Dunki OTT release: ವಿಷ್ಯ ಗೊತ್ತಾಯ್ತ? ಒಟಿಟಿಯಲ್ಲಿದೆ ಶಾರೂಖ್‌ ಖಾನ್‌ ನಟನೆಯ ಡಂಕಿ ಫಿಲ್ಮ್‌, ಮನೆಯಲ್ಲೇ ನೋಡಿ ಹಿರಾನಿ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Dunki Ott Release: ವಿಷ್ಯ ಗೊತ್ತಾಯ್ತ? ಒಟಿಟಿಯಲ್ಲಿದೆ ಶಾರೂಖ್‌ ಖಾನ್‌ ನಟನೆಯ ಡಂಕಿ ಫಿಲ್ಮ್‌, ಮನೆಯಲ್ಲೇ ನೋಡಿ ಹಿರಾನಿ ಸಿನಿಮಾ

Dunki OTT release: ವಿಷ್ಯ ಗೊತ್ತಾಯ್ತ? ಒಟಿಟಿಯಲ್ಲಿದೆ ಶಾರೂಖ್‌ ಖಾನ್‌ ನಟನೆಯ ಡಂಕಿ ಫಿಲ್ಮ್‌, ಮನೆಯಲ್ಲೇ ನೋಡಿ ಹಿರಾನಿ ಸಿನಿಮಾ

Dunki OTT release: ಶಾರೂಖ್‌ ಖಾನ್‌ ನಟನೆಯ ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಡಂಕಿ ಸಿನಿಮಾ ಒಟಿಟಿ ಪ್ರವೇಶಿಸಿದೆ. ಡಂಕಿ ಮಾರ್ಗದ ಮೂಲಕ ವಿದೇಶಕ್ಕೆ ತೆರಳುವ ಕಥೆಯನ್ನು ಒಳಗೊಂಡ ಈ ಸಿನಿಮಾವನ್ನು ಮನೆಯಲ್ಲಿಯೇ ನೋಡಬಹುದು. ಡಂಕಿ ಸಿನಿಮಾದ ಒಟಿಟಿ ಅಪ್‌ಡೇಟ್‌ ಇಲ್ಲಿದೆ.

ಒಟಿಟಿಯಲ್ಲಿ ಬಿಡುಗಡೆಯಾದ ಡಂಕಿ ಸಿನಿಮಾ
ಒಟಿಟಿಯಲ್ಲಿ ಬಿಡುಗಡೆಯಾದ ಡಂಕಿ ಸಿನಿಮಾ

Dunki OTT release: ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಡಂಕಿ ಸಿನಿಮಾ ಚಿತ್ರಮಂದಿರಗಳಲ್ಲಿ ಡಿಸೆಂಬರ್‌ 21ರಂದು ಬಿಡುಗಡೆಯಾಗಿತ್ತು. ಶಾರೂಖ್‌ ಖಾನ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿಯೇ ವಹಿವಾಟು ನಡೆಸಿದೆ. ಸಚ್‌ನಿಲ್ಕ್‌.ಕಾಂ ವರದಿ ಪ್ರಕಾರ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಡಂಕಿ ಚಿತ್ರವು 454 ಕೋಟಿರೂಪಾಯಿ ಗಳಿಸಿದೆ. ಇತ್ತೀಚಿನ ವರದಿಗಳ ಪ್ರಕಾರ ಡಂಕಿ ಸಿನಿಮಾ ಜಿಯೋಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುವುದಾಗಿ ಹೇಳಲಾಗಿತ್ತು. ಆದರೆ, ಜಿಯೋಸಿನಿಮಾದಲ್ಲಿ ಡಂಕಿ ಸಿನಿಮಾ ರಿಲೀಸ್‌ ಆಗಿಲ್ಲ. ಇದು ಬೇರೆ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆದ ಡಂಕಿ

ಬುಧವಾರ ನೆಟ್‌ಫ್ಲಿಕ್ಸ್‌ ಇಂಡಿಯಾವು ಡಂಕಿ ಒಟಿಟಿ ಪ್ರಸಾರದ ಕುರಿತು ಅಪ್‌ಡೇಟ್‌ ನೀಡಿತ್ತು. "ನಿಮ್ಮ ಬ್ಯಾಗ್‌ಗಳನ್ನು ಪಾಕ್‌ ಮಾಡಿ. ಇಡೀ ಜಗತ್ತು ಸುತ್ತಿದ ಬಳಿಕ ಡಂಕಿ ಈಗ ನಿಮ್ಮ ಮನೆಗೆ ಬಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಡಂಕಿ ಸ್ಟ್ರೀಮಿಂಗ್‌ ಆಗುತ್ತಿದೆ. ವ್ಯಾಲೆಂಟಿನ್‌ ದಿನದಂದು ಡಂಕಿ ಒಟಿಟಿಗೆ ಆಗಮಿಸಿದೆ" ಎಂದು ಅಪ್‌ಡೇಟ್‌ ನೀಡಿತ್ತು. ನಿಮ್ಮಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಇದ್ದರೆ ಡಂಕಿ ಸಿನಿಮಾವನ್ನು ನೋಡಬಹುದು.

ಶಾರೂಖ್‌ ಖಾನ್‌ ನಟನೆಯ ಚಿತ್ರಗಳು ಕಳೆದ ವರ್ಷ ಬಾಕ್ಸ್‌ ಆಫೀಸ್‌ ಅನ್ನು ಕೊಳ್ಳೆ ಹೊಡೆದಿದ್ದವು. ಪಠಾಣ್‌, ಜವಾನ್‌ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿದ್ದವು. ಈ ಚಿತ್ರಗಳಿಗೆ ಹೋಲಿಸಿದರೆ ಡಂಕಿ ವಿಭಿನ್ನ ಮಾದರಿಯದ್ದು. ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದ ಡಂಕಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ನಿಧಾನವಾಗಿ ಹೆಚ್ಚಿಸಿಕೊಂಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು ನಾಲ್ಕುನೂರ ಐವತ್ತು ಕೋಟಿ ಗಳಿಸಿತ್ತು.ಮೊದಲ ದಿನ ಈ ಸಿನಿಮಾದ ಕುರಿತು ಹೆಚ್ಚಿನ ನಿರೀಕ್ಷೆ ಇತ್ತು. ಎಲ್ಲಾದರೂ ಗುರುವಾರವೇ ಈ ಸಿನಿಮಾ ಸೂಪರ್‌ ಎಂಬ ಅಭಿಪ್ರಾಯ ಗಳಿಸುತ್ತಿದ್ದರೆ. ಶುಕ್ರವಾರ, ಶನಿವಾರ, ಭಾನುವಾರ ಭರ್ಜರಿ ಗಳಿಕೆ ಮಾಡುತ್ತಿತ್ತು. ಮೊದಲ ದಿನ ಡಂಕಿ 30 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಶಾರೂಖ್‌ ಖಾನ್‌ ನಟನೆಯ ಈ ವರ್ಷದ ಜವಾನ್‌ ಮತ್ತು ಪಠಾಣ್‌ಗಿಂತ ಮೊದಲ ದಿನದ ಆದಾಯ ಕಡಿಮೆಯಾಗಿತ್ತು. ಮೊದಲ ದಿನ ಸಿನಿಮಾ ನೋಡಿದ ಜನರು ಈ ಸಿನಿಮಾ ಬೋರಿಂಗ್‌, ಚೆನ್ನಾಗಿಲ್ಲ, ಓಕೆ ಎಂದೆಲ್ಲ ಅಭಿಪ್ರಾಯಪಟ್ಟಿದ್ದರಿಂದ ಡಂಕಿ ಸಲಾರ್‌ ಮುಂದೆ ಮಂಕಾಗಿತ್ತು. ಹಿರಾನಿ ಅವರು ಮುನ್ನಾ ಭಾಯ್‌ ಎಂಬಿಬಿಎಸ್‌, ಸಂಜುನಂತಹ ಅದ್ಭುತ ಸಿನಿಮಾಗಳನ್ನು ಮಾಡಿದ್ದರು. ಸುಮಾರು 120 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಡಂಕಿ ಚಿತ್ರವು ಅಸಲಿಗಿಂತ ಹೆಚ್ಚು ಗಳಿಕೆ ಮಾಡಿದೆ.

ಡಂಕಿ ಸಿನಿಮಾದಲ್ಲಿ ಬೊಮ್ಮಾನ್‌ ಇರಾನಿ, ತಾಪ್ಸೆ ಪನ್ನು, ವಿಕ್ಕಿ ಕೌಶಲ್‌, ವಿಕ್ರಮ್‌ ಕೊಚ್ಚಾರ್‌, ಅನಿಲ್‌ ಗ್ರೋವರ್‌ ಸೇರಿದಂತೆ ಪ್ರಮುಖ ತಾರಾಗಣವಿದೆ. ಜಿಯೋ ಸ್ಟುಡಿಯೋಸ್‌ನ ಈ ಸಿನಿಮಾ ನಿರ್ಮಿಸಿದೆ. ಇದೇ ಕಾರಣಕ್ಕೆ ಈ ಸಿನಿಮಾ ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿತ್ತು. ಆದರೆ, ಡಂಕಿ ಸಿನಿಮಾದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಖರೀದಿಸಿದೆ.

Whats_app_banner