ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ; ಫ್ಯಾನ್ಸ್‌ ಜೊತೆ ಖುಷಿ ಹಂಚಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ ಕುಮಾರ್‌ ಕವಿತಾ ಗೌಡ ದಂಪತಿ-kannada television news lakshmi baramma fame chandan kumar kavitha gowda shared happy news with fans rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ; ಫ್ಯಾನ್ಸ್‌ ಜೊತೆ ಖುಷಿ ಹಂಚಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ ಕುಮಾರ್‌ ಕವಿತಾ ಗೌಡ ದಂಪತಿ

ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ; ಫ್ಯಾನ್ಸ್‌ ಜೊತೆ ಖುಷಿ ಹಂಚಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ ಕುಮಾರ್‌ ಕವಿತಾ ಗೌಡ ದಂಪತಿ

2021 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕವಿತಾ ಗೌಡ- ಚಂದನ್‌ ಕುಮಾರ್‌ ದಂಪತಿ ಈಗ ಪೋಷಕರಾಗಿದ್ದಾರೆ. ಸೆಪ್ಟೆಂಬರ್‌ 18 ರಂದು ಕವಿತಾ ಗೌಡ, ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಚಂದನ್‌, ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ; ಫ್ಯಾನ್ಸ್‌ ಜೊತೆ ಖುಷಿ ಹಂಚಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ ಕುಮಾರ್‌ ಕವಿತಾ ಗೌಡ ದಂಪತಿ
ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ; ಫ್ಯಾನ್ಸ್‌ ಜೊತೆ ಖುಷಿ ಹಂಚಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ ಕುಮಾರ್‌ ಕವಿತಾ ಗೌಡ ದಂಪತಿ

ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕವಿತಾ ಹಾಗೂ ಚಂದನ್‌ ಗೌಡ ದಂಪತಿ ಅಪ್ಪ-ಅಮ್ಮನಾಗಿ ಪ್ರಮೋಷನ್‌ ಪಡೆದಿದ್ದಾರೆ. ಇತ್ತೀಚೆಗೆ ಕವಿತಾ ಗೌಡ, ಸೀಮಂತ ಆಚರಿಸಿಕೊಂಡಿದ್ದರು. ಆ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬುಧವಾರ ಕವಿತಾ, ಮಗುವಿಗೆ ಜನ್ಮ ನೀಡಿದ್ದಾರೆ.

ಫ್ಯಾನ್ಸ್‌ ಜೊತೆ ಖುಷಿ ಹಂಚಿಕೊಂಡ ಚಂದನ್‌ ಕುಮಾರ್

ಕವಿತಾ ಗೌಡ ನಿನ್ನೆ ಖಾಸಗಿ ನರ್ಸಿಂಗ್‌ ಹೋಂಗೆ ಅಡ್ಮಿಟ್‌ ಆಗಿದ್ದರು. ಡೆಲಿವರಿಗೂ ಮುನ್ನ ಅವರು ಆಪರೇಷನ್‌ ಥಿಯೇಟರ್‌ಗೆ ಹೋಗುತ್ತಿರುವ ವಿಡಿಯೋ ಕೂಡಾ ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆಗಲೂ ಅಭಿಮಾನಿಗಳು ಕವಿತಾಗೆ ಧೈರ್ಯ ಹೇಳಿ ವಿಶ್‌ ಮಾಡಿದ್ದರು. ನಿನ್ನೆ ಸಂಜೆ ಕವಿತಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಚಂದನ್‌ ಗೌಡ ತಿಳಿಸಿದ್ದಾರೆ. ಜೊತೆಗೆ ಮಗು ಆಗಿರುವ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಪಾದವನ್ನು ಕೈಯಲ್ಲಿ ಹಿಡಿದಿರುವ ವಿಡಿಯೋ ಹಂಚಿಕೊಂಡಿರುವ ಚಂದನ್‌, ನಮ್ಮ ಮುದ್ದು ಕಂದಮ್ಮ ಧರೆಗೆ ಇಳಿದಿದ್ದಾನೆ ಎಂದು ಬರೆದುಕೊಂಡಿದ್ದಾರೆ.‌

ದಂಪತಿಗೆ ಶುಭ ಕೋರಿದ ಕಿರುತೆರೆ ಕಲಾವಿದರು, ಅಭಿಮಾನಿಗಳು

ತಮ್ಮಿಬ್ಬರಿಗೂ ಶುಭ ಹಾರೈಸಿದ ಅಭಿಮಾನಿಗಳಿಗೆ ಕೂಡಾ ಚಂದನ್‌ ಥ್ಯಾಂಕ್ಸ್‌ ಹೇಳಿದ್ದಾರೆ. ಎಲ್ಲರಿಗೂ ಹೃದಯಪೂರ್ವಕವಾದ ಧನ್ಯವಾದಗಳು ಎಂದು ಚಂದನ್‌ ಬರೆದುಕೊಂಡಿದ್ದಾರೆ. ಕವಿತಾ ಹಾಗೂ ಚಂದನ್‌ಗೆ ಚಿತ್ರರಂಗ, ಕಿರುತೆರೆ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸುಜಾತಾ ಅಕ್ಷಯ್‌, ನಾಗಿಣಿ ಖ್ಯಾತಿಯ ನಮ್ರತಾ, ನಟಿ-ನಿರೂಪಕಿ ಅನುಪಮಾ ಗೌಡ, ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಹಾಗೂ ಇನ್ನಿತರರು ದಂಪತಿಗೆ ಕಂಗ್ರಾಜುಲೇಷನ್ಸ್‌ ಹೇಳಿದ್ದಾರೆ. ಇಂದು ಡಾ. ವಿಷ್ಣುವರ್ಧನ್‌, ಉಪೇಂದ್ರ, ಶ್ರುತಿ ಹುಟ್ಟಿದ ದಿನ. ನಿಮ್ಮ ಮಗು ಕೂಡಾ ಅವರಂತೇ ದೊಡ್ಡ ಹೆಸರು ಮಾಡಲು ಎಂದು ಹಾರೈಸಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದ ಜೋಡಿ

2013ರಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕವಿತಾ ಗೌಡ ಹಾಗೂ ಚಂದನ್‌ ಒಟ್ಟಿಗೆ ನಟಿಸಿದ್ದರು. ಆಕಸ್ಮಿಕವಾಗಿ ಯುವತಿಯೊಬ್ಬಳಿಗೆ ತಾಳಿ ಕಟ್ಟುವ ನಾಯಕ ಚಂದು, ನಂತರ ತಾನು ಪ್ರೀತಿಸಿದ ಗೊಂಬೆಯನ್ನು ಮದುವೆ ಆಗುತ್ತಾನೆ. ವಿಧಿ, ಮೊದಲು ತಾಳಿ ಕಟ್ಟಿದ ಹುಡುಗಿ ತನ್ನ ಮನೆಗೆ ಬರುವಂತೆ ಮಾಡುತ್ತದೆ. ಆಗ ನಾಯಕ ಎಷ್ಟು ಹಿಂಸೆ ಅನುಭವಿಸುತ್ತಾನೆ. ಲಕ್ಷ್ಮೀಯನ್ನು ಚಂದು ಮದುವೆ ಅಗಿದ್ದಾನೆ ಎಂದು ತಿಳಿದ ನಂತರ ಗೊಂಬೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಅನ್ನೋದು ಧಾರಾವಾಹಿಯ ಕಥೆಯಾಗಿತ್ತು. ಈ ಸೀರಿಯಲ್‌ಗೆ ಹೆಚ್ಚು ವೀಕ್ಷಕರಿದ್ದರು.

2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕವಿತಾ-ಚಂದನ್‌

ಈ ಧಾರಾವಾಹಿ ಮುಗಿದ ನಂತರ ಕವಿತಾ ಹಾಗೂ ಚಂದನ್‌ ತಾವು ಜೊತೆಗಿರುವ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಆರಂಭದಲ್ಲಿ ಇದು ಸ್ನೇಹ ಎಂದೇ ಎಲ್ಲರೂ ತಿಳಿದಿದ್ದರು. ಆದರೆ ನಂತರ ಈ ಜೋಡಿ ತಾವಿಬ್ಬರೂ ಮದುವೆ ಆಗುತ್ತಿರುವುದಾಗಿ ಅನೌನ್ಸ್‌ ಮಾಡಿದ್ದರು. 2021ರಲ್ಲಿ ಚಂದನ್‌-ಕವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟನೆ ಜೊತೆ ಜೊತೆಗೆ ಇಬ್ಬರೂ ಹೋಟೆಲ್‌ ಬುಸ್ನೆಸ್‌ ಆರಂಭಿಸಿ ಸಕ್ಸಸ್‌ ಆಗಿದ್ದಾರೆ.

mysore-dasara_Entry_Point