33ರ ಮಹಿಳೆ 23ರ ಯುವಕನ ಲವ್‌ ಸ್ಟೋರಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಮೀರಾ ಜಾಸ್ಮಿನ್‌ ಹೊಸ ಸಿನಿಮಾ-malayalam movie meera jasmine starring new movie paalum pazhavum streaming on ott soon rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  33ರ ಮಹಿಳೆ 23ರ ಯುವಕನ ಲವ್‌ ಸ್ಟೋರಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಮೀರಾ ಜಾಸ್ಮಿನ್‌ ಹೊಸ ಸಿನಿಮಾ

33ರ ಮಹಿಳೆ 23ರ ಯುವಕನ ಲವ್‌ ಸ್ಟೋರಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಮೀರಾ ಜಾಸ್ಮಿನ್‌ ಹೊಸ ಸಿನಿಮಾ

ಮದುವೆ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಮಲಯಾಳಂ ನಟಿ ಮೀರಾ ಜಾಸ್ಮಿನ್‌ ಈಗ ಮತ್ತೆ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮೀರಾ ನಟಿಸಿರುವ ಕಾಮಿಡಿ ಸಿನಿಮಾ ಪಾಲುಂ ಪಳವುಂ ಶೀಘ್ರದಲ್ಲೇ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ. ಈ ಸಿನಮಾ ಆಗಸ್ಟ್‌ನಲ್ಲಿ ತೆರೆ ಕಂಡಿತ್ತು.

33ರ ಮಹಿಳೆ 23ರ ಯುವಕನ ಲವ್‌ ಸ್ಟೋರಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಮೀರಾ ಜಾಸ್ಮಿನ್‌ ಹೊಸ ಸಿನಿಮಾ
33ರ ಮಹಿಳೆ 23ರ ಯುವಕನ ಲವ್‌ ಸ್ಟೋರಿ; ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಮೀರಾ ಜಾಸ್ಮಿನ್‌ ಹೊಸ ಸಿನಿಮಾ

ಅರಸು, ಮೌರ್ಯ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಜೊತೆ ನಟಿಸಿದ್ದ ಮಲಯಾಳಂ ಸುಂದರಿ ಮೀರಾ ಜಾಸ್ಮಿನ್‌, ಮದುವೆ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ಅವರು ಮತ್ತೆ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದು ಮತ್ತೆ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೀರಾ ಅಭಿನಯದ ಸಿನಿಮಾವೊಂದು ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಆಗಸ್ಟ್‌ನಲ್ಲಿ ಥಿಯೇಟರ್‌ನಲ್ಲಿ ತೆರೆ ಕಂಡಿದ್ದ ಸಿನಿಮಾ

ಮೀರಾ ಜಾಸ್ಮಿನ್ ಇತ್ತೀಚೆಗೆ ಮಲಯಾಳಂನಲ್ಲಿ ಪಾಲುಂ ಪಳವುಂ ಎಂಬ ಕಾಮಿಡಿ ಸಿನಿಮಾವೊಂದರಲ್ಲಿ ನಟಿಸಿದ್ದರು. ಈ ಸಿನಿಮಾ ಆಗಸ್ಟ್ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ವಿಮರ್ಶಕರ ಮೆಚ್ಚುಗೆಯನ್ನೂ ಪಡೆದಿತ್ತು. ಈ ಸಿನಿಮಾದಲ್ಲಿ ಮೀರಾ ಜಾಸ್ಮಿನ್ ನಟನೆಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿತ್ತು. ಥಿಯೇಟರ್‌ಗಳಲ್ಲಿ ಕಮರ್ಷಿಯಲ್‌ ಆಗಿ ಸಕ್ಸಸ್‌ ಆದ ಪಲಂ ಪಲವುಮ್ ಚಿತ್ರ ಒಟಿಟಿಗೆ ಬರುತ್ತಿದೆ. ಈ ಕಾಮಿಡಿ ಡ್ರಾಮಾ ಸಿನಿಮಾ ಎರಡು OTT ಗಳಲ್ಲಿ ಸ್ಟ್ರೀಮ್ ಆಗಲಿದೆ. ಮನೋರಮಾ ಮ್ಯಾಕ್ಸ್ ಹಾಗೂ ಅಮೆಜಾನ್ ಪ್ರೈಮ್ ವಿಡಿಯೋ ಪಲುಮ್‌ ಪಲವುಮ್ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಮೀರಾ ಜಾಸ್ಮಿನ್ ಚಿತ್ರ ಅಕ್ಟೋಬರ್ 11 ರಂದು ಎರಡೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಒಟಿಟಿ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಿದೆ.

ರಾಷ್ಟ್ರಪ್ರಶಸ್ತಿ ವಿಜೇತ  ವಿಕೆ ಪ್ರಕಾಶ್ ನಿರ್ದೇಶನದ ಸಿನಿಮಾ

ಪಾಲುಂ ಪಳವುಂ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವಿಕೆ ಪ್ರಕಾಶ್ ನಿರ್ದೇಶಿಸಿದ್ದಾರೆ. ತನಗಿಂತ 10 ವರ್ಷ ಚಿಕ್ಕವನಾದ ಯುವಕನನ್ನು ಮದುವೆಯಾಗುವ ಮಹಿಳೆಯ ಕಥೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ವಯಸ್ಸಿನ ವಿಚಾರದಲ್ಲಿ ಮದುವೆಗೆ ಸಂಬಂಧಿಸಿದಂತೆ ಸಮಾಜದಲ್ಲಿರುವ ಮೂಢನಂಬಿಕೆ, ತಪ್ಪು ಕಲ್ಪನೆಗಳನ್ನು ತಮಾಷೆಯಾಗಿ ತೋರಿಸಲಾಗಿದೆ. ಜೊತೆಗೆ ಒಂದು ಸಂದೇಶವನ್ನೂ ನೀಡಲಾಗಿದೆ.

33ರ ಮಹಿಳೆ 23ರ ಯುವಕನ ಲವ್‌ ಸ್ಟೋರಿ

ಚಿತ್ರದ ನಾಯಕಿ ಸುಮಿ (ಮೀರಾ ಜಾಸ್ಮಿನ್) 33 ವರ್ಷ ವಯಸ್ಸಿನವಳು. ಕುಟುಂಬದ ಜವಾಬ್ದಾರಿಗಳಿಂದ ವಯಸ್ಸಾದರೂ ಮದುವೆ ಆಗದೆ ಉಳಿದಿರುತ್ತಾಳೆ. ತನ್ನ ಕುಟುಂಬಕ್ಕಾಗಿ ತನ್ನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಬದಿಗಿರಿಸುತ್ತಾಳೆ. ನಾಯಕ ಸುನಿಲ್ (ಅಶ್ವಿನ್ ಜೋಸ್) ತನ್ನ ಎಂಜಿನಿಯರಿಂಗ್ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿರುತ್ತಾನೆ. ಕಷ್ಟಪಟ್ಟು ಕೆಲಸ ಮಾಡುವ ಬರುವ ಬದಲು ಅಡ್ಡ ದಾರಿ ಹಿಡಿದಾದರೂ ಸರಿ ಜೀವನದಲ್ಲಿ ಮೇಲೇರಬೇಕು ಎಂಬುದು ಸುನೀಲ್‌ನ ಕನಸು. ಅದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಾನೆ. ಅವುಗಳಲ್ಲಿ ಯಾವುದೂ ಯಶಸ್ವಿಯಾಗುವುದಿಲ್ಲ. ಸುನಿಲ್ ಮತ್ತು ಸುಮಿ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪರಿಚಯವಾಗುತ್ತಾರೆ. ಇಬ್ಬರ ಆಲೋಚನೆಗಳು, ಅಭಿಪ್ರಾಯಗಳು ಒಂದೇ ಆದ್ದರಿಂದ ಇಬ್ಬರೂ ಮದುವೆ ಆಗಲು ನಿರ್ಧರಿಸುತ್ತಾರೆ. ಆದರೆ ಸುಮಿಗಿಂತ ಸುನಿಲ್ 10 ವರ್ಷ ಚಿಕ್ಕವನಾದ್ದರಿಂದ ಇವರ ಮದುವೆಯನ್ನು ಮನೆಯವರು ಹಾಗೂ ಸಮಾಜ ಒಪ್ಪುವುದಿಲ್ಲ. ಆ ಅಡೆತಡೆಗಳನ್ನು ದಾಟಿ ಸುಮಿ ಮತ್ತು ಸುನೀಲ್ ಹೇಗೆ ಒಂದಾಗುತ್ತಾರೆ? ಮದುವೆಯ ನಂತರ ಇವರಿಬ್ಬರ ಜೀವನ ಹೇಗಿರುತ್ತದೆ ಎಂಬುದು ಪಾಲುಂ ಪಳವುಂ ಚಿತ್ರದ ಕಥೆ.

ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇರುವ ಮೀರಾ ಜಾಸ್ಮಿನ್‌

ಪಾಲುಂ ಪಳವುಂ ಚಿತ್ರದಲ್ಲಿ ಮೀರಾ ಜಾಸ್ಮಿನ್‌, ಅಶ್ವಿನ್ ಜೋಶ್, ಶಾಂತಿಕೃಷ್ಣ ಮತ್ತು ಅಶೋಕನ್ ಹಾಗೂ ಇನ್ನಿತರರು ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅಭಿನಯದ ಗೀತ ಗೋವಿಂದಂ ಖ್ಯಾತಿಯ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪಾಲುಂ ಪಳವುಂ ಸಿನಿಮಾ ಚಿತ್ರೀಕರಣ ಮಾರ್ಚ್‌ನಲ್ಲಿ ಅರಂಭವಾಗಿತ್ತು. ಆಗಸ್ಟ್‌ನಲ್ಲಿ ಸಿನಿಮಾವನ್ನು ರಿಲೀಸ್‌ ಮಾಡಲಾಗಿತ್ತು. ಇದನ್ನು ಹೊರತುಪಡಿಸಿ, ಮೀರಾ ಜಾಸ್ಮಿನ್ ಸದ್ಯ ತೆಲುಗಿನಲ್ಲಿ ಸ್ವಾಗ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀವಿಷ್ಣು ಅಭಿನಯದ ಈ ಕಾಮಿಡಿ ಸಿನಿಮಾ ಅಕ್ಟೋಬರ್ 4 ರಂದು ಬಿಡುಗಡೆಯಾಗಲಿದೆ. ತಮಿಳಿನ ದಿ ಟೆಸ್ಟ್‌ ಎಂಬ ಚಿತ್ರದಲ್ಲಿ ಕೂಡಾ ಮೀರಾ ಜಾಸ್ಮಿನ್‌ ನಟಿಸುತ್ತಿದ್ದಾರೆ.

mysore-dasara_Entry_Point