ಕನ್ನಡ ಸುದ್ದಿ  /  ಮನರಂಜನೆ  /  May Ott Movies: ಮೇ ತಿಂಗಳಲ್ಲಿ ಒಟಿಟಿಯನ್ನು ಆಳಲಿವೆ ಈ 5 ಸೂಪರ್‌ ಹಿಟ್‌ ಸಿನಿಮಾಗಳು ಮತ್ತು ವೆಬ್‌ಸಿರೀಸ್‌; ಲಿಸ್ಟ್‌ ಹೀಗಿದೆ

May OTT Movies: ಮೇ ತಿಂಗಳಲ್ಲಿ ಒಟಿಟಿಯನ್ನು ಆಳಲಿವೆ ಈ 5 ಸೂಪರ್‌ ಹಿಟ್‌ ಸಿನಿಮಾಗಳು ಮತ್ತು ವೆಬ್‌ಸಿರೀಸ್‌; ಲಿಸ್ಟ್‌ ಹೀಗಿದೆ

ಮೇ ತಿಂಗಳಲ್ಲಿ ಸೂಪರ್‌ ಹಿಟ್‌ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ಮಂಜುಮ್ಮೆಲ್ ಬಾಯ್ಸ್‌, ಶೈತಾನ್‌ ಸಿನಿಮಾಗಳು ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಿವೆ. ಹೀರಾಮಂಡಿ ವೆಬ್‌ ಸಿರೀಸ್‌ ಸಹ ಮೊದಲ ವಾರದಲ್ಲಿಯೇ ರಿಲೀಸ್‌ ಆಗಲಿದೆ.

May OTT Movies: ಮೇ ತಿಂಗಳಲ್ಲಿ ಒಟಿಟಿಯನ್ನು ಆಳಲಿವೆ ಈ 5 ಸೂಪರ್‌ ಹಿಟ್‌ ಸಿನಿಮಾಗಳು ಮತ್ತು ವೆಬ್‌ಸಿರೀಸ್‌; ಲಿಸ್ಟ್‌ ಹೀಗಿದೆ
May OTT Movies: ಮೇ ತಿಂಗಳಲ್ಲಿ ಒಟಿಟಿಯನ್ನು ಆಳಲಿವೆ ಈ 5 ಸೂಪರ್‌ ಹಿಟ್‌ ಸಿನಿಮಾಗಳು ಮತ್ತು ವೆಬ್‌ಸಿರೀಸ್‌; ಲಿಸ್ಟ್‌ ಹೀಗಿದೆ

OTT Top Releases in May: ಏಪ್ರಿಲ್ ತಿಂಗಳಲ್ಲಿ ಒಟಿಟಿ ವೇದಿಕೆಗೆ ಸಾಕಷ್ಟು ಸಿನಿಮಾ ಮತ್ತು ವೆಬ್ ಸರಣಿಗಳು ಎಂಟ್ರಿಯಾಗಿದದ್ದವು. ಕನ್ನಡದಲ್ಲೂ ಯುವ ಸೇರಿ ಹಲವು ಚಿತ್ರಗಳು ಸ್ಟ್ರೀಮಿಂಗ್‌ ಆರಂಭಿಸಿದವು. ತೆಲುಗಿನಲ್ಲಿ ಗಾಮಿ, ಓಂ ಭೀಮ್ ಬುಷ್‌ನಿಂದ ಹಿಡಿದು ಟಿಲ್ಲು ಸ್ಕ್ವೇರ್ ಮತ್ತು ಫ್ಯಾಮಿಲಿ ಸ್ಟಾರ್ ವರೆಗೆ ಕೆಲವು ಬಹುನಿರೀಕ್ಷಿತ ಸಿನಿಮಾಗಳು ಒಟಿಟಿಯನ್ನು ತಲುಪಿದವು. ಆದರೆ, ಮೇ ತಿಂಗಳಲ್ಲಿ ತೆಲುಗು ಚಿತ್ರಗಳು ಒಟಿಟಿಗೆ ಬರುವ ಸಾಧ್ಯತೆಗಳಿಲ್ಲ. ಆದಾಗ್ಯೂ ಮೇ ತಿಂಗಳಲ್ಲಿ ಇತರ ಭಾಷೆಗಳ ಸಿನಿಮಾ ಮತ್ತು ವೆಬ್‌ ಸಿರೀಸ್‌ ಒಟಿಟಿಗೆ ಆಗಮಿಸಲಿವೆ. ಅವು ಯಾವವು ಎಂಬುದನ್ನು ಇಲ್ಲಿ ನೋಡೋಣ.

ಟ್ರೆಂಡಿಂಗ್​ ಸುದ್ದಿ

ಹೀರಾಮಂಡಿ: ಡೈಮಂಡ್ ಬಜಾರ್

ಬಾಲಿವುಡ್ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ದೊಡ್ಡ ಬಜೆಟ್ ವೆಬ್ ಸರಣಿ 'ಹೀರಾಮಂಡಿ: ದಿ ಡೈಮಂಡ್ ಬಜಾರ್' ಮೇ 1 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಮನೀಶಾ ಕೊಯಿರಾಲಾ, ಅದಿತಿ ರಾವ್ ಹೈದರಿ, ಸೋನಾಕ್ಷಿ ಸಿನ್ಹಾ ಮತ್ತು ಶರ್ಮೀನ್ ಸೆಗಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ನಿರೀಕ್ಷೆಯೂ ದುಪ್ಪಟ್ಟಾಗಿದೆ. ಇತ್ತೀಚೆಗೆ ಬಿಡುಗಡೆ ಆದ ಟ್ರೇಲರ್ ಸಹ ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು. ಬಾಲಿವುಡ್‌ನಲ್ಲಿ ಹಲವು ಅದ್ಭುತ ಸಿನಿಮಾಗಳನ್ನು ನೀಡಿರುವ ಸಂಜಯ್ ಲೀಲಾ ಬನ್ಸಾಲಿ ಹೀರಾಮಂಡಿ ವೆಬ್‌ಸಿರೀಸ್‌ ನಿರ್ದೇಶನ ಮಾಡಿದ್ದಾರೆ.

ಮಂಜುಮ್ಮೆಲ್ ಬಾಯ್ಸ್

ಮಲಯಾಳಂ ಬ್ಲಾಕ್‌ಬಸ್ಟರ್ ಮಂಜುಮ್ಮೆಲ್ ಬಾಯ್ಸ್ ಮೇ ತಿಂಗಳಿನಲ್ಲಿಯೇ ಒಟಿಟಿ ಅಂಗಳವನ್ನು ಪ್ರವೇಶಿಸಲಿದೆ. ಈ ಚಿತ್ರ ಮೇ 5 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಮಲಯಾಳಂ ಜೊತೆಗೆ ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮ್‌ ಆಗಲಿದೆ. ಮಂಜುಮ್ಮೆಲ್ ಬಾಯ್ಸ್ ಫೆಬ್ರವರಿ 22 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಿತ್ತು. ಮಾಲಿವುಡ್‌ ಇಂಡಸ್ಟ್ರಿಯಲ್ಲಿ 200 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ದಾಖಲೆ ಸಹ ನಿರ್ಮಿಸಿದೆ ಈ ಸಿನಿಮಾ. ತೆಲುಗಿನಲ್ಲೂ ಏಪ್ರಿಲ್ 6 ರಂದು ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಮಾಡಿತ್ತು. ಇದೀಗ ಮೇ 5ರಿಂದ ಹಾಟ್‌ಸ್ಟಾರ್ OTTಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಈ ಚಿತ್ರವನ್ನು ಚಿದಂಬರಂ ನಿರ್ದೇಶಿಸಿದ್ದು, ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಮತ್ತು ಲಾಲ್ ಜೂನಿಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸೈತಾನ್

ಬಾಲಿವುಡ್ ಸೂಪರ್‌ ನ್ಯಾಚುರಲ್ ಹಾರರ್ ಥ್ರಿಲ್ಲರ್ ಸೈತಾನ್ ಸಿನಿಮಾ ಮೇ ತಿಂಗಳಿನಲ್ಲಿ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಮೇ 3 ರಂದು ಈ ಚಿತ್ರ ಸ್ಟ್ರೀಮಿಂಗ್ ಆಗಲಿದೆಯಂತೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ. ಅಜಯ್ ದೇವಗನ್, ಜ್ಯೋತಿಕಾ ಮತ್ತು ಮಾಧವನ್ ಅಭಿನಯದ ಸೈತಾನ್ ಚಿತ್ರ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲೂ ಹಿಟ್ ಆಯಿತು.

ಜರಾ ಹಟ್ಕೇ ಜರಾ ಬಚ್ಕೇ

ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ರೋಮ್ಯಾಂಟಿಕ್ ಕಾಮಿಡಿ ಶೈಲಿಯ ಜರಾ ಹಟ್ಕೇ ಜರಾ ಬಚ್ಕೆ ಸಿನಿಮಾ ಕೊನೆಗೂ ಮೇ ತಿಂಗಳಲ್ಲಿ OTTಗೆ ಬರಲಿದೆ. ಜಿಯೋ ಸಿನಿಮಾದಲ್ಲಿ ಈ ಚಿತ್ರ ಸ್ಟ್ರೀಮ್ ಆಗಲಿದೆ. ಮೇ ಮೂರನೇ ವಾರದಲ್ಲಿ ಈ ಚಿತ್ರ ಒಟಿಟಿಗೆ ಎಂಟ್ರಿ ಕೊಡಲಿದೆಯಂತೆ. ಇನ್ನೇನು ಶೀಘ್ರದಲ್ಲಿ ಸ್ಟ್ರೀಮಿಂಗ್ ದಿನಾಂಕ ಪ್ರಕಟವಾಗಲಿದೆ. ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ 2023ರ ಜೂನ್ 2ರಂದು ಚಿತ್ರಮಂದಿರಗಳಿಗೆ ಬಂದಿತ್ತು. ಈಗ ಸುಮಾರು 11 ತಿಂಗಳ ನಂತರ ಜಿಯೋಸಿನಿಮಾ ಒಟಿಟಿ ಪ್ರವೇಶಿಸುತ್ತದೆ.

ಆವೇಶಂ

ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ನಾಯಕನಾಗಿ ನಟಿಸಿರುವ ಆವೇಶಂ ಸಿನಿಮಾಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಜೀತು ಮಾಧವನ್ ನಿರ್ದೇಶನದ ಈ ಚಿತ್ರ ಈಗಾಗಲೇ 100 ಕೋಟಿಯ ಗಡಿ ದಾಟಿದೆ. ಚಿತ್ರವು ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಆಕ್ಷನ್ ಕಾಮಿಡಿ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ. ಅವೇಶಂ ಚಲನಚಿತ್ರವು ಮೇ 17 ರಂದು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುವ ನಿರೀಕ್ಷೆಯಿದೆ.

IPL_Entry_Point