ಕನ್ನಡ ಸುದ್ದಿ  /  ಮನರಂಜನೆ  /  ‘ಜನರಿಗೆ ಮನರಂಜನೆ ಬೇಕೇ ಹೊರತು, ಕಟು ವಾಸ್ತವವಲ್ಲ, ನನ್ನ ಸಿನಿಮಾಗಳಲ್ಲಿ ಧರ್ಮದ ನಿರೀಕ್ಷೆ ಮಾಡಬೇಡಿ!’ ಫಹಾದ್‌ ಫಾಸಿಲ್‌

‘ಜನರಿಗೆ ಮನರಂಜನೆ ಬೇಕೇ ಹೊರತು, ಕಟು ವಾಸ್ತವವಲ್ಲ, ನನ್ನ ಸಿನಿಮಾಗಳಲ್ಲಿ ಧರ್ಮದ ನಿರೀಕ್ಷೆ ಮಾಡಬೇಡಿ!’ ಫಹಾದ್‌ ಫಾಸಿಲ್‌

ಮಲಯಾಳಂ ಸ್ಟಾರ್‌ ನಟ ಫಹಾದ್‌ ಫಾಸಿಲ್‌ ಸದ್ಯ ಆವೇಶಂ ಸಿನಿಮಾ ಯಶಸ್ಸಿನ ಗುಂಗಿನಲ್ಲಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆಯೇ, ಸದ್ಯಕ್ಕೆ ತಮ್ಮ ಮುಂಬರುವ ಯಾವ ಸಿನಿಮಾಗಳಲ್ಲಿಯೂ ಧರ್ಮದ ಎಳೆಯನ್ನು ಬಳಸಿಕೊಳ್ಳುವುದಿಲ್ಲ ಎಂದಿದ್ದಾರೆ.

‘ಜನರಿಗೆ ಮನರಂಜನೆ ಬೇಕೇ ಹೊರತು, ಕಟು ವಾಸ್ತವವಲ್ಲ, ನನ್ನ ಸಿನಿಮಾಗಳಲ್ಲಿ ಧರ್ಮದ ನಿರೀಕ್ಷೆ ಮಾಡಬೇಡಿ!’ ಫಹಾದ್‌ ಫಾಸಿಲ್‌
‘ಜನರಿಗೆ ಮನರಂಜನೆ ಬೇಕೇ ಹೊರತು, ಕಟು ವಾಸ್ತವವಲ್ಲ, ನನ್ನ ಸಿನಿಮಾಗಳಲ್ಲಿ ಧರ್ಮದ ನಿರೀಕ್ಷೆ ಮಾಡಬೇಡಿ!’ ಫಹಾದ್‌ ಫಾಸಿಲ್‌

Fahadh Faasil: ಮಾಲಿವುಡ್‌ ಚಿತ್ರರಂಗದ ಸ್ಟಾರ್‌ ನಟ ಫಹಾದ್‌ ಫಾಸಿಲ್‌, ತಮ್ಮ ನಟನೆ ಮೂಲಕವೇ ಬರೀ ಮಲಯಾಳಂ ಚಿತ್ರೋದ್ಯಮವನ್ನಷ್ಟೇ ಅಲ್ಲ ಸೌತ್‌ ಸಿನಿಮಾರಂಗದ ಗಮನ ಸೆಳೆದಿದ್ದಾರೆ. ಹಿಂದಿ ಭಾಷಿಕ ರಾಜ್ಯಗಳಲ್ಲೂ ಇವರ ಸಿನಿಮಾ ವೀಕ್ಷಕರಿದ್ದಾರೆ. ಸೀಮಿತ ಶೈಲಿಯ ಸಿನಿಮಾಗಳಿಗೆ ಅಂಟಿಕೊಳ್ಳದ ಈ ನಟ, ಪಾತ್ರ ಬೇಡುವ ಅವತಾರದಲ್ಲಿ ಎದುರಾಗಿ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿದ್ದಾರೆ. ಹೀಗಿರುವಾಗಲೇ ಇತ್ತೀಚೆಗೆ ಇದೇ ನಟ ನೀಡಿದ ಹೇಳಿಕೆಯೊಂದು ಸದ್ಯ ಎಲ್ಲೆಡೆ ವೈರಲ್‌ ಆಗಿದೆ. ಅಷ್ಟಕ್ಕೂ ಏನದು? ಮುಂದೆ ಓದಿ.

ಟ್ರೆಂಡಿಂಗ್​ ಸುದ್ದಿ

ಪುಷ್ಪ ಸಿನಿಮಾ ಮೂಲಕ ಹೆಚ್ಚು ಮುನ್ನೆಲೆಯ ಜತೆಗೆ ಸದ್ದು ಮಾಡಿದ ನಟ ಫಹಾದ್‌ ಫಾಸಿಲ್‌, ಸದ್ಯ ಆವೇಶಂ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ. ಜೀತು ಮಾಧವನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಏ. 11ರಂದು ಬಿಡುಗಡೆಯಾಗಿತ್ತು. ಫಹಾದ್‌ ಫಾಸಿಲ್‌ ಪತ್ನಿ ನಜ್ರಿಯಾ ನಜೀಮ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅನ್ವರ್‌ ರಶೀದ್‌ ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆಯೇ, ತಾವು ಆಯ್ದುಕೊಳ್ಳುವ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ ಫಹಾದ್.

ಗಲಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಫಹಾದ್‌ ಫಾಸಿಲ್‌, ಧರ್ಮದ ವಿಚಾರಗಳನ್ನು ತಮ್ಮ ಚಿತ್ರದಲ್ಲಿ ಬಳಸಿಕೊಳ್ಳದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಧರ್ಮಕ್ಕೆ ಸಂಬಂಧಿಸಿದ ವಿವಾದಾತ್ಮಕ ವಿಷಯಗಳಿಂದಲೂ ದೂರವಿರುವ ಬಗ್ಗೆಯೂ ಮಾತನಾಡಿದ್ದಾರೆ. "ನನ್ನ ಸಿನಿಮಾಗಳಲ್ಲಿ ನಾನು ಕೊಂಚ ದೂರವೇ ಸರಿಸುವ ಏಕೈಕ ವಿಷಯವೆಂದರೆ ಅದು ಧರ್ಮ!" ಎಂದು 2020ರಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಪ್ಲಾಪ್‌ ಆದ ಟ್ರಾನ್ಸ್‌ ಸಿನಿಮಾವನ್ನು ನೆನಪಿಸಿಕೊಂಡು ಈ ರೀತಿಯಲ್ಲಿ ಹೇಳಿದ್ದಾರೆ.

ನನ್ನ ಸಿನಿಮಾಗಳಲ್ಲಿ ಧರ್ಮ ಸದ್ಯಕ್ಕೆ ಬೇಡ

“ಕೇರಳದಲ್ಲಿ ಧರ್ಮದೊಂದಿಗೆ ವ್ಯವಹರಿಸುವ ಬಗ್ಗೆ ನನಗೆ ಒಂದು ಇತಿಮಿತಿ  ಇದೆ. ಈ ಬಗ್ಗೆ ನಾನು ಹೇಳುವುದಾದರೆ, ಜನರು ಕಟು ವಾಸ್ತವವನ್ನು ಕೇಳಲು ಬಯಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಜನರಿಗೆ ಮನರಂಜನೆ ಬೇಕು. ನಕ್ಕು ಹಗುರಾಗುವುದನ್ನು ಬಯಸುತ್ತಾರೆ. ಹಾಗಾಗಿ ಈ ಧರ್ಮದ ವಿಚಾರಗಳ ಬಗ್ಗೆ ನಾನು ನನ್ನ ಸಿನಿಮಾದಲ್ಲಿ ಹೇಳಲು ಇಷ್ಟಪಡುವುದಿಲ್ಲ" ಎಂದಿದ್ದಾರೆ.

ಟ್ರಾನ್ಸ್‌ ಸೋಲಿನ ನೆನಪು

"2020ರಲ್ಲಿ ಬಂದ ಟ್ರಾನ್ಸ್ ಸಿನಿಮಾದಲ್ಲಿ ಮನರಂಜನೆಯ ಕೊರತೆ ಇತ್ತು. ಆದರೆ, ಅದನ್ನು ಹೊರತುಪಡಿಸಿ, ಸಾಕಷ್ಟು ಜಾಗೃತಿ ಕುರಿತಾದ ವಿಷಯಗಳು‌, ಧರ್ಮದ ಅಂಶಗಳೂ ಆ ಚಿತ್ರದಲ್ಲಿದ್ದವು. ಕೊನೆಗೆ ಮನರಂಜನೆಯ ಕೊರತೆಯಿಂದಲೇ ಸಿನಿಮಾ ಸೋತಿತು. ಅಲ್ಲಿಯೇ ನಾವು ವಿಫಲರಾದೆವು. ಹಾಗಾಗಿ ಕೇರಳದಲ್ಲಿ ಸದ್ಯಕ್ಕೆ ನಾನು ಧರ್ಮದ ಕುರಿತಾದ ಸಿನಿಮಾಗಳನ್ನು ಮುಟ್ಟಲು ಹೋಗುವುದಿಲ್ಲ" ಎಂದಿದ್ದಾರೆ ಫಹಾದ್.‌ ಅಂದಹಾಗೆ, ಟ್ರಾನ್ಸ್‌ ಸಿನಿಮಾದಲ್ಲಿ ಧರ್ಮಗುರಿವಿನ ಪಾತ್ರದಲ್ಲಿ ಫಹಾದ್‌ ಕಾಣಿಸಿಕೊಂಡಿದ್ದರು. 

100 ಕೋಟಿ ಮುಟ್ಟಿದ ಆವೇಶಂ

ಪ್ರಸ್ತುತ ಆವೇಶಂ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ ಫಹಾದ್.‌ ಅವರ ನಟನೆಗೆ ಪ್ರಶಂಸೆಯೂ ಸಿಗುತ್ತಿದೆ. ಸದ್ಯ ಈ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ನಾಲ್ಕನೇ ಮಲಯಾಳಂ ಸಿನಿಮಾ ಆಗಿ ಹೊರಹೊಮ್ಮಿದೆ. ಜಿತು ಮಾಧವನ್ ನಿರ್ದೇಶಿಸಿದ ಆಕ್ಷನ್‌ ಕಾಮಿಡಿ ಸಿನಿಮಾದಲ್ಲಿ, ಹಿಪ್ಜ್‌ಸ್ಟರ್, ಮಿಥುನ್ ಜೈ ಶಂಕರ್, ರೋಷನ್ ಶಾನವಾಸ್, ಮಿಧುಟ್ಟಿ, ಸಜಿನ್ ಗೋಪು ಮತ್ತು ಮನ್ಸೂರ್ ಅಲಿ ಖಾನ್ ಪಾತ್ರವರ್ಗದಲ್ಲಿದ್ದಾರೆ.

IPL_Entry_Point