Vanshika Anand: ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ಮಹಾ ಮೋಸ; ಪೋಷಕರಿಂದ ಲಕ್ಷ ಲಕ್ಷ ಹಣ ಎಗರಿಸುತ್ತಿದ್ದ ಯುವತಿ ಅಂದರ್
ಕನ್ನಡ ಸುದ್ದಿ  /  ಮನರಂಜನೆ  /  Vanshika Anand: ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ಮಹಾ ಮೋಸ; ಪೋಷಕರಿಂದ ಲಕ್ಷ ಲಕ್ಷ ಹಣ ಎಗರಿಸುತ್ತಿದ್ದ ಯುವತಿ ಅಂದರ್

Vanshika Anand: ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ಮಹಾ ಮೋಸ; ಪೋಷಕರಿಂದ ಲಕ್ಷ ಲಕ್ಷ ಹಣ ಎಗರಿಸುತ್ತಿದ್ದ ಯುವತಿ ಅಂದರ್

ಕಿರುತೆರೆಯಲ್ಲಿ ತನ್ನ ನಟನೆ ಮೂಲಕವೇ ಎಲ್ಲರ ಗಮನ ಸೆಳೆದ ಪುಟಾಣಿ ವಂಶಿಕಾ ಆನಂದ್‌ ಹೆಸರಿನಲ್ಲಿ ಲಕ್ಷ ಲಕ್ಷ ಹಣ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಿಶಾ ನರಸಪ್ಪ ಎಂಬ ಯುವತಿಯನ್ನು ಬಂಧಿಸಲಾಗಿದೆ.

ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ಮಹಾ ಮೋಸ; ಪೋಷಕರಿಂದ ಲಕ್ಷ ಲಕ್ಷ ಹಣ ಎಗರಿಸಿದ್ದ ಯುವತಿ ಅಂದರ್
ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ಮಹಾ ಮೋಸ; ಪೋಷಕರಿಂದ ಲಕ್ಷ ಲಕ್ಷ ಹಣ ಎಗರಿಸಿದ್ದ ಯುವತಿ ಅಂದರ್

Vanshika Anand: ತಮ್ಮ ಪ್ರತಿಭೆ ಮೂಲಕವೇ ನಾಡಿನ ಜನರ ಮನಗೆದ್ದಿರುವ ಪುಟಾಣಿ ವಂಶಿಕಾ ಆನಂದ್‌ ಹೆಸರಿನಲ್ಲೀಗ ಮಹಾ ಮೋಸ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ವಂಶಿಕಾ ಹೆಸರು ಹೇಳಿಕೊಂಡು, ಹಣ ವಸೂಲಿ ಮಾಡುತ್ತಿದ್ದ ಮಹಿಳೆಯನ್ನೀಗ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಎನ್‌ಎನ್‌ ಪ್ರೊಡಕ್ಷನ್ಸ್‌ ಕಂಪನಿ ಮೂಲಕ ಕಿಡ್ಸ್‌ ಮಾಡೆಲಿಂಗ್‌, ಬೇಬಿ ಕಾಂಟೆಸ್ಟ್‌, ರಿಯಾಲಿಟಿ ಶೋ, ಧಾರಾವಾಹಿಗಳ ಆಡಿಷನ್‌ ಸೇರಿ ಹಲವು ಸಿನಿಮಾ ಚಾನ್ಸ್‌ ನೀಡುವುದಾಗಿ ನಿಶಾ ನರಸಪ್ಪ ಎಂಬುವವರು, ವಂಶಿಕಾ ಆನಂದ್‌ ಹೆಸರನ್ನು ಮುಂದಿಟ್ಟುಕೊಂಡು, ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡಿದ್ದಾರೆ. ಈ ವಿಚಾರ ವಂಶಿಕಾ ತಾಯಿ ಯಶಸ್ವಿನಿ ಗಮನಕ್ಕೂ ಬಂದಿದೆ. ಕೂಡಲೇ ವಂಚನೆಗೊಳಗಾದ ಪೋಷಕರ ಜತೆ ತೆರಳಿ ಸದಾಶಿವನಗರ ಠಾಣೆಯಲ್ಲಿ ದೂರು ನೀಡಿದ್ದರು.

40 ಲಕ್ಷ ಹಣ ವಂಚನೆ

ಬೇಬಿ ಕಾಂಟೆಸ್ಟ್‌, ರಿಯಾಲಿಟಿ ಶೋ, ಧಾರಾವಾಹಿಗಳ ಆಡಿಷನ್‌ ಈ ಎಲ್ಲವನ್ನೂ ಯಶಸ್ವಿನಿ ಆನಂದ್‌ ಮತ್ತು ತಂಡ ಕಳೆದ ಆರು ತಿಂಗಳಿಂದ ನಿಲ್ಲಿಸಿದೆ. ಹೀಗಿರುವಾಗಲೇ ವಂಶಿಕಾ ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ನಿತ್ಯ ಹಣ ಪಡೆದವರು ಮೆಸೆಜ್‌ ಮಾಡುತ್ತಿದ್ದಾರೆ. ಹೀಗೆ ಮೆಸೆಜ್‌ ಮಾಡಿದವರನ್ನೆಲ್ಲ ನಿಶಾ ನರಸಪ್ಪ ಬ್ಲಾಕ್‌ ಮಾಡುತ್ತಲೇ ಬಂದಿದ್ದಾರೆ. ಹೀಗಿರುವಾಗಲೇ ಪೋಷಕರಿಂದ ಯಶಸ್ವಿನಿಗೆ ಈ ವಿಚಾರ ಗೊತ್ತಾಗಿದೆ. ಅದಾದ ಮೇಲೆ ಎಷ್ಟು ಮೊತ್ತ ಎಂದು ವಿಚಾರಿಸಿದಾಗ ಬರೋಬ್ಬರಿ 40 ಲಕ್ಷ ಎಂಬುದು ಗೊತ್ತಾಗಿದೆ.

ಇನ್‌ಸ್ಟಾದಲ್ಲಿ ಮನವಿ ಮಾಡಿದ ಯಶಸ್ವಿನಿ

ಇನ್ನು ಈ ಪ್ರಕರಣದ ಬಗ್ಗೆ ವಂಶಿಕಾ ಇನ್‌ಸ್ಟಾಗ್ರಾಂ ಖಾತೆಯಿಂದಲೇ ಲೈವ್‌ ಬಂದ ಯಶಸ್ವಿನಿ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಎನ್‌ಎನ್‌ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ನಿಶಾ ನರಸಪ್ಪ ಎಂಬುವವರು ನಡೆಸುತ್ತಿದ್ದರು. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಂಶಿಕಾ ವಿನ್ನರ್‌ ಆದ ಬಳಿಕ ನಿಶಾ ನರಸಪ್ಪ ಎಂಬುವವರು ಇನ್ಸ್ಟಾಗ್ರಾಮ್ ಮುಖಾಂತರ ಪರಿಚಯಗೊಂಡರು. ಹೀಗಿರುವಾಗ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಎನ್‌ಎನ್‌ ಪ್ರೊಡಕ್ಷನ್ಸ್‌ ಜತೆ ನಾವೂ ನಿಂತು, ಮಕ್ಕಳ ಪ್ರೋತ್ಸಾಹಿಸುವ ಅವರ ಕೆಲಸಕ್ಕೆ ಸಾಥ್‌ ನೀಡಿದ್ವಿ.

6 ತಿಂಗಳಿಂದ ಪ್ರಮೋಷನ್‌ ಮಾಡಿಲ್ಲ

4 ತಿಂಗಳು ಪ್ರಮೋಷನ್ ಮಾಡಿದ್ವಿ. ಆಮೇಲೆ ನಮಗೆ ಇನ್ಸ್ಟಾಗ್ರಾಮ್‌ದಿಂದ ಮೆಸೇಜ್ ಬರಲು ಶುರುವಾಯಿತು. ನೀವು ಪ್ರಮೋಟ್ ಮಾಡಿದ್ರಿ. ನಾವೆಲ್ಲಾ ಅವರಿಗೆ ಹಣ ನೀಡಿದ್ದೇವೆ ಎಂಬ ಮೆಸೇಜ್ ಬರಲಾರಂಭಿಸಿತು. ಜನರ ದುಡ್ಡಿನಲ್ಲಿ ಮೋಸ ಆಗುತ್ತಿದೆ ಎಂಬುದು ನಮಗೆ ತಿಳಿದುಬಂತು. ಹಣ ಪಡೆದ ಮೇಲೆ ಆಕೆ ರಿಪ್ಲೈ ಮಾಡದೇ ಇರುವುದು, ನಂಬರ್ ಬ್ಲಾಕ್ ಮಾಡುತ್ತಿರುವುದೂ ಗೊತ್ತಾಯಿತು. ಅದು ನನಗೆ ಗೊತ್ತಾದಾಗ, ನೇರವಾಗಿ ನಿಶಾ ನರಸಪ್ಪ ಅವರ ಬಳಿ ನಾವು ಮಾತನಾಡಿ, ಸಮಸ್ಯೆ ಪರಿಹಾರ ಮಾಡಿಕೊಳ್ಳಿ. ಅಲ್ಲಿಯವರೆಗೂ ನಾವು ಪ್ರಮೋಷನ್ ಮಾಡಲ್ಲ ಎಂದು ಹೇಳಿದ್ವಿ. ಅಂದಿನಿಂದ ಈವರೆಗೂ ಅಂದರೆ 6 ತಿಂಗಳು ನಾವು ಯಾವುದೇ ಪ್ರಮೋಷನ್‌ ಮಾಡಿಲ್ಲ ಎಂದಿದ್ದಾರೆ ಯಶಸ್ವಿನಿ.

Whats_app_banner