Bigg Boss Kannada 11: ‘ಸೆಡೆ’ ಪದ ಪ್ರಯೋಗಿಸಿದ ರಜತ್‌ಗೆ ಸುದೀಪ್ ಖಡಕ್ ಕ್ಲಾಸ್‌; ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾದು ಕುಳಿತ ಪ್ರೇಕ್ಷಕರು
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ‘ಸೆಡೆ’ ಪದ ಪ್ರಯೋಗಿಸಿದ ರಜತ್‌ಗೆ ಸುದೀಪ್ ಖಡಕ್ ಕ್ಲಾಸ್‌; ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾದು ಕುಳಿತ ಪ್ರೇಕ್ಷಕರು

Bigg Boss Kannada 11: ‘ಸೆಡೆ’ ಪದ ಪ್ರಯೋಗಿಸಿದ ರಜತ್‌ಗೆ ಸುದೀಪ್ ಖಡಕ್ ಕ್ಲಾಸ್‌; ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾದು ಕುಳಿತ ಪ್ರೇಕ್ಷಕರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಆಟ ಕಾವೇರಿದೆ. ಟಾಸ್ಕ್‌ ವೇಳೆ ಗೋಲ್ಡ್‌ ಸುರೇಶ್‌ ಹಾಗೂ ರಜತ್ ನಡುವೆ ಮಾತಿನ ಚಕಮಕಿಯಾಗಿದೆ. ರಜತ್ ‘ಸೆಡೆ’ ಎಂದು ಪದ ಬಳಕೆ ಮಾಡಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಸುದೀಪ್ ಕೂಡ ಈ ವಾರ ಇದೇ ವಿಷಯವಾಗಿ ಮಾತನಾಡಲಿದ್ದಾರೆ.

 ‘ಸೆಡೆ’ ಪದ ಪ್ರಯೋಗಿಸಿದ ರಜತ್‌ಗೆ ಕಿಚ್ಚನ ಖಡಕ್ ಕ್ಲಾಸ್‌
‘ಸೆಡೆ’ ಪದ ಪ್ರಯೋಗಿಸಿದ ರಜತ್‌ಗೆ ಕಿಚ್ಚನ ಖಡಕ್ ಕ್ಲಾಸ್‌ (ಕಲರ್ಸ್ ಕನ್ನಡ)

ಬಿಗ್ ಬಾಸ್‌ ಮನೆಯಲ್ಲಿ ಈ ವಾರ ಮಹತ್ತರ ಬೆಳವಣಿಗೆಗಳು ಆಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳೂ ಆಗಿದೆ. ಹೀಗಿರುವಾಗ ವಾರದ ಪಂಚಾಯ್ತಿಯಲ್ಲಿ ರಜತ್ ವಿಚಾರವನ್ನು ಖಂಡಿತ ಕಿಚ್ಚ ಸುದೀಪ್ ಪ್ರಸ್ತಾಪ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಕಿಚ್ಚ ಸುದೀಪ್‌ ಅದೇ ವಿಚಾರವಾಗಿ ಮಾತನಾಡುವುದನ್ನು ನಾವು ನೋಡಬಹುದು. ಇಂದಿನ ಈ ವಿಚಾರದ ಬಗ್ಗೆ ಸಾಕಷ್ಟು ಜನ ಸುರೇಶ್‌ ಅವರ ಪರವಾಗಿದ್ದಾರೆ. ರಜತ್ ಆಡಿದ ಮಾತುಗಳು ನನಗೆ ಹಿಡಿಸಲಿಲ್ಲ ಎಂದು ಹಲವರು ಹೇಳಿದ್ದಾರೆ. ಇದೇ ಕಾರಣಕ್ಕೆ ಅವರು ಕಳಪೆ ಪಟ್ಟ ಪಡೆದುಕೊಂಡು ಜೈಲಿಗೆ ಕೂಡ ಹೋಗಿದ್ದರು.

ಕಿಚ್ಚ ಸುದೀಪ್ ಅವರ ಮಾತಿನಲ್ಲೇ ಈ ಬಗ್ಗೆ ಸುಳಿವು ಕೂಡ ಸಿಕ್ಕಿದೆ. "ಒಬ್ಬ ವ್ಯಕ್ತಿಯ ಬಾಯಿಂದ ಬುರುವುದು ಬರಿ ಮಾತು ಅಥವಾ ಪದ ಅಲ್ಲ. ಅವನ ವ್ಯಕ್ತಿತ್ವದ ವರ್ಚಸ್ಸು" ಎಂದು ಸುದೀಪ್ ಹೇಳಿದ್ದಾರೆ. ಆಗಲೇ ಇದು ರಜತ್ ಅವರ ಮಾತಿಗೆ ಮತ್ತು ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು ಎಂದು ಎಲ್ಲರಿಗೂ ಅರ್ಥವಾಗುವ ಹಾಗಿದೆ. ಇನ್ನು ಕಿಚ್ಚ ಸುದೀಪ್‌ ಲುಕ್ ಕೂಡ ಈ ಬಾರಿ ತುಂಬಾ ಚೆನ್ನಾಗಿದೆ. ಕಂದು ಬಣ್ಣದ ಉದ್ದನೆಯ ಸೂಟ್ ಧರಿಸಿದ್ದಾರೆ.

ಈ ಹಿಂದೆ ಏನಾಗಿತ್ತು ನೋಡಿ
ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿರುವ ರಜತ್‌ ಕಿಶನ್‌ ವರ್ತನೆ ಮನೆ ಮಂದಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣ; ಅವರು ಬಳಸುತ್ತಿರುವ ಭಾಷೆ. ಮೊನ್ನೆ ಟಾಸ್ಕ್‌ ವೇಳೆ ಗೋಲ್ಡ್‌ ಸುರೇಶ್‌ಗೆ ಸೆಡೆ ಪದ ಪ್ರಯೋಗಿಸಿದ್ದರು ರಜತ್.‌ ಈ ಭಾಷೆಗೆ ಕೊಂಚ ಕಟುವಾಗಿದ್ದ ಸುರೇಶ್‌, ರಜತ್‌ ವಿರುದ್ಧ ಮುಗಿಬಿದ್ದು, ಇನ್ನು ನಾನು ಈ ಮನೆಯಲ್ಲಿ ಇರಲ್ಲ, ಬಾಗಿಲು ತೆಗೆಯಿರಿ ನಾನು ಹೊರಡುತ್ತೇನೆ ಎಂದಿದ್ದರು. ಅದಾದ ಬಳಿಕ ಮನೆಯ ಇತರ ಸ್ಪರ್ಧಿಗಳೂ ಈ ರೀತಿಯ ಪದ ಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಅದೇ ವಿಚಾರವಾಗಿ ಕಿಚ್ಚನ ಇಂದಿನ ಪಂಚಾಯ್ತಿ ಇರಲಿದೆ ಎಂಬ ಸುಳಿವು ಸಿಕ್ಕಿದೆ.

ರಜತ್ ಮನೆಯೊಳಗಡೆ ಬಂದಾಗಿನಿಂದ ನಾನು ಎಲ್ಲರಿಗಿಂತ ಜಾಸ್ತಿ ಶಕ್ತಿಯುಳ್ಳವನು ಎಂದು ಹೇಳುತ್ತಲೇ ಇದ್ದಾರೆ. ಬಿಗ್ ಬಾಸ್‌ ಮನೆಯೊಳಗಡೆ ಹೋಗುವಾಗಲೂ ಅದೇ ರೀತಿ ಮಾತಾಡಿಕೊಂಡು ಹೋಗಿದ್ದಾರೆ. ಬಿಗ್‌ ಬಾಸ್‌ ಮನೆಯೊಳಗಡೆ ಹೋದ ನಂತರ ಅಲ್ಲಿರುವ ಸ್ಪರ್ಧಿಗಳಿಗೆ ರಜತ್ ನಡವಳಿಕೆ ಸರಿ ಎನಿಸಿಲ್ಲ.

"ರಜಿತ್ ಅವರನ್ನು ಹೊರಗಡೆ ಕಳಿಸಬೇಕು ಸರ್ ಇತರ ಮಾತಾಡೋದು ತಪ್ಪು ' ಜಗದೀಶ್ ಸರ್ ಅವರು ಕಳಿಸಿಲ್ಲ ಹಾಗೆ ಇವರನ್ನು ಕಳಿಸಬೇಕು. ನೀವು ಇವರನ್ನು ಕಳಿಸಿಲ್ಲ ಅಂದರೆ ಜಗದೀಶ್ ಸರ್ ಅವರದು ತಪ್ಪೇ ಇಲ್ಲ ಅನ್ಸುತ್ತೆ" ಎಂದು ವಿಜಯ್ ಹೊಸ್ಮನಿ ಎಂಬುವವರು ಕಾಮೆಂಟ್ ಮಾಡಿದ್ದಾರೆ.

ಇಷ್ಟು ದೊಡ್ಡ ವೇದಿಕೆಯಲ್ಲಿ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು . ಸೌಜನ್ಯದಿಂದ ವರ್ತಿಸಿ , ಅಸಭ್ಯ ಪದ ಬಳಕೆ ಮಾಡದೆ, ತೋಳ್ಬಲ ಪ್ರದರ್ಶನ ಇಲ್ಲದೆ ಸಭ್ಯ ವರ್ತನೆಯಿಂದ ವೀಕ್ಷಕರ ಮನರಂಜಿಸುವುದು ಮಾಡಬೇಕು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

Whats_app_banner