Top Movies: ಗಳಿಕೆಯಲ್ಲಿ ಸಾರ್ವಕಾಲಿಕ ಟಾಪ್‌ 10 ಸ್ಥಾನ ಪಡೆದ ಹಿಂದಿ ಚಿತ್ರಗಳಿವು, ಜವಾನ್‌ನಿಂದ ಕೆಜಿಎಫ್‌ 2ವರೆಗೆ ಇಲ್ಲಿದೆ ಲಿಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  Top Movies: ಗಳಿಕೆಯಲ್ಲಿ ಸಾರ್ವಕಾಲಿಕ ಟಾಪ್‌ 10 ಸ್ಥಾನ ಪಡೆದ ಹಿಂದಿ ಚಿತ್ರಗಳಿವು, ಜವಾನ್‌ನಿಂದ ಕೆಜಿಎಫ್‌ 2ವರೆಗೆ ಇಲ್ಲಿದೆ ಲಿಸ್ಟ್‌

Top Movies: ಗಳಿಕೆಯಲ್ಲಿ ಸಾರ್ವಕಾಲಿಕ ಟಾಪ್‌ 10 ಸ್ಥಾನ ಪಡೆದ ಹಿಂದಿ ಚಿತ್ರಗಳಿವು, ಜವಾನ್‌ನಿಂದ ಕೆಜಿಎಫ್‌ 2ವರೆಗೆ ಇಲ್ಲಿದೆ ಲಿಸ್ಟ್‌

Highest grossing Hindi movies: ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಗಳಿಕೆಯಲ್ಲಿ ಸಾರ್ವಕಾಲಿಕ ಅಗ್ರ 10 ಸಿನಿಮಾಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಜವಾನ್‌, ಗದ್ದರ್‌ 2 ಮಾತ್ರವಲ್ಲದೆ ಕೆಜಿಎಫ್‌ 2ನ ಹಿಂದಿ ಆವೃತ್ತಿ, ಬಾಹುಬಾಲಿ 2 ಕೂಡ ಈ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ.

Top Movies: ಗಳಿಕೆಯಲ್ಲಿ ಸಾರ್ವಕಾಲಿಕ ಟಾಪ್‌ 10 ಸ್ಥಾನ ಪಡೆದ ಹಿಂದಿ ಚಿತ್ರಗಳಿವು
Top Movies: ಗಳಿಕೆಯಲ್ಲಿ ಸಾರ್ವಕಾಲಿಕ ಟಾಪ್‌ 10 ಸ್ಥಾನ ಪಡೆದ ಹಿಂದಿ ಚಿತ್ರಗಳಿವು

ಬೆಂಗಳೂರು: ಭಾರತದಲ್ಲಿ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಚಿತ್ರಗಳಲ್ಲಿ (highest-grossing Hindi films) ಶಾ0ರೂಖ್‌ ಖಾನ್‌ ಅವರ ಜವಾನ್‌ ಸಿನಿಮಾ ಅಗ್ರ ಸ್ಥಾನ ಪಡೆದಿದೆ. ಆದರೆ, 2023ರ ಇವರದ್ದೇ ಇನ್ನೊಂದು ಸಿನಿಮಾ ಪಠಾಣ್‌ ಕೂಡ ಅಗ್ರ 3ನೇ ಸ್ಥಾನ ಪಡೆದಿರುವುದು ವಿಶಷ. ಸಚ್‌ನಿಲ್ಕ್‌.ಕಾಂ ಶುಕ್ರವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆರ್‌ಆರ್‌ ರಾಜಮೌಳಿಯವರ ಬಾಹುಬಲಿ 2, ಅಮಿರ್‌ ಖಾನ್‌ ಅವರ ದಂಗಾಲ್‌ ಕೂಡ ಸ್ಥಾನ ಪಡೆದಿದೆ. ಕನ್ನಡಿಗರು ಖುಷಿ ಪಡುವಂತೆ ಯಶ್‌ ಅಭಿನಯದ ಕೆಜಿಎಫ್‌ 2 ಕೂಡ ಹಿಂದಿ ಸಿನಿಮಾದ ಅಗ್ರ 10 ಪಟ್ಟಿಯಲ್ಲಿದೆ.

ಟಾಪ್‌ 3ಯಲ್ಲಿ ಶಾರೂಖ್‌ ಖಾನ್‌ರ 2 ಚಿತ್ರ

ಸಚ್‌ನಿಲ್ಕ್‌.ಕಾಂ ವರದಿ ಪ್ರಕಾರ ಶಾರೂಖ್‌ ಖಾನ್‌, ಅಮಿರ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಅವರ ತಲಾ ಎರಡೆರಡು ಸಿನಿಮಾಗಳು ಈ ಟಾಪ್‌ 10 ಪಟ್ಟಿಯಲ್ಲಿವೆ. ಸನ್ನಿ ಡಿಯೋಲ್‌, ಪ್ರಭಾಸ್‌, ಯಶ್‌ ಮತ್ತು ರಣಬೀರ್‌ ಕಪೂರ್‌ ಸಿನಿಮಾಗಳೂ ಈ ಪಟ್ಟಿಯಲ್ಲಿವೆ.

ಶಾರೂಖ್‌ ಖಾನ್‌ ಅವರ ಜವಾನ್‌ ಸಿನಿಮಾವು ಗಳಿಕೆಯಲ್ಲಿ ನಂಬರ್‌ 1 ಸ್ಥಾನ ಪಡೆಇದೆ. ಇದು ಭಾರತದಲ್ಲಿ 525.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸನ್ನಿ ಡಿಯೋಲ್‌ರ ಗದರ್‌ 2 ಸಿನಿಮಾವು 524.8 ಕೋಟಿ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಶಾರೂಕ್‌ ಖಾನ್‌ ಅವರ ಪಠಾಣ್‌ ಸಿನಿಮಾ ಈ ವರ್ಷ ಜನವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವು 524.53 ಕೋಟಿ ರೂಪಾಯಿ ಗಳಿಕೆಯೊಂದಿಗೆ ಅಗ್ರ 3ನೇ ಸ್ಥಾನ ಪಡೆದಿದೆ.

ಬಾಹುಬಲಿ, ಕೆಜಿಎಫ್‌ಗೂ ಮನ್ನಣೆ

ಕನ್ನಡದ ಕೆಜಿಎಫ್‌ 2 ಹಿಂದಿ ವರ್ಷನ್‌ನಲ್ಲಿ ಕಮಾಲ್‌ ಮಾಡಿತ್ತು. ಇದೇ ರೀತಿ ಬಾಹುಬಲಿ 2 ಕನ್‌ಕ್ಲೂಷನ್‌ ಕೂಡ ಹಿಂದಿ ವೀಕ್ಷಕರಿಗೆ ಇಷ್ಟವಾಯಿತು. ಇವೆರಡು ಚಿತ್ರಗಳು ಅಗ್ರ 5ರೊಳಗೆ ಇವೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾವು 2017ರಲ್ಲಿ ತೆರೆಕಂಡಿತ್ತು. ಇದರ ಹಿಂದಿ ವರ್ಷನ್‌ 510.99 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಪ್ರಭಾಸ್‌, ರಾಣ ದಗ್ಗುಬಾಟಿ ಮತ್ತು ಅನುಷ್ಕಾ ಶೆಟ್ಟಿ ನಟಿಸಿದ ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಕನ್ನಡದ ಯಶ್‌ ನಟನೆಯ ಕೆಜಿಎಫ್‌ 2 ಚಿತ್ರದ ಹಿಂದಿ ವರ್ಷನ್‌ ಕೂಡ ಅತ್ಯುತ್ತಮವಾಗಿ ಗಳಿಕೆ ಮಾಡಿತ್ತು. ಕಳೆದ ವರ್ಷ ಬಿಡುಗಡೆಯಾದ ಕೆಜಿಎಫ್‌ 2ನ ಹಿಂದಿ ಆವೃತ್ತಿಯು 435.33 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಅಮಿರ್‌ ಖಾನ್‌ ನಟನೆಯ 2016ರ ಸ್ಪೋರ್ಟ್ಸ್‌ ಡ್ರಾಮ ದಂಗಲ್‌ಗೆ 6ನೇ ಸ್ಥಾನ ದೊರಕಿದೆ. ಇದು 374.43 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ರಣಬೀರ್‌ ಕಪೂರ್‌ ಅವರು ಸಂಜಯ್‌ ದತ್‌ ಅವರ ಬಯೋಪಿಕ್‌ "ಸಂಜು" ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವು 342.57 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ನಂತರದ ಸ್ಥಾನವನ್ನು ಅಮಿರ್‌ ಖಾನ್‌ರ ಪಿಕೆ ಚಿತ್ರ ಪಡೆದಿದೆ. ಇದು 340.8 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಅಗ್ರ ಸ್ಥಾನದಲ್ಲಿ ಸಲ್ಮಾನ್‌ ಖಾನ್‌ರ 2 ಚಿತ್ರಗಳು

ಗಳಿಕೆಯಲ್ಲಿ ಟಾಪ್‌ 10 ಸ್ಥಾನ ಪಡೆದ ಹಿಂದಿ ಚಿತ್ರಗಳಲ್ಲಿ ಸಲ್ಮಾನ್‌ ಖಾನ್‌ ಅವರ ಎರಡು ಚಿತ್ರಗಳು ಸ್ಥಾನದಲ್ಲಿವೆ. ಅಗ್ರ 9ನೇ ಸ್ಥಾನವನ್ನು ಟೈಗರ್‌ ಜಿಂದಾ ಹೈ ಪಡೆದಿದೆ. ಇದು ಭಾರತದಲ್ಲಿ 339.16 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದೇ ರೀತಿ 320.34 ಕೋಟಿ ರೂಪಾಯಿ ಗಳಿಕೆ ಮಾಡಿರುವ ಭಜರಂಗಿ ಭಾಯ್‌ಜಾನ್‌ ಚಿತ್ರವು ಅಗ್ರ 10 ನೇ ಸ್ಥಾನ ಪಡೆದಿದೆ.

Whats_app_banner