ಉಪೇಂದ್ರ @ 56: ಹೊಸ ಸಿನಿಮಾ ಪೋಸ್ಟರ್‌ ಜೊತೆ ಯುಐ ಚಿತ್ರದ ರಿಲೀಸ್‌ ಅಪ್‌ಡೇಟ್‌ ಕೊಟ್ಟ ರಿಯಲ್‌ ಸ್ಟಾರ್‌-sandalwood news upendra gave update about ui movie release date on his 56th birthday real star 45th movie poster rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಉಪೇಂದ್ರ @ 56: ಹೊಸ ಸಿನಿಮಾ ಪೋಸ್ಟರ್‌ ಜೊತೆ ಯುಐ ಚಿತ್ರದ ರಿಲೀಸ್‌ ಅಪ್‌ಡೇಟ್‌ ಕೊಟ್ಟ ರಿಯಲ್‌ ಸ್ಟಾರ್‌

ಉಪೇಂದ್ರ @ 56: ಹೊಸ ಸಿನಿಮಾ ಪೋಸ್ಟರ್‌ ಜೊತೆ ಯುಐ ಚಿತ್ರದ ರಿಲೀಸ್‌ ಅಪ್‌ಡೇಟ್‌ ಕೊಟ್ಟ ರಿಯಲ್‌ ಸ್ಟಾರ್‌

ಸ್ಯಾಂಡಲ್‌ವುಡ್‌ ಬುದ್ಧಿವಂತ ಉಪೇಂದ್ರ ಇಂದು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಉಪೇಂದ್ರ ಹುಟ್ಟುಹಬ್ಬದ ಅಂಗವಾಗಿ ಯುಐ ಚಿತ್ರದ ಹೊಸ ಪೋಸ್ಟರ್‌ ರಿಲೀಸ್‌ ಆಗಿದೆ. ಜೊತೆಗೆ ಉಪೇಂದ್ರ ಅರ್ಜುನ್‌ ಜನ್ಯಾ ನಿರ್ದೇಶನದಲ್ಲಿ ತಾವು ನಟಿಸುತ್ತಿರುವ 45 ಚಿತ್ರದ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಉಪೇಂದ್ರ @ 56: ಹೊಸ ಸಿನಿಮಾ ಪೋಸ್ಟರ್‌ ಜೊತೆ ಯುಐ ಚಿತ್ರದ ರಿಲೀಸ್‌ ಅಪ್‌ಡೇಟ್‌ ಕೊಟ್ಟ ರಿಯಲ್‌ ಸ್ಟಾರ್‌
ಉಪೇಂದ್ರ @ 56: ಹೊಸ ಸಿನಿಮಾ ಪೋಸ್ಟರ್‌ ಜೊತೆ ಯುಐ ಚಿತ್ರದ ರಿಲೀಸ್‌ ಅಪ್‌ಡೇಟ್‌ ಕೊಟ್ಟ ರಿಯಲ್‌ ಸ್ಟಾರ್‌

ಕನ್ನಡ ಚಿತ್ರರಂಗದಲ್ಲಿ ಸೆಪ್ಟೆಂಬರ್‌ 18 ಬಹಳ ವಿಶೇಷವಾದ ದಿನ. ಇಂದು ಡಾ. ವಿಷ್ಣುವರ್ಧನ್‌, ಉಪೇಂದ್ರ ಹಾಗೂ ಶೃತಿ ಮೂವರಿಗೂ ಹುಟ್ಟುಹಬ್ಬದ ಸಂಭ್ರಮ. ಸಾಹಸಸಿಂಹ ಡಾ ವಿಷ್ಣುವರ್ಧನ್‌ ಇಂದು ನಮ್ಮೊಂದಿಗೆ ಇಲ್ಲ. ಅಭಿಮಾನ್‌ ಸ್ಟುಡಿಯೋದಲ್ಲಿ ಅಭಿನಯ ಭಾರ್ಗವನ 74ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಹಿರಿಯ ನಟಿ ಶೃತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಅಭಿಮಾನಿಗಳೊಂದಿಗೆ ಉಪೇಂದ್ರ ಬರ್ತ್‌ಡೇ ಆಚರಣೆ

ಉಪೇಂದ್ರ ಅಭಿಮಾನಿಗಳು ವಾರದಿಂದಲೇ ರಿಯಲ್‌ ಸ್ಟಾರ್‌ ಬರ್ತ್‌ಡೇ ಆಚರಣೆಗೆ ಸಜ್ಜಾಗಿದ್ದರು. ನಿನ್ನೆ ಮಧ್ಯ ರಾತ್ರಿಯಿಂದಲೇ ಅಭಿಮಾನಿಗಳು ರಿಯಲ್‌ ಸ್ಟಾರ್‌ ಮನೆ ಮುಂದೆ ಜಮಾಯಿಸಿದ್ದರು. ಮೆಚ್ಚಿನ ನಟನಿಗೆ ಕೇಕ್‌, ಹಾರ, ಗಿಫ್ಟ್‌ ನೀಡಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಉಪ್ಪಿ ಕೂಡಾ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ನಿರಾಸೆ ಮಾಡದೆ ಅವರೊಂದಿಗೆ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ ತಾರೆಗಳು ಉಪ್ಪಿ ಬರ್ತ್‌ಡೇಗೆ ವಿಶ್‌ ಮಾಡುತ್ತಿದ್ದಾರೆ. ಈ ನಡುವೆ ಉಪೇಂದ್ರ, ತಾವು ಅಭಿನಯಿಸುತ್ತಿರುವ ಯುಐ ಸಿನಿಮಾ ಹಾಗೂ ಹೊಸ ಸಿನಿಮಾ ಅಪ್‌ಡೇಟ್‌ ನೀಡಿದ್ದಾರೆ.

ಅಕ್ಟೋಬರ್‌ನಲ್ಲಿ ಯುಐ ಸಿನಿಮಾ ರಿಲೀಸ್

ಸಿನಿಪ್ರಿಯರು ಬಹಳ ದಿನಗಳಿಂದ ಯುಐ ಸಿನಿಮಾ ಅಪ್‌ಡೇಟ್‌ ಬಗ್ಗೆ ಕಾಯುತ್ತಿದ್ದರು. ಅದ್ಧೂರಿಯಾಗಿ ಮುಹೂರ್ತ ಅಚರಿಸಿಕೊಂಡಿದ್ದ ಬಿಟ್ಟರೆ ಮಧ್ಯದಲ್ಲಿ ಟೀಸರ್‌ ರಿಲೀಸ್‌ ಮಾಡಲಾಗಿತ್ತು. ಅದನ್ನು ಹೊರತುಪಡಿಸಿ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್‌ ಸಿಕ್ಕಿರಲಿಲ್ಲ. ಇಂದು ಉಪ್ಪಿ ಬರ್ತ್‌ಡೇ ಪ್ರಯುಕ್ತ ಯುಐ ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಈ ಪೋಸ್ಟರನ್ನು ಉಪೇಂದ್ರ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ತೆರೆ ಕಾಣಲಿದೆ. ಚಿತ್ರತಂಡ ದಿನಾಂಕ ಅನೌನ್ಸ್‌ ಮಾಡದಿದ್ದರೂ ಬಹುಶ; ವಿಜಯದಶಮಿ ದಿನ ಅಂದರೆ ಅಕ್ಟೋಬರ್‌ 12 ರಂದು ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.‌

ಅರ್ಜುನ್‌ ಜನ್ಯಾ ನಿರ್ದೇಶನದ 45 ಚಿತ್ರದ ಪೋಸ್ಟರ್‌ ರಿಲೀಸ್

ಜೊತೆಗೆ ಉಪೇಂದ್ರ ತಮ್ಮ ಮುಂದಿನ ಚಿತ್ರ 45 ರ ಪೋಸ್ಟರ್‌ ಕೂಡಾ ರಿಲೀಸ್‌ ಮಾಡಿದ್ದಾರೆ. ಎಂದಿಗೂ ನೋಡದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ಚಿತ್ರದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಅಪ್‌ಡೇಟ್‌ ನೀಡಲಿದ್ದೇನೆ ಎಂದು ಉಪೇಂದ್ರ ಹೊಸ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ. 45 ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಉಪ್ಪಿ ಜೊತೆ ಶಿವರಾಜ್‌ಕುಮಾರ್‌ ಕೂಡಾ ನಟಿಸುತ್ತಿದ್ದಾರೆ. ಉಪೇಂದ್ರ ಹಂಚಿಕೊಂಡಿರುವ ಹೊಸ ಪೋಸ್ಟರ್‌ನಲ್ಲಿ ಉಪೇಂದ್ರ ಕೈ ಬೆರಳುಗಳಿಗೆ ವಿಭಿನ್ನವಾದ ಉಂಗುರ ತೊಟ್ಟಿದ್ದಾರೆ. ಸಿಗಾರ್‌ ಹಿಡಿದಿದ್ದಾರೆ, ಕೂಲಿಂಗ್‌ ಗ್ಲಾಸ್‌ ಧರಿಸಿ ಉದ್ದ ಕೂದಲು ಬಿಟ್ಟಿದ್ದಾರೆ. ಪೋಸ್ಟರ್‌ ಬಹಳ ವಿಭಿನ್ನವಾಗಿದ್ದು ಈ ಚಿತ್ರದ ಬಗ್ಗೆ ಇನ್ನಷ್ಟು ಅಪ್‌ಡೇಟ್‌ಗಾಗಿ ಫ್ಯಾನ್ಸ್‌ ಕಾಯುತ್ತಿದ್ದಾರೆ. ಈ ಸಿನಿಮಾಗಳ ಜೊತೆಗೆ ಉಪೇಂದ್ರ ಬುದ್ಧಿವಂತ 2 ಹಾಗೂ ತ್ರಿಶೂಲಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.‌

mysore-dasara_Entry_Point