Kannada Serial TRP: ಸೀರಿಯಲ್‌ಗಳ ವಾರದ ಟಿಆರ್‌ಪಿ ಲೆಕ್ಕಾಚಾರ; ಹೀಗಿವೆ ಕನ್ನಡ ಕಿರುತೆರೆಯ ಟಾಪ್‌ 5 ಧಾರಾವಾಹಿಗಳು
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಸೀರಿಯಲ್‌ಗಳ ವಾರದ ಟಿಆರ್‌ಪಿ ಲೆಕ್ಕಾಚಾರ; ಹೀಗಿವೆ ಕನ್ನಡ ಕಿರುತೆರೆಯ ಟಾಪ್‌ 5 ಧಾರಾವಾಹಿಗಳು

Kannada Serial TRP: ಸೀರಿಯಲ್‌ಗಳ ವಾರದ ಟಿಆರ್‌ಪಿ ಲೆಕ್ಕಾಚಾರ; ಹೀಗಿವೆ ಕನ್ನಡ ಕಿರುತೆರೆಯ ಟಾಪ್‌ 5 ಧಾರಾವಾಹಿಗಳು

ಕಿರುತೆರೆಯ ವೀಕ್ಷಕರಿಗೆ ಭರಪೂರ್‌ ಮನರಂಜನೆ ನೀಡುತ್ತಿವೆ ಹತ್ತಾರು ಧಾರಾವಾಹಿಗಳು. ಇದೀಗ ಆ ಧಾರಾವಾಹಿಗಳ ಸ್ಥಿತಿಗತಿ ತಿಳಿದುಕೊಳ್ಳುವ ವಾರದ ಟಿಆರ್‌ಪಿ ಹೊರಬಿದ್ದಿದೆ. ಅವುಗಳಲ್ಲಿ ಟಾಪ್‌ 5 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ.

Kannada Serial TRP: ಸೀರಿಯಲ್‌ಗಳ ವಾರದ ಟಿಆರ್‌ಪಿ ಲೆಕ್ಕಾಚಾರ; ಹೀಗಿವೆ ಕನ್ನಡ ಕಿರುತೆರೆಯ ಟಾಪ್‌ 5 ಧಾರಾವಾಹಿಗಳು
Kannada Serial TRP: ಸೀರಿಯಲ್‌ಗಳ ವಾರದ ಟಿಆರ್‌ಪಿ ಲೆಕ್ಕಾಚಾರ; ಹೀಗಿವೆ ಕನ್ನಡ ಕಿರುತೆರೆಯ ಟಾಪ್‌ 5 ಧಾರಾವಾಹಿಗಳು

Kannada Serial TRP: ಕಿರುತೆರೆಯ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿರುವ ಧಾರಾವಾಹಿಗಳು, ತಮ್ಮ ನೋಡುಗ ವರ್ಗಕ್ಕೆ ಹೊಸದೇನನ್ನೋ ನೀಡುವ ತುಡಿತದಲ್ಲಿವೆ. ಅದ್ಧೂರಿತನದಿಂದಲೋ, ಆಕರ್ಷಕ ಕಥೆ, ಮೇಕಿಂಗ್‌ನಿಂದಲೋ ನೋಡುಗರನ್ನು ಸೆಳೆಯುತ್ತಿವೆ. ಅದರಂತೆ, ಕನ್ನಡ ಕಿರುತೆರೆಯಲ್ಲಿ ಅಂತಹ ಒಂದಷ್ಟು ಬದಲಾವಣೆಗಳು, ಬೆಳವಣಿಗೆಗಳು ನಡೆಯುತ್ತಿವೆ.

ಇದೀಗ ಆ ಪೈಕಿ ಈ ವಾರವೂ ಟಿಆರ್‌ಪಿಯ ಅಂಕಿ ಅಂಶಗಳಲ್ಲಿ ಒಂದಷ್ಟು ಬದಲಾವಣೆಗಳಾದರೂ, ಈ ಹಿಂದಿದ್ದ ಸ್ಥಾನಗಳನ್ನೇ ಭದ್ರಪಡಿಸಿಕೊಂಡಿವೆ ಧಾರಾವಾಹಿಗಳು. ಹಾಗಾದರೆ, ಯಾವೆಲ್ಲ ಸೀರಿಯಲ್‌ಗಳು ಯಾವ ಸ್ಥಾನದಲ್ಲಿವೆ. ನೋಡುಗ ವರ್ಗ ಯಾವ ಧಾರಾವಾಹಿಗೆ ಮನಸೋತಿದೆ. ಇಲ್ಲಿದೆ ಒಂದಷ್ಟು ಮಾಹಿತಿ.

ಪುಟ್ಟಕ್ಕನ ಮಕ್ಕಳು

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಕಳೆದ ಕೆಲವು ತಿಂಗಳುಗಳಿಂದ ಮೊದಲ ಸ್ಥಾನದಲ್ಲಿ ಭದ್ರವಾಗಿ ತಳವೂರಿದೆ. ಅದ್ಯಾವ ಮಟ್ಟಿಗೆ ಎಂದರೆ, ಬೇರಾವ ಸೀರಿಯಲ್‌ಗಳ ಪೈಪೋಟಿಗೂ ಇದು ನಿಲುಕುತ್ತಿಲ್ಲ. ‌ಸದ್ಯ ಈ ಸೀರಿಯಲ್‌ ನಗರ ಪ್ರದಶದಲ್ಲಿ 9.2 ಟಿಆರ್‌ಪಿ ಹೊಂದಿದ್ದರೆ, ನಗರ ಮತ್ತು ಗ್ರಾಮೀಣ ಪ್ರದೇಶದ ಲೆಕ್ಕಾಚಾರದಲ್ಲಿ 11.5 ಟಿಆರ್‌ಪಿ ಗಿಟ್ಟಿಸಿಕೊಂಡಿದೆ.

ಸೀತಾ ರಾಮ

ದಿನದಿಂದ ದಿನಕ್ಕೆ ನೋಡುಗ ವರ್ಗವನ್ನು ಹೆಚ್ಚು ಮಾಡಿಕೊಳ್ಳುತ್ತಿರುವ ಜೀ ಕನ್ನಡದ ಮತ್ತೊಂದು ಧಾರಾವಾಹಿ ಎಂದರೆ ಅದು ಸೀತಾ ರಾಮ. ಭಾರ್ಗವಿಯ ಮೋಸದಾಟಕ್ಕೆ ಸೀತಾಳ ಅಡ್ವಾನ್ಸ್‌ ಸ್ಯಾಲರಿ ಕೈ ತಪ್ಪಿದೆ. ಇತ್ತ ಸಂಕಷ್ಟಕ್ಕೆ ಸಿಲುಕಿರುವ ಸೀತಾಗೆ ರಾಮನ ಮುಂದಿನ ನಡೆ ಏನೆಂಬುದು ಸದ್ಯದ ಕುತೂಹಲ ಮೂಡಿಸಿದೆ. ಈ ಸೀರಿಯಲ್‌ ಸದ್ಯ ಟಾಪ್‌ ಎರಡಲ್ಲಿದೆ. ಈ ಸೀರಿಯಲ್‌ ನಗರ ಪ್ರದಶದಲ್ಲಿ 8.3 ಟಿಆರ್‌ಪಿ ಹೊಂದಿದ್ದರೆ, ನಗರ ಮತ್ತು ಗ್ರಾಮೀಣ ಪ್ರದೇಶದ ಲೆಕ್ಕಾಚಾರದಲ್ಲಿಯೂ 8.3 ಟಿಆರ್‌ಪಿ ಪಡೆದುಕೊಂಡಿದೆ.

ಗಟ್ಟಿಮೇಳ

ಜೀ ಕನ್ನಡದ ಮತ್ತೊಂದು ಧಾರಾವಾಹಿ ಗಟ್ಟಿಮೇಳ ಕಳೆದ ಕೆಲವು ತಿಂಗಳ ಹಿಂದೆ ಎರಡನೇ ಸ್ಥಾನದಲ್ಲಿ ಗಟ್ಟಿಯಾಗಿ ನೆಲಕ್ಕೂರಿತ್ತು. ಸೀತಾ ರಾಮ ಸೀರಿಯಲ್‌ ಪ್ರಸಾರ ಆರಂಭವಾದ ಬಳಿಕ ನಿಧಾನಕ್ಕೆ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿಯಿತು. ಇದೀಗ ಅಲ್ಲಿಯೇ ಯಥಾಸ್ಥಿತಿ ಕಾಯ್ದುಕೊಂಡಿದೆ ಗಟ್ಟಿಮೇಳ. ನಗರ ಮತ್ತು ಗ್ರಾಮೀಣ ಎರಡೂ ಕಡೆಗಳಲ್ಲಿ ಸೀತಾ ರಾಮ ಸೀರಿಯಲ್‌ಗಿಂತಲೂ ಗಟ್ಟಿಮೇಳ ಮುಂದಿದೆ. ಇಲ್ಲಿ 8.7 ಟಿಆರ್‌ಪಿ ಪಡೆದರೆ, ಕೇವಲ ನಗರದಲ್ಲಿ 7.2 ಟಿಆರ್‌ಪಿ ಈ ಸೀರಿಯಲ್‌ಗೆ ದಕ್ಕಿದೆ.

ಅಮೃತಧಾರೆ

ಮೇಕಿಂಗ್‌ ಮತ್ತು ಕಥೆಯ ಮೂಲಕ ನೋಡುಗರನ್ನು ಸೆಳೆದಿರುವ ಧಾರಾವಾಹಿ ಅಮೃತಧಾರೆ. ಈ ಸೀರಿಯಲ್‌ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿಯೇ ಇತ್ತು. ಇದರ ಜತೆಗೆ ಸತ್ಯ ಸೀರಿಯಲ್‌ ಸಹ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ಇದೀಗ ಸತ್ಯ ಧಾರಾವಾಹಿ ಹಿಂದಿಕ್ಕಿ, ನಾಲ್ಕನೇ ಸ್ಥಾನದಲ್ಲಿ ನಿಂತಿದೆ ಅಮೃತಧಾರೆ. ಸದ್ಯ ಈ ಸೀರಿಯಲ್‌ ನಗರ ಪ್ರದಶದಲ್ಲಿ 6.9 ಟಿಆರ್‌ಪಿ ಹೊಂದಿದ್ದರೆ, ನಗರ ಮತ್ತು ಗ್ರಾಮೀಣ ಪ್ರದೇಶದ ಲೆಕ್ಕಾಚಾರದಲ್ಲಿ 8.4 ಟಿಆರ್‌ಪಿ ಪಡೆದುಕೊಂಡಿದೆ.

ಸತ್ಯ

ಸತ್ಯ ಧಾರಾವಾಹಿ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿತ್ತು. ಈ ವಾರ ಐದನೇ ಸ್ಥಾನದಲ್ಲಿದೆ. ಸದ್ಯ ಈ ಸೀರಿಯಲ್‌ ನಗರ ಪ್ರದಶದಲ್ಲಿ 6.8 ಟಿಆರ್‌ಪಿ ಹೊಂದಿದ್ದರೆ, ನಗರ ಮತ್ತು ಗ್ರಾಮೀಣ ಪ್ರದೇಶದ ಲೆಕ್ಕಾಚಾರದಲ್ಲಿ 7.3 ಟಿಆರ್‌ಪಿ ಪಡೆದುಕೊಂಡು ಐದನೇ ಸ್ಥಾನದಲ್ಲಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈ ವಾರ ಟಾಪ್‌ ಐದರಿಂದ ಹಿಂದೆ ಸರಿದಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner