ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡುತ್ತಿರುವ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಚಿತ್ರ; 2ನೇ ದಿನ ವಿಶ್ವಾದ್ಯಂತ ಕಲೆಕ್ಷನ್‌ ಮಾಡಿದ್ದು ಎಷ್ಟು?-tollywood news junior ntr devara movie 2nd day worldwide collection telugu film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡುತ್ತಿರುವ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಚಿತ್ರ; 2ನೇ ದಿನ ವಿಶ್ವಾದ್ಯಂತ ಕಲೆಕ್ಷನ್‌ ಮಾಡಿದ್ದು ಎಷ್ಟು?

ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡುತ್ತಿರುವ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಚಿತ್ರ; 2ನೇ ದಿನ ವಿಶ್ವಾದ್ಯಂತ ಕಲೆಕ್ಷನ್‌ ಮಾಡಿದ್ದು ಎಷ್ಟು?

ದೇವರ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿತ್ತು. ಎರಡನೇ ದಿನ ಕಲೆಕ್ಷನ್‌ ಸ್ವಲ್ಪ ಇಳಿಕೆ ಆಗಿದೆ. 2ನೇ ದಿನ ಬಾಕ್ಸ್‌ ಆಫೀಸಿನಲ್ಲಿ 100 ಕೋಟಿ ರೂ ಕಲೆಕ್ಷನ್‌ ಮಾಡಿದೆ. 300 ಕೋಟಿ ರೂ. ಬಂಡವಾಳದಲ್ಲಿ ತಯಾರಾದ ಸಿನಿಮಾ ಹಾಕಿದ ಬಂಡವಾಳ ತೆಗೆಯಲು ಇನ್ನು 2 ದಿನಗಳು ಕಾಯಬೇಕಿದೆ.

ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡುತ್ತಿರುವ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಚಿತ್ರ; 2ನೇ ದಿನ ವಿಶ್ವಾದ್ಯಂತ ಕಲೆಕ್ಷನ್‌ ಮಾಡಿದ್ದು ಎಷ್ಟು?
ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡುತ್ತಿರುವ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಚಿತ್ರ; 2ನೇ ದಿನ ವಿಶ್ವಾದ್ಯಂತ ಕಲೆಕ್ಷನ್‌ ಮಾಡಿದ್ದು ಎಷ್ಟು?

ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ದೇವರ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಸದ್ದು ಮಾಡುತ್ತಿದೆ. ಮುಂಗಡ ಬುಕ್ಕಿಂಗ್‌ ಮಾಡಿದವರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಕೆಲವರು ಎರಡೆರಡು ಬಾರಿ ಸಿನಿಮಾ ನೋಡಿದ್ದಾರೆ. ಚುಟ್ಟಮಲ್ಲೇ ಹಾಡು ನೋಡಲೆಂದೇ ಮತ್ತೊಮ್ಮೆ ಥಿಯೇಟರ್‌ಗೆ ಹೋಗಿ ಬರುತ್ತಿದ್ದಾರೆ.

ಮೊದಲ ದಿನ 140 ಕೋಟಿ ಸಂಗ್ರಹಿಸಿದ್ದ ಸಿನಿಮಾ

ದೇವರ ಸಿನಿಮಾ ಮೊದಲ ದಿನ ವರ್ಲ್ಡ್‌ವೈಡ್‌ 140 ಕೋಟಿ ರೂ. ಗಳಿಸಿತ್ತು. ಸಿನಿಮಾ ಮೊದಲ ದಿನ 100 ಕೋಟಿ ಸಂಗ್ರಹಿಸಿಬಹುದು ಎಂದು ಅಂದಾಜು ಮಾಡಲಾಗಿತ್ತು. ಅದರೆ ಅದಕ್ಕೂ ಮೀರಿ ಸಿನಿಮಾ ಕಲೆಕ್ಷನ್‌ ಮಾಡಿದೆ.ಸಿನಿ ವಿಮರ್ಶಕರ ಪ್ರಕಾರ ಸಿನಿಮಾ ಅಡ್ವಾನ್ಸ್‌ ಬುಕಿಂಗ್‌ನಿಂದಲೇ 30 ಕೋಟಿ ರೂ. ಲಾಭ ಮಾಡಿತ್ತು. ಜೊತೆಗೆ ಒಟಿಟಿ ಹಕ್ಕುಗಳು ಕೂಡಾ ಭಾರೀ ಬೆಲೆಗೆ ಮಾರಾಟವಾಗಿತ್ತು. ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳು ಸೇರಿ ಮೊದಲ ದಿನ, ಸಿನಿಮಾ 65 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಕರ್ನಾಟಕದಲ್ಲಿ ದೇವರ 10 ಕೋಟಿ ರೂ. ಗಳಿಸಿದೆ. ತೆಲುಗು ರಾಜ್ಯಗಳಲ್ಲಿ ರೂ. ಒಟ್ಟು 82 ಕೋಟಿ, ತಮಿಳುನಾಡಿನಲ್ಲಿ 2.5 ಕೋಟಿ ರೂ, ಕೇರಳದಲ್ಲಿ60 ಲಕ್ಷ ರೂ. ಉತ್ತರ ರಾಜ್ಯಗಳಲ್ಲಿ 10 ಕೋಟಿ ರೂ ವಿದೇಶದಲ್ಲಿ 49 ಕೋಟಿ ರೂ ಕಲೆಕ್ಷನ್ ಮಾಡಿತ್ತು.

2ನೇ ದಿನ ಸಿನಿಮಾ ಗಳಿಸಿದ್ದು ಎಷ್ಟು?

ದೇವರ ಎರಡನೇ ದಿನದ ಕಲೆಕ್ಷನ್ ವಿಚಾರಕ್ಕೆ ಬಂದರೆ ಸಕ್ನಿಲ್ಕ್ ವರದಿ ಪ್ರಕಾರ ಭಾರತದಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿದೆಯಂತೆ. ತೆಲುಗು ರಾಜ್ಯಗಳಲ್ಲಿ 29 ಕೋಟಿ ರೂ, ಹಿಂದಿಯಲ್ಲಿ 9 ಕೋಟಿ ರೂ ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ. ವ್ಯಾಪಾರ ತಜ್ಞರ ಪ್ರಕಾರ, ವಿಶ್ವಾದ್ಯಂತ ಚಿತ್ರದ ಎರಡನೇ ದಿನದ ಕಲೆಕ್ಷನ್ ರೂ. 100 ಕೋಟಿ. ಇದರೊಂದಿಗೆ 'ದೇವರ' ಎರಡು ದಿನದೊಳಗೆ ರೂ. 200 ಕೋಟಿ ಕ್ಲಬ್ ಸೇರಿದೆ. ಸಿನಿಮಾ 300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದು ಇನ್ನು 2 ದಿನಗಳಲ್ಲಿ ಹಾಕಿದ ಬಂಡವಾಳ ಹಿಂಪಡೆಯಲಿದೆ.

ಶೀಘ್ರದಲ್ಲೇ ಭಾಗ 2 ಚಿತ್ರೀಕರಣ ಆರಂಭ

ದೇವರ ಚಿತ್ರವನ್ನು ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದೆ. ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್‌ ಕಟ್‌ ಹೇಳಿದ್ದಾರೆ. ಅನಿರುದ್ಧ್‌ ರವಿಚಂದರ್ ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಜ್ಯೂ ಎನ್‌ಟಿಆರ್‌, ದೇವರ ಹಾಗೂ ವರ ಎಂಬ ಡಬಲ್‌ ರೋಲ್‌ನಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಜಾಹ್ನವಿ ಕಪೂರ್‌ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಭೈರಾ ಹೆಸರಿನ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ನರೇನ್, ಕಲೈಯರಸನ್, ಮುರಳಿ ಶರ್ಮಾ ಮತ್ತು ಅಭಿಮನ್ಯು ಸಿಂಗ್ ಸಿನಿಮಾದಲ್ಲಿದ್ದಾರೆ.

mysore-dasara_Entry_Point