ಪ್ರಾಣಿ ಪ್ರಿಯೆ ಗೌತಮಿ ಜಾಧವ್‌, ಇಷ್ಟದ ನಟಿ ಮಿನುಗುತಾರೆ ಕಲ್ಪನಾ; ಹರಸಿ ಆರತಿ ಮಾಡಿ ಬಿಗ್‌ಬಾಸ್‌ 11ರ ಸ್ಪರ್ಧಿಯಾಗಿ ಬರ್ತಿದ್ದಾಳೆ ನಮ್ಮ ಸತ್ಯ-kannada television news bigg boss 11 contestant gouthami jadav is animal lover kalpana is favourite actress rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಪ್ರಾಣಿ ಪ್ರಿಯೆ ಗೌತಮಿ ಜಾಧವ್‌, ಇಷ್ಟದ ನಟಿ ಮಿನುಗುತಾರೆ ಕಲ್ಪನಾ; ಹರಸಿ ಆರತಿ ಮಾಡಿ ಬಿಗ್‌ಬಾಸ್‌ 11ರ ಸ್ಪರ್ಧಿಯಾಗಿ ಬರ್ತಿದ್ದಾಳೆ ನಮ್ಮ ಸತ್ಯ

ಪ್ರಾಣಿ ಪ್ರಿಯೆ ಗೌತಮಿ ಜಾಧವ್‌, ಇಷ್ಟದ ನಟಿ ಮಿನುಗುತಾರೆ ಕಲ್ಪನಾ; ಹರಸಿ ಆರತಿ ಮಾಡಿ ಬಿಗ್‌ಬಾಸ್‌ 11ರ ಸ್ಪರ್ಧಿಯಾಗಿ ಬರ್ತಿದ್ದಾಳೆ ನಮ್ಮ ಸತ್ಯ

ಸತ್ಯ ಧಾರಾವಾಹಿ ಮೂಲಕ ಫ್ಯಾನ್‌ ಫಾಲೋಯಿಂಗ್‌ ಗಳಿಸಿರುವ ನಟಿ ಗೌತಮಿ ಜಾಧವ್‌, ಬಿಗ್‌ ಬಾಸ್‌ ಸೀಸನ್‌ 11ರ ಮೊದಲ ಕಂಟೆಸ್ಟಂಟ್‌ ಆಗಿ ಆಯ್ಕೆ ಆಗಿದ್ದಾರೆ. ಈ ಚೆಲುವೆ ಖ್ಯಾತ ಪತ್ರಕರ್ತ ಗಣೇಸ ಕಾಸರಗೋಡು ಅವರ ಸೊಸೆ. ಮರಾಠಿ , ಗೌತಮಿ ಮಾತೃಭಾಷೆ. ಇಷ್ಟದ ಸ್ಥಳ ಮಂಗಳೂರು. ಸ್ವಲ್ಪ ಸಮಯ ದೊರೆತರೂ ಸಾಕು ಮಂಗಳೂರಿಗೆ ತೆರಳಿ ಅಲ್ಲಿನ ಪರಿಸರವನ್ನು ಎಂಜಾಯ್‌ ಮಾಡ್ತಾರಂತೆ.

ಪ್ರಾಣಿ ಪ್ರಿಯೆ ಗೌತಮಿ ಜಾಧವ್‌, ಇಷ್ಟದ ನಟಿ ಮಿನುಗುತಾರೆ ಕಲ್ಪನಾ; ಹರಸಿ ಆರತಿ ಮಾಡಿ ಬಿಗ್‌ಬಾಸ್‌ 11ರ ಸ್ಪರ್ಧಿಯಾಗಿ ಬರ್ತಿದ್ದಾಳೆ ನಮ್ಮ ಸತ್ಯ
ಪ್ರಾಣಿ ಪ್ರಿಯೆ ಗೌತಮಿ ಜಾಧವ್‌, ಇಷ್ಟದ ನಟಿ ಮಿನುಗುತಾರೆ ಕಲ್ಪನಾ; ಹರಸಿ ಆರತಿ ಮಾಡಿ ಬಿಗ್‌ಬಾಸ್‌ 11ರ ಸ್ಪರ್ಧಿಯಾಗಿ ಬರ್ತಿದ್ದಾಳೆ ನಮ್ಮ ಸತ್ಯ (PC: Gouthami Jadav Instagram)

ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಸ್ವರ್ಗ ನರಕ ಎಂಬ ವಿಭಿನ್ನ ಕಾನ್ಸೆಪ್ಟ್‌ನೊಂದಿಗೆ ಶೋ ಆರಂಭವಾಗಲಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಹೋಗಬಹುದು ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಶನಿವಾರ ರಾಜಾ ರಾಣಿ ಸೀಸನ್‌ 3 ಕಾರ್ಯಕ್ರಮದಲ್ಲಿ ವಾಹಿನಿ 4 ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಿದೆ. ಇವರಲ್ಲಿ ಯಾರು ಸ್ವರ್ಗಕ್ಕೆ ಯಾರು ನರಕಕ್ಕೆ ಹೋಗಲಿದ್ದಾರೆ ಎಂದು ವೀಕ್ಷಕರ ಓಟಿನ ಮೇಲೆ ಆಧಾರವಾಗಿದೆ.

ಸ್ವರ್ಗಕ್ಕೆ ಹೋಗೋದು ಬಹುತೇಕ ಪಕ್ಕಾ

ಬಿಗ್‌ ಬಾಸ್‌ ಸೀಸನ್‌ 11 ಮೊದಲ ಸ್ಪರ್ಧಿಯಾಗಿ ವಾಹಿನಿ ಕಿರುತೆರೆ ನಟಿ ಗೌತಮಿ ಜಾಧವ್‌ ಹೆಸರನ್ನು ರಿವೀಲ್‌ ಮಾಡಿದೆ. ಎರಡನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್‌, ಮೂರನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್‌ ಹೆಸರನ್ನು ಘೋಷಣೆ ಮಾಡಲಾಗಿದೆ. ಇವರಲ್ಲಿ ಯಾರು ದೊಡ್ಮನೆಯೊಳಗೆ ಹೋಗಲಿದ್ದಾರೆ ಅನ್ನೋದು ಕನ್ಫರ್ಮ್‌ ಅಗಿಲ್ಲ. ಆದರೆ ನಟಿ ಗೌತಮಿ ಜಾಧವ್‌ ಪಕ್ಕಾ ಆಯ್ಕೆಯಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಕಾರಣ ಅವರಿಗಿರುವ ಫ್ಯಾನ್‌ ಫಾಲೋಯಿಂಗ್‌.

ಗೌತಮಿ ಜಾಧವ್‌, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿಯಲ್ಲಿ ಸತ್ಯ ಪಾತ್ರಧಾರಿಯಾಗಿ ನಟಿಸುತ್ತಿದ್ದರು. ಇತೀಚೆಗೆ ಈ ಧಾರಾವಾಹಿ ಅಂತ್ಯಗೊಂಡಿದೆ. ಗೌತಮಿ ಈ ಧಾರಾವಾಹಿಯಲ್ಲಿ ಟಾಮ್‌ ಬಾಯ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಕೊನೆಯಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೂ ಮಿಂಚಿದ್ದರು. ಧಾರಾವಾಹಿ ಆರಂಭವಾದಾಗಿನಿಂದ ಗೌತಮಿಗೆ ಫ್ಯಾನ್‌ ಫಾಲೋಯಿಂಗ್‌ ಹೆಚ್ಚಾಗಿತ್ತು. ಆದ್ದರಿಂದ ಈ ಬಾರಿ ಅವರಿಗೆ ಓಟು ದೊರೆತು ದೊಡ್ಮನೆಯೊಳಗೆ ಹೋಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಗೌತಮಿ ಜಾಧವ್‌ ಯಾರು? ಅವರ ಹಿನ್ನೆಲೆ ಏನು ನೋಡೋಣ.

ನಾಗಪಂಚಮಿ ಧಾರಾವಾಹಿ ಮೂಲಕ ನಟನೆ ಆರಂಭ

ಕೆಲವು ವರ್ಷಗಳ ಹಿಂದೆ ಪ್ರಸಾರವಾಗಿದ್ದ ನಾಗಪಂಚಮಿ ಧಾರಾವಾಹಿ ಮೂಲಕ ಗೌತಮಿ ನಟನೆಗೆ ಎಂಟ್ರಿ ಕೊಟ್ಟರು. ಆ ಧಾರಾವಾಹಿಯಲ್ಲಿ ಗೌತಮಿ, ನಾಗಿಣಿ ತಂಗಿ ನಾಗಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸಿದ್ದರು. ಕೆಲವೊಂದು ಸೀರಿಯಲ್‌ಗಳಲ್ಲಿ ನಟಿಸಿದ್ದರೂ ಆಕೆಗೆ ಹೆಸರು ತಂದುಕೊಟ್ಟದ್ದು ಸತ್ಯ ಧಾರಾವಾಹಿಯ ಟಾಮ್‌ ಬಾಯ್‌ ಲುಕ್‌ನ ಸತ್ಯ ಪಾತ್ರ. ಧಾರಾವಾಹಿ ಮಾತ್ರವಲ್ಲದೆ ಗೌತಮಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಲೂಟಿ, ಆದ್ಯಾ, ಕಿನಾರೆ ಚಿತ್ರಗಳಲ್ಲಿ ಗೌತಮಿ ನಟಿಸಿದ್ದಾರೆ. ಅಷ್ಟೇ ಅಲ್ಲ ತಮಿಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಗೌತಮಿ ಖ್ಯಾತ ಪತ್ರಕರ್ತ ಗಣೇಶ್‌ ಕಾಸರಗೋಡು ಅವರ ಸೊಸೆ. ಗಣೇಶ್‌ ಅವರ ಮಗ ಅಭಿಷೇಕ್‌ ಕಾಸರಗೋಡು, ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ.

ಪತಿ ಅಭಿಷೇಕ್‌ ಕಾಸರಗೋಡು ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್‌

ಕಿನಾರೆ ಚಿತ್ರದಲ್ಲಿ ಗೌತಮಿ ಜಾಧವ್‌ ನಟಿಸುವಾಗ ಅಭಿಷೇಕ್‌ ಜೊತೆ ಲವ್‌ ಆಗಿದೆ. ನಂತರ ಮನೆಯವರಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿದ ಈ ಜೋಡಿ 2019 ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಅಭಿಷೇಕ್‌ ತಮ್ಮ ಪತ್ನಿಗಾಗಿ ಪಪ್ಪೆಟ್ಸ್‌ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಅಭಿಷೇಕ್‌ ಕಾಸರಗೋಡು, ಆಪರೇಷನ್ ಅಲಮೇಲಮ್ಮ, ಅನಂತು ವರ್ಸಸ್ ನುಸ್ರತ್, ಮಾಯಾ ಬಜಾರ್, ಕೃಷ್ಣ ಟಾಕೀಸ್, ಸಿನಿಮಾಗಳಿಗೆ ಸಿನಿಮಾಟ್ರೋಗ್ರಾಫರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ತೆರೆ ಕಂಡ ನಟ ವಿನಯ್‌ ರಾಜ್‌ಕುಮಾರ್‌ ಅಭಿನಯದ ಪೆಪೆ ಸಿನಿಮಾಗೆ ಕೂಡಾ ಇವರು ಛಾಯಾಗ್ರಹಣ ಮಾಡಿದ್ದಾರೆ.

ಮಿನುಗುತಾರೆ ಕಲ್ಪನಾ ಸಿನಿಮಾಗಳೆಂದರೆ ಪ್ರೀತಿ

ಜಾಧವ್‌ ಎಂಬುದು ಗೌತಮಿ ಮನೆತನದ ಹೆಸರು. ಮನೆಯಲ್ಲಿ ಮಾತನಾಡುವುದು ಮರಾಠಿ. ತೆರೆ ಮೇಲೆ ರಗಡ್‌ ಪಾತ್ರಗಳಲ್ಲಿ ನಟಿಸುವ ಗೌತಮಿ ರಿಯಲ್‌ ಲೈಫ್‌ನಲ್ಲಿ ಬಹಳ ಸೈಲೆಂಟ್‌ ಅಂತೆ. ಹಾಗೇ ಈ ಚೆಲುವೆಗೆ ಪ್ರಾಣಿಗಳೆಂದರೆ ಬಹಳ ಪ್ರೀತಿ. ಹಳೆಯ ಸಿನಿಮಾಗಳೆಂದರೆ ಬಹಳ ಪ್ರೀತಿ, ಅದರಲ್ಲೂ ಮಿನುಗುತಾರೆ ಕಲ್ಪನಾ ಅವರ ಸಿನಿಮಾಗಳನ್ನು ಹೆಚ್ಚು ಇಷ್ಟಪಟ್ಟು ನೋಡ್ತಾರಂತೆ. ಮನೆಯಲ್ಲಿ ನಾಲ್ಕು ಶ್ವಾನಗಳನ್ನು ಸಾಕಿರುವ ಗೌತಮಿ, ಅವುಗಳಿಗೆ ಪ್ರಿನ್ಸಿ, ಕ್ವೀನ್, ಹ್ಯಾಪಿ, ಕಾಫಿ ಎಂದು ಹೆಸರಿಟ್ಟಿದ್ದಾರೆ. ಮಂಗಳೂರನ್ನು ಬಹಳ ಇಷ್ಟ ಪಡುವ ಗೌತಮಿ ಸಮಯ ಸಿಕ್ಕಾಗಲೆಲ್ಲಾ ಅಲ್ಲಿ ಹೋಗಿ ಬರುತ್ತಾರಂತೆ. ಮಂಗಳೂರಿನ ವನದುರ್ಗ ದೇವಾಲಯಕ್ಕೆ ಆಗ್ಗಾಗ್ಗೆ ಹೋಗಿ ಬರುವ ಈ ಮರಾಠಿ ಚೆಲುವೆಗೆ ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿದರೆ ರಿಲಾಕ್ಸ್‌ ಎನಿಸುವುದಂತೆ. ಸೌಮ್ಯ ಸ್ವಭಾವದ ಗೌತಮಿ ಬಿಗ್‌ ಬಾಸ್‌ ಮನೆಗೆ ಆಯ್ಕೆ ಆದರೆ ಅಲ್ಲಿ ಯಾವ ರೀತಿ ಟಾಸ್ಕ್‌ ನಿಭಾಯಿಸಲಿದ್ದಾರೆ ಕಾದು ನೋಡಬೇಕು.

mysore-dasara_Entry_Point