Seetha Rama: ಲಾಯರ್‌ ಕಾಟದಿಂದ ಸೀತಾಳನ್ನು ಪಾರು ಮಾಡಿದ್ದಾನೆ ರಾಮ, ಇತ್ತ ಅಮ್ಮನಿಗಾಗಿ ಕಷ್ಟಪಡ್ತಿದ್ದಾಳೆ ಸಿಹಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಲಾಯರ್‌ ಕಾಟದಿಂದ ಸೀತಾಳನ್ನು ಪಾರು ಮಾಡಿದ್ದಾನೆ ರಾಮ, ಇತ್ತ ಅಮ್ಮನಿಗಾಗಿ ಕಷ್ಟಪಡ್ತಿದ್ದಾಳೆ ಸಿಹಿ

Seetha Rama: ಲಾಯರ್‌ ಕಾಟದಿಂದ ಸೀತಾಳನ್ನು ಪಾರು ಮಾಡಿದ್ದಾನೆ ರಾಮ, ಇತ್ತ ಅಮ್ಮನಿಗಾಗಿ ಕಷ್ಟಪಡ್ತಿದ್ದಾಳೆ ಸಿಹಿ

ಲಾಯರ್‌ ರುದ್ರಪ್ರತಾಪ್‌ ಹಿಡಿತಕ್ಕೆ ಸಿಲುಕಿದ ಸೀತಾಳನ್ನು ರಕ್ಷಿಸಿದ್ದಾನೆ ರಾಮ. ರಾಮನ ಮೇಲಿನ ಸೀತಾಳ ಸಿಟ್ಟೂ ಮಾಯವಾಗಿದೆ. ಅದೇ ಖುಷಿಯಲ್ಲಿ‌ ಇಬ್ಬರೂ ಮನೆಗೆ ಬಂದರೆ ಸಿಹಿ ಮಿಸ್ಸಿಂಗ್!

Seetha Rama: ಲಾಯರ್‌ ಕಾಟದಿಂದ ಸೀತಾಳನ್ನು ಪಾರು ಮಾಡಿದ್ದಾನೆ ರಾಮ, ಇತ್ತ ಅಮ್ಮನಿಗಾಗಿ ಕಷ್ಟಪಡ್ತಿದ್ದಾಳೆ ಸಿಹಿ
Seetha Rama: ಲಾಯರ್‌ ಕಾಟದಿಂದ ಸೀತಾಳನ್ನು ಪಾರು ಮಾಡಿದ್ದಾನೆ ರಾಮ, ಇತ್ತ ಅಮ್ಮನಿಗಾಗಿ ಕಷ್ಟಪಡ್ತಿದ್ದಾಳೆ ಸಿಹಿ

Seetha Rama: ಒಂಟಿಯಾಗಿ ಸಿಕ್ಕ ಸೀತಾಳ ಮೇಲೆ ಲಾಯರ್‌ ರುದ್ರಪ್ರತಾಪನ ಕೆಟ್ಟ ದೃಷ್ಟಿ ಬೀಳುವ ಮುನ್ನವೇ ರಾಮನ ಖಡಕ್‌ ಎಂಟ್ರಿಯಾಗಿದೆ. ಏನಾಗುತ್ತೋ ಎಂದು ಕುತೂಹಲದಿಂದಲೇ ನೋಡಿದ್ದ ವೀಕ್ಷಕನಿಗೆ ಪ್ರಕರಣ ಸುಖಾಂತ್ಯ ಕಂಡಿದೆ. ರಾಮನ ಆಗಮನದಿಂದ ರುದ್ರಪ್ರತಾಪ್‌ ಕೆಂಡವಾಗಿದ್ದಾನೆ. ಶಿವಪೂಜೆಯಲ್ಲಿ ಕರಡಿ ಎಂಬಂತೆ ರಾಮನನ್ನು ಶಪಿಸಿದ್ದಾನೆ. ಈ ಮನೆ ಬೇಡ, ಶಾಲೆ ಮತ್ತು ಆಫೀಸ್‌ಗೆ ದೂರವಾಗುತ್ತದೆ ಎಂಬ ನೆಪ ಹೇಳಿ ಅಲ್ಲಿಂದ ಜಾರಿಕೊಂಡಿದ್ದಾಳೆ ಸೀತಾ.

ಹಾಗಾದರೆ ಸೀತಾ ಇಲ್ಲೇ ಇರೋದು ಅಂತ ರಾಮನಿಗೆ ಹೇಗೆ ಗೊತ್ತಾಯ್ತು? ರುದ್ರಪ್ರತಾಪನ ವರ್ತನೆ ಕಂಡು ಗಾಬರಿಯಾಗಿದ್ದ ಸೀತಾ, ಗ್ಯಾಪ್‌ನಲ್ಲೇ ರಾಮನಿಗೆ ತಾನಿರುವ ಲೋಕೇಷನ್‌ ಕಳಿಸಿದ್ದಾಳೆ. ರಾಮ ಆ ಲೋಕೇಷನ್‌ಗೆ ಬಂದು ಸೀತಾಳನ್ನು ಸಂಕಷ್ಟದಿಂದ ಪಾರು ಮಾಡಿದ್ದಾನೆ. ರಾಮನ ಮೇಲೆ ಮೊದಲೇ ಕೋಪಗೊಂಡಿದ್ದ ಸೀತಾ, ಅದೇ ರಾಮನಿಗೆ ಥ್ಯಾಂಕ್ಸ್‌ ಮತ್ತು ಕ್ಷಮಿಸಿ ಎಂದು ಕೇಳಿದ್ದಾಳೆ. ಬಳಿಕ ರಾಮನ ಮಾತು ಕೇಳಿ ಸೀತಾ ಮೊಗದಲ್ಲಿ ನಗು ಉಕ್ಕಿದೆ.

ಇದೇ ವೇಳೆ ಲಾಯರ್‌ ರುದ್ರಪ್ರತಾಪ್‌ ಅವ್ರಿಂದ ನಿಮಗೆ ಅನುಕೂಲ ಆಗ್ತಿದೆಯೇ? ಎಂದು ಸೀತಾಳಿಗೆ ಪ್ರಶ್ನೆ ಕೇಳಿದ್ದಾನೆ ರಾಮ. ಮದುವೆ ವಿಚಾರಕ್ಕೆ ಬಂದು, ಇದೀಗ ಈ ರೀತಿ ಸಹಾಯ ಮಾಡ್ತಿದ್ದಾರೆ. ಆದರೂ ಇವರ ಜತೆ ಇದ್ದಾಗ ಸಂಕೋಚವಾಗುತ್ತದೆ ಎಂದೂ ಸೀತಾ ಹೇಳಿಕೊಂಡಿದ್ದಾಳೆ. ಇತ್ತ ಸೀತಾ ಮತ್ತು ರಾಮನನ್ನು ನೋಡಿದ ರುದ್ರಪ್ರತಾಪ್‌ ಸೀತಾಳ ಅತ್ತಿಗೆ ಸುಲೋಚನಾ ಮೇಲೆ ಗರಂ ಆಗಿದ್ದಾನೆ.

ರಾಮನ ಜತೆಗೆ ಮನೆಗೆ ಬರುವ ಸೀತಾಗೆ ಇನ್ನೊಂದು ಶಾಕ್‌ ಕಾದಿತ್ತು. ಸಿಹಿ ಮನೆಯಲ್ಲಿ ಕಾಣದಿದ್ದಕ್ಕೆ ಸೀತಾ ಆತಂಕಗೊಂಡಿದ್ದಾಳೆ. ವಠಾರದಲ್ಲಿ ಹುಡುಕಾಡಿದ್ದಾಳೆ. ಕೊನೆಗೆ ಪಕ್ಕದ ಮನೆಯಲ್ಲಿ ಪೊರಕೆ ಹಿಡಿದು ಕಸಗುಡಿಸುವುದನ್ನು ಕಂಡು ಸಿಹಿ ಮೇಲೆ ರೇಗಾಡಿದ್ದಾಳೆ. ಚಿಕ್ಕ ಮಕ್ಕಳ ಕಡೆ ಹೀಗೆ ಮಾಡಿಸುವುದು ಸರಿಯೇ ಎಂದಿದ್ದಾಳೆ ಸೀತಾ. ಕಸ ಗುಡಿಸ್ತಿನಿ ಸಂಬಳ ಕೊಡಿ ಎಂದು ಕೇಳಿದಳು ಎಂಬ ಉತ್ತರ ನೆರೆಮನೆಯಾಕೆಯದ್ದು. ನೀನೊಬ್ಬಳೇ ಯಾಕೆ ಕಷ್ಟಪಡ್ತಿಯಾ, ಅದಕ್ಕೆ ನಾನೇ ಈ ಕೆಲಸ ಮಾಡ್ತಿದ್ದೇನೆ ಎನ್ನುತ್ತಾಳೆ ಸಿಹಿ.

ಕೋಪದಲ್ಲಿ ಮಗಳನ್ನು ಮನೆಗೆ ಕರೆತರುವ ಸೀತಾ, ಸಿಹಿ ಮೇಲೆ ಕೋಪಿಸಿಕೊಂಡಿದ್ದಾಳೆ. ನಿನಗೋಸ್ಕರ ಮಾಡ್ತಿದ್ದೇನೆ ಎಂದು ಸಹಿ ಸಮಜಾಯಿಷಿ ನೀಡುತ್ತಿದ್ದಾಳೆ. ಬಳಿಕ ಸಿಹಿ ಜತೆ ಮಾತನಾಡಿದ ರಾಮ, ಪರಿಸ್ಥಿತಿ ವಿವರಿಸಿದ್ದಾನೆ. ಯಾರು ಯಾವ ಕೆಲಸ ಮಾಡಬೇಕು, ಅದನ್ನೇ ಮಾಡಬೇಕು ಎಂದು ಸಿಹಿಗೆ ಬುದ್ದಿ ಹೇಳಿದ್ದಾನೆ. ಬಳಿಕ ಸೀತಮ್ಮನ ಬಳಿ ಕ್ಷಮೆ ಕೇಳಿದ್ದಾಳೆ ಸಿಹಿ. ತನ್ನ ಪ್ರಬುದ್ಧ ಮಾತಿನಿಂದಲೇ ಸಿಹಿ ಸೀತಮ್ಮನ್ನ ಹೃದಯ ಗೆದ್ದಿದ್ದಾಳೆ. ಕೊನೆಗೆ ನನಗೆ ಈ ಮನೆ ಬೇಕು, ಈ ಮನೆ ಬಿಟ್ಟು ಎಲ್ಲೂ ಹೋಗಲ್ಲ ಎಂದೂ ಹೇಳಿದ್ದಾಳೆ. ಸಿಹಿ ಮೇಲೆ ಕೋಪಗೊಂಡಿದ್ದ ಸೀತಾ ತಣ್ಣಗಾಗಿದ್ದಾಳೆ.

Whats_app_banner