South Movies: ದಕ್ಷಿಣ ಭಾರತದ ಯಶಸ್ವಿ 12 ನಿರ್ದೇಶಕರು ಯಾರು ಗೊತ್ತೆ? ರಾಜಮೌಳಿ, ಪ್ರಶಾಂತ್‌ ನೀಲ್‌ರಿಂದ ಉಪೇಂದ್ರರವರೆಗೆ-feature articles top 12 successful directors in south indian movies ss rajamouli prashanth neel atlee upendra pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  South Movies: ದಕ್ಷಿಣ ಭಾರತದ ಯಶಸ್ವಿ 12 ನಿರ್ದೇಶಕರು ಯಾರು ಗೊತ್ತೆ? ರಾಜಮೌಳಿ, ಪ್ರಶಾಂತ್‌ ನೀಲ್‌ರಿಂದ ಉಪೇಂದ್ರರವರೆಗೆ

South Movies: ದಕ್ಷಿಣ ಭಾರತದ ಯಶಸ್ವಿ 12 ನಿರ್ದೇಶಕರು ಯಾರು ಗೊತ್ತೆ? ರಾಜಮೌಳಿ, ಪ್ರಶಾಂತ್‌ ನೀಲ್‌ರಿಂದ ಉಪೇಂದ್ರರವರೆಗೆ

Successful Directors: ದಕ್ಷಿಣ ಭಾರತದ ಚಿತ್ರರಂಗವು ಭಾರತ ಮತ್ತು ಜಗತ್ತಿನ ಸಿನಿಮಾಪ್ರೇಮಿಗಳಿಗೆ ಹಲವು ಸುಂದರ ಸಿನಿಮಾಗಳನ್ನು ನೀಡಿವೆ. ದಕ್ಷಿಣ ಭಾರತದಲ್ಲಿ ಅನೇಕ ಯಶಸ್ವಿ ನಿರ್ದೇಶಕರಿದ್ದಾರೆ. ಎಸ್‌ಎಸ್‌ ರಾಜಮೌಳಿ, ಪ್ರಶಾಂತ್‌ ನೀಲ್‌, ಮಣಿರತ್ನಂ ಸೇರಿದಂತೆ ಪ್ರಮುಖ ನಿರ್ದೇಶಕರ ಬಗ್ಗೆ ತಿಳಿಯೋಣ ಬನ್ನಿ.

Successful Directors:  ದಕ್ಷಿಣ ಭಾರತದ ಯಶಸ್ವಿ ನಿರ್ದೇಶಕರಲ್ಲಿ ಉಪೇಂದ್ರ, ಎಸ್‌ಎಸ್‌ ರಾಜಮೌಳಿ, ಪ್ರಶಾಂತ್‌ ನೀಲ್‌ ಇದ್ದಾರೆ.
Successful Directors: ದಕ್ಷಿಣ ಭಾರತದ ಯಶಸ್ವಿ ನಿರ್ದೇಶಕರಲ್ಲಿ ಉಪೇಂದ್ರ, ಎಸ್‌ಎಸ್‌ ರಾಜಮೌಳಿ, ಪ್ರಶಾಂತ್‌ ನೀಲ್‌ ಇದ್ದಾರೆ.

South Indian Movies Top 12 Successful Directors:‌ ಕಳೆದ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತವು ಅದ್ಭುತ ಸಿನಿಮಾಗಳನ್ನು ನೀಡಿ ಎಲ್ಲರನ್ನೂ ತಿರುಗಿನೋಡುವಂತೆ ಮಾಡಿದೆ. ಎಸ್‌ಎಸ್‌ ರಾಜಮೌಳಿಯಿಂದ ಕನ್ನಡದ ಉಪೇಂದ್ರರವರೆಗೆ ಹಲವು ನಿರ್ದೇಶಕರು ತಮ್ಮ ಅದ್ಭುತ ಪ್ರತಿಭೆ, ಶ್ರಮದಿಂದ ಎಲ್ಲರ ಗಮನ ಸೆಳೆದಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರ ವಿವರ ಇಲ್ಲಿದೆ.

ದಕ್ಷಿಣ ಭಾರತದ ಯಶಸ್ವಿ 12 ನಿರ್ದೇಶಕರು ಯಾರು ಗೊತ್ತೆ?

1. ಮಣಿರತ್ನಂ

ಕನ್ನಡದಲ್ಲಿ 1983ರಲ್ಲಿ ಪಲ್ಲವಿ ಅನುಪಲ್ಲವಿ ಸಿನಿಮಾ ನಿರ್ದೇಶಿಸಿದ ಬಳಿಕ ಮಣಿರತ್ನಂ ಬಳಿಕ ಮಲಯಾಳಂನಲ್ಲಿ ಉನರೋ ಎಂಬ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಇದಾದ ಬಳಿಕ ತಮಿಳು, ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿದ್ದುಕೊಂಡು ಹಲವು ಸುಂದರ ಸಿನಿಮಾಗಳನ್ನು ನೀಡಿದ್ದಾರೆ. ಪೊನ್ನಿಯನ್‌ ಸೆಲ್ವನ್‌, ಕತ್ರು ವೆಲಿದೈ, ಓ ಕಾದಲ್‌ ಕಣ್ಮಣಿ, ರಾವಣನ್‌, ರಾವನ್‌, ಗುರು, ಯುವ, ಕಣ್ಣತ್ತಿಲ್‌ ಮುತ್ತುಮಿತ್ತೈ ಸೇರಿದಂತೆ ಹಲವು ಸಿನಿಮಾಗಳನ್ನು ನೀಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಿಗೆ ಇವರು ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಇವರಿಗೆ ಕೇಂದ್ರ ಸರಕಾರವು ಪ್ರತಿಷ್ಠಿತ ಪದ್ಮಶ್ರಿ ಪ್ರಶಸ್ತಿ ನೀಡಿದೆ.

2. ಎಸ್‌ಎಸ್‌ ರಾಜಮೌಳಿ

ಸದ್ಯ ಎಸ್‌ಎಸ್‌ ರಾಜಮೌಳಿ ಎಂಬ ನಿರ್ದೇಶಕ ಸಿನಿಜಗತ್ತಿನಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಮಗಧೀರ, ಆರ್‌ಆರ್‌ಆರ್‌, ಬಾಹುಬಲಿ ಸೇರಿದಂತೆ ರಾಜಮೌಳಿ ನಿರ್ದೇಶಿಸಿದ ಒಂದೊಂದು ಸಿನಿಮಾವೂ ಪ್ರೇಕ್ಷಕರಿಗೆ ರೋಮಾಂಚನ ಉಂಟುಮಾಡಿದೆ. ರಾಜಮೌಳಿ ಅತ್ಯಧಿಕ ವೇತನ ಪಡೆಯುವ ಭಾರತದ ನಿರ್ದೇಶಕ. ಇವರಿಗೆ ಕಲಾ ವಿಭಾಗದಲ್ಲಿ ಪದ್ಮಶ್ರಿ ಪ್ರಶಸ್ತಿ ದೊರಕಿದೆ.

3. ಎಸ್‌. ಶಂಕರ್‌

ದಕ್ಷಿಣ ಭಾರತ ಸಿನಿಮಾರಂಗದ ಶೋಮ್ಯಾನ್‌ ಎಂದೇ ಖ್ಯಾತಿ ಪಡೆದಿರುವ ಎಸ್‌ ಶಂಕರ್‌ ಕೂಡ ಜನಪ್ರಿಯ ನಿರ್ದೇಶಕ. ರೋಬೊ 2.0 ಸೇರಿದಂತೆ ಹಲವು ಬ್ಲಾಕ್‌ಬಸ್ಟರ್‌ ಸಿನಿಂಆಗಳನ್ನು ನೀಡಿದ್ದಾರೆ. ಇವರು ಕಥೆ ಹೇಳುವ ಶೈಲಿ, ತಂತ್ರಜ್ಞಾನದ ಬಳಕೆ ಮಾಡುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ.

 

ಎಸ್‌ ಶಂಕರ್‌- ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಿರ್ದೇಶಕ
ಎಸ್‌ ಶಂಕರ್‌- ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಿರ್ದೇಶಕ

4. ಉಪೇಂದ್ರ

ಉಪೇಂದ್ರ ಎಂದರೆ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಡೈಲಾಗ್‌ ನೆನಪಾಗಬಹುದು. ಭಾರತದ ಸಮಾಜ ಮತ್ತು ರಾಜಕೀಯಕ್ಕೆ ಟಾಂಗ್‌ ನೀಡುವಂತಹ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಡಿಫರೆಂಟ್‌ ಸಿನಿಮಾಗಳನ್ನು ನೀಡಿರುವ ಖ್ಯಾತಿ ಇವರದ್ದು. ಶ್ರೀರಾಮಚಂದ್ರ, ತರ್ಲೆ ನನ್‌ ಮಗ, ಶ್‌, ಓಂ, ಆಪರೇಷನ್‌ ಅಂತ, ಓಂಕಾರಣ್‌ (ತೆಲುಗು), ಸ್ವಸ್ತಿಕ್‌, ಎ, ಉಪೇಂದ್ರ, ರಾ, ಎಚ್‌2ಒ, ಸೂಪರ್‌ ಸ್ಟಾರ್‌, ಹಾಲಿವುಡ್‌, ರಕ್ತಕಣ್ಣೀರು, ಸೂಪರ್‌, ಕಟಾರಿ ವೀರ ಸುರಸುಂದರಾಂಗಿ, ಟೋಪಿವಾಲಾ, ಉಪ್ಪಿ 2 ಮುಂತಾದ ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇವರು ನಟಿಸಿರುವ ಸಿನಿಮಾಗಳ ಪಟ್ಟಿ ದೊಡ್ಡದಿದೆ.

5. ಅಟ್ಲಿ

ಮಾಡಿದ್ದು ನಾಲ್ಕು ಸಿನಿಮಾವಾದರೂ ಈ ಅಟ್ಲಿ ದಕ್ಷಿಣ ಭಾರತದ ಫೇಮಸ್‌ ನಿರ್ದೇಶಕ. ಜವಾನ್‌ ಸಿನಿಮಾದ ಯಶಸ್ಸು ಅಟ್ಲಿಯನ್ನು ಜನಪ್ರಿಯ ನಿರ್ದೇಶಕನ ಸೀಟ್‌ನಲ್ಲಿ ಕುಳ್ಳಿರಿಸಿತು. ಮೊದಲ ಸಿನಿಮಾ ರಾಜಾರಾಣಿಯಲ್ಲೇ ತನ್ನ ಪ್ರತಿಭೆ ತೋರಿಸಿದ್ದರು. ರಾಜಾರಾಣಿ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿತ್ತು.

6. ಎಆರ್‌ ಮುರುಗಾದಾಸ್‌

ಸಾಮಾಜಿಕ ವಿಷಯಗಳ ಕುರಿತು ಸಿನಿಮಾ ಮಾಡುವಲ್ಲಿ ಎಆರ್‌ ಮುರುಗಾದಾಸ್‌ ಫೇಮಸ್‌.

7. ತ್ರಿವಿಕ್ರಮ್‌ ಶ್ರೀನಿವಾಸ್‌

ನುವ್ವೆ ನುವ್ವೆ ಸಿನಿಮಾದ ಮೂಲಕ ನಿರ್ದೇಶನ ಆರಂಭಿಸಿದ ತೆಲುಗು ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಕೂಡ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

8. ಪ್ರಶಾಂತ್‌ ನೀಲ್‌

ಕನ್ನಡದ ಇನ್ನೊಬ್ಬ ಪ್ರತಿಭೆ ಪ್ರಶಾಂತ್‌ ನೀಲ್‌. ಕನ್ನಡ ಮತ್ತು ತೆಲುಗು ಸಿನಿಮಾ ನಿರ್ದೇಶಿಸಿದ್ದಾರೆ. ಉಗ್ರಂ, ಕೆಜಿಎಫ್‌ ಚಾಪ್ಟರ್‌ 1, ಕೆಜಿಎಫ್‌ ಚಾಪ್ಟರ್‌ 2ನಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದಾರೆ.

9. ವಿಕ್ರಮ್‌ ಕುಮಾರ್‌

ವಿಕ್ರಮ್‌ ದಕ್ಷಿಣ ಭಾರತದ ಇನ್ನೊಬ್ಬ ಜನಪ್ರಿಯ ನಿರ್ದೇಶಕ. ಇಸ್ತಾಮಿ, ಯುವರಾಮ್‌ ನಲಮ್‌ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಾಮಿಡಿ, ಥ್ರಿಲ್ಲರ್‌, ಸೈನ್ಸ್‌ ಫಿಕ್ಷನ್‌ ಸಿನಿಮಾ ನಿರ್ದೇಶನದಲ್ಲಿ ಇವರದ್ದು ಎತ್ತಿದ ಕೈ.

10. ಲೋಕೇಶ್‌ ಕನಕರಾಜು

ತೆಲುಗು ಚಿತ್ರರಂಗದಲ್ಲಿ ಲೋಕೇಶ್‌ ಕನಕರಾಜು ಜನಪ್ರಿಯ ಹೆಸರು. ಅಯ್ಯಲ್‌ ಸಿನಿಮಾದ ಮೂಲಕ ನಿರ್ದೇಶನ ಆರಂಭಿಸಿದರು. ವಿಕ್ರಮ್‌, ಕಥತಿ, ಮಾಸ್ಟರ್‌ ಮತ್ತು ಲಿಯೊ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದಾರೆ.

11. ರಿಷಬ್‌ ಶೆಟ್ಟಿ

ಕನ್ನಡದಲ್ಲಿ ಹಲವು ಜನಪ್ರಿಯ ನಿರ್ದೇಶಕರಿದ್ದಾರೆ. ಪುಟ್ಟಣ ಕಣಗಾಲ್‌ ಸೇರಿದಂತೆ ಹಲವು ನಿರ್ದೇಶಕರು ನೆನಪಿಗೆ ಬರಬಹುದು. ಇತ್ತೀಚಿನ ವರ್ಷಗಳಲ್ಲಿ ರಿಷಬ್‌ ಶೆಟ್ಟಿ ನಿರ್ದೇಶಕನಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ತಾನೇ ತನಗೆ ಸಿನಿಮಾ ಮಾಡಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದುಕೊಂಡು ಪ್ರತಿಭಾನ್ವಿತ. ಕಾಂತಾರ, ಕಿರಿಕ್‌ ಪಾರ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಿಕ್ಕಿ, ರುದ್ರಪ್ರಯಾಗ್‌ ಮುಂತಾದ ಸಿನಿಮಗಳಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ.

12. ಕೊರಟಲಾ ಶಿವ

ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ. ಶ್ರೀಮಂತುಡು, ಜಂತ ಗ್ಯಾರೇಜ್‌, ಆಚಾರ್ಯ ಮತ್ತು ಮಿರ್ಚಿ ಮುಂತಾದ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

ದಕ್ಷಿಣ ಭಾರತದ ಸಿನಿಮಾರಂಗದ ಇತಿಹಾಸ ಗಮನಿಸಿದರೆ ಈ ಅಗ್ರ 12 ನಿರ್ದೇಶಕರಿಗಿಂತ ಇನ್ನಷ್ಟು ಜನಪ್ರಿಯತೆ ಪಡೆದಿರುವ ನಿರ್ದೇಶಕರು ಇರಬಹುದು. ಇದೇ ರೀತಿ ಮಲಯಾಳಂ ಚಿತ್ರೋದ್ಯಮದಲ್ಲಿ ಒಬ್ಬರಿಗಿಂತ ಒಬ್ಬರು ಪ್ರತಿಭಾನ್ವಿತ ಯಶಸ್ವಿ ನಿರ್ದೇಶಕರಿದ್ದಾರೆ. ಅವರನ್ನು ಈ ಲಿಸ್ಟ್‌ನಲ್ಲಿ ಸೇರಿಸಿಲ್ಲ.