ವರುಣ್‌ ಆರಾಧ್ಯ, ಒಲವಿನ ನಿಲ್ದಾಣ ಸೀರಿಯಲ್‌ ನಟ ಅಕ್ಷಯ್‌ ನಾಯಕ್‌ ಸೇರಿದಂತೆ ಬಿಗ್‌ ಬಾಸ್‌ 11ರ ಸಂಭಾವ್ಯ ಸ್ಪರ್ಧಿಗಳು ಇವರೇನಾ?-kannada television news bigg boss kannada season 11 contestants including serial actor varun aradhya rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ವರುಣ್‌ ಆರಾಧ್ಯ, ಒಲವಿನ ನಿಲ್ದಾಣ ಸೀರಿಯಲ್‌ ನಟ ಅಕ್ಷಯ್‌ ನಾಯಕ್‌ ಸೇರಿದಂತೆ ಬಿಗ್‌ ಬಾಸ್‌ 11ರ ಸಂಭಾವ್ಯ ಸ್ಪರ್ಧಿಗಳು ಇವರೇನಾ?

ವರುಣ್‌ ಆರಾಧ್ಯ, ಒಲವಿನ ನಿಲ್ದಾಣ ಸೀರಿಯಲ್‌ ನಟ ಅಕ್ಷಯ್‌ ನಾಯಕ್‌ ಸೇರಿದಂತೆ ಬಿಗ್‌ ಬಾಸ್‌ 11ರ ಸಂಭಾವ್ಯ ಸ್ಪರ್ಧಿಗಳು ಇವರೇನಾ?

ಈ ಬಾರಿ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆ ಮಾಡೋದು ಫೈನಲ್‌ ಆಗಿದೆ. ಈಗಾಗಲೇ ಸಂಭಾವ್ಯ ಸ್ಪರ್ಧಿಗಳ ಹೆಸರು ಕೂಡಾ ಕೇಳಿ ಬಂದಿದೆ. ಇವರ ಜೊತೆಗೆ ಹೊಸದಾಗಿ ಬೃಂದಾವನ ಸೀರಿಯಲ್‌ ನಟ ವರುಣ್‌ ಆರಾಧ್ಯ, ನಾಯಕಿ ಅಮೂಲ್ಯ ಭಾರಧ್ವಾಜ್‌, ಒಲವಿನ ನಿಲ್ದಾಣ ಧಾರಾವಾಹಿಯ ಆಕಾಶ್‌ ನಾಯಕ್‌ ಹೆಸರು ಕೂಡಾ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಸೇರಿದೆ.

ವರುಣ್‌ ಆರಾಧ್ಯ, ಒಲವಿನ ನಿಲ್ದಾಣ ಸೀರಿಯಲ್‌ ನಟ ಅಕ್ಷಯ್‌ ನಾಯಕ್‌ ಸೇರಿಂದತೆ ಬಿಗ್‌ ಬಾಸ್‌ 11ರ ಸಂಭಾವ್ಯ ಸ್ಪರ್ಧಿಗಳು ಇವರೇನಾ?
ವರುಣ್‌ ಆರಾಧ್ಯ, ಒಲವಿನ ನಿಲ್ದಾಣ ಸೀರಿಯಲ್‌ ನಟ ಅಕ್ಷಯ್‌ ನಾಯಕ್‌ ಸೇರಿಂದತೆ ಬಿಗ್‌ ಬಾಸ್‌ 11ರ ಸಂಭಾವ್ಯ ಸ್ಪರ್ಧಿಗಳು ಇವರೇನಾ? (PC: Instagram)

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಸೆಪ್ಟೆಂಬರ್‌ 29 ರಿಂದ ಸೀಸನ್‌ 11ರ ಆರಂಭಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಎಂದಿನಂತೆ ಈ ಬಾರಿ ಕೂಡಾ ಈ ಸೀಸನ್‌ನಲ್ಲಿ ಯಾರೆಲ್ಲ ದೊಡ್ಮನೆಯೊಳಗೆ ಹೋಗಬಹುದು ಎಂಬ ಚರ್ಚೆ ನಡೆಯುತ್ತಿದೆ.

ಬೃಂದಾವನ ಧಾರಾವಾಹಿಯ ಇಬ್ಬರು ಕಲಾವಿದರು ಬಿಗ್‌ ಬಾಸ್‌ಗೆ?

ನಟಿ ಪ್ರೇಮಾ, ಅದ್ವಿತಿ ಶೆಟ್ಟಿ , ಅಶ್ವಿತಿ ಶೆಟ್ಟಿ , ಪತ್ರಕರ್ತರಾದ ಜಯಪ್ರಕಾಶ್‌ ಶೆಟ್ಟಿ, ಅಜಿತ್‌ ಹನುಮಕ್ಕನವರ್‌, ಹರೀಶ್‌ ನಾಗರಾಜು ಸೇರಿದಂತೆ ಅನೇಕ ಹೆಸರುಗಳು ಕೇಳಿ ಬರುತ್ತಿದೆ. ಈಗ ಮತ್ತೆ ಹೊಸ ಹೆಸರುಗಳು ಕೇಳಿಬರುತ್ತಿದೆ. ಗಿಚ್ಚಿ ಗಿಲಿಗಿಲಿ 3 ವಿನ್ನರ್ ಹುಲಿ ಕಾರ್ತಿಕ್, ಈ ಬಾರಿ ದೊಡ್ಮನೆಯೊಳಗೆ ಹೋಗೋದು ಪಕ್ಕಾ ಎನ್ನಲಾಗುತ್ತಿದೆ. ಜೊತೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಯ ಇಬ್ಬರು ಕಲಾವಿದರು ಈ ಬಾರಿ ಬಿಗ್‌ ಬಾಸ್‌ಗೆ ಬರಬಹುದು ಎನ್ನಲಾಗುತ್ತಿದೆ. ನಾಯಕಿ ಅಮೂಲ್ಯ ಭಾರಧ್ವಾಜ್‌ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದರು. ಆದರೆ ರಿಯಲ್‌ ಲೈಫ್‌ನಲ್ಲಿ ಅಮೂಲ್ಯ ಮಾಡ್ರನ್‌ ಹುಡುಗಿ. ಫೋಟೋಗಳ ಮೂಲಕವೇ ಅಮೂಲ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ.

ವಿವಾದಕ್ಕೆ ಸಿಲುಕಿದ್ದ ವರುಣ್‌ ಆರಾಧ್ಯ

ಇನ್ನು ನಟ ವರುಣ್‌ ಆರಾಧ್ಯ ಕೂಡಾ ಸ್ಪರ್ಧಿಯಾಗಿ ಹೋಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ವರುಣ್‌ ಆರಾಧ್ಯ, ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಮಾಜಿ ಪ್ರೇಯಸಿ ವರ್ಷಾ ಕಾವೇರಿಗೆ ವರುಣ್‌ ಆರಾಧ್ಯ ಮಾಡಿದ್ದಾರೆ ಎನ್ನಲಾದ ವಾಟ್ಸಾಪ್‌ ಚಾಟ್‌ ವೈರಲ್‌ ಆಗಿತ್ತು. ಬಹುಶ: ವಿವಾದಕ್ಕೆ ಒಳಗಾಗಿರುವ ವರುಣ್‌ ಕೂಡಾ ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡಬಹುದು ಎಂಬ ಗುಸು ಗುಸು ಕೇಳಿಬರುತ್ತಿದೆ. ಇದರ ಜೊತೆಗೆ ಗೀತಾ ಧಾರಾವಾಹಿಯ ಭವ್ಯಾ ಗೌಡ, ಒಲವಿನ ನಿಲ್ದಾಣ ಧಾರಾವಾಹಿಯ ಅಕ್ಷಯ್‌ ನಾಯಕ್‌ ಹೆಸರು ಕೂಡಾ ಕೇಳಿ ಬರುತ್ತಿದೆ. ಜೊತೆಗೆ ತುಕಾಲಿ ಸಂತು ಪತ್ನಿ ಮಾನಸಾ, ಗಾಯಕಿ ಐಶ್ವರ್ಯ ರಂಗರಾಜನ್‌ ಕೂಡಾ ಈ ಬಾರಿಯ ಸ್ಪರ್ಧಿಗಳು ಎಂಬ ಸುದ್ದಿ ಹರಿದಾಡುತ್ತಿದೆ.

ಕಿಚ್ಚ ನಿರೂಪಣೆ ಮಾಡೋದು ಕನ್ಫರ್ಮ್‌

ಬಿಗ್‌ ಬಾಸ್‌ ಕಾರ್ಯಕ್ರಮದ ಯಶಸ್ಸಿನಲ್ಲಿ ವೀಕ್ಷಕರ ಆಶೀರ್ವಾದದ ಜೊತೆಗೆ ಕಿಚ್ಚನ ನಿರೂಪಣೆಯೂ ಸೇರಿದೆ. ಈ ಬಾರಿ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆ ಮಾಡುತ್ತಿಲ್ಲ ಎಂಬ ಸುದ್ದಿ ಹಬ್ಬಿತ್ತು. ತಮಿಳು, ತೆಲುಗು, ಹಿಂದಿಯಲ್ಲಿ ಬಿಗ್‌ ಬಾಸ್‌ ನಿರೂಪಕರು ಬದಲಾಗಿದ್ದಾರೆ. ಅದೇ ರೀತಿ ಕನ್ನಡದಲ್ಲೂ ಆಂಕರ್‌ ಬದಲಾಗಲಿದ್ದಾರೆ. ಸುದೀಪ್‌ ಬದಲಿಗೆ ರಿಷಬ್‌ ಶೆಟ್ಟಿ, ರಮೇಶ್‌ ಅರವಿಂದ್‌ ಅಥವಾ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಿರೂಪಣೆ ಮಾಡಬಹುದು ಎನ್ನಲಾಗಿತ್ತು. ಆದರೆ ವಾಹಿನಿ ಸುದೀಪ್‌ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಈ ಬಾರಿಯೂ ಸುದೀಪ್‌, ನಿರೂಪಣೆ ಮಾಡಲಿದ್ದಾರೆ ಎಂದು ಖಚಿತಪಡಿಸಿದೆ. ಅಂತೆ ಕಂತೆಗಳ ನಡುವೆ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಹೋಗಲಿದ್ದಾರೆ ಅನ್ನೋದು ಇನ್ನು 10 ದಿನಗಳಲ್ಲಿ ತಿಳಿಯಲಿದೆ.

mysore-dasara_Entry_Point