ಮರ್ಫಿ ಸಿನಿಮಾ ವಿಮರ್ಶೆ: 2 ಕಾಲಘಟ್ಟದ ಕಥೆಗೆ ರೇಡಿಯೋ ಹಿಡಿದ ನಿರ್ದೇಶಕ; ಪ್ರೇಮ ಸಂಬಂಧಗಳ ಸಮ್ಮಿಲನ
ಕನ್ನಡ ಸುದ್ದಿ  /  ಮನರಂಜನೆ  /  ಮರ್ಫಿ ಸಿನಿಮಾ ವಿಮರ್ಶೆ: 2 ಕಾಲಘಟ್ಟದ ಕಥೆಗೆ ರೇಡಿಯೋ ಹಿಡಿದ ನಿರ್ದೇಶಕ; ಪ್ರೇಮ ಸಂಬಂಧಗಳ ಸಮ್ಮಿಲನ

ಮರ್ಫಿ ಸಿನಿಮಾ ವಿಮರ್ಶೆ: 2 ಕಾಲಘಟ್ಟದ ಕಥೆಗೆ ರೇಡಿಯೋ ಹಿಡಿದ ನಿರ್ದೇಶಕ; ಪ್ರೇಮ ಸಂಬಂಧಗಳ ಸಮ್ಮಿಲನ

ಬಿಎಸ್‌ಪಿ ವರ್ಮಾ ನಿರ್ದೇಶನದ ಮಫ್ತಿ ಸಿನಿಮಾ ನಿನ್ನೆಯಷ್ಟೇ (ಅಕ್ಟೋಬರ್‌ 18) ರಿಲೀಸ್‌ ಆಗಿದೆ. ರೋಶಿನಿ ಪ್ರಕಾಶ್ ಮತ್ತು ಪ್ರಭು ಮುಂಡ್ಕೂರ್ ಅಭಿನಯದ 'ಮರ್ಫಿ' ಚಿತ್ರಕಥೆ ಒಂದು ರೇಡಿಯೋ ಸುತ್ತ ಹೆಣೆದುಕೊಂಡಿದೆ. ತಾತ ಹಾಗೂ ಮೊಮ್ಮಗನ ಬಾಂಧವ್ಯದ ಕುರಿತು ಈ ಕಥೆ ಇದೆ.

ಮರ್ಫಿ ಸಿನಿಮಾ, ಪ್ರೇಮ ಸಂಬಂಧಗಳ ಸಮ್ಮಿಲನ
ಮರ್ಫಿ ಸಿನಿಮಾ, ಪ್ರೇಮ ಸಂಬಂಧಗಳ ಸಮ್ಮಿಲನ

ಡೇವಿಡ್, ತನ್ನ ತಾತ ರಿಚಿ ಜೊತೆ ವಾಸಿಸುತ್ತಾನೆ. ಅವನು ತನ್ನ ಕಾಲೇಜಿನಲ್ಲಿರುವ ಹುಡುಗಿಯನ್ನೇ ಪ್ರೀತಿಸುತ್ತಾನೆ. ಗೆಳತಿ ಜೆಸ್ಸಿ ಡೇವಿಡ್‌ನನ್ನು ತುಂಬಾ ಇಷ್ಟಪಡುತ್ತಾಳೆ. ಡೇವಿಡ್ ತನ್ನ ತಂದೆ ಜೋಸೆಫ್‌ನನ್ನು ಕಳೆದುಕೊಂಡು ತಾತನ ಜೊತೆಯೇ ಬೆಳೆದವನು. ಹೀಗಿರುವಾಗ ಯಾವಾಗಲೂ ಡೇವಿಡ್‌ಗೆ ತನ್ನ ತಾತನ ಬಳಿ ಇರುವ ಒಂದು ರೇಡಿಯೋ ಬಗ್ಗೆ ಡೇವಿಡ್ ಯಾವಾಗಲೂ ತುಂಬಾ ಕುತೂಹಲ. ಆದರೆ ತಾತ ರಿಚಿ ಮಾತ್ರ ಒಂದು ದಿನವೂ ಆ ರೇಡಿಯೋವನ್ನು ಮುಟ್ಟಲು ಬಿಟ್ಟಿರುವುದಿಲ್ಲ. ಇದರಿಂದಾಗಿ ಡೇವಿಡ್ ಹಾಗೂ ಆತನ ತಾತ ರಿಚಿ ನಡುವೆ ಯಾವಾಗಲೂ ಜಗಳ. ಹೀಗೆ ಒಬ್ಬ ತಂದೆ, ಪ್ರೇಯಸಿ ಹಾಗೂ ತಾತನ ಜೊತೆ ಡೇವಿಡ್‌ನ ಸಂಬಂಧಗಳು ಹೆಣೆದುಕೊಂಡಿರುತ್ತದೆ. ಸಂಬಂಧಗಳನ್ನೇ ಆಧಾರವಾಗಿಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ.

ನಿರ್ದೇಶಕ ಬಿಎಸ್‌ಪಿ ವರ್ಮಾ ಅವರ ಮರ್ಫಿ ಸಿನಿಮಾದಲ್ಲಿ ನಿಮಗೆ ನಾನು ಮೊದಲೇ ಈ ರೀತಿ ಸೀನ್‌ಗಳನ್ನು ನೊಡಿದ್ದೇನೆ ಎಂದು ಎನಿಸಿದರೂ ಸಹ ಕಥೆ ತುಂಬಾ ಚೆನ್ನಾಗಿದೆ. ಮುದ್ದಾದ ಪ್ರೇಮಕಥೆಯೂ ಇದರಲ್ಲಿದೆ. ಇಬ್ಬರು ವ್ಯಕ್ತಿಗಳು ಪರಸ್ಪರ ಮಾತನಾಡಿಕೊಳ್ಳುವಾಗಿನ ಸಂಭಾಷಣೆಯೂ ನಿಮ್ಮನ್ನು ಸೆಳೆಯುತ್ತದೆ. ರಿಚಿಯಾಗಿ ದತ್ತಣ್ಣ ಅವರ ಅಭಿನಯ ಅದ್ಭುತವಾಗಿ ಮೂಡಿ ಬಂದಿದೆ. ಒಂದೊಂದು ಪಾತ್ರವೂ ನಿಮ್ಮ ಮನಸಿನಲ್ಲಿ ಅಚ್ಚೊತ್ತುವಂತಿದೆ.

ಸಮುದ್ರದ ಅಲೆಗಳ ಸದ್ದು ಅದು ಸೃಷ್ಟಿ ಮಾಡುವ ಮಾಂತ್ರಿಕತೆ. ಅಲ್ಲಲ್ಲಿ ಬಂದು ಹೋಗುವ ಕವಿತೆಯ ನವಿರಾದ ಸಾಲುಗಳು. ರೇಡಿಯೋ ಹುಟ್ಟು ಹಾಕುವ ಕುತೂಹಲ ಇದೆಲ್ಲವೂ ನಿಮ್ಮನ್ನು ಸೆಳೆಯುತ್ತದೆ. ಇನ್ನು ನಾಯಕಿಯು ಮದುವೆ ಆಗಲು ಇಷ್ಟಪಡದೇ ಅಲ್ಲಿಂದ ಓಡಿ ಹೋಗುತ್ತಾಳೆ. ಡೇವಿಡ್‌ ಪಾತ್ರ ಕೊನೆ ಹಂತದಲ್ಲಿ ತುಂಬಾ ನೋವು ನೀಡುವ ಪಾತ್ರವಾಗಿದೆ. ಅಂದುಕೊಂಡಂತೆ ಏನೂ ನಡೆಯುವುದಿಲ್ಲ ಎನ್ನುವುದು ಪದೇ ಪದೇ ಅಲ್ಲಿ ನಿಜವಾಗುತ್ತಾ ಸಾಗುತ್ತದೆ.

ಪಾತ್ರವರ್ಗ
ಪ್ರಭು ಮುಂಡ್ಕುರ್ ವರ್ಮಾ ಚಿತ್ರಕಥೆ ಬರೆಯುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ರೋಶಿನಿ ಪ್ರಕಾಶ್ , ಇಳಾ ವೀರಮಲ್ಲ ಜೊತೆಯಲ್ಲಿ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್ ಕ್ಯಾಮೆರಾ ಹಿಡಿದ್ದಾರೆ.

ಈ ಹಿಂದೆ ಚಿತ್ರತಂಡ ಸ್ಯಾಂಡಲ್‌ವುಡ್‌ನ 9 ಬ್ಯೂಟಿಗಳಾದ ಪ್ರಿಯಾಂಕ ಉಪೇಂದ್ರ, ಅಮೃತಾ ಅಯ್ಯಂಗಾರ್, ರಾಗಿಣಿ ದ್ವಿವೇದಿ, ಖುಷಿ ರವಿ, ಮೇಘನಾ ಗಾಂವಕರ್, ಸಪ್ತಮಿ ಗೌಡ, ಧನ್ಯ ರಾಮ್ ಕುಮಾರ್, ರೀಷ್ಮಾ ನಾಣಯ್ಯ, ಅಂಕಿತ ಅಮರ್ ಅವರಿಂದ ಟ್ರೈಲರ್ ಲಾಂಚ್ ಮಾಡಲಾಗಿತ್ತು. ಇದೀಗ ನೀವೂ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಬಹುದು.

Whats_app_banner