ಬಿಗ್‌ ಬಾಸ್‌ ಕನ್ನಡ 11: ಮುದ್ದಿನ ನಾಯಿಗೂ ಚಿನ್ನದ ಸರ ಹಾಕ್ತಾರೆ ಗೋಲ್ಡ್‌ ಸುರೇಶ್‌; ಬೆಳಗಾವಿ ಮೂಲದ ಈತ ಚಿನ್ನದ ವ್ಯಾಪಾರಿ-kannada television news bigg boss kannada 11 fourth contestant gold suresh is from belagavi rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ ಬಾಸ್‌ ಕನ್ನಡ 11: ಮುದ್ದಿನ ನಾಯಿಗೂ ಚಿನ್ನದ ಸರ ಹಾಕ್ತಾರೆ ಗೋಲ್ಡ್‌ ಸುರೇಶ್‌; ಬೆಳಗಾವಿ ಮೂಲದ ಈತ ಚಿನ್ನದ ವ್ಯಾಪಾರಿ

ಬಿಗ್‌ ಬಾಸ್‌ ಕನ್ನಡ 11: ಮುದ್ದಿನ ನಾಯಿಗೂ ಚಿನ್ನದ ಸರ ಹಾಕ್ತಾರೆ ಗೋಲ್ಡ್‌ ಸುರೇಶ್‌; ಬೆಳಗಾವಿ ಮೂಲದ ಈತ ಚಿನ್ನದ ವ್ಯಾಪಾರಿ

ಬಿಗ್‌ ಬಾಸ್‌ ಕನ್ನಡ 11 ರ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್‌ ಅವರನ್ನು ಅನೌನ್ಸ್‌ ಮಾಡಲಾಗಿದೆ. ಬೆಳಗಾವಿ ಮೂಲದ ಈತ ಚಿನ್ನದ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಜಿಗಟ್ಟಲೆ ಬಂಗಾರವನ್ನು ಮೈ ತುಂಬಾ ಧರಿಸುವ ಇವರು ಸಾಕು ನಾಯಿಗೂ ಚಿನ್ನದ ಸರ ಹಾಕಿದ್ದಾರೆ. ಈ ವಿಡಿಯೋವನ್ನು ಸುರೇಶ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ 11: ಮುದ್ದಿನ ನಾಯಿಗೂ ಚಿನ್ನದ ಸರ ಹಾಕ್ತಾರೆ ಗೋಲ್ಡ್‌ ಸುರೇಶ್‌; ಬೆಳಗಾವಿ ಮೂಲದ ಈತ ಚಿನ್ನದ ವ್ಯಾಪಾರಿ
ಬಿಗ್‌ ಬಾಸ್‌ ಕನ್ನಡ 11: ಮುದ್ದಿನ ನಾಯಿಗೂ ಚಿನ್ನದ ಸರ ಹಾಕ್ತಾರೆ ಗೋಲ್ಡ್‌ ಸುರೇಶ್‌; ಬೆಳಗಾವಿ ಮೂಲದ ಈತ ಚಿನ್ನದ ವ್ಯಾಪಾರಿ (PC: Gold Suresh Instagram)

ಭಾನುವಾರ ಸಂಜೆ 6 ಗಂಟೆಯಿಂದ ಬಿಗ್‌ ಬಾಸ್‌ 11 ಶೋ ಆರಂಭವಾಗಲಿದೆ. ಯಾರೆಲ್ಲಾ ಸ್ಪರ್ಧಿಗಳು ಈ ಬಾರಿ ದೊಡ್ಮನೆಗೆ ಬರಲಿದ್ದಾರೆ ಅನ್ನೋದನ್ನು ನೋಡಲು ವೀಕ್ಷಕರು ಕೂಡಾ ಕಾಯುತ್ತಿದ್ದಾರೆ. ಶನಿವಾರ ಸಂಜೆ ಪ್ರಸಾರವಾದ ರಾಜಾ ರಾಣಿ ಕಾರ್ಯಕ್ರಮದಲ್ಲಿ ವಾಹಿನಿ 4 ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಿ ಜಿಯೋ ಆಪ್‌ನಲ್ಲಿ ಓಟು ಮಾಡುವಂತೆ ಸೂಚಿಸಿತ್ತು.

ನಾಲ್ಕನೇ ಸ್ಪರ್ಧಿ ಗೋಲ್ಡ್‌ ಸುರೇಶ್

ಮೊದಲ ಸ್ಪರ್ಧಿಯಾಗಿ ಗೌತಮಿ ಜಾಧವ್‌, ಎರಡನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್‌, ಮೂರನೇ ಕಂಟೆಸ್ಟಂಟ್‌ ಆಗಿ ಚೈತ್ರಾ ಕುಂದಾಪುರ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್‌ ಹೆಸರನ್ನು ರಿವೀಲ್‌ ಮಾಡಲಾಗಿತ್ತು. ಗೌತಮಿ, ಜಗದೀಶ್‌, ಚೈತ್ರಾ ಕುಂದಾಪುರ ಮೂವರೂ ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಗೋಲ್ಡ್‌ ಸುರೇಶ್‌ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಈ ವ್ಯಕ್ತಿ ಗಮನ ಸೆಳೆದದ್ದು ತಮ್ಮ ಮೈ ಮೇಲಿನ ಚಿನ್ನಾಭರಣಗಳ ಮೂಲಕ. ಕೆಜಿಗಟ್ಟಲೆ ಸರ, ಬ್ರೇಸ್‌ಲೈಟ್‌, ಉಂಗುರ ಧರಿಸಿರುವ ಈತ ಇನ್‌ಸ್ಟಾಗ್ರಾಮ್‌ನಲ್ಲಿ ಗೋಲ್ಡ್‌ ಮ್ಯಾನ್‌ ಎಂದೇ ಫೇಮಸ್.‌ ಇದೇ ಕಾರಣಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಇವರನ್ನು ಬಹಳ ಮಂದಿ ಫಾಲೋ ಮಾಡ್ತಾರೆ.‌‌

ಸಾಕು ನಾಯಿಗೂ ಚಿನ್ನದ ಸರ ಹಾಕುವ ಚಿನ್ನದ ವ್ಯಾಪಾರಿ

ಇತ್ತೀಚೆಗೆ ಮುಂಬೈನ ಚೆಂಬೂರ್ ಪ್ರದೇಶದ ನಿವಾಸಿ ಸರಿತಾ ಸಲ್ಡಾನ್ಹಾ ಎಂಬುವವರು ತಮ್ಮ ಮುದ್ದಿನ ಶ್ವಾನ ಟೈಗರ್‌ಗೆ 2 ಲಕ್ಷ ರೂ ಬೆಲೆ ಬಾಳುವ ಚಿನ್ನದ ಸರವನ್ನು ಹಾಕಿದ್ದರು. ಗೋಲ್ಡ್‌ ಸುರೇಶ್‌ ಕೂಡಾ ಇದೇ ದಾರಿ ಹಿಡಿದಿದ್ದಾರೆ. ತಾವು ಮೈತುಂಬಾ ಒಡವೆ ಹಾಕಿಕೊಳ್ಳುವುದಲ್ಲದೆ, ತಮ್ಮ ಮುದ್ದಿನ ಶ್ವಾನಕ್ಕೂ ಚಿನ್ನದ ಚೈನ್‌ ಹಾಕಿದ್ದಾರೆ. ಈ ವಿಡಿಯೋವನ್ನು ಸುರೇಶ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಚಂದನ್‌ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರ ಜೊತೆಗಿನ ಫೋಟೋಗಳನ್ನು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೆಳಗಾವಿ ಮೂಲದ ಸುರೇಶ್

ಗೋಲ್ಡ್‌ ಸುರೇಶ್‌ ಬೆಳಗಾವಿ ಮೂಲದವರು, ಸದ್ಯಕ್ಕೆ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ವ್ಯಕ್ತಿ ಚಿನ್ನದ ವ್ಯಾಪಾರ ಮಾಡುತ್ತಿದ್ದಾರೆ. ಇವರು ಧರಿಸುವ ಚಿನ್ನದ ಆಭರಣಗಳು ಸುಮಾರು 2 ಕೋಟಿ ರೂ ಮೌಲ್ಯದ್ದು ಎನ್ನಲಾಗಿದೆ. ಆದರೆ ಬಿಗ್‌ ಬಾಸ್‌ಗೆ ಆಯ್ಕೆ ಆದರೆ ದೊಡ್ಮನೆಯೊಳಗೆ ಚಿನ್ನಾಭರಣ ಧರಿಸಿ ಹೋಗಲು ಅವಕಾಶ ನೀಡುವುದಿಲ್ಲ. ತಾವು ಧರಿಸಿರುವ ಆಭರಣಗಳನ್ನು ತೆಗೆದೇ ಹೋಗಬೇಕು. ಸುರೇಶ್‌ , ಬಿಗ್‌ ಬಾಸ್‌ಗೆ ಆಯ್ಕೆಯಾಗಿ ಅಲ್ಲಿಯೂ ಗೋಲ್ಡ್‌ ಮ್ಯಾನ್‌ ಎನಿಸಿಕೊಳ್ಳುತ್ತಾರೋ, ಓಟು ಬಾರದೆ ನರಕಕ್ಕೆ ಹೋಗುತ್ತಾರೋ ಇಂದು ಸಂಜೆ ತಿಳಿಯಲಿದೆ.

 

 

mysore-dasara_Entry_Point