Paramvah Movie Song: ಪರಂವಃ ಸಿನಿಮಾ ಹಾಡಿಗೆ ಡಾಲಿ ಮೆಚ್ಚುಗೆ; ವೀರಗಾಸೆ ಕುಟುಂಬದ ಕಥೆಯಲ್ಲಿ ಅಪ್ಪ ಮಗನ ಬಾಂಧವ್ಯವೇ ಹೈಲೈಟ್‌
ಕನ್ನಡ ಸುದ್ದಿ  /  ಮನರಂಜನೆ  /  Paramvah Movie Song: ಪರಂವಃ ಸಿನಿಮಾ ಹಾಡಿಗೆ ಡಾಲಿ ಮೆಚ್ಚುಗೆ; ವೀರಗಾಸೆ ಕುಟುಂಬದ ಕಥೆಯಲ್ಲಿ ಅಪ್ಪ ಮಗನ ಬಾಂಧವ್ಯವೇ ಹೈಲೈಟ್‌

Paramvah Movie Song: ಪರಂವಃ ಸಿನಿಮಾ ಹಾಡಿಗೆ ಡಾಲಿ ಮೆಚ್ಚುಗೆ; ವೀರಗಾಸೆ ಕುಟುಂಬದ ಕಥೆಯಲ್ಲಿ ಅಪ್ಪ ಮಗನ ಬಾಂಧವ್ಯವೇ ಹೈಲೈಟ್‌

ಹೊಸಬರಿಗೆ ಸದಾ ಬೆನ್ನೆಲುಬಾಗಿ ನಿಲ್ಲುವ ನಟ ಡಾಲಿ ಧನಂಜಯ್‌, ಇದೀಗ ಪರಂವಃ ತಂಡಕ್ಕೂ ಸಾಥ್‌ ನೀಡಿದ್ದಾರೆ. ವೀರಗಾಸೆ ಹಿನ್ನೆಲೆಯ ಈ ಸಿನಿಮಾದ ಹಾಡನ್ನು ಬಿಡುಗಡೆ ಮಾಡಿ ಕೊಟ್ಟಿದ್ದಾರೆ.

ಪರಂವಃ ಸಿನಿಮಾ ಹಾಡಿಗೆ ಡಾಲಿ ಮೆಚ್ಚುಗೆ; ವೀರಗಾಸೆ ಕುಟುಂಬದ ಕಥೆಯಲ್ಲಿ ಅಪ್ಪ ಮಗನ ಬಾಂಧವ್ಯವೇ ಹೈಲೈಟ್‌
ಪರಂವಃ ಸಿನಿಮಾ ಹಾಡಿಗೆ ಡಾಲಿ ಮೆಚ್ಚುಗೆ; ವೀರಗಾಸೆ ಕುಟುಂಬದ ಕಥೆಯಲ್ಲಿ ಅಪ್ಪ ಮಗನ ಬಾಂಧವ್ಯವೇ ಹೈಲೈಟ್‌

Paramvah Movie Song: ಶಿವನ ಡಮರುಗದಿಂದ ಬರುವ ಮೊದಲ ಶಬ್ದಕ್ಕೆ ‘ಪರಂವಃ’ ಎಂದು ಕರೆಯಲಾಗುತ್ತದೆ. ಈ ಶೀರ್ಷಿಕೆಯಡಿ ಸದ್ಯ ಯುವಕರ ತಂಡವೊಂದು ಸದಭಿರುಚಿ ಸಿನಿಮಾ ಮಾಡಿದ್ದು, ಆ ಚಿತ್ರದ ಟೀಸರ್ ಅನ್ನು ಕೆಲ ತಿಂಗಳ ಹಿಂದಷ್ಟೇ ನಟ ಡಾರ್ಲಿಂಗ್‌ ಕೃಷ್ಣ ಬಿಡುಗಡೆ ಮಾಡಿದ್ದರು. ಇದೀಗ ಇದೇ ಚಿತ್ರದ ಹಾಡೊಂದು ಬಿಡುಗಡೆ ಆಗಿದೆ. ವಿಶೇಷ ಏನೆಂದರೆ ಪರಂವಃ ಚಿತ್ರದ ತಂದೆ ಮಗನ ಬಾಂಧವ್ಯದ ಹಾಡನ್ನು ಡಾಲಿ ಧನಂಜಯ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರ ಕೂಡ ದೊಡ್ಡದು. ಇಂತಹ ತಂದೆ ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ ಪರಂವಃ. ಈಗ ಇದೇ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಸಂತೋಷ್ ಕೈದಾಳ ನಿರ್ದೇಶಿಸಿರುವ ಈ ಚಿತ್ರಕ್ಕಾಗಿ ನಾಗೇಶ್ ಕುಂದಾಪುರ, ಶ್ರೀ ತಲಗೇರಿ ಹಾಗೂ ಶಿವರಾಜ್ ಸೇರಿ ಬರೆದಿರುವ ಭೂರಮೆಲಿ ಮತ್ಯಾರು ಎಂಬ ತಂದೆ -ಮಗನ ಭಾವನಾತ್ಮಕ ಪಯಣಕ್ಕೆ ಮುನ್ನುಡಿಯಾಗಿರುವ ಹಾಡನ್ನು ಡಾಲಿ ಧನಂಜಯ್‌ ಮೆಚ್ಚಿದ್ದಾರೆ.

ಇದನ್ನೂ ಓದಿ: ವೀರಗಾಸೆ ಕುಟುಂಬದ ಕಥೆಯುಳ್ಳ ‘ಪರಂವಃ’ ಚಿತ್ರಕ್ಕೆ 200 ಮಂದಿ ನಿರ್ಮಾಪಕರು!

ಅಪರಾಜಿತ್ ಹಾಗೂ ಜೋಸ್ ಜೋಸ್ಸೆ ಸಂಗೀತ ನೀಡಿರುವ ಈ ಹಾಡಿಗೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ಮೊದಲ ಹಾಡಿನ ಲಿರಿಕಲ್ ವಿಡಿಯೋ ನೋಡಿದ ಧನಂಜಯ್‌ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರದ ನಾಯಕ ವೀರಗಾಸೆ ಕಲಾವಿದ. ಅವರ ಕುಟುಂಬವೇ ವೀರಗಾಸೆ ಕುಟುಂಬ. ನಾಯಕನಿಗೆ ತಂದೆಯಂದರೆ ಪ್ರಾಣ. ತಂದೆಗೆ ಮಗನೇ ಜೀವ. ಬಹುತೇಕ ಶೂಟಿಂಗ್‌ ಮುಗಿಸಿಕೊಂಡು ಬಂದಿರುವ ಈ ಸಿನಿಮಾ ಇದೀಗ ಬಿಡುಗಡೆ ಸನಿಹದಲ್ಲಿದೆ.

ಪ್ರೇಮ್ ಸಿಡ್ಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು, ನಾಜರ್, ಶೃತಿ, ಮುಕುಂದ್, ಅವಿನಾಶ್, ಶಬರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದು, ಜುಲೈನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ಈಗಾಘಲೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಚಿತ್ರತಂಡ ಬಿಜಿಯಾಗಿದೆ. ಅಂದಹಾಗೆ, ಪೀಪಲ್ ವಲ್ಡ್ ಫಿಲಂಸ್ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಎ.ಎಸ್ ಶೆಟ್ಟಿ ಛಾಯಾಗ್ರಹಣ, ಅಪರಾಜಿತ್, ಜೋಸ್ ಜೋಸ್ಸೆ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಹಾಗೂ ವೆಂಕಿ, ವಿಕಾಸ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ.

Whats_app_banner