಡು ಗಾಬರಿಯಾದ ಮನೆ ಮಂದಿ
ಬಾಗಿಲ ಬಳಿ ನಿಂತಿರುವ ಭಾಗ್ಯಾ ಅತ್ತೆ ಆಡಿದ ಮಾತುಗಳನ್ನು ಕೇಳಿಸಿಕೊಂಡು ಶಾಕ್ ಆಗುತ್ತಾಳೆ. ಅತ್ತೆಗೆ ಎಲ್ಲಾ ವಿಷಯ ಗೊತ್ತಿದ್ದರೂ ನನ್ನ ಬಳಿ ಮುಚ್ಚಿಟ್ಟರು ಎಂದು ದುಃಖಿಸುತ್ತಾಳೆ. ಮಕ್ಕಳು ಸ್ಕೂಲ್ಗೆ ಹೊರಟು ನಿಲ್ಲುತ್ತಾರೆ. ಅಮ್ಮ ಇಲ್ಲದೆ ಮನೆಯಲ್ಲಿ ಏನೂ ಕೆಲಸ ಆಗುತ್ತಿಲ್ಲ ಎಂದು ಮಕ್ಕಳು ಬೇಸರ ಮಾಡಿಕೊಳ್ಳುತ್ತಾರೆ. ಮಕ್ಕಳನ್ನು ಸ್ಕೂಲ್ಗೆ ಬಿಟ್ಟು ಬರುವಂತೆ ಕುಸುಮಾ ಧರ್ಮರಾಜ್ಗೆ ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಮನೆ ಒಳಗೆ ಬರುತ್ತಾಳೆ. ಅಮ್ಮನನ್ನು ಕಂಡು ಮಕ್ಕಳು ಖುಷಿಯಿಂದ ಓಡೋಡಿ ಬಂದು ಅವಳನ್ನು ಅಪ್ಪಿಕೊಳ್ಳುತ್ತಾರೆ. ಆದರೆ ಭಾಗ್ಯಾ ಎಂದಿನಂತೆ ಇರದಿರುವುದನ್ನು ನೋಡಿ ಕುಸುಮಾಗೆ ಆಶ್ಚರ್ಯವಾಗುತ್ತದೆ. ನನಗೆ ಬಹಳ ಸುಸ್ತಾಗಿದೆ ಸ್ನಾನ ಮಾಡಿ ಬರುತ್ತೇನೆ ಎನ್ನುತ್ತಾಳೆ.
ಗಂಡನ ಸಂಬಂಧವನ್ನು ಅರಗಿಸಿಕೊಳ್ಳಲಾಗದೆ ಇನ್ನಷ್ಟು ದುಃಖಿಸಿದ ಭಾಗ್ಯಾ
ಸ್ನಾನದ ಮನೆಗೆ ಬರುತ್ತಿದ್ದಂತೆ ಮತ್ತೆ ಭಾಗ್ಯಾ ದುಃಖ ಹೆಚ್ಚಾಗುತ್ತದೆ. ನೀರಲ್ಲಿ ನೆನೆಯುತ್ತಾ ಮತ್ತೆ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುತ್ತಾಳೆ. ಅತ್ತೆಗೆ ಎಲ್ಲಾ ವಿಚಾರ ಗೊತ್ತಿದ್ದರೂ ನನ್ನ ಬಳಿ ಮುಚ್ಚಿಟ್ಟಿದ್ದು ಅವಳಿಗೆ ಇನ್ನಷ್ಟು ಬೇಸರವಾಗುತ್ತದೆ. ಮಗಳೇ ಮಗಳೇ ಅಂತ ಕರೆದು ಮಗಳ ಬಳಿಯೇ ಸುಳ್ಳು ಹೇಳಿದ್ರಿ, ನಿಮ್ಮ ಮಗ ಶ್ರೇಷ್ಠಾಗೆ ತಾಳಿ ಕಟ್ಟುವುದು ಗೊತ್ತಿದ್ರೂ ನನಗೆ ಒಂದು ವಿಚಾರ ತಿಳಿಸಲಿಲ್ಲ. ಮಗನಿಗಾಗಿ ನನ್ನನ್ನು ಬದಲಿಸಲು ಪ್ರಯತ್ನಿಸಿದಿರಿ, ನಿಮ್ಮ ಸಂಸ್ಕಾರವನ್ನು ಪಕ್ಕಕ್ಕೆ ಇಟ್ಟು ನನ್ನತನವನ್ನು ಬಿಡಲು ಹೇಳಿದಿರಿ ಎಂದು ಗಂಡ, ಕುಸುಮಾ ಮಾಡಿದ ಮೋಸವನ್ನು ನೆನೆದು ಕಣ್ಣೀರಿಡುತ್ತಾಳೆ.
ಭಾಗ್ಯಾಗೆ ನಿಜ ಗೊತ್ತಾಗಿರುವುದು ಕುಸುಮಾಗೆ ಅರ್ಥವಾಗುವುದಾ? ಮತ್ತೊಂದೆಡೆ ತಾಂಡವ್-ಶ್ರೇಷ್ಠಾ ಪೊಲೀಸ್ ಸ್ಟೇಷನ್ಗೆ ಹೋಗುತ್ತಾರಾ? ಕಾದು ನೋಡಬೇಕು.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ