Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಈಗ ಮೋಕ್ಷಿತಾ ಯುವರಾಣಿ; ಉಗ್ರಂ ಮಂಜು ಸಿಂಹಾಸನಕ್ಕೆ ಬಂತು ಕುತ್ತು
Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಹೊಸ ಅಧಿಕಾರವನ್ನು ಮೋಕ್ಷಿತಾ ಪಡೆದುಕೊಂಡಿದ್ದಾರೆ. ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಯುವರಾಣಿ ಪಟ್ಟ ಪಡೆದುಕೊಂಡಿದ್ದಾರೆ. ಉಗ್ರಂ ಮಂಜು ಅವರಿಗೆ ಈ ಕಾರಣದಿಂದ ಕೋಪ ಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರವೂ ಒಂದಲ್ಲ ಒಂದು ಹೊಸ ರೀತಿಯ ಆಟ ಸೃಷ್ಟಿಯಾಗುತ್ತದೆ. ಅದೇ ರೀತಿ ಈ ವಾರದ ಮೊದಲ ದಿನಗಳಲ್ಲಿ ಬಿಗ್ ಬಾಸ್ ಮನೆಗೆ ಉಗ್ರಂ ಮಂಜು ಅವರು ರಾಜ ಆಗಿದ್ದರು. ಆದರೆ ಈಗ ಆಟದಲ್ಲಿ ಟ್ವಿಸ್ಟ್ ಇಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಈಗ ಯುವರಾಣಿಯಾಗಿದ್ದಾರೆ. ಉಗ್ರಂ ಮಂಜು ಒಬ್ಬರೇ ಈ ಬಿಗ್ ಬಾಸ್ ಸಾಮ್ರಾಜ್ಯಕ್ಕೆ ರಾಜ ಎಂದು ತುಂಬಾ ಬೀಗುತ್ತಿದ್ದರು. ಆದರೆ ಈಗ ಯುವರಾಣಿಯ ಆಗಮನ ಅವರಿಗೆ ಕೋಪ ತಂದಿದೆ. ತನ್ನ ಅಧಿಕಾರವನ್ನು ಯಾರೋ ಕಸಿಯಲು ಬಂದಿದ್ದಾರೆ ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ.
ಆದರೆ ರಾಜನ ಸಿಂಹಾಸನದ ಅಧಿಕಾರವನ್ನು ಮೊದಲು ಮೋಕ್ಷಿತಾಗೆ ಕೊಟ್ಟಿರಲಿಲ್ಲ. ಅವರಿಗೆಂದೇ ಇನ್ನೊಂದು ಸಿಂಹಾಸನವನ್ನು ಇಡಲಾಗಿತ್ತು. ಮೋಕ್ಷಿತಾ ಈಗ ಆ ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಯುವರಾಣಿಯಾಗಿ ಭರ್ಜರಿ ರೆಡಿಯಾಗಿ ಬಂದಿದ್ದಾರೆ. ಯುವರಾಣಿ ಬರುವ ಸಂದರ್ಭದಲ್ಲಿ ಉಳಿದವರೆಲ್ಲ ಅವರು ಬರುವ ಹಾದಿಯಲ್ಲಿ ಹೂವು ಚೆಲ್ಲಿದ್ದಾರೆ. ಈಗ ಯುವರಾಣಿ ಹಾಗೂ ರಾಜ ಹೀಗೆ ಎರಡು ತಂಡಗಳಾಗಿ ಮನೆ ಒಡೆಯಬಹುದು.
ಮನೆಯಲ್ಲಿನ ಹಲವು ಸ್ಪರ್ಧಿಗಳು ಯುವರಾಣಿ ಮೋಕ್ಷಿತಾಗೆ ಸಹಾಯ ಮಾಡುತ್ತಿದ್ದಾರೆ. ಕ್ಯಾಪ್ಟನ್ ರೂಮ್ಗೆ ಹೋಗಲು ಪ್ರಯತ್ನ ಮಾಡಿದ್ದಾರೆ. ಆದರೆ ತನ್ನ ಕಾವಲಿಗೆ ಎಂದು ಉಗ್ರಂ ಮಂಜು ಅವರು ರಜತ್ ಅವರನ್ನು ನೇಮಕ ಮಾಡಿಕೊಂಡಿರುತ್ತಾರೆ. ಅವರ ಬಳಿ ಹೇಳಿ ರಾಣಿ ಕ್ಯಾಪ್ಟನ್ ರೂಮ್ ಒಳಗಡೆ ಬರದ ರೀತಿಯಲ್ಲಿ ತಡೆದಿದ್ದಾರೆ. ನಂತರ ಉಗ್ರಂ ಮಂಜು ಅವರು ಸಿಂಹಾಸನ ಬಿಟ್ಟು ಹೊರಗಡೆ ಹೋದ ಸಂದರ್ಭದಲ್ಲಿ ಯುವರಾಣಿ ಮೋಕ್ಷಿತಾ ಬಂದು ಆ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾರೆ.
ಈ ರೀತಿ ಮಾಡಿದ ಕಾರಣ ಉಗ್ರಂ ಮಂಜು ಅವರು ಕೋಪ ಮಾಡಿಕೊಂಡಿದ್ದಾರೆ. ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಅಧಿಕಾರ ನಿನಗಿಲ್ಲ ಎಂದು ಹೇಳುತ್ತಾ ಅವರನ್ನು ಎಬ್ಬಿಸಲು ಮುಂದಾಗಿದ್ದಾರೆ. ಆಗ ಸಾಕಷ್ಟು ಜನ ಅವರನ್ನು ತಡೆದಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಫೈಟ್ ನಡೆದಿದೆ. ಕೆಲವರನ್ನು ತಳ್ಳಿ ಹಾಕಿದ್ದಾರೆ.
ಈ ಹಿಂದೆ ಹೀಗಾಗಿತ್ತು
ಈ ವಾರ ಬಿಗ್ ಬಾಸ್ ಮನೆ, ಬಿಗ್ ಬಾಸ್ ಸಾಮ್ರಾಜ್ಯವಾಗಿದೆ. ಈ ಸಾಮ್ರಾಜ್ಯದ ಮಹಾರಾಜ ಮಂಜು ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದಂತೆ, ವೇಷಭೂಷಣ ಬದಲಿಸಿಕೊಂಡು ಬಂದ ಮಂಜು, ಸಿಂಹಾಸನ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲ ಮನೆ ಪ್ರಜೆಗಳನ್ನು ತಮ್ಮ ಹಿಡಿತಕ್ಕೆ ಪಡೆದು, ಬೇಕಾದಂತೆ ಆಡಿಸಿದ್ದಾರೆ ರಾಜ ಮಂಜಣ್ಣ. ಆದರೆ ಈಗ ಇದು ಬದಲಾಗಿದೆ. ಯುವರಾಣಿ ಆಗಮನವಾಗಿದೆ.