ಕನ್ನಡ ಸುದ್ದಿ  /  ಮನರಂಜನೆ  /  ‘ನಮ್ಮಪ್ಪನೇ ಎರಡು ಮದುವೆ ಆಗಿರುವಾಗ, ನಾನ್ಯಾಕೆ ಹೆದರಲಿ!’ ಭಾವಿ ಪತಿ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ವರಲಕ್ಷ್ಮೀ ಶರತ್‌ಕುಮಾರ್ ಮಾತು

‘ನಮ್ಮಪ್ಪನೇ ಎರಡು ಮದುವೆ ಆಗಿರುವಾಗ, ನಾನ್ಯಾಕೆ ಹೆದರಲಿ!’ ಭಾವಿ ಪತಿ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ವರಲಕ್ಷ್ಮೀ ಶರತ್‌ಕುಮಾರ್ ಮಾತು

ಶಬರಿ ಸಿನಿಮಾ ಬಿಡುಗಡೆಯ ಪ್ರಚಾರ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ ತಮಿಳು ನಟಿ ವರಲಕ್ಷ್ಮೀ ಶರತ್‌ಕುಮಾರ್‌. ಈ ನಡುವೆ ಸಿನಿಮಾ ಪ್ರಚಾರದ ವೇಳೆ ಭಾವಿ ಪತಿ ನಿಕೋಲಾಯ್‌ ಸಚ್‌ದೇವ್‌ ಬಗ್ಗೆ ಟೀಕೆ ಮಾಡುತ್ತಿದ್ದವರ ವಿರುದ್ಧ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.

‘ನಮ್ಮಪ್ಪನೇ ಎರಡು ಮದುವೆ ಆಗಿರುವಾಗ, ನಾನ್ಯಾಕೆ ಹೆದರಲಿ!’ ಭಾವಿ ಪತಿ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ವರಲಕ್ಷ್ಮೀ ಶರತ್‌ಕುಮಾರ್ ಮಾತು
‘ನಮ್ಮಪ್ಪನೇ ಎರಡು ಮದುವೆ ಆಗಿರುವಾಗ, ನಾನ್ಯಾಕೆ ಹೆದರಲಿ!’ ಭಾವಿ ಪತಿ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ವರಲಕ್ಷ್ಮೀ ಶರತ್‌ಕುಮಾರ್ ಮಾತು

Varalaxmi Sarathkumar: ಬಹುಭಾಷಾ ನಟಿ ವರಲಕ್ಷ್ಮೀ ಶರತ್‌ಕುಮಾರ್‌ ಸದ್ಯ ಶಬರಿ ಸಿನಿಮಾ ಬಿಡುಗಡೆಯ ಗುಂಗಿನಲ್ಲಿದ್ದಾರೆ. ನಾಯಕಿ ಪ್ರಧಾನ ಈ ಸಿನಿಮಾ ಇದೇ ಮೇ 3ರಂದು ಬಿಡುಗಡೆ ಆಗುತ್ತಿದೆ. ಅನಿಲ್‌ ಕಾಟ್ಜ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಶಬರಿ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಮಹಾ ಮೂವೀಸ್‌ ಬ್ಯಾನರ್‌ನಲ್ಲಿ ಮಹೇಂದ್ರನಾಥ್‌ ಕೊಂಡ್ಲಾ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ವರಲಕ್ಷ್ಮೀ, ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾವಿ ಪತಿಯ ಟ್ರೋಲ್‌ಗೆ ಬೇಸರ

ವರಲಕ್ಷ್ಮೀ ಶರತ್‌ಕುಮಾರ್‌ ಇತ್ತೀಚೆಗಷ್ಟೇ ನಿಕೋಲಾಯ್‌ ಸಚ್‌ದೇವ್‌ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದಾಗಲೇ ಒಂದು ಮದುವೆಯಾಗಿ, ಆಕೆಯಿಂದ ಡಿವೋರ್ಸ್‌ ಪಡೆದ ವ್ಯಕ್ತಿಯನ್ನು ವರಲಕ್ಷ್ಮೀ ಮದುವೆಯಾಗುತ್ತಿದ್ದಾರಾ? ಎಂದೇ ಕೆಲವರು ಅಣಕ ಮಾಡಿದ್ದರು. ಇದೇ ವಿಚಾರಕ್ಕೆ ಟ್ರೋಲ್‌ ಸಹ ಆಗಿದ್ದರು. ಈಗ ಇದೇ ನಿಕೋಲಾಯ್‌ ಮತ್ತು ಅವರನ್ನು ಮದುವೆ ಆಗುತ್ತಿರುವ ಬಗ್ಗೆ ವರಲಕ್ಷ್ಮೀ ಸಂದರ್ಶನದಲ್ಲಿ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.

ನಮ್ಮ ಅಪ್ಪನೇ ಎರಡು ಮದುವೆ ಆಗಿರುವಾಗ...

"ನನಗೆ ಸಂತೋಷದಿಂದ ಇರುವುದಷ್ಟೇ ಮುಖ್ಯ. ನಾನು ನೆಗೆಟಿವ್‌ ಕಾಮೆಂಟ್‌ಗಳತ್ತ ಗಮನ ಹರಿಸಲ್ಲ. ಇನ್ನು ಮದುವೆ ಬಗ್ಗೆ ಹೇಳುವುದಾದರೆ, ನನ್ನ ತಂದೆಯೂ (ಶರತ್‌ ಕುಮಾರ್‌) ಎರಡು ಬಾರಿ ಮದುವೆಯಾದರು; ಅದರಲ್ಲಿ ಏನೂ ತಪ್ಪಿಲ್ಲ. ಯಾಕೆಂದರೆ ಅವರೀಗ ಖುಷಿಯಿಂದ ಇದ್ದಾರೆ. ನಿಕ್ ಬಗ್ಗೆ ಜನರು ಹೇಗೆ ಮಾತನಾಡುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ಅವನು ನನ್ನ ಹ್ಯಾಂಡ್‌ಸಮ್‌. ನಮ್ಮಿಬ್ಬರ ಸಂಬಂಧದ ಬಗ್ಗೆ ಕೆಟ್ಟ ಕಾಮೆಂಟ್ ಮಾಡುವವರ ಬಗ್ಗೆ ನಾನು ಹೆದರುವುದಿಲ್ಲ. ನಾನ್ಯಾಕೆ ಅವರಿಗೆ ಉತ್ತರ ಕೊಡಬೇಕು?" ಎಂದಿದ್ದಾರೆ.

ನಿಕ್‌ ಮೊದಲ ಪತ್ನಿಯೂ ನನಗೆ ಕ್ಲೋಸ್‌...

"ಮೊದಲಿನಿಂದಲೂ ನಾನು ಈ ಕೆಟ್ಟ ಕಾಮೆಂಟ್‌ಗಳನ್ನು, ಟೀಕೆಗಳನ್ನು ಅವಾಯ್ಡ್‌ ಮಾಡುತ್ತಲೇ ಬಂದಿದ್ದೇನೆ. ಈಗ ನಿಕ್ ಅವರ ಪೋಷಕರು ಆರ್ಟ್ ಗ್ಯಾಲರಿ ನಡೆಸುತ್ತಾರೆ. ನಿಕೋಲಾಯ್ ಮತ್ತು ಅವರ ಮಗಳು ಪವರ್‌ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ವಿಜೇತರು. ನಾನು ನಿಕೋಲಾಯ್ ಮಾಜಿ ಪತ್ನಿ‌ ಕವಿತಾ ಅವರ ಜತೆಗೂ ಚೆನ್ನಾಗಿದ್ದೇನೆ. ಅವರದ್ದು ಅದ್ಭುತ ವ್ಯಕ್ತಿತ್ವ. ಎಲ್ಲವೂ ಚೆನ್ನಾಗಿದೆ" ಎಂದು ಕೆಟ್ಟ ಕಾಮೆಂಟ್‌ ಮಾಡಿದವರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ನೀಡಿದ್ದಾರೆ ವರಲಕ್ಷ್ಮೀ.

ಬಾಲ್ಯದಲ್ಲಿಯೇ ಲೈಂಗಿಕ ದೌರ್ಜನ್ಯ

ಇದೇ ವೇಳೆ ಬಾಲ್ಯದಲ್ಲಿನ ಕೆಟ್ಟ ಘಟನೆಯೊಂದರ ಬಗ್ಗೆಯೂ ವರಲಕ್ಷ್ಮೀ ಶರತ್‌ ಕುಮಾರ್‌ ಮಾತನಾಡಿದ್ದಾರೆ. ಅದು ಎಂದೂ ಮರೆಯಲಾಗದ ಗಾಯ ಎಂದಿದ್ದಾರೆ. "ಬಾಲ್ಯದಲ್ಲಿಯೇ ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ಅದು ನನ್ನ ಜೀವನದಲ್ಲಿ ಮರೆಯಲಾಗದ ಗಾಯ. ಜೀವನದಲ್ಲಿ ಈ ರೀತಿಯ ಆಘಾತಕಾರಿ ಸಮಸ್ಯೆಗಳು ಎದುರಾದಾಗ ಖಂಡಿತವಾಗಿಯೂ ಸಹಾಯಕ್ಕಾಗಿ ಯಾರನ್ನಾದರೂ ಇರಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಅನೇಕರು ಮಾನಸಿಕ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚಲ್ಲ. ಆದರೆ, ಇಂತಹ ವಿಷಯಗಳನ್ನು ಮುಕ್ತವಾಗಿ ಮಾತನಾಡುವ ಮೂಲಕ ಬೇರೆಯವರ ಸಹಾಯ ತೆಗೆದುಕೊಳ್ಳುವುದು ಉತ್ತಮ ಎಂದಿದ್ದಾರೆ ವರಲಕ್ಷ್ಮಿ ಶರತ್‌ಕುಮಾರ್‌.

IPL_Entry_Point