ಕನ್ನಡ ಸುದ್ದಿ  /  ಮನರಂಜನೆ  /  Deekshit Shetty In Dasara: 'ದಿಯಾ' ದೀಕ್ಷಿತ್‌ಗೆ ಮತ್ತೊಂದು ಹಿಟ್‌ ಕೊಡುತ್ತಾ ನಾನಿ ‘ದಸರಾ’?

Deekshit Shetty in Dasara: 'ದಿಯಾ' ದೀಕ್ಷಿತ್‌ಗೆ ಮತ್ತೊಂದು ಹಿಟ್‌ ಕೊಡುತ್ತಾ ನಾನಿ ‘ದಸರಾ’?

‘ದಿಯಾ’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ದೀಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

'ದಿಯಾ' ದೀಕ್ಷಿತ್‌ಗೆ ಮತ್ತೊಂದು ಹಿಟ್‌ ಕೊಡುತ್ತಾ ನಾನಿ ‘ದಸರಾ’?
'ದಿಯಾ' ದೀಕ್ಷಿತ್‌ಗೆ ಮತ್ತೊಂದು ಹಿಟ್‌ ಕೊಡುತ್ತಾ ನಾನಿ ‘ದಸರಾ’?

Deekshit Shetty in Dasara: ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗಮನ ಸೆಳೆದ ನಟ ದೀಕ್ಷಿತ್‌ ಶೆಟ್ಟಿ, ಕನ್ನಡಿಗರಿಗೆ ಚಿರಪರಿಚಿತ. ಅದರಲ್ಲೂ ‘ದಿಯಾ’ ಸಿನಿಮಾ ಬಿಡುಗಡೆ ಆದ ಬಳಿಕ ಆ ಹೆಸರು ಮತ್ತಷ್ಟು ಹಿರಿದಾಯಿತು. ಕನ್ನಡ ಸಿನಿಮಾಗಳ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಹೆಚ್ಚು ಬಿಜಿಯಾದರು. ಅದರಂತೆ ಇದೀಗ ಪ್ಯಾನ್‌ ಇಂಡಿಯಾ ಚಿತ್ರದ ಭಾಗವಾಗಿದ್ದಾರೆ. ಇದೇ 30ಕ್ಕೆ ವಿಶ್ವದಾದ್ಯಂತ ಆ ಚಿತ್ರ ಬಿಡುಗಡೆ ಆಗಲಿದೆ. ಅಂದಹಾಗೆ, ಆ ಸಿನಿಮಾ ಬೇರಾವುದು ಅಲ್ಲ ನಾನಿ ನಾಯಕನಾಗಿ ನಟಿಸಿರುವ ‘ದಸರಾ’ ಚಿತ್ರ!

ಟ್ರೆಂಡಿಂಗ್​ ಸುದ್ದಿ

‘ದಿಯಾ’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ದೀಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ‘ದಿಯಾ’ ಸಿನಿಮಾದಲ್ಲಿ ಸಿಂಪಲ್ ಹುಡುಗನ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ದೀಕ್ಷಿತ್, ನಾನಿ ಅಭಿನಯದ 'ದಸರಾ' ಸಿನಿಮಾದಲ್ಲಿ ಸೂರಿ ಹೆಸರಿನ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ.

ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ನಾನಿ, ಕೀರ್ತಿ ಸುರೇಶ್ ಅಭಿನಯದ ‘ದಸರಾ’ ಸಖತ್ ಬಝ್ ಕ್ರಿಯೇಟ್ ಮಾಡಿದೆ. ಟೀಸರ್ ಮೂಲಕ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡಿರುವ ಈ ಚಿತ್ರ ನಾನಿ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಈ ಚಿತ್ರದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿರೋದು ಮತ್ತೊಂದು ವಿಶೇಷ.

ನಟನೆ ನೋಡಿ ಮೆಚ್ಚಿಕೊಂಡರು...

"ನಾನಿ ಸರ್ ಪ್ರೊಡಕ್ಷನ್ ಹೌಸ್‌ನಡಿ ನಿರ್ಮಾಣವಾದ ‘ಮೀಟ್ ಕ್ಯೂಟ್’ ವೆಬ್‌ಸರಣಿಯಲ್ಲಿ ನಟಿಸಿದ್ದೆ. ವೆಬ್‌ಸರಣಿ ಸಹ ನಿರ್ದೇಶಕರಾದ ವಿನಯ್ ನನ್ನ ಅಭಿನಯ ನೋಡಿ ದಸರಾ ಸಿನಿಮಾಗೆ ರೆಫರ್ ಮಾಡಿದ್ರು. ನಾನಿ ಕೂಡ ವೆಬ್‌ಸರಣಿಯಲ್ಲಿನ ನನ್ನ ಅಭಿನಯ ನೋಡಿ ಮೆಚ್ಚಿಕೊಂಡಿದ್ದರು. ಇದರಿಂದ ದಸರಾ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.

"ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಡೀ ಸಿನಿಮಾದಲ್ಲಿ ಈ ಪಾತ್ರ ಕ್ಯಾರಿಯಾಗುತ್ತೆ. ಹತ್ತು ತಿಂಗಳು ‘ದಸರಾ’ ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರ ಅದ್ಭುತ ಅನುಭವ ನೀಡಿದೆ. ನಿರ್ದೇಶಕರ ಜೊತೆಗೆ ನಾನಿ ಅವರು ಕೂಡ ನನ್ನ ಪಾತ್ರ ನಿರ್ವಹಿಸಲು ಒಂದಿಷ್ಟು ಸಲಹೆ ನೀಡುತ್ತಿದ್ದರು" ಎಂದು ತಮ್ಮ ಪಾತ್ರ ಹಾಗೂ ‘ದಸರಾ’ ತಂಡದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ ದೀಕ್ಷಿತ್ ಶೆಟ್ಟಿ.

‘ದಿಯಾ’ ನಂತರ ದೀಕ್ಷಿತ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಒಂದೇ ರೀತಿಯ ಕಥೆ, ಪಾತ್ರಕ್ಕೆ ಸೀಮಿತವಾಗದೇ ಅಳೆದು ತೂಗಿ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ‘ಕೆಟಿಎಂ’ ಹಾಗೂ ‘ಬ್ಲಿಂಕ್’ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಗೆ ರೆಡಿಯಾಗಿವೆ. ಅದಕ್ಕೂ ಮೊದಲು ‘ದಸರಾ’ ಮೂಲಕ ಸೂರಿ ಪಾತ್ರದಲ್ಲಿ ತೆರೆಮೇಲೆ ರಂಜಿಸಲು ರೆಡಿಯಾಗಿದ್ದಾರೆ ದೀಕ್ಷಿತ್ ಶೆಟ್ಟಿ.

IPL_Entry_Point