ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ, ಐಪಿಎಲ್‌ಗೇಕೆ ತೆರಿಗೆ ವಿನಾಯ್ತಿ, ಪಠ್ಯದಲ್ಲಿ ಬೈಬಲ್‌, ಕುರಾನ್? ಚೇತನ್‌ ಸರಣಿ ಪ್ರಶ್ನೆ

Chetan Ahimsa: ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ, ಐಪಿಎಲ್‌ಗೇಕೆ ತೆರಿಗೆ ವಿನಾಯ್ತಿ, ಪಠ್ಯದಲ್ಲಿ ಬೈಬಲ್‌, ಕುರಾನ್? ಚೇತನ್‌ ಸರಣಿ ಪ್ರಶ್ನೆ

ನಟ ಚೇತನ್‌ ಸರಣಿ ಪ್ರಶ್ನೆಗಳ ಮೂಲಕ ಮತ್ತೆ ಎದುರಾಗಿದ್ದಾರೆ. ಈ ಸಲ ದೆಹಲಿಯಲ್ಲಿನ ಕುಸ್ತಿ ಪಟುಗಳ ಪ್ರತಿಭಟನೆ, ಐಪಿಎಲ್‌ಗೆ ನೀಡುವ ತೆರಿಗೆ ವಿನಾಯ್ತಿ ಮತ್ತು ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿಚಾರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ, ಐಪಿಎಲ್‌ಗೇಕೆ ತೆರಿಗೆ ವಿನಾಯ್ತಿ, ಪಠ್ಯದಲ್ಲಿರಲಿದೆಯೇ ಬೈಬಲ್‌, ಕುರಾನ್?; ಚೇತನ್‌ ಪ್ರಶ್ನೆ
ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ, ಐಪಿಎಲ್‌ಗೇಕೆ ತೆರಿಗೆ ವಿನಾಯ್ತಿ, ಪಠ್ಯದಲ್ಲಿರಲಿದೆಯೇ ಬೈಬಲ್‌, ಕುರಾನ್?; ಚೇತನ್‌ ಪ್ರಶ್ನೆ

Chetan Ahimsa: ಸದಾ ತಮ್ಮ ಪೋಸ್ಟ್‌ ಮೂಲಕವೇ ಸುದ್ದಿಯಲ್ಲಿರುತ್ತಾರೆ ನಟ ಚೇತನ್‌ ಅಹಿಂಸಾ. ಸೋಷಿಯಲ್‌ ಮೀಡಿಯಾದಲ್ಲಿ ಪ್ರಸ್ತುತ ಆಗು ಹೋಗುಗಳ ಬಗ್ಗೆ ತಮ್ಮದೇ ಆದ ಪ್ರತಿಕ್ರಿಯೆಯನ್ನು ನೀಡುತ್ತಿರುತ್ತಾರವರು. ಸರ್ಕಾರಕ್ಕೆ ನೇರವಾಗಿ ಟೀಕಿಸುವ ಚೇತನ್‌, ವಿವಾದಾತ್ಮಕ ಪೋಸ್ಟ್‌ನಿಂದಾಗಿಯೇ ಜೈಲಿಗೆ ಹೋಗಿ ಬಂದ ಉದಾಹರಣೆಗಳಿವೆ, ಕೋರ್ಟ್‌ ಮೆಟ್ಟಿಲನ್ನೂ ಏರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಮಗನಿಸಿದ್ದನ್ನು ಯಾವುದೇ ಮುಜುಗರಕ್ಕೆ ಒಳಗಾಗದೇ ನೇರವಾಗಿ ಹೇಳುವ ಚೇತನ್, ಸಿನಿಮಾ, ರಾಜಕೀಯ, ಸಾಮಾಜಿಕ ಹೀಗೆ ಎಲ್ಲದರ ಬಗ್ಗೆಯೂ ಕಮೆಂಟ್‌ ಮಾಡುತ್ತಲೇ ಇರುತ್ತಾರೆ. ಆ ಹೇಳಿಕೆ ಮೂಲಕ ಪರ ವಿರೋಧ ಚರ್ಚೆಯನ್ನೂ ಹುಟ್ಟುಹಾಕುತ್ತಿರುತ್ತಾರೆ. ಇದೀಗ ದೆಹಲಿಯಲ್ಲಿನ ಕುಸ್ತಿ ಪಟುಗಳ ಪ್ರತಿಭಟನೆ, ಐಪಿಎಲ್‌ ಮತ್ತು ಪಠ್ಯ ಪರಿಷ್ಕರಣೆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಪಠ್ಯ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರದ ನಿಲುವೇನು?

ಒಂದು ವರ್ಷದ ಹಿಂದೆ, ಸಿದ್ದರಾಮಯ್ಯ ಅವರು ಭಗವದ್ಗೀತೆಯೊಂದಿಗೆ ಬೈಬಲ್ ಮತ್ತು ಕುರಾನ್ ಬೋಧನೆಯ ಮೂಲಕ ಧಾರ್ಮಿಕ ಶಿಕ್ಷಣವನ್ನು ಉತ್ತೇಜಿಸಿದರು/ಪ್ರಚಾರ ಮಾಡಿದ್ದರು

ಈಗ ಕಾಂಗ್ರೆಸ್‌ನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಆರಂಭವಾಗಿದ್ದು, ಈ ಎಲ್ಲಾ 3 ಧಾರ್ಮಿಕ ವಿಷಯಗಳನ್ನು ಪಠ್ಯಗಳಲ್ಲಿ ಸಿದ್ದರಾಮಯ್ಯನವರ ಸರ್ಕಾರ ಸೇರಿಸುತ್ತದೆಯೇ?

ಕಾಂಗ್ರೆಸ್ ವಿಚಾರಕ್ಕೆ ಬಂದರೆ ಆಗ, ಈಗ ಮತ್ತು ಮಂದೆ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ಗೊತ್ತಾಗುವುದಿಲ್ಲ

ಐಪಿಎಲ್‌ಗೇಕೆ ತೆರಿಗೆ ವಿನಾಯ್ತಿ?

ಭಾರತದ ಉನ್ನತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ, ಈ ವರ್ಷ 48,390 ಕೋಟಿ ರೂಪಾಯಿಗಳನ್ನು ಮಾಧ್ಯಮ ಮತ್ತು ಜಾಹೀರಾತುಗಳಿಂದ ಗಳಿಸಿದೆ. ಇದು ಶೂನ್ಯ ತೆರಿಗೆಯನ್ನು ಪಾವತಿಸುತ್ತದೆ!

ಬಿಸಿಸಿಐ ‘ಚಾರಿಟಬಲ್’ ಆಗಿ ನೋಂದಣಿಯಾಗಿದೆ. ಬಿಸಿಸಿಐ ಹೇಳುತ್ತದೆ ಐಪಿಎಲ್ ವಾಣಿಜ್ಯವಲ್ಲ. ಆದರೆ ಅದು 'ಕ್ರೀಡೆಗೆ ಉತ್ತೇಜನ' ಕೊಡುತ್ತದೆ ಎಂದು -- ಆದ್ದರಿಂದ ಬಿಸಿಸಿಐ ಗೆ ತೆರಿಗೆ ವಿನಾಯಿತಿಯಾಗಿದೆ.

ಇದು ತುಂಬಾ ದೋಷಪೂರಿತವಾಗಿದೆ. ತೆರಿಗೆ ವ್ಯವಸ್ಥೆಯನ್ನು ತಿದ್ದುಪಡಿ ತರಬೇಕು ಮತ್ತು ಬಿಸಿಸಿಐ ಅನ್ನು ತಕ್ಷಣವೇ ಅದರ ಅಡಿಯಲ್ಲಿ ತರಬೇಕು.

ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

ಕುಸ್ತಿಯು ನಮ್ಮ ದೇಶದ ಅತ್ಯಂತ ಯಶಸ್ವಿ ಒಲಿಂಪಿಕ್ ಕ್ರೀಡೆಯಾಗಿದೆ. ತಮ್ಮ ನ್ಯಾಯಕ್ಕಾಗಿ ನಮ್ಮ ಕುಸ್ತಿಪಟುಗಳ ಅಹಿಂಸಾತ್ಮಕ ಹೋರಾಟ ಮತ್ತು ಹೊಸ ಸಂಸತ್ತಿನ ಇತ್ತೀಚಿನ ಪ್ರತಿಭಟನೆಯ ಕಾರಣ, ರಾಷ್ಟ್ರ- ಪ್ರಾಯೋಜಿತ ಆಕ್ರಮಣ ಮತ್ತು ಎಫ್‌ಐಆರ್‌ಗಳನ್ನು ಅವರು ಎದುರಿಸಬೇಕಾಯಿತು ಎಂಬುದು ದುಃಖಕರವಾಗಿದೆ.

ಶಕ್ತಿಶಾಲಿಗಳನ್ನು ರಕ್ಷಿಸಲು ಮತ್ತು ದುರ್ಬಲರನ್ನು ಬಲಿಪಶು ಮಾಡಲು ನಮ್ಮ ವ್ಯವಸ್ಥೆಯು ಯಾವುದೇ ಹಂತಕ್ಕೆ ಹೋಗುತ್ತದೆ/ಹೋಗಬಹುದು ಎಂಬುದಕ್ಕೆ ಇದೇ ಉದಾಹರಣೆ.

IPL_Entry_Point