Seetha Rama: ಸೀತೆಯ ಬೆಂಬಲಕ್ಕೆ ನಿಲ್ಲುತ್ತಿರೋ ರಾಮನ ಬೆನ್ನಿಗೆ ಚೂರಿ ಹಾಕೋಕೆ ಹೊರಟಿದ್ದಾಳೆ ಭಾರ್ಗವಿ
ಮ್ಯಾನೇಜರ್ ಚರಣ್ ಪಾತ್ರಧಾರಿ, ಭಾರ್ಗವಿ ಅವರು ಸೂತ್ರಧಾರಿನಾ? ಏನೋ ನಡೆಯುತ್ತಿದೆಯಲ್ಲ? ಎಂದು ಮನದಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಾನೆ ಅಶೋಕ. ತಡವಾಗಿ ಮನೆಗೆ ಬಂದ ರಾಮನನ್ನು ಕಂಡ ಭಾರ್ಗವಿ, ಕೋಪಿಸಿಕೊಂಡಿದ್ದಾಳೆ. ನನ್ನ ಹಿಡಿತದಲ್ಲಿ ಇದೆ ಎಂದುಕೊಂಡೆ, ಅದನ್ನು ಸುಳ್ಳು ಮಾಡಿಬಿಟ್ಟೆ ಎಂದು ನಿಗಿ ನಿಗಿ ಕೆಂಡವಾಗಿದ್ದಾಳೆ.
Seetha Rama: ಶಾಂತಮ್ಮನ ವಠಾರದಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಡಗರ ಜೋರಾಗಿದೆ. ರಾಮನನ್ನು ತಂದು ಸೀತಾ ಮನೆಗೆ ಬಿಟ್ಟಿದ್ದಾನೆ ಅಶೋಕ. ಇತ್ತ ಅಶೋಕನಿಗೆ ಪ್ರಿಯಾ ಎದುರಾಗಿದ್ದಾಳೆ. ಇಲ್ಲೇನು ನೀವು, ಆವಾಗಾವಾಗ ಬರ್ತಿರ್ತಿರಾ ಎಂದು ಪ್ರಶ್ನೆ ಮಾಡುತ್ತಿದ್ದಾಳೆ. ಇಬ್ಬರ ನಡುವೆ ಒಂದಷ್ಟು ಹಾಸ್ಯಮಯ ಮಾತುಕತೆ ನಡೆದಿದೆ.
ರಾಮನ ಕನವರಿಕೆಯಲ್ಲಿಯೇ ಸಿಹಿ ಡಾನ್ಸ್ ಶೋ ಮುಗಿಸಿ ಸುಸ್ತಾಗಿ ಮಲಗಿದ್ದಾಳೆ. ಫ್ರೆಂಡ್ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ರಾಮ ಓಡೋಡಿ ಬಂದಿದ್ದಾನೆ. ಮುದ್ದು ಸಿಹಿಯನ್ನು ಕಣ್ತುಂಬಿಕೊಂಡು, ಆಕೆಯ ಕೃಷ್ಣನ ಅವತಾರ ಕಂಡು ಮೆಚ್ಚಿಕೊಂಡಿದ್ದಾನೆ. ಇದೇ ವೇಳೆ ಸಿಹಿಯನ್ನು ಎಷ್ಟು ಬೇಕೋ ಅಷ್ಟು ನೋಡಿಕೊಂಡು ಬಿಡಿ, ಬೆಳಗ್ಗೆ ಈ ಮನೆ ನಮ್ಮದಾಗಿರುತ್ತೋ ಇಲ್ವೋ ಗೊತ್ತಿಲ್ಲ ಎನ್ನುತ್ತಾಳೆ ಸೀತಾ.
ಈ ಜನ್ಮಾಷ್ಟಮಿಯೇ ನಾವು ಇಲ್ಲಿ ಆಚರಿಸಿಕೊಳ್ಳುತ್ತಿರುವ ಜನ್ಮಾಷ್ಟಮಿ ಅನಿಸುತ್ತೆ ಎನ್ನುವ ಸೀತಾಗೆ ರಾಮ ಹೀಗೆಲ್ಲ ಮಾತನಾಡಬೇಡಿ ಎನ್ನುತ್ತಾನೆ. ಇದು ನಿಮ್ಮ ಮನೆ, ನೀವು ಇಲ್ಲೇ ಇರ್ತೀರಾ ಎಂದು ರಾಮ ಸೀತಾಗೆ ಮತ್ತೆ ಭರವಸೆ ತುಂಬುತ್ತಾನೆ. ಇತ್ತ ಭಾರ್ಗವಿಯ ಕಳ್ಳಾಟ ಅಶೋಕನಿಗೆ ಅನುಮಾನ ತರಿಸಿದೆ. ಹಾಗಾಗಿ ನೇರವಾಗಿ ಆಫೀಸ್ಗೆ ಹೋಗಿ ಪರಿಶೀಲನೆ ನಡೆಸಿದ್ದಾನೆ.
ಚರಣ್ ಪಾತ್ರಧಾರಿ, ಭಾರ್ಗವಿ ಅವರು ಸೂತ್ರಧಾರಿನಾ? ಏನೋ ನಡೆಯುತ್ತಿದೆಯಲ್ಲ? ಎಂದು ಮನದಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಾನೆ ಅಶೋಕ. ತಡವಾಗಿ ಮನೆಗೆ ಬಂದ ರಾಮನನ್ನು ಕಂಡ ಭಾರ್ಗವಿ, ಕೋಪಿಸಿಕೊಂಡಿದ್ದಾಳೆ. ನನ್ನ ಹಿಡಿತದಲ್ಲಿ ಇದೆ ಎಂದುಕೊಂಡೆ, ಅದನ್ನು ಸುಳ್ಳು ಮಾಡಿಬಿಟ್ಟೆ ಎಂದು ನಿಗಿ ನಿಗಿ ಕೆಂಡವಾಗಿದ್ದಾಳೆ.
ಮನೆ ಮಾರಿದ್ರೆ 50 ಲಕ್ಷ ಸಿಗುತ್ತೆ ಅನ್ನೋ ಆಸೆಗೆ ಬಿದ್ದು ಸೀತಾಳ ಅತ್ತಿಗೆ ನೇರವಾಗಿ ಸೀತಾಳ ಮನೆಗೆ ಬಂದು ಮನೆ ಮಾರುವ ವಿಚಾರವನ್ನು ಕೆದಕಿದ್ದಾಳೆ. ಅದಕ್ಕೆ ಉತ್ತರವಾಗಿ, ನಾವು ಮನೆ ಮಾರುತ್ತಿಲ್ಲ. ಆಫೀಸ್ನಿಂದ ಸಹಾಯ ಮಾಡ್ತಿದ್ದಾರೆ ಎಂದಿದ್ದಾಳೆ. ಇದನ್ನು ಕೇಳಿ ಆಕಾಶ ಕಳಚಿ ತಲೆ ಮೇಲೆ ಬಿತ್ತು ಅನ್ನೋ ರೀತಿಯಲ್ಲಿ ಹೊರ ನಡೆದಿದ್ದಾಳೆ ಅತ್ತಿಗೆ ಸುಲೋಚನಾ.
ಆಫೀಸ್ನಲ್ಲಿ ಅವ್ಯವಹಾರಗಳ ಬಗ್ಗೆ ಒಂದಷ್ಟು ಫೈಲ್ಗಳನ್ನು ಹಿಡಿದು ಮನೆಗೆ ತಂದಿದ್ದಾನೆ ಅಶೋಕ. ಸೂರ್ಯ ಪ್ರಕಾಶ ಮತ್ತು ರಾಮನ ಮುಂದಿಟ್ಟು ಗಮನಿಸುವಂತೆ ನೀಡಿದ್ದಾನೆ. ಫೇಕ್ ಲೆಟರ್ಗಳನ್ನು ನೋಡಿ ಇದರ ಹಿಂದೆ ಯಾರೋ ಇರಬಹುದು ಎಂದಿದ್ದಾನೆ. ಈ ವಿಚಾರವನ್ನು ಭಾರ್ಗವಿ ಗಮನಕ್ಕೆ ತನ್ನಿ ಎಂದಿದ್ದಾನೆ ಸೂರ್ಯ ಪ್ರಕಾಶ್. ಚಿಕ್ಕಿಯನ್ಮನು ಕರೆಯಲು ಹೊರಟ ರಾಮ್ನನ್ನು ತಡೆದಿದ್ದಾನೆ ಅಶೋಕ. ಹಾಗಾದರೆ, ಅಶೋಕನ ಮುಂದಿನ ನಡೆ ಏನು?