7 ಕೋಟಿ ಬಜೆಟ್, 75 ಕೋಟಿ ಗಳಿಕೆ ಕಂಡ ಮಲಯಾಳಂನ ಸೂಪರ್‌ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಒಟಿಟಿಗೆ ಆಗಮನ
Kishkindha Kaandam OTT: ಬ್ಲಾಕ್ ಬಸ್ಟರ್ ಮಲಯಾಳಂ ಮಿಸ್ಟರಿ ಥ್ರಿಲ್ಲರ್ ಚಿತ್ರ ಕೆಲವೇ ಗಂಟೆಗಳಲ್ಲಿ ಒಟಿಟಿಗೆ ಆಗಮಿಸಲಿದೆ. ಕೇವಲ 7 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 75 ಕೋಟಿ ರೂ.ಗಳನ್ನು ಗಳಿಸಿದೆ. ಈಗ ಕನ್ನಡದಲ್ಲಿಯೇ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.
OTT Thriller Movie: ಈ ವರ್ಷ ಒಟಿಟಿಗೆ ಬಂದ ಮತ್ತೊಂದು ಬ್ಲಾಕ್ ಬಸ್ಟರ್ ಮಲಯಾಳಂ ಚಿತ್ರ ಕಿಷ್ಕಿಂದ ಖಂಡಂ. ಈಗ ಈ ಸಿನಿಮಾ ಕೆಲವೇ ಗಂಟೆಗಳಲ್ಲಿ ಒಟಿಟಿ ಅಂಗಳಕ್ಕೆ ಬರಲು ಸಜ್ಜಾಗಿದೆ. ಮಿಸ್ಟರಿ ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕಾಗಿ ಒಟಿಟಿ ವೀಕ್ಷಕರು ಬಹಳ ಸಮಯದಿಂದ ಕಾಯುತ್ತಿದ್ದಾರೆ. ಈಗ ಆ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ನಂತರ, ಕಿಷ್ಕಿಂದ ಖಂಡಂ ಈಗ ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.
ಮಲಯಾಳಂ ಮಿಸ್ಟರಿ ಥ್ರಿಲ್ಲರ್ ಚಿತ್ರ ಕಿಷ್ಕಿಂದ ಖಂಡಂ ಮಂಗಳವಾರದಿಂದ (ನವೆಂಬರ್ 19) ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಈ ಹಿಂದೆಯೇ ಈ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಹಾಟ್‌ಸ್ಟಾರ್ ಘೋಷಣೆ ಮಾಡಿತ್ತು. ಅದರಂತೆ ಈಗ ಈ ಚಿತ್ರವನ್ನುಕಣ್ತುಂಬಿಕೊಳ್ಳಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ.
ಕನ್ನಡದಲ್ಲೂ ವೀಕ್ಷಿಸಬಹುದು
ಕಿಷ್ಕಿಂದ ಖಂಡಂ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಸಾರವಾಗಲಿದೆ. ವಿಭಿನ್ನ ಕಥೆಯೊಂದಿಗೆ ಬಂದ ಈ ಚಿತ್ರವು ಮಲಯಾಳಂನಲ್ಲಿ ಕೇವಲ 7 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಿತ್ತು. ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ 75 ಕೋಟಿ ಸಂಗ್ರಹಿಸಿತ್ತು.
ಕಿಷ್ಕಿಂದ ಖಂಡಂ ಕಥೆ ಏನು?
ದಿಂಜಿತ್ ಅಯ್ಯಥಾನ್ ನಿರ್ದೇಶನದ ಕಿಷ್ಕಿಂದ ಖಂಡಂ ಚಿತ್ರದಲ್ಲಿ ಆಸಿಫ್ ಅಲಿ, ಅಪರ್ಣಾ ಬಾಲಮುರಳಿ ಮತ್ತು ವಿಜಯರಾಘವನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕಿಷ್ಕಿಂದ ಖಂಡಂ ಚಿತ್ರದ ಕಥೆಯು, ಕೋತಿಗಳ ಪ್ರಾಬಲ್ಯವಿರುವ ಕಲ್ಲೇಪತಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆಯಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಸಾಗಲಿದೆ.
ಈ ವರ್ಷದ ಸೆಪ್ಟೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಅರಣ್ಯ ಅಧಿಕಾರಿ ಅಜಯ್ ಚಂದ್ರನ್, ಅವರ ಪತ್ನಿ ಅಪರ್ಣಾ ಮತ್ತು ಅವರ ತಂದೆ ಕಳೆದುಕೊಂಡ ಪಿಸ್ತೂಲ್ ಸುತ್ತ ಸುತ್ತುತ್ತದೆ. ಕಾಣೆಯಾದ ಬಂದೂಕನ್ನು ಪತ್ತೆಹಚ್ಚುವಾಗ ಅಪರ್ಣಾ ಒಂದು ರಹಸ್ಯದ ಬಗ್ಗೆ ತಿಳಿದುಕೊಳ್ಳುತ್ತಾಳೆ. ಅದು ಏನು?
ಅದಾದ ನಂತರ ದಂಪತಿಗಳ ಜೀವನಕ್ಕೆ ಏನಾಗುತ್ತದೆ ಎಂಬುದನ್ನು ಈ ಕಿಷ್ಕಿಂದ ಖಂಡಂ ಚಿತ್ರದಲ್ಲಿ ನೋಡಬಹುದು. ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ನೋಡುಗರಿಂದ ಮೆಚ್ಚುಗೆ ಪಡೆದ ಈ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಮಲಯಾಳಂ ಮಿಸ್ಟರಿ ಥ್ರಿಲ್ಲರ್ ಇಷ್ಟಪಡುವ ಕನ್ನಡದ ಪ್ರೇಕ್ಷಕರು ಮಂಗಳವಾರದಿಂದ (ನವೆಂಬರ್ 19) ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು.